ಇತ್ತೀಚೆಗಷ್ಟೇ ವೇದಿಕಾ ಶರ್ಮ `ಮಂತ್ರಾ ಹರ್ಬಲ್'ನ ಡೈರೆಕ್ಟರ್‌ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಕಂಪನಿ ಹೇರ್‌, ಸ್ಕಿನ್‌ಕೇರ್‌ ಹಾಗೂ ಸ್ಪಾದ ಅತ್ಯುತ್ತಮ ನೈಸರ್ಗಿಕ ಉತ್ಪನ್ನಗಳನ್ನು ಪೂರೈಸುತ್ತದೆ. ಅವು ಅಪ್ಪಟ ನೈಸರ್ಗಿಕವಾಗಿರುವುದರ ಜೊತೆಗೆ ಆಧುನಿಕ ತಂತ್ರಜ್ಞಾವನ್ನೂ ಆಧರಿಸಿವೆ, ಜೊತೆಗೆ ಪರಿಪೂರ್ಣ ಸುರಕ್ಷಿತ ಕೂಡ ಆಗಿವೆ.

ವೇದಿಕಾ ಲಂಡನ್ನಿನ ರೀಜೆಂಟ್‌ ಯೂನಿವರ್ಸಿಟಿಯಿಂದ ಗ್ಲೋಬಲ್ ಮ್ಯಾನೇಜ್‌ಮೆಂಟ್‌ ನಲ್ಲಿ ಡಿಗ್ರಿ ಪಡೆದ ಬಳಿಕ, ಯೂನಿವರ್ಸಿಟಿ ಆಫ್‌ ವೆಸ್ಟ್ ಮಿನಿಸ್ಟರ್‌ನಿಂದ ಮಾರ್ಕೆಟಿಂಗ್‌ ಕಮ್ಯುನಿಕೇಶನ್‌ನಲ್ಲಿ ಮಾಸ್ಟರ್‌ ಡಿಗ್ರಿ ಪಡೆದವರು. ಓದು ಮುಗಿಸಿದ ಬಳಿಕ ತಮ್ಮ ಕುಟುಂಬದ ಉದ್ಯಮದಲ್ಲಿ ಸೇರಿಕೊಳ್ಳುವ ಮುನ್ನ ಟೈಮ್ಸ್ ಗ್ರೂಪ್‌, ಕೋಕಾ ಕೋಲಾ ಮತ್ತು ಬಿಗ್‌ ಎಫ್‌ಎಂನಲ್ಲಿ ಕಾರ್ಯ ನಿವರ್ಹಿಸಿದ್ದರು. ಅವರ ಉದ್ಯಮ ಪ್ರಯಾಣದ ಕುರಿತಂತೆ ಒಂದಿಷ್ಟು ಮಾತುಕತೆ :

ಕ್ವಾಲಿಟಿ ಆಯುರ್ವೇದ ಸಲ್ಯೂಶನ್‌ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಇದು ಪರಿಪೂರ್ಣವಾಗಿ ಸರ್ಕಾರ ಅನುಮೋದಿಸಿದ ಪಾರಂಪರಿಕ ವಿಧಾನ. ಇದರಲ್ಲಿ ಸಂಪೂರ್ಣವಾಗಿ ಆಯುರ್ವೇದಿಕ ಸಾರವೇ ಒಳಗೊಂಡಿರುತ್ತದೆ. ಒಂದು ನಿರ್ದಿಷ್ಟ ವಿಧಾನದಲ್ಲಿಯೇ ಉತ್ಪನ್ನಗಳನ್ನು ಸಿದ್ಧಪಡಿಸಲಾಗುತ್ತದೆ. ಯಾವ ಮರದ ಎಲೆ, ಹಣ್ಣು, ತೊಗಟೆ, ಬೇರು ಬಳಸಲಾಗುತ್ತದೆ ಎನ್ನುವುದನ್ನು ಆಯುರ್ವೇದ ಸಿದ್ಧಾಂತದ ಪ್ರಕಾರವೇ ಮಾಡಬೇಕಾಗುತ್ತದೆ. ಇದರಲ್ಲಿ ಯಾವುದೇ ಬಗೆಯ ಕೆಮಿಕಲ್ಸ್ ಬಳಸಲಾಗುವುದಿಲ್ಲ.

ಇದು ಮಾರುಕಟ್ಟೆಗೆ ಬರುವ ಇತರೆ ಉತ್ಪನ್ನಗಳಿಗಿಂತ ಹೇಗೆ ಭಿನ್ನವಾಗಿರುತ್ತದೆ? ಇದನ್ನು ಜನರು ಏಕೆ ಖರೀದಿಸಬೇಕು?

ಜನರಿಗೆ ತಿಳಿದಿರುವ ಪ್ರಕಾರ, ಆಯುರ್ವೇದದ ಉತ್ಪನ್ನಗಳು ರಾಸಾಯನಮುಕ್ತವಾಗಿರುತ್ತವೆ. ಅದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗದು. ನಮ್ಮದೇ ಆದ `ಬೈದ್ಯನಾಥ್‌ ರಿಸರ್ಚ್‌ ಫೌಂಡೇಶನ್‌' ಇದೆ. ಅಲ್ಲಿ ಇಡೀ ವರ್ಷ ಸಂಶೋಧನೆಗಳು ನಡೆಯುತ್ತಲೇ ಇರುತ್ತವೆ. ಇವುಗಳ ವಿಶೇಷತೆ ಏನೆಂದರೆ, ದೀರ್ಘಾವಧಿಯವರೆಗೆ ಯಾವುದೇ ಭೀತಿಯಿಲ್ಲದೆ ಇವುಗಳನ್ನು ಉಪಯೋಗಿಸಬಹುದು.

ನಿಮ್ಮ ಉತ್ಪನ್ನಗಳ ಬಗ್ಗೆ ಹೇಳಿ.

ನಮ್ಮ ಉತ್ಪನ್ನಗಳು ಪ್ಯಾರಾಬೀನ್‌, ಪ್ಯಾರಾಫಿನ್‌ ಹಾಗೂ ಕೆಮಿಕಲ್ ರಹಿತವಾಗಿರುತ್ತವೆ. 1-2 ಬಗೆಯ ಕೆಮಿಕಲ್ಸ್ ಗಳಿದ್ದು, ಅವನ್ನು ನಾವು ನಮ್ಮ ಉತ್ಪನ್ನಗಳಲ್ಲಿ ಬಳಸುವುದಿಲ್ಲ. ನಮ್ಮ ಉತ್ಪನ್ನಗಳ ಸುವಾಸನೆಗಾಗಿ ಬಳಸುವ ಘಟಕ ಕೂಡ ನೈಸರ್ಗಿಕವಾಗಿರುತ್ತದೆ. ಮಕ್ಕಳೂ ಕೂಡ ಈ ಉತ್ಪನ್ನಗಳನ್ನು ನಿಶ್ಚಿಂತೆಯಿಂದ ಬಳಸಬಹುದು. ನಮ್ಮ ಉತ್ಪನ್ನಗಳಾದ ರೋಸ್‌ವಾಟರ್‌, ಆಲ್ಮಂಡ್‌ ಆಯಿಲ್ ಇವೆಲ್ಲ ಅತ್ಯುತ್ತಮ ಉತ್ಪನ್ನಗಳಾಗಿವೆ. ಆಲ್ಮಂಡ್‌ ಆಯಿಲ್ ತ್ವಚೆ, ಕೂದಲಿಗೆ ಉಪಯೋಗಿಸುವುದರ ಜೊತೆಗೆ ಹಾಲಿನಲ್ಲಿ ಮಿಶ್ರಣ ಮಾಡಿಕೊಂಡು ಕೂಡ ಕುಡಿಯಬಹುದು.

ಆಯುರ್ವೇದದಿಂದ ಪ್ರತಿಯೊಂದು ರೋಗಕ್ಕೂ ಚಿಕಿತ್ಸೆ ಸಾಧ್ಯವಿದೆಯೇ?

ಚಿಕಿತ್ಸೆಗೆ ಒಂದಷ್ಟು ಸಮಯ ತಗುಲಬಹುದು. ಆದರೆ ಸೂಕ್ತ ಜೀವನಶೈಲಿ ಅನುಸರಿಸುವುದರಿಂದ ಸಾಕಷ್ಟು ರೋಗಗಳಿಂದ ಗುಣಮುಖರಾಗಬಹುದು. ಆಯುರ್ವೇದ ಮುಂಜಾಗ್ರತೆಯಲ್ಲಿ ಹೆಚ್ಚು ವಿಶ್ವಾಸವಿಡುತ್ತದೆ. ಆರಂಭದಿಂದಲೇ ನೀವು ಆಯುರ್ವೇದಿಕ ಉತ್ಪನ್ನಗಳನ್ನು ಬಳಸುತ್ತ ಹೋದರೆ ರೋಗಮುಕ್ತರಾಗಬಹುದು. ಏಕೆಂದರೆ ಪ್ರತಿವರ್ಷ ಪ್ರತಿಯೊಂದು ಔಷಧಿ ಹಾಗೂ ರೋಗದ ಕುರಿತಂತೆ ಸಂಶೋಧನೆ ನಡೆಯುತ್ತಿರುತ್ತದೆ.

ನಿಮ್ಮ ಮುಂದಿನ ಯೋಜನೆ ಏನು?

ನಾವು ಸತತವಾಗಿ ಹೊಸ ಉತ್ಪನ್ನಗಳನ್ನು ಲಾಂಚ್‌ ಮಾಡುತ್ತಲೇ ಇರುತ್ತೇವೆ. ನಾವು 2 ತಿಂಗಳಲ್ಲಿ  2-3 ಉತ್ಪನ್ನಗಳನ್ನು ಮಾರ್ಕೆಟ್‌ನಲ್ಲಿ ಲಾಂಚ್‌ ಮಾಡಲಿದ್ದೇವೆ. ಅದರಲ್ಲಿ ಫೇಶಿಯಲ್ ಕಿಟ್‌, ಸ್ಕ್ರಬ್‌, ಟೋನರ್‌ ಮುಂತಾದವು ಸೇರಿವೆ. ಮುಂಬರುವ ದಿನಗಳಲ್ಲಿ ನಮ್ಮ ಸ್ಟೋರ್‌ಗಳ ಸಂಖ್ಯೆಯನ್ನು ಹೆಚ್ಚಿಸಲಿದ್ದೇವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ