ಜ್ಯೂವೆಲರಿ ಮಹಿಳೆಯರಿಗೆ ಶೃಂಗಾರದ ಪ್ರತೀಕವಾಗಿರುವ ಜೊತೆ ಜೊತೆಗೆ ಫ್ಯಾಷನ್ ಸ್ಟೇಟ್ ಮೆಂಟ್ ಕೂಡ ಆಗಿಬಿಟ್ಟಿದೆ. ಮಹಿಳೆಯರು ಇಂದು ಫ್ಯಾಷನ್‌ನೊಂದಿಗೆ ತಮ್ಮನ್ನೂ ಅಪ್ ಡೇಟ್ ಮಾಡಿಕೊಳ್ಳಲು ಬಯಸುತ್ತಾರೆ ಮತ್ತು ಜ್ಯೂವೆಲರಿ ಖರೀದಿಸುವಾಗ ಟ್ರೆಂಡ್‌ನೊಂದಿಗೆ ಕ್ವಾಲಿಟಿಯನ್ನೂ ಅಪೇಕ್ಷಿಸುತ್ತಾರೆ.
ಪಿಸಿ ಜ್ಯೂವೆಲರ್ಸ್ ಫೇಸ್ ಬುಕ್ ಮತ್ತು ಟ್ವಿಟರ್ ಸೋಶಿಯ್ ನೆಟ್ ವರ್ಕಿಂಗ್ ಸೈಟ್‌ಗಳಲ್ಲಿ ಒಂದು ಅಕೌಂಟ್ ತರೆದರೆ, ಅದರಲ್ಲಿ ಪ್ರತಿದಿನ ಜ್ಯೂವೆಲರಿ ಮತ್ತು ಫ್ಯಾಷನ್‌ಗೆ ಸಂಬಂಧಿಸಿದಂತೆ ಟಿಪ್ಸ್ ಸಿಗುತ್ತವೆ. ಅದರಲ್ಲಿ ನೀವು ಜ್ಯೂವೆಲರಿಯ ಸುಂದರ ರೇಂಜ್‌ಗಳನ್ನು ನೋಡಬಹುದು.
ಜ್ಯೂವೆಲರಿಯ ಟ್ರೆಂಡ್ ಕಾಲದೊಂದಿಗೆ ಬದಲಾಗುತ್ತಿರುತ್ತದೆ. ಸುಂದರವಾಗಿ ಕಾಣಲು ಈ ಬದಸಾವಣೆಯೊಂದಿಗೆ ಅಪ್ ಡೇಟ್ ಆಗಿರಬೇಕು.
ಫ್ಯಾಷನ್ ಟ್ರೆಂಡ್
ಜಾಮೆಟ್ರಿಕ್ ಜ್ಯೂವೆಲರಿಯ ಆಭರಣಗಳು ಸಿಂಪಲ್ ಮತ್ತು ಸೋಬರ್ ಆಗಿರುತ್ತವೆ. ಎಲಿಗೆಂಟ್ ಜ್ಯೂವೆಲರಿ ಧರಿಸುವ ಜನರಿಗೆ ಇದು ಪರ್ಫೆಕ್ಟ್ ಆಗಿರುತ್ತದೆ. ಈ ಆಭರಣಗಳು ಸ್ಕ್ವೇರ್, ರೆಕ್ಟ್ಯಾಂಗುಲರ್, ಸರ್ಕಲ್ ಇತ್ಯಾದಿ ಶೇಪ್‌ಗಳಲ್ಲಿ ಇರುತ್ತವೆ.
ಪೀಕಾಕ್ ಡಿಸೈನ್‌ಗಳು ಎವರ್ ಗ್ರೀನ್ ಆಗಿರುತ್ತವೆ. ಈ ದಿನಗಳಲ್ಲಿ ಮಹಿಳೆಯರಲ್ಲಿ ಪೀಕಾಕ್ ಡಿಸೈನ್‌ನ ಇಯರ್ ರಿಂಗ್ಸ್ ಫ್ಯಾಷನ್‌ನಲ್ಲಿವೆ.
ಈ ಸೀಸನ್‌ನಲ್ಲಿ ಫ್ಲವರ್ ಡಿಸೈನ್‌ಗಳೂ ವಿಶೇಷವಾಗಿವೆ. ಅವುಗಳಲ್ಲಿ ಇಯರ್ ರಿಂಗ್ಸ್, ಉಂಗುರ ಮತ್ತು ಬಳೆ ಫ್ಯಾಷನ್‌ನಲ್ಲಿವೆ.
ಈ ದಿನಗಳಲ್ಲಿ ಓಲ್ಡ್ ಡಿಸೈನ್ಸ್ ಮತ್ತೆ ಫ್ಯಾಷನ್‌ನಲ್ಲಿವೆ. ಅವುಗಳಲ್ಲಿ ಬೈತಲೆ ಬೊಟ್ಟು, ಝೂಮರ್, ಲೋರಾ ಇತ್ಯಾದಿ ಮಹಿಳೆಯರ ಪ್ರಥಮ ಆಯ್ಕೆಗಳಾಗಿವೆ.
ಆ್ಯಂಟಿಕ್ ಲುಕ್ಸ್ ನಲ್ಲಿ ಗೋಲ್ಡ್ ನೊಂದಿಗೆ ಕುಂದಣ, ಪೋಲಕಿ ಮತ್ತು ಮೀನಾಕಾರಿ ಸೇರಿಸಿದ ಆಭರಣಗಳು ಚಾಲ್ತಿಯಲ್ಲಿವೆ.
ಡ್ರೆಸ್‌ನೊಂದಿಗೆ ಮಿಕ್ಸ್ ಮ್ಯಾಚ್ ಮಾಡಿ
ಫಾರ್ಮಲ್ ಡ್ರೆಸ್‌ನೊಂದಿಗೆ ಸಿಂಪಲ್ ಡಿಸೈನ್‌ನ ಜ್ಯೂವೆಲರಿ ಧರಿಸಿ.
ರೆಕ್ಟ್ಯಾಂಗುಲರ್ ಸಿಲ್ವರ್ ಇಯರ್ ರಿಂಗ್ಸ್ ಗಳನ್ನು ಎಂದೂ ಪ್ಲೇರ್ ಅಥವಾ ಲೇಸ್‌ನ ಡ್ರೆಸ್‌ಗಳೊಂದಿಗೆ ಧರಿಸಬೇಡಿ.
ಟ್ರಯಾಂಗಲ್ ಶೇಪ್ ಇರುವ ಇಯರ್ ರಿಂಗ್ಸ್ ಟೀಶರ್ಟ್ ಅಲ್ಲದೆ ಶರ್ಟ್ ಮತ್ತು ಫಾರ್ಮಲ್ ಡ್ರೆಸ್‌ಗೆ ಹೆಚ್ಚು ಸೂಟ್ ಆಗುತ್ತದೆ.
ಇಂಡೋವೆಸ್ಟರ್ನ್ ಡ್ರೆಸ್‌ನೊಂದಿಗೆ ಜಾಮೆಟ್ರಿಕ್ ಡಿಸೈನ್ ಜ್ಯೂವೆಲರಿ ಧರಿಸಿ.
ಪ್ರಿಂಟ್ ಇರುವ ಬಟ್ಟೆಗಳೊಂದಿಗೆ ಮಲ್ಟಿಕಲರ್ ಸ್ಟೋನ್‌ನ ಆಭರಣ ಎಂದಿಗೂ ಧರಿಸಬೇಡಿ.
ಈವ್ನಿಂಗ್ ಗೌನ್‌ನೊಂದಿಗೆ ಬೋಲ್ಡ್ ರಿಂಗ್ ಅಥವಾ ಬ್ರೇಸ್ ಲೆಟ್ ಟ್ರೈ ಮಾಡಿ. ಅದು ಕೊಂಚ ಕಾಂಟ್ರಾಸ್ಟ್ ಆಗಿರಲಿ.
ಒಂದು ವೇಳೆ ನಿಮ್ಮ ಶರ್ಟ್ ಸ್ಲೀವ್ ಲೆಸ್ ಆಗಿದ್ದರೆ ನೀವು ಯಾವ ಜ್ಯೂವೆಲರಿಯನ್ನು ಧರಿಸಬೇಡಿ. ಒಂದು ವೇಳೆ ಧರಿಸಿದರೆ ಕುರೂಪಿಯಾಗಿ ಕಾಣುವಿರಿ.
ರೂಬಿ, ಟರ್ಕೈರ್ ಮತ್ತು ಬ್ರೈಟ್ ಕಲರ್ಡ್ ಬೀಡ್ಸ್ ಗಳಿರುವ ಆಭರಣಗಳನ್ನು ಬ್ಲ್ಯಾಕ್ ಔಟ್‌ಫಿಟ್‌ನೊಂದಿಗೆ ಧರಿಸಿ.
ಮುಖಕ್ಕೆ ತಕ್ಕಂತೆ ಜ್ಯೂವೆಲರಿ ಆರಿಸಿ
ಒಂದುವೇಳೆ ಜ್ಯೂವೆಲರಿ ಆಯ್ಕೆ ಮಾಡುವಾಗ ಫೇಸ್ ಕಟ್ ಗಮನಿಸಿದರೆ ಪರ್ಸನಾಲಿಟಿ ಮತ್ತಷ್ಟು ಕಾಂತಿಯುತವಾಗುತ್ತದೆ. ಒಂದುವೇಳೆ ನಿಮ್ಮ ಮುಖ ಗುಂಡಾಗಿದ್ದರೆ ಲಾಂಗ್ ಇಯರ್ ರಿಂಗ್ಸ್ ಧರಿಸಿ. ಇದರಿಂದ ಮುಖ ಉದ್ದವಾಗಿ ಕಾಣಿಸುತ್ತದೆ ಹಾಗೂ ನೀವು ಸುಂದರವಾಗಿಯೂ ಕಾಣುವಿರಿ. ನಿಮ್ಮದು ಗುಂಡು ಮುಖವಾಗಿದ್ದರೆ ನೀವು ಸಣ್ಣ ಟಾಪ್ಸ್ ಮತ್ತು ಚೌಕಾಕಾರದ ಸ್ಟೈಲ್ ನ ನೆಕ್ ಪೀಸ್ ಧರಿಸಬೇಡಿ. ಏಕೆಂದರೆ ಅವು ಮುಖವನ್ನು ಇನ್ನಷ್ಟು ಗುಂಡಾಗಿ ಕಾಣಿಸುತ್ತವೆ. ಉದ್ದನೆಯ ಮುಖದ ಮಹಿಳೆಯರಿಗೆ ಇಯರ್ ಸ್ಟಡ್ಸ್ ಚೆನ್ನಾಗಿ ಒಪ್ಪುತ್ತದೆ. ಇಂಥವರು ತೂಗಾಡುವ ಇಯರ್ ರಿಂಗ್ಸ್ ಧರಿಸಬಾರದು.