GRT ಜ್ಯೂವೆಲರ್ಸ್‌ ಇಡೀ ದ. ಭಾರತದಾದ್ಯಂತ ಕಳೆದ 5 ದಶಕಗಳಿಂದ ಅತಿ ಜನಪ್ರಿಯ ಅಚ್ಚುಮೆಚ್ಚಿನ ಹೆಸರು. ಇವರ ಆಭರಣಗಳ ವಿಶಿಷ್ಟ ಸಂಗ್ರಹ ಸಾಂಪ್ರದಾಯಿಕ ಶೈಲಿಯಿಂದ ಕಾಂಟೆಂಪರರಿ ಶ್ರೇಣಿಯವರೆಗೂ ಮುಟ್ಟಿದೆ! ಇದೀಗ ರಾಷ್ಟ್ರೀಯ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಖ್ಯಾತಿವೆತ್ತ ಕೋಟ್ಯಂತರ ಗ್ರಾಹಕರನ್ನು ತಲುಪುತ್ತಿರು GRT ಆಭರಣಗಳು ಎಲ್ಲಾ ಶುಭ ಸಮಾರಂಭಗಳಿಗೂ ಮನೆ ಮಾತಾಗಿದೆ.

ಈ ಕಾರಣದಿಂದಲೇ ಈ ಕಂಪನಿ ಸತತ ಹಲವು ವರ್ಷಗಳಿಂದ ಪ್ರತಿಷ್ಠಿತ ಬಿಸ್‌ ನೆಸ್‌ ಪ್ರಶಸ್ತಿಗಳನ್ನು ತನ್ನದಾಗಿಸಿಕೊಳ್ಳುತ್ತಿದೆ!

ಈ ವರ್ಷ ಸಹ, ಇತ್ತೀಚೆಗೆ ನಡೆದ ಟೈಮ್ಸ್ ಬಿಸ್‌ ನೆಸ್‌ ಅವಾರ್ಡ್ಸ್ ಸಮಾರಂಭದಲ್ಲಿ, GRT ಜ್ಯೂವೆಲರ್ಸ್‌ 3 ಪ್ರತಿಷ್ಠಿತ `ವೋಸ್ಟ್ ಟ್ರಸ್ಟೆಡ್‌ ಲೆಜೆಂಡರಿ ಬ್ರಾಂಡ್‌ ಇನ್‌ ಜ್ಯೂವೆಲರಿ' ಪ್ರಶಸ್ತಿಗಳನ್ನು ಕರ್ನಾಟಕ, ತಮಿಳುನಾಡು, ತೆಲಂಗಾಣ ರಾಜ್ಯಗಳಿಂದ ತನ್ನದಾಗಿಸಿಕೊಂಡಿದೆ.

GRT_-_Legandary_Award_PR_Trophy_Images

ಈ ಪ್ರಶಸ್ತಿಗಳ ಕುರಿತು ಮಾತನಾಡುತ್ತಾ, GRTಯ ಮ್ಯಾನೇಜಿಂಗ್‌ ಡೈರೆಕ್ಟರ್‌ GRT `ಅನಂತ್‌' ಅನಂತಪದ್ಮನಾಭನ್ ಹೇಳಿದರು, ``ನಮ್ಮ ಗ್ರಾಹಕರೊಂದಿಗೆ ನಾವು ಹೊಂದಿರುವ ವಿಶ್ವಾಸದ ದ್ಯೋತಕವೆಂದರೆ ಇದೇ! ಅದೂ ಸುಮಾರು 57 ವರ್ಷಗಳಿಂದ. ಹೀಗಾಗಿ ನಮ್ಮ ಅತ್ಯಮೂಲ್ಯ ಪರಿಶ್ರಮ, ಶ್ರೇಷ್ಠ ಆಭರಣವಾಗಿ, ಉತ್ಕೃಷ್ಟ ಉತ್ಪನ್ನ ನಮ್ಮ ಗ್ರಾಹಕರ ಕೈ ತಲುಪುವಂತೆ ಮಾಡುತ್ತಿದ್ದೇವೆ. ಅದು ನಮ್ಮ ಉತ್ಪನ್ನ, ಸೇವೆ ಅಥವಾ ಆಭರಣದ ಮಳಿಗೆಯೇ ಇರಬಹುದು, ಪ್ರತಿಯೊಂದೂ ಪರ್ಫೆಕ್ಟ್ ಆಗಿರುತ್ತದೆ!''

GRT ಯ ಮತ್ತೊಬ್ಬ ಮ್ಯಾನೇಜಿಂಗ್‌ ಡೈರೆಕ್ಟರ್‌ ಆಗಿರುವ ರಾಧಾಕೃಷ್ಣನ್‌ ಹೀಗೆ ಅಭಿಪ್ರಾಯಪಟ್ಟರು, ``ನಿಜಕ್ಕೂ GRT ಜ್ಯೂವೆಲರಿಗೆ ಸಂದ ಈ ಪ್ರಶಸ್ತಿಯ ಸಂದರ್ಭ ಕಂಪನಿಗೆ ಮಾತ್ರವಲ್ಲದೆ ಗ್ರಾಹಕರೆಲ್ಲರಿಗೂ ಅತ್ಯಮೂಲ್ಯ ಅಮೃತಘಳಿಗೆಯೇ ಸರಿ!

ಇಂಥ ಪ್ರತಿಷ್ಠಿತ ಪ್ರಶಸ್ತಿಗಳು ನಮ್ಮ ಪರಿಶ್ರಮ, ಪರಿಪಕ್ವತೆಗಳಿಗೆ ಮತ್ತಷ್ಟು ಬಂಗಾರದ ಮೆರುಗು ನೀಡುತ್ತವೆ, ಭವಿಷ್ಯದಲ್ಲಿ ಇನ್ನಷ್ಟು ಉತ್ತಮ ಕೊಡುಗೆ ನೀಡಲು ನಮ್ಮನ್ನು ಪ್ರೇರೇಪಿಸುತ್ತವೆ. ನಮ್ಮ ಗ್ರಾಹಕರು ನಮ್ಮಲ್ಲಿ ಎಷ್ಟು ವಿಶ್ವಾಸ ತೋರುತ್ತಾರೆ ಎಂಬುದಕ್ಕೆ ಇದಕ್ಕಿಂತ ಇನ್ನೇನು ಬೇಕು? ಇಂಥ ಸುಸಂದರ್ಭ ಒದಗಿಸಿದ ನಮ್ಮೆಲ್ಲ ಗ್ರಾಹಕರಿಗೂ ಅನಂತ ಅಭಿನಂದೆಗಳು!''

ಈ ಶುಭ ಸಂದರ್ಭದಲ್ಲಿ GRT ಜ್ಯೂವೆಲರ್ಸ್‌, ಆಸ್ಪತ್ರೆಗಳಿಗೆ 50 ಲಕ್ಷ ದೇಣಿಗೆ ನೀಡಿ ತನ್ನ ಸಾಮಾಜಿಕ ಕಳಕಳಿ ವ್ಯಕ್ತಪಡಿಸಿದೆ! ಇತ್ತೀಚಿನ ತನ್ನ ಇನಿಶಿಯೇಟಿವ್ಸ್ ನಿಂದ GRT ಜ್ಯೂವೆಲರಿ ದ. ಭಾರತದ ಖ್ಯಾತಿವೆತ್ತ ನೇತ್ರಾಲಯ ಅರವಿಂದ್‌ಐ ಹಾಸ್ಪಿಟಲ್ ಮತ್ತು ಅಡ್ಯಾರ್‌ ಕ್ಯಾನ್ಸರ್‌ ಇನ್‌ ಸ್ಟಿಟ್ಯೂಟ್‌ಗೆ ತಲಾ 25 ಲಕ್ಷ ದೇಣಿಗೆ ನೀಡಿ ತನ್ನ ಔದಾರ್ಯ ಮೆರೆದು, ಸಾಮಾಜಿಕ ಕಳಕಳಿ ವ್ಯಕ್ತಪಡಿಸಿದೆ.

GRT_CSR_PR_Aravind___Adyar_Cancer_Institute

ಈ ಕುರಿತಾಗಿ ಮಾತನಾಡಿದ GRT ಮ್ಯಾನೇಜಿಂಗ್‌ ಡೈರೆಕ್ಟರ್ಸ್‌, GRT ಕೇವಲ ಉನ್ನತ ಆಭರಣವನ್ನು ಸಮಾಜಕ್ಕೆ ಸಮರ್ಪಿಸುವುದಷ್ಟೇ ಅಲ್ಲ, ಸಾಮಾಜಿಕ ಜವಾಬ್ದಾರಿಯಿಂದ ರೋಗಿಗಳ ಶುಶ್ರೂಷೆಗೆ ಈ ಮೂಲಕ ಅಳಿಲು ಸೇವೆ ಸಲ್ಲಿಸ ಬಯಸುತ್ತದೆ. ಗ್ರಾಹಕರೆಲ್ಲರೂ ತಮ್ಮ ಅಮೂಲ್ಯ ಕೊಡುಗೆ ನೀಡಿ ಈ ಸೇವಾಭಾಗ್ಯಕ್ಕೆ ಕಾರಣಕರ್ತರಾಗಿದ್ದಾರೆ, ಎಂದು ಕೃತಜ್ಞತೆ ಸಲ್ಲಿಸಿದರು.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : ಜಯನಗರ : 08026651515  ಮಲ್ಲೇಶ್ವರಂ : 080 22921515

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ