ಭಾರತದಲ್ಲಿ ಪ್ರೀಮಿಯಂ ಕಾರುಗಳನ್ನು ಉತ್ಪಾದಿಸುವ ಮುಂಚೂಣಿಯ ಉತ್ಪಾದಕ ಹೊಂಡಾ ಕಾರ್ಸ್  ಇಂಡಿಯಾ ಲಿಮಿಟೆಡ್ (ಎಚ್.ಸಿ.ಐ.ಎಲ್.) ಇಂದು ತಮ್ಮ ಜನಪ್ರಿಯ ಎಸ್.ಯು.ವಿ.- ಹೊಂಡಾ ಎಲಿವೇಟ್ ಶ್ರೇಣಿಯಲ್ಲಿ ಹೊಸ ಮುಂಚೂಣಿಯ ಗ್ರೇಡ್ ಎಲಿವೇಟ್ ಎಡಿವಿ ಎಡಿಷನ್ ಬಿಡುಗಡೆ ಮಾಡಿದೆ.

ಈ ಎಡಿವಿ ಎಡಿಷನ್ ಸಕ್ರಿಯ ಮತ್ತು ಚಲನಶೀಲ ಜೀವನಶೈಲಿಗಳ ಯುವ ಗ್ರಾಹಕರಿಗೆ ನಿರ್ಮಿಸಲಾಗಿದ್ದು ಇದು ಬರೀ ಅಪ್ಡೇಟ್ ಅಲ್ಲ- ಇದು ದಿಟ್ಟ ಸ್ಟೇಟ್ಮೆಂಟ್. ಇದು ಎಲಿವೇಟ್ ನ ಸದೃಢ ವಿನ್ಯಾಸ, ಆಕರ್ಷಕ ಐ-ವಿಟೆಕ್ ಕಾರ್ಯಕ್ಷಮತೆ ಮತ್ತು ಸುಧಾರಿತ ಹೊಂಡಾ ಸೆನ್ಸಿಂಗ್ ಸೇಫ್ಟಿ ವಿಶೇಷತೆಗಳು ಎಲ್ಲವನ್ನೂ ಕ್ರೀಡಾತ್ಮಕ ಮತ್ತು ಹೆಚ್ಚು ವಿಶಿಷ್ಟ ನೋಟದಲ್ಲಿ ನೀಡಿದೆ. ಇದು ತನ್ನ ಪೊಸಿಷನಿಂಗ್: ಬೋಲ್ಡ್ ಮೂವ್ ಅನ್ನು ಪರಿಪೂರ್ಣವಾಗಿ ಬಿಂಬಿಸುತ್ತದೆ.

ಹೊರಾಂಗಣ ವಿನ್ಯಾಸವು ದಿಟ್ಟ ವಿಶೇಷ ಅಪ್ ಗ್ರೇಡ್ ಗಳನ್ನು ಹೊಂದಿದ್ದು ಅದು ಇದನ್ನು ರಸ್ತೆಯಲ್ಲಿ ಎದ್ದು ಕಾಣುವಂತೆ ಮಾಡುತ್ತದೆ. ಹೊಸ ಆಲ್ಫಾ-ಬೋಲ್ಡ್ ಪ್ಲಸ್ ಗ್ರಿಲ್ ಸೇರ್ಪಡೆಯು ಮುಂಬದಿಯ ಮುಖಕ್ಕೆ ಪ್ರಭಾವಿ ಆದರೆ ಅತ್ಯಾಧುನಿಕ ನೋಟ ನೀಡಿದೆ. ಎಲಿವೇಟ್ ನಲ್ಲಿ ಈ ಪರಿಣಾಮಕಾರಿ ಬದಲಾವಣೆಗಳು ವಿಶ್ವಾಸ ಹಾಗೂ ಸಮಕಾಲೀನವಾಗಿರುವ ನೋಟದ ಗುರುತು ಸೃಷ್ಟಿಸಿವೆ.ಕ್ಯಾಬಿನ್ ಉನ್ನತ ಶಕ್ತಿಯ, ದಿ‍ಟ್ಟ ಕಪ್ಪು ಒಳಾಂಗಣದ ಥೀಮ್ ಅನ್ನು ಉಜ್ವಲ ಕಿತ್ತಳೆಯ ಅಕ್ಸೆಂಟ್ ಡೀಟೇಲಿಂಗ್ ನಲ್ಲಿ ಹೊಂದಿದೆ. ಕಪ್ಪು ಒಳಾಂಗಣದಲ್ಲಿ ಕಿತ್ತಳೆ ಅಕ್ಸೆಂಟ್ ಗಳ ಸ್ಥಾನವು ಚಾಲನೆಯ ಅನುಭವದ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಒಳಾಂಗಣದ ಮಧ್ಯ ಭಾಗದಲ್ಲಿ ಆವಿಷ್ಕಾರಕ ಮತ್ತು ಹೊಂಡಾದಲ್ಲಿ ಪ್ರಥಮ ಎಡಿವಿ ಟೆರೈನ್ ಪ್ಯಾಟ್ರನ್ ಬ್ಯಾಕ್ ಲಿಟ್ ಇಲ್ಯುಮಿನೇಟೆಡ್ ಇನ್ಸ್ಟ್ರುಮೆಂಟ್ ಪ್ಯಾನಲ್ ಗಾರ್ನಿಷ್ ಇದೆ. ಈ ವಿಶಿಷ್ಟ ಆಂಬಿಯೆಂಟ್ ಲೈಟಿಂಗ್ ಸಿಸ್ಟಂ ಆಕರ್ಷಕ ಪ್ಯಾಟ್ರನ್ ಸೃಷ್ಟಿಸಿದ್ದು ಅದು ಭವಿಷ್ಯಾತ್ಮಕ ಸ್ಟೈಲ್ ಮತ್ತು ಅತ್ಯಾಧುನಿಕತೆಯನ್ನು ಕ್ಯಾಬಿನ್ ಗೆ ನೀಡುತ್ತದೆ. ಗ್ರಾಹಕರು ಹೊಸದಾಗಿ ಪರಿಚಯಿಸಲಾದ 360° ಸರೌಂಡ್ ವ್ಯೂ ಕ್ಯಾಮರಾ ಆಯ್ಕೆ ಮಾಡಿಕೊಳ್ಳಬಹುದು, ಅದು ಹೆಚ್ಚುವರಿ ಅನುಕೂಲ ಮತ್ತು ಸುರಕ್ಷತೆ ನೀಡುತ್ತದೆ.

ಎಲಿವೇಟ್ ಎಡಿವಿ ಎಡಿಷನ್ ಬಿಡುಗಡೆ ಕುರಿತು ಹೊಂಡಾ ಕಾರ್ಸ್ ಇಂಡಿಯಾ ಲಿ.ಯ ಮಾರ್ಕೆಟಿಂಗ್ ಅಂಡ್ ಸೇಲ್ಸ್ ಉಪಾಧ್ಯಕ್ಷ ಕುನಾಲ್ ಬೆಹ್ಲ್, “ಹೊಂಡಾ ಎಲಿವೇಟ್ ದೇಶಾದ್ಯಂತ ತನ್ನ ದಿಟ್ಟ ನೋಟಗಳಿಗೆ ಮತ್ತು ಅತ್ಯಂತ ಸಕ್ರಿಯ ಕಾರ್ಯಕ್ಷಮತೆಗೆ ಗ್ರಾಹಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆದಿದೆ. ಎಲಿವೇಟ್ ಎಡಿವಿ ಎಡಿಷನ್ ಬಿಡುಗಡೆಯನ್ನು ಟಾಪ್ ಟ್ರಿಮ್ ಆಗಿ ಬಿಡುಗಡೆ ಮಾಡುವ ಮೂಲಕ ನಾವು ವಿಭಿನ್ನ ಆದ್ಯತೆಗಳ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುವ ಗುರಿ ಹೊಂದಿದ್ದೇವೆ. ಈ ಹೊಸ ಮಾದರಿಯು ಮತ್ತಷ್ಟು ದಿಟ್ಟ ಮತ್ತು ತೀಕ್ಷ್ಣ ವಿನ್ಯಾಸ ಹೊಂದಿದ್ದು ಸ್ಟೈಲ್ ಅನ್ನು ಹೊಂಡಾದ ವಿಶ್ವಾಸಾರ್ಹ ಗುಣಮಟ್ಟ ಮತ್ತು ಪರಿಷ್ಕರಣೆಯೊಂದಿಗೆ ಹೊಂದಿದ್ದು ಇದನ್ನು ಪ್ರತಿ ಪ್ರಯಾಣಕ್ಕೂ ಪರಿಪೂರ್ಣ ಸಂಗಾತಿಯಾಗಿಸಿದೆ. ಈ ಉತ್ಸಾಹಕರ ಹೊಸ ಆವೃತ್ತಿಯ ಅನುಭವ ಪಡೆದುಕೊಳ್ಳಲು ಹೆಚ್ಚಿನ ಗ್ರಾಹಕರನ್ನು ಸ್ವಾಗತಿಸಲು ನಾವು ಉತ್ಸುಕರಾಗಿದ್ದೇವೆ” ಎಂದರು.

ದಿಟ್ಟ ಹೊರಾಂಗಣ : ಎಲಿವೇಟ್ ಎಡಿವಿ ಎಡಿಷನ್ ತನ್ನ ಹೊಸ ಗ್ಲಾಸಿ ಬ್ಲಾಕ್ ಆಲ್ಫಾ-ಬೋಲ್ಡ್ ಪ್ಲಸ್ ಫ್ರಂಟ್ ಗ್ರಿಲ್ ಕಪ್ಪು ಸರೌಂಡ್ ನೊಂದಿಗೆ ಪ್ರತ್ಯೇಕಗೊಂಡಿದೆ ಮತ್ತು ಹುಡ್ ಡಿಕಾಲ್ ದಿಟ್ಟ ಕಿತ್ತಳೆ ಹೈಲೈಟ್ಸ್  ಮೂಲಕ ಉನ್ನತಗೊಂಡಿದ್ದು ಅದು ಒಟ್ಟಿಗೆ ರಸ್ತೆಯಲ್ಲಿ ಆಕರ್ಷಕ ಮತ್ತು ಸದೃಢ ಉಪಸ್ಥಿತಿ ನೀಡುತ್ತದೆ. ಇದರ ಬಲವಾದ ದೃಶ್ಯ ಗುರುತು ಕಪ್ಪು ರೂಫ್ ರೈಲ್ ಗಳು, ಒ.ಆರ್.ವಿ.ಎಂ.ಗಳು, ಅಪ್ಪರ್ ಗ್ರಿಲ್ ಮೌಲ್ಡಿಂಗ್, ಡೋರ್ ಮೌಲ್ಡಿಂಗ್ಸ್, ವಿಂಡೋ ಬೆಲ್ಟ್ ಲೈನ್ ಮೌಲ್ಡಿಂಗ್, ಶಾರ್ಕ್ ಫಿನ್ ಆಂಟೆನ್ನಾ ಮತ್ತು ಹ್ಯಾಂಡಲ್ಸ್ ಎಲ್ಲವನ್ನೂ ಹೊರಾಂಗಣ ನೋಟ ಉನ್ನತೀಕರಿಸಲು ವಿನ್ಯಾಸಗೊಳಿಸಲಾಗಿದೆ. ಈ ಅಂಶಗಳು ಎಲಿವೇಟ್ ಎಡಿವಿ ಎಡಿಷನ್ ನ ದಿಟ್ಟ ಮತ್ತು ವಿಶ್ವಾಸಾರ್ಹ ವಿನ್ಯಾಸದ ಸ್ಟೇಟ್ಮೆಂಟ್ ಅನ್ನು ಉನ್ನತೀಕರಿಸುತ್ತವೆ.

ಫಂಡರ್ ಗಳಲ್ಲಿ ಎಡಿವಿ ಎಂಬ್ಲೆಮ್ ಗಳು, ಆರೇಂಜ್ ಫಾಗ್ ಲೈಟ್ ಗಾರ್ನಿಶ್, ಮುಂಬದಿಯ ಬಾಗಿಲ ಮೇಲೆ ವಿಶಿಷ್ಟ ಎಡಿವಿ ಅಕ್ಷರಗಳು, ಮತ್ತು ಕಿತ್ತಳೆಯ ಛಾಯೆಯ ಬ್ಲಾಕ್ ಅಲಾಯ್ ವ್ಹೀಲ್ಸ್ ಅದರ ವಿಶಿಷ್ಟವಾಗಿ ನಿಲ್ಲುವ ನೋಟಕ್ಕೆ ಸೇರ್ಪಡೆಯಾಗುತ್ತವೆ. ರಿಯರ್ ಬಂಪರ್ ಸ್ಕಿಡ್ ಗಾರ್ನಿಶ್ ಕಿತ್ತಳೆ ಹೈಲೈಟ್ಸ್, ಬಾಡಿ-ಕಲರ್ಡ್ ರಿಯರ್ ಸ್ಕಿಡ್ ಪ್ಲೇಟ್, ಬ್ಲಾಕ್ಡ್-ಔಟ್ ಸಿ-ಪಿಲ್ಲರ್ ಅನ್ನು ಡ್ಯುಯಲ್ –ಟೋನ್ ಬಣ್ಣದ ಆಯ್ಕೆಗಳಿಗೆ ಹೊಂದಿದ್ದು ಇದರಿಂದ ಸ್ಪೋರ್ಟಿಯರ್ ಮತ್ತು ಹೆಚ್ಚು ಪ್ರೀಮಿಯಂ ಫಿನಿಷ್ ನೀಡುತ್ತದೆ.

ಕ್ರೀಡಾತ್ಮಕ ಒಳಾಂಗಣ : ಎಲಿವೇಟ್ ಎಡಿವಿ ಎಡಿಷನ್ ಒಳಾಂಗಣವು ತೆಳು ಸಂಪೂರ್ಣ ಕಪ್ಪು ಕ್ಯಾಬಿನ್ ಅನ್ನು ದಿಟ್ಟ ಕಿತ್ತಳೆ ಹೊಲಿಗೆ ಮತ್ತು ಅಕ್ಸೆಂಟ್ ಗಳೊಂದಿಗೆ ಹೊಂದಿದ್ದು ಇದು ತಾಜಾ ಮತ್ತು ಪ್ರೀಮಿಯಂ ನೋಟ ನೀಡುತ್ತದೆ. ಕಿತ್ತಳೆ ಹೊಲಿಗೆಯ ಕಪ್ಪು ಸೀಟುಗಳು ಮತ್ತು ಮುಂಬದಿ ಹಾಗೂ ಹಿಂಬದಿಯಲ್ಲಿ ಎಡಿವಿ ಲಾಂಛನವನ್ನು ಎಂಬಾಸ್ ಮಾಡಲಾಗಿದ್ದು, ಆಕರ್ಷಕ ಸ್ಪರ್ಶ ನೀಡುತ್ತದೆ. ಎಸಿ ನಾಬ್ ಗಳು, ಗೇರ್ ನಾಬ್ ಮೌಲ್ಡಿಂಗ್ ಮತ್ತು ಡೋರ್ ಟ್ರಿಮ್ ಗಳಲ್ಲಿ ಕಿತ್ತಳೆಯು ಕ್ಯಾಬಿನ್ ಅನ್ನು ಹೆಚ್ಚು ವಿಶೇಷ ಎಂದು ಭಾವಿಸುವಂತೆ ಮಾಡುತ್ತವೆ. ಕಪ್ಪು ರೂಫ್ ಲೈನಿಂಗ್, ಸನ್ ವೈಸರ್ಸ್ ಮತ್ತು ಪಿಲ್ಲರ್ ಗಳು ಈ ನೋಟ ಪೂರ್ಣಗೊಳಿಸುತ್ತವೆ. ಕಿತ್ತಳೆ ಸೀಟ್ ಬೆಲ್ಟ್ ಟಂಗ್- ಪ್ಲೇಟ್ ಕ್ರೀಡಾತ್ಮಕ ನೋಟ ನೀಡುತ್ತವೆ. ಈ ಇನ್ಸ್ಟ್ರುಮೆಂಟ್ ಪ್ಯಾನೆಲ್ ಆವಿಷ್ಕಾರಕ ಮತ್ತು ಮೊದಲ ಹೊಂಡಾ ಎಡಿವಿ ಟೆರೈನ್ ಪ್ಯಾಟ್ರನ್ ಬ್ಯಾಕ್ ಲಿಟ್ ಇಲ್ಯುಮಿನೇಟೆಡ್ ಇನ್ಸ್ಟ್ರುಮೆಂಟ್ ಪ್ಯಾನೆಲ್ ಗಾರ್ನಿಶ್ ನೊಂದಿಗೆ ಆಧುನಿಕ ಮತ್ತು ಹೆಚ್ಚು ತಲ್ಲೀನಗೊಳಿಸುವ ಕ್ಯಾಬಿನ್ ಅನುಭವ ನೀಡುತ್ತದೆ.

ಎಡಿವಿ ಎಡಿಷನ್ ಅನ್ನು ಮೀಟಿರಾಯಿಡ್ ಗ್ರೇ ಮೆಟಾಲಿಕ್ ಮತ್ತು ಲೂನಾರ್ ಸಿಲ್ವರ್ ಮೆಟಾಲಿಕ್ ಗಳಲ್ಲಿ ನೀಡಲಾಗುತ್ತಿದ್ದು ಸಿಂಗಲ್ ಟೋನ್ ಮತ್ತು ಡ್ಯುಯಲ್ ಟೋನ್ ಹೊರಾಂಗಣ ಬಣ್ಣದ ಆಯ್ಕೆಗಳಿವೆ.

ಎಲಿವೇಟ್ ಎಡಿವಿ ಎಡಿಷನ್ 1.5 ಲೀ. ಐ-ವಿಟೆಕ್ ಪೆಟ್ರೋಲ್ ಎಂಜಿನ್ ಹೊಂದಿದ್ದು ಇದು 6-ಸ್ಪೀಡ್ ಮ್ಯಾನ್ಯುಯಲ್ ಮತ್ತು 7-ಸ್ಪೀಡ್ ಸಿವಿಟಿ ಆಟೊಮ್ಯಾಟಿಕ್ ಟ್ರಾನ್ಸ್ ಮಿಷನ್ ಅನ್ನು ಪ್ಯಾಡಲ್ ಶಿಫ್ಟರ್ ಗಳೊಂದಿಗೆ ನೀಡುತ್ತದೆ. ಈ ಎಸ್.ಯು.ವಿ.ಯು ತನ್ನ ಅತ್ಯಂತ ದೊಡ್ಡ ಕಾರ್ಗೊ ಸ್ಥಳ, ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಅನುಕೂಲಕರ, ವಿಶಾಲ ಒಳಾಂಗಣಗಳಿಂದ ಪ್ರತ್ಯೇಕವಾಗಿ ನಿಲ್ಲುತ್ತಿದ್ದು ಇದನ್ನು ಪ್ರತಿನಿತ್ಯದ ಪ್ರಯಾಣಿಕರು ಹಾಗೂ ದೂರ ಪ್ರಯಾಣಗಳಿಗೆ ಪರಿಪೂರ್ಣ ಆಯ್ಕೆಯಾಗಿಸಿದೆ. ಟಾಪ್-ಕ್ಲಾಸ್ ಗ್ರೌಂಡ್ ಕ್ಲಿಯರೆನ್ಸ್ ನೊಂದಿಗೆ ಎಡಿವಿ ಆವೃತ್ತಿಯು ಸ್ಟೈಲ್ ಮತ್ತು ಪ್ರಾಯೋಗಿಕತೆಯನ್ನು ಪರಿಪೂರ್ಣವಾಗಿ ಸಂಯೋಜಿಸಿದ್ದು ವಿಶ್ವಾಸದ ಚಾಲನೆಗೆ ಅತ್ಯುತ್ತಮ ರೈಡ್ ಗಳಲ್ಲಿ ಒಂದನ್ನು ನೀಡುತ್ತದೆ.

ಹೊಂಡಾಗೆ ಸುರಕ್ಷತೆಯು ಪ್ರಮುಖ ಆದ್ಯತೆಯಾಗಿದೆ ಮತ್ತು ಎಲಿವೇಟ್ ಎಡಿವಿ ಎಡಿಷನ್ ಸುಧಾರಿತ ಡ್ರೈವರ್- ಅಸಿಸ್ಟ್ ಸಿಸ್ಟಂ (ಎಡಿಎಎಸ್) ಹೊಂಡಾ ಸೆನ್ಸಿಂಗ್ ನಿಂದ ಸನ್ನದ್ಧವಾಗಿದ್ದು ಅದರಲ್ಲಿ ಕೊಲಿಷನ್ ಮಿಟಿಗೇಷನ್ ಬ್ರೇಕಿಂಗ್ ಸಿಸ್ಟಂ, ಲೇನ್ ಕೀಪ್ ಅಸಿಸ್ಟ್, ರೋಡ್ ಡಿಪಾರ್ಚರ್ ಮಿಟಿಗೇಷನ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಲೀಡ್ ಕಾರ್ ಡಿಪಾರ್ಚರ್ ನೋಟಿಫಿಕೇಷನ್ ಮುಂತಾದ ವಿಶೇಷತೆಗಳನ್ನು ಹೊಂದಿದೆ.

ಇದರೊಂದಿಗೆ ಎಲಿವೇಟ್ ಎಡಿವಿ ಎಡಿಷನ್ ಅನ್ನು ಏಸ್ ಬಾಡಿ ಸ್ಟ್ರಕ್ಚರ್ ನಿಂದ ನಿರ್ಮಿಸಲಾಗಿದೆ ಮತ್ತು 6 ಏರ್ ಬ್ಯಾಗ್ಸ್, ಲೇನ್ ವಾಚ್ ಕ್ಯಾಮರಾ, ವೆಹಿಕಲ್ ಸ್ಟೆಬಿಲಿಟ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್, ಮಲ್ಟಿ-ಆಂಗಲ್ ರಿಯರ್ ವ್ಯೂ ಕ್ಯಾಮರಾ ಮತ್ತು ಐಸೊಫಿಕ್ಸ್ ಕಂಪ್ಯಾಟಿಬಲ್ ರಿಯರ್ ಸೀಟ್ ಗಳನ್ನು ಲೋಯರ್ ಆಂಕರೇಜಸ್ ಮತ್ತು ಟಾಪ್ ಟೆದರ್ ಗಳೊಂದಿಗೆ ಹೊಂದಿದೆ. ಇದು 37 ಸ್ಮಾರ್ಟ್ ಕನೆಕ್ಟೆಡ್ ಕಾರ್ ವಿಶೇಷತೆಗಳನ್ನು 5 ವರ್ಷ ಚಂದಾದಾರಿಕೆಯೊಂದಿಗೆ ನೀಡುವ ಹೊಂಡಾ ಕನೆಕ್ಟ್ ಹೊಂದಿದೆ.

ಗ್ರಾಹಕರ ಮನಃಶ್ಯಾಂತಿಗೆ ಎಡಿವಿ ಎಡಿಷನ್ 3 ವರ್ಷ ಅನಿಯಮಿತ ಕಿಲೋಮೀಟರ್ ವಾರೆಂಟಿಯನ್ನು ಸ್ಟಾಂಡರ್ಡ್ ಆಗಿ ನೀಡಿದೆ. ಕೊಳ್ಳುಗರು 7 ವರ್ಷಗಳವರೆಗೆ ವಿಸ್ತರಿಸಿದ ವಾರೆಂಟಿ, 10 ವರ್ಷಗಳ ಎನಿಟೈಮ್ ವಾರೆಂಟಿ ಮತ್ತು ಖರೀದಿಯ ದಿನದಿಂದ ರೋಡ್ ಸೈಡ್ ಅಸಿಸ್ಟೆನ್ಸ್ ನೀಡುತ್ತದೆ.

ಎಲಿವೇಟ್ ಎಡಿವಿ ಎಡಿಷನ್ ಎಕ್ಸ್-ಶೋರೂಂ ದರ (ದೆಹಲಿ)

ಸಿಂಗಲ್ ಟೋನ್       ಡ್ಯುಯಲ್ ಟೋನ್

ಎಂಟಿ       ರೂ. 15,29,000  ರೂ. 15,49,000

ಸಿವಿಟಿ       ರೂ. 16,46,800  ರೂ. 16,66,800

-ಪರಿಣಾಮಕಾರಿ ಎಕ್ಸ್-ಶೋರೂಂ ದರ ಎಡಿವಿ ಎಡಿಷನ್ ಪ್ಯಾಕ್ ಒಳಗೊಂಡಿದೆ.

-ಎಡಿವಿ ಎಡಿಷನ್ ಪ್ಯಾಕ್ (ಆಲ್ಫಾ-ಬೋಲ್ಟ್ ಪ್ಲಸ್ ಫ್ರಂಟ್ ಗ್ರಿಲ್ ವಿಥ್ ಆರೇಂಜ್ ಅಕ್ಸೆಂಟ್, ಬ್ಲಾಕ್ ಲಿಟ್ ಇಲ್ಯುಮಿನೇಟೆಡ್ ಐಪಿ ಗಾರ್ನಿಷ್, ಡಿಕಾಲ್ಸ್ ಆನ್ ಹುಡ್ ಅಂಡ್ ಫ್ರಂಟ್ ಡೋರ್ಸ್, ಸ್ಟಿಕರ್ಸ್ ಆನ್ ಅಲಾಯ್ ವ್ಹೀಲ್ಸ್, ಫಾಗ್ ಲ್ಯಾಂಪ್ ಗಾರ್ನಿಶ್, ರಿಯರ್ ಬಂಪರ್ ಗಾರ್ನಿಶ್ ವಿಥ್ ಆರೇಂಜ್ ಅಕ್ಸೆಂಟ್ ಮತ್ತು ಫೆಂಡರ್ ಮತ್ತು ಟೈಲ್ ಗೇಟ್ ನಲ್ಲಿ ಎಂಬ್ಲೆಮ್ ಗಳು) ಹೊಂಡಾದ ಅಧಿಕೃತ ಬಿಡಿಭಾಗಗಳಾಗಿದ್ದು ಡೀಲರ್ ಶಿಪ್ ಗಳಲ್ಲಿ ಸೇರಿಸಬಹುದು/ಬದಲಾಯಿಸಹುದು.ಹೊಂಡಾ ಅಕ್ಸೆಸರಿ ವಾರೆಂಟಿ ಅನ್ವಯಿಸುತ್ತದೆ ಮತ್ತು ಖರೀದಿಯ ದಿನದಿಂದ 1 ವರ್ಷಕ್ಕೆ ಸೀಮಿತವಾಗಿರುತ್ತದೆ.

-360° ಸರೌಂಡ್ ವಿಷನ್ ಕ್ಯಾಮರಾ ಮೂರನೇ ಪಾರ್ಟಿಯಿಂದ ಹೆಚ್ಚುವರಿ ವೆಚ್ಚದಲ್ಲಿ ಲಭ್ಯವಿದ್ದು ಅದನ್ನು ಡೀಲರ್ ಶಿಪ್ ನಲ್ಲಿ ಜೋಡಿಸಲಾಗುತ್ತದೆ. ಅಂತಹ ಅಕ್ಸೆಸರಿಗಳ ವಾರೆಂಟಿಯು ಪೂರೈಕೆದಾರರ ಬೆಂಬಲ ಹೊಂದಿವೆ ಮತ್ತು ಖರೀದಿಯ ದಿನದಿಂದ 2 ವರ್ಷಗಳವರೆಗೆ ಸೀಮಿತವಾಗಿರುತ್ತವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ