ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ, ತಿಥಿ ಸಿನಿಮಾ ಖ್ಯಾತಿಯ ಹಿರಿಯ ನಟ ಸೆಂಚುರಿ ಗೌಡ (ಸಿಂಗ್ರೆಗೌಡ) ಮೃತಪಟ್ಟಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸಿಂಗ್ರೆಗೌಡನ ಕೊಪ್ಪಲು ಗ್ರಾಮದ ನಿವಾಸದಲ್ಲಿ ನೀರವ ಮೌನ ಆವರಿಸಿದೆ. ತಿಥಿ ಸಿನಿಮಾ ಮೂಲಕ ಸೆಂಚುರಿಗೌಡ ಎಂದೇ ಅವರು ಖ್ಯಾತಿ ಪಡೆದಿದ್ದರು. 100 ವರ್ಷ ವಯಸ್ಸು ದಾಟಿದ್ದರಿಂದ ಸಿನಿಮಾದಲ್ಲೂ ಸೆಂಚುರಿಗೌಡ ಎಂದೇ ಪಾತ್ರದ ಹೆಸರಾಗಿತ್ತು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಕಳೆದ ಕೆಲವೇ ತಿಂಗಳ ಹಿಂದೆ ಗಡ್ಡಪ್ಪ ಖ್ಯಾತಿಯ ಚನ್ನೇಗೌಡ ಮೃತಪಟ್ಟಿದ್ದರು. ಇವರಿಬ್ಬರೂ ತಿಥಿ ಸಿನಿಮಾದಲ್ಲಿ ನಟಿಸಿ ಫೇಮಸ್ ಆಗಿದ್ದರು. ಇವರಿಬ್ಬರು ತಮ್ಮ ಸಹಜ ನಟೆಯಿಂದ ಮನೆಮಾತಾಗಿದ್ದರು. ತಿಥಿ ಸಿನಿಮಾ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿತ್ತು. ಹಾಲು ತಪ್ಪ, ಚಿನ್ನದ ಗೊಂಬೆ, ಹಳ್ಳಿ ಪಂಚಾಯ್ತಿ, ತರ್ಲೆ ವಿಲೇಜ್ ಮುಂತಾದ ಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





