ಸಿಂಗರ್ಸ್ ಗೆ ದೊಡ್ಡ ಪ್ಲಾಟ್ ಫಾರ್ಮ್! : ಈ ಚಿತ್ರದಲ್ಲಿನ ರಶೇಲ್ ರಿಹಾನೆ ಬಲು ಹೆಚ್ಚಿನ ಖುಷಿಯಲ್ಲಿದ್ದಾಳೆ! ಇವಳ ಹೊಸ ಮ್ಯೂಸಿಕ್ ಆಲ್ಬಂ `ಆರೆಂಜ್ ಟ್ರೀ' ಸಕ್ಸಸ್ ಎನಿಸಿದೆ. ಟಿಕ್ ಟಾಕ್ ಆರ್ಟಿಸ್ಟ್ ಆದ ಈಕೆ ಸ್ಕಾಟ್ ಲ್ಯಾಂಡ್ ನವಳು. ಮ್ಯೂಸಿಕ್, ಫಿಲ್ಮ್ ಗಳಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ, ದೇಶವಿದೇಶಗಳ ಗಡಿ ದಾಟಿಬಿಟ್ಟಿದ್ದಾಳೆ! ಇವಳ ಆಲ್ಬಂನ್ನು ಆ್ಯಬ್ರೆಕ್ ಮ್ಯೂಸಿಕ್ ಲಾಂಚ್ ಮಾಡಿದೆ. ಈ ತಂಡ ಪ್ರತಿ 15 ದಿನಗಳಿಗೊಮ್ಮೆ ಹೊಸ ಹೊಸ ಕಲಾವಿದರನ್ನು ಪರಿಚಯಿಸುತ್ತಿರುತ್ತದೆ, ಹೊಸ ಸಿಂಗರ್ಸ್‌ಗೆ ದೊಡ್ಡ ಪ್ಲಾಟ್ ಫಾರ್ಮ್ ಒದಗಿಸುತ್ತದೆ.

ಈ ಕಾನೂನಿನಿಂದಾದರೂ ತುಸು ನೆಮ್ಮದಿ ದೊರಕೀತೇ? : ಅಮೆರಿಕಾದಲ್ಲಿ ನೆಲೆಸಿರುವ ಹಿಂದೂ, ಚೀನೀ, ಸಿಖ್ಖರು, ಕರಿಯರು ಒಟ್ಟುಗೂಡಿ ಕ್ಯಾಲಿಫೋರ್ನಿಯಾದಲ್ಲಿ ಒಂದು ಹೊಸ ಕಾನೂನು ರೂಪಿಸಿದ್ದಾರೆ. ಇದರಲ್ಲಿ ಪ್ರತಿ ಅಧಿಕಾರಿಯೂ `ಹೇಟ್ ಕ್ರೈಂ' ಕುರಿತ ದೂರಿನ ಬಗ್ಗೆ ಗಮನ ನೀಡಲೇಬೇಕು. ಅಲ್ಲಿನ ವಿಧಾನಸಭೆ ಇದನ್ನು ಅನುಮೋದಿಸಿದೆ, ಗವರ್ನರ್ ಮುದ್ರೆ ಒತ್ತಿದ್ದಾರೆ. ಕೆಲವು ವಾರಗಳ ಹಿಂದೆ ಜಾತಿ ಭೇದದ ಕುರಿತಾಗಿಯೂ ಅಲ್ಲಿನ ವಿಧಾನಸಭೆ ಒಂದು ಕಾನೂನನ್ನು ಜಾರಿಗೊಳಿಸಿತ್ತು. ಹಿಂದೂ ದಲಿತರು, ಶೂದ್ರರ ವಿರುದ್ಧ ಅಲ್ಲಿನ ಮೇಲ್ವರ್ಗದವರು, ಗವರ್ನರ್ ಅದಕ್ಕೆ ಒಪ್ಪದಂತೆ ಮಾಡಿಸಿಬಿಟ್ಟರು. ಚೀನೀಯರು ಈ ಹೊಸ ಕಾನೂನಿನ ಬಗ್ಗೆ ಹೆಚ್ಚು ಖುಷಿ ಪಡುತ್ತಿದ್ದಾರೆ. ಏಕೆಂದರೆ ಸಂಖ್ಯೆ ಮತ್ತು ಹಣ ಎರಡರಲ್ಲೂ ಸಶಕ್ತರಾದ ಇವರನ್ನು ಅಲ್ಲಿನ ಬಿಳಿಯರು ಬೇಕೆಂದೇ ಕೀಳಾಗಿ ಕಾಣುತ್ತಾರೆ. ಈ ಕಾನೂನು ತಮ್ಮ ಪರವಾದ್ದರಿಂದ, ಈ ಚೀನೀಯರು ಇಲ್ಲಿ ಪಬ್ಲಿಕ್ ಮೀಟಿಂಗ್ ನಡೆಸಿ, ಸರ್ಕಾರಕ್ಕೆ ಥ್ಯಾಂಕ್ಸ್ ಹೇಳುತ್ತಿದ್ದಾರೆ.

ಪ್ರೀತಿ ಏನೋ ಇದೆ.... ಆದರೆ : ಈ ನಾಯಿಮರಿ ಬಲು ಮುದ್ದಾಗಿದೆ, ಮನೆಯಲ್ಲಿ ಎಲ್ಲರ ಅಚ್ಚುಮೆಚ್ಚು! ಆದರೆ ಇದು ಆ ಮನೆಯ ದುಬಾರಿ ಕಾರ್ಪೆಟ್ ಮೇಲೆ 1, 2 ಮಾಡಿ ರಾದ್ಧಾಂತ ಮಾಡಿದರೆ ಮನೆಯವರಿಗೆ ಸಿಟ್ಟು ಬಾರದೆ ಇರುತ್ತದೆಯೇ? ನಾಯಿ ಸಾಕು ವಿರುದ್ಧ ಕ್ರಮ ಕೈಗೊಳ್ಳಬೇಕು. ಮುಂದೆ ಸಾಕುನಾಯಿಗಳೇ ಬೀದಿ ನಾಯಿಗಳಾಗುತ್ತವೆ, ಅವು ಕಚ್ಚುವುದರಿಂದ ಅಪಾಯ ತಪ್ಪದು. ಪಶುಪ್ರೇಮಿಗಳು ಇವನ್ನು ಕೊಲ್ಲುವವರ ವಿರುದ್ಧ ಕೂಗಾಡುತ್ತಾರೆ, ಅವಕ್ಕೆ ಆಹಾರ ಕೊಡುತ್ತಾರೆ, ಆದರೆ ಮನೆಯವರನ್ನೇ ಅವು ಕಚ್ಚಿಹಾಕಿದರೆ ಇವರೇನು ಮಾಡಿಯಾರು? ಅಮೆರಿಕಾದ ರಾಷ್ಟ್ರಪತಿ ಜೋ ಬೈಡನ್ ಸಹ ತಮ್ಮ ನಾಯಿಯನ್ನು ತ್ಯಜಿಸಬೇಕಾಯ್ತು. ಏಕೆಂದರೆ ಅದು ವೈಟ್ ಹೌಸ್ ನ ಸಿಬ್ಬಂದಿಯನ್ನೇ ಕಚ್ಚಿಬಿಟ್ಟಿತು! ನಮ್ಮ ಅಹಮದಾಬಾದ್ ನಲ್ಲಿ 49 ವರ್ಷದ ಪರಾಜ್ ದೇಸಾಯಿಯವರ ಆಘಾತಕರ ಮರಣ, ನಾಯಿ ಕಚ್ಚಿದ್ದರಿಂದಲೇ ಆಯ್ತು. ಹೀಗಾಗಿ ಮಾನವ ನಾಯಿ ಇಬ್ಬರಲ್ಲಿ ಒಂದನ್ನು ಆರಿಸಿಕೊಳ್ಳುವ ಪರಿಸ್ಥಿತಿ ಬಂದಿದೆ. ಈಗ ಮಾರುಕಟ್ಟೆಯಲ್ಲಿ ಗಲೀಜಾದ ಕಾರ್ಪೆಟ್ ನ್ನು ಶುಚಿಗೊಳಿಸಲು ಕೆಮಿಕಲ್ಸ್ ಇವೆ, ಆದರೆ ನಾಯಿ ಕಚ್ಚಿದ್ದಕ್ಕೆ ಆಸ್ಪತ್ರೆ ಒಂದೇ ಗತಿ!

ಹೆಣ್ಣಿನ ಸ್ವಾತಂತ್ರ್ಯಕ್ಕೂ ಉಡುಗೆಗೂ ಅವಿನಾಭಾವ ಸಂಬಂಧ : ರ್ಯಾಂಗ್ಲರ್ ಹಾಗೂ ಬಾರ್ಬಿ ಗೊಂಬೆಗಳ ರೂವಾರಿಗಳು, ಇದೀಗ ಅಮೆರಿಕಾದಲ್ಲಿ ಹೊಸ ಡ್ರೆಸ್ ಸೀರೀಸ್ ಶುರು ಮಾಡಿದ್ದಾರೆ. ಇದರಿಂದ ಹೆಂಗಸರು ಸೆಲ್ಫ್ ಕಾನ್ಛಿಡೆಂಟ್‌ಇಂಡಿಪೆಂಡೆಂಟ್ ಆಗಲೆಂಬುದು ಇವರ ಉದ್ದೇಶ. ಹೆಂಗಸರ ಸ್ವಾತಂತ್ರ್ಯಕ್ಕೂ, ಅವರ ಉಡುಗೆಗೂ ಅವಿನಾಭಾವ ಸಂಬಂಧ. ಬಾರ್ಬಿ, ಹಿಜಾಬ್, ಸೆರಗು, ಲಾಂಗ್ ಡ್ರೆಸ್ ಇತ್ಯಾದಿಗಳು ಹೆಂಗಸರ ಸ್ಪೀಡ್ ನ್ನು ಸಂಪೂರ್ಣ ಸ್ಲೋ ಮಾಡಲೆಂದೇ ರೂಪಿಸಿರುವ ವಿನ್ಯಾಸಗಳು. ಮೊಳ ಮೊಳದ ಸೀರೆಗಳು ಹೆಣ್ಣನ್ನು ಸದಾ ಬಂಧನದಲ್ಲಿ ಉಸಿರುಗಟ್ಟಿಸುವುದಾಗಿದೆ. ಕೇರಳದ ಕೂಲಿ ಹೆಂಗಸರು ರವಿಕೆ ಧರಿಸದೆ, ಕೆಲಸ ಮಾಡಬೇಕು ಎಂಬ ನಿಯಮವಿತ್ತು. ರ್ಯಾಂಗ್ಲರ್ ಬಾರ್ಬಿಗಳು ತಮ್ಮ ಉದ್ದೇಶದಲ್ಲಿ ತುಸುವಾದರೂ ಯಶಸ್ವಿಯಾದರೆ ಅದೇ ದೊಡ್ಡ ವಿಷಯ!





