ವಿಮಲ್‌ ಇಲಾಯಿಚಿ ಹಾಗೂ ಪಾನ್‌ ಮಸಾಲಾ ಪ್ರಚಾರಕ್ಕೆ ಕುರಿತಂತೆ ಬಾಲಿವುಡ್‌ ಖ್ಯಾತ ನಟರಾದ ಶಾರುಖ್‌ ಖಾನ್‌, ಅಜಯ್‌ ದೇವಗನ್‌ ಮತ್ತು ಟೈಗರ್‌ ಶ್ರಾಫ್‌ ಅವರಿಗೆ ಕಾರಣ ಕೇಳಿ ಮಹಾರಾಷ್ಟ್ರದ ಆಹಾರ ಮತ್ತು ಔಷಧಿ ಆಡಳಿತ ಇಲಾಖೆಯು ನೋಟಿಸ್‌ ನೀಡಿದೆ.

ನಿಷೇಧಿತ ಪಾನ್‌ ಮಸಾಲಾ ಬ್ರ್ಯಾಂಡ್‌ಗೆ ʼಪರೋಕ್ಷ ಪ್ರಚಾರʼ ನೀಡುತ್ತಿರುವ ಕುರಿತು ವಿವರಣೆ ಕೋರಿದೆ. ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆಯಡಿ ದಾರಿ ತಪ್ಪಿಸುವ ಜಾಹೀರಾತುಗಳಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಈ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಆಹಾರ ಮತ್ತು ಔಷಧಿ ಆಡಳಿತವೂ ಮೂವರು ನಟರಿಗೆ ತಮ್ಮ ಪಾತ್ರದ ಕುರಿತು ಲಿಖಿತ ವಿವರಣೆ ನೀಡಲು ಸೂಚನೆ ನೀಡಿದ್ದು, ನಿಯಮ ಉಲ್ಲಂಘನೆ ಸಾಬೀತಾದರೆ ಬೃಹತ್‌ ಪ್ರಮಾಣದ ದಂಡ ವಿಧಿಸುವ ಸಾಧ್ಯತೆಯಿದೆ. ಈ ನಟರ ಅಧಿಕೃತ ಸಾಮಾಜಿಕ ಜಾಲತಾಣಗಳಿಂದ ಮತ್ತು ಇತರ ವೇದಿಕೆಗಳಿಂದ ಈ ಜಾಹೀರಾತು ಪ್ರಚಾರವನ್ನು ಕೂಡಲೇ ತೆರವುಗೊಳಿಸಲು ಸೂಚನೆ ನೀಡಲಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ