ಬಿಡುವಿನ ಸಮಯದ ಸದುಪಯೋಗ ಪಡಿಸಿಕೊಳ್ಳುತ್ತಾ, ಸಣ್ಣಪುಟ್ಟ ಹವ್ಯಾಸವನ್ನೇ ಅದ್ಭುತ ಕಲೆಯಾಗಿ ಬೆಳೆಸಿಕೊಂಡು, ಅಪಾರ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ಅಪ್ಪಟ ಪ್ರತಿಭಾವಂತೆ, ಕಲಾವಿದೆ ವಿದ್ಯಾ ಹರೀಶ್ ಪರಿಚಯ ಪಡೆಯೋಣವೇ......?

ಕಲೆ ಎಂಬುದು ಭಾವನೆಗಳು ಅಥವಾ ಅರಿವಿನ ಮೇಲೆ ಪರಿಣಾಮವಾಗುವ ಹಾಗೆ ಬುದ್ಧಿಪೂರ್ವಕವಾಗಿ ಜೋಡಿಸಲಾದ ಅಂಶಗಳ ರೂಪ. ಕೌಶಲ್ಯ ಮತ್ತು ಕಲ್ಪನೆಗಳನ್ನು ಬಳಸಿ ಕಲಾತ್ಮಕವಾದ ಕಲಾಕೃತಿ, ಪರಿಸರ ಅಥವಾ ಅನುಭವವನ್ನು ಸೃಷ್ಟಿಸುವುದು ಅಥವಾ ಬೇರೆಯವರೊಂದಿಗೆ ಹಂಚಿಕೊಳ್ಳಬಹುದಾದ ಅನುಭವಗಳು ಎಂದು ವ್ಯಾಖ್ಯಾನಿಸಲಾಗುತ್ತದೆ.

ಕಲೆ ಕೇವಲ ಒಂದು ಕಲಾಕೃತಿ ಅಥವಾ ಚಟುವಟಿಕೆಯಲ್ಲ, ಬದಲಾಗಿ ಸಮತೆ ಮತ್ತು ಸಾಮರಸ್ಯವನ್ನು ಆಸ್ವಾದಿಸುವ ಒಂದು ಆಂತರಿಕ ರಸಾನುಭವ. ಹೀಗಾಗಿ ಇದು ಯಾವುದೇ ಉಪಯುಕ್ತತೆಯನ್ನು ಮೀರಿದ, ಮನುಷ್ಯತ್ವದ ಸಹಜಗುಣ. ತಮ್ಮ ಭಾವನೆ ಮತ್ತು ಪ್ರತಿಭೆಯನ್ನು ತೋರಿಸಿಕೊಳ್ಳುವುದು, ತಮ್ಮ ಕಲೆಯ ಮೂಲಕ ಆಶಯಗಳನ್ನು ವ್ಯಕ್ತಪಡಿಸುವುದು ಕಲಾವಿದರ ಲಕ್ಷಣ.

ಬುದ್ಧಿಜೀವಿಗಳದ್ದು ಆಲೋಚನೆ, ಹೃದಯಜೀವಿಗಳದ್ದು ರಸಾನುಭವ. `ಬಲ್ಲವನೇ ಬಲ್ಲ ಬೆಲ್ಲದ ರುಚಿಯ' ಎನ್ನುವ ಹಾಗೆ ಚಿತ್ರಕಲೆಯ ಸವಿಯು ಸವಿದವನಿಗೇ ಗೊತ್ತು. ಸಮುದ್ರದ ದಡದಲ್ಲಿ ನಿಂತು ಬೊಗಸೆ ಸಮುದ್ರದ ನೀರನ್ನು ಎತ್ತಿ ಹಿಡಿದು, ನೋಡಿ ನನ್ನ ಬೊಗಸೆಯಲ್ಲಿ ಇರುವುದಷ್ಟೇ ಸಮುದ್ರ ಎಂದು ಕೂಗಿಕೊಂಡರೆ ಏನು ಲಾಭ? ಹೀಗಿದ್ದರೂ ಸಹ ತಮ್ಮ ತಮ್ಮ ಪೂರ್ವಾನುಭವಗಳ ಆಧಾರಗಳಿಂದ ಅಥವಾ ಕಲೆಯ ಒಂದಂಶವನ್ನು ಸ್ಪರ್ಶಿಸಿ. ಇಡೀ ಕಲೆಯ ಚಿಕ್ಕ ಪರಿಚಯ ಅಥವಾ ಪ್ರಯತ್ನವನ್ನು ಮಾಡುವ ನಿಟ್ಟಿನಲ್ಲಿ ಚಿಂತಿಸಿ ಹೇಳುವುದಾದರೆ, ಮಾನವನ ವಿಶಿಷ್ಟ ಚಟುವಟಿಕೆಯೇ ಕಲೆ!

ಏನಿದು ಕಲೆ, ಚಿತ್ರಕಲೆ, ಕರಕೌಶಲ್ಯ ಅನ್ಕೊಂಡ್ರಾ.... ಮಲೆನಾಡಿನ ಕಲಾಸರಸ್ವತಿಯನ್ನು ಪರಿಚಯ ಮಾಡಿಕೊಳ್ಳೋಣ. ಅವರು ಬೇರಾರೂ ಅಲ್ಲ,  ಮೇಗಟಳ್ಳಿ ವಿದ್ಯಾ ಹರೀಶ್‌.

WhatsApp-Image-2024-02-08-at-2.13.20

ವಿದ್ಯಾರ ಸಾಧನೆಗಳು

ತೋಟದ ಮಧ್ಯದಲ್ಲಿರುವ ಅವರ ಮನೆ ಮನಕ್ಕೆ ಮುದ ನೀಡುವ ನೂರಾರು ರೀತಿಯ ಅತ್ಯಾಕರ್ಷಕ ಹೂವಿನ ಗಿಡಗಳು, ಕೈ ಬೀಸಿ ಕರೆಯುವ ಆಂಥೋರಿಯಂ ಪುಷ್ಪಗಳು, ಬಣ್ಣ ಬಣ್ಣದ ಗುಲಾಬಿ ಹೂಗಳು, ಮನೆಯ ಮುಂದೆ ವಿವಿಧ ಕಲಾಕೃತಿಯ ಪಾಟ್ ಗಳಲ್ಲಿ ಚೆಂದ ಚೆಂದದ ಅಲಂಕಾರಿಕ ಹೂಗಿಡಗಳು ನೋಡಲೆರಡು ಕಣ್ಣುಗಳೇ ಸಾಲುವುದಿಲ್ಲ.

ಮನೆಯೊಳಗೆ ಕಾಲಿಟ್ಟರೆ ಕಲಾಮಂದಿರಕ್ಕೆ ಕಾಲಿಟ್ಟ ಅನುಭವವಾಗುತ್ತದೆ. ಏನೋ ಒಂದು ಅವ್ಯಕ್ತ ಆನಂದ ಮನದೊಳಗೆ ಹೊಕ್ಕು ಮಾಯವಾಗುತ್ತದೆ. ಅಷ್ಟು ಅಚ್ಚುಕಟ್ಟಾಗಿ ವಿದ್ಯಾ ತಮ್ಮ ಕಲಾಕೃತಿಗಳನ್ನು ಕಾಪಾಡಿಕೊಂಡಿದ್ದಾರೆ.

ಅಷ್ಟು ದೂರ ಸಂದರ್ಶನಕ್ಕೆ ಹೋಗೋದು ಹೇಗೆ ಎಂದು ಆಲೋಚಿಸುತ್ತಿದ್ದೆ. ಆದರೆ ಅವರ ಮನೆಗೆ ಹೋದಾಗ ಹೋದದ್ದು ನಿಜಕ್ಕೂ ಸಾರ್ಥಕವಾಯಿತು ಎನಿಸಿತು. ವಿದ್ಯಾ ಇಂದಿನ ಎಷ್ಟೋ ಜನ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಇಂದಿನ ಎಷ್ಟೋ ಮಹಿಳೆಯರು ಮನೆಗೆಲಸ ಮುಗಿಸಿದ ನಂತರ ಮೊಬೈಲ್ ‌ಹಿಡಿದು ಕುಳಿತುಬಿಡುತ್ತಾರೆ.

WhatsApp-Image-2024-02-08-at-2.13.17-PM

ಸೃಜನಾತ್ಮಕ ಚಟುವಟಿಕೆ

ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸೃಜನಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ಮನಸ್ಸು ಪ್ರಪಲ್ಲವಾಗುತ್ತದೆ. ನಮ್ಮೊಳಗಿರುವ ಕಲೆ ಹೊರಬರುತ್ತದೆ. ಮನಸ್ಸಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ವಿದ್ಯಾರನ್ನು ನೋಡಿದರೆ ಎಂಥವರಿಗೂ ಅನಿಸದೇ ಇರಲಾರದು. ಇನ್ನು ವಿದ್ಯಾರ ಕಲೆ, ಹೂಗಿಡಗಳು ಇವುಗಳ ಬಗ್ಗೆ ಗಮನ ಹರಿಸೋಣವೇ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ