ಹೊಗಳುವುದಾದರೂ ಯಾರನ್ನು? : ವೆಡ್ಡಿಂಗ್‌ ಪೋಟೋಗ್ರಫಿ ಇದೀಗ ಒಂದು ದೊಡ್ಡ ಆಯೋಜನೆಯೇ ಆಗಿಹೋಗಿದೆ. ಪ್ರೀವೆಡ್ಡಿಂಗ್‌, ಪೋಸ್ಟ್ ವೆಡ್ಡಿಂಗ್‌ ಫೋಟೋಗ್ರಫಿಗಾಗಿ, ಆಧುನಿಕ ಫೋಟೋಗ್ರಾಫರ್ಸ್‌ ಬಹಳಷ್ಟು ಹೊಸ ಹೊಸ ವಿಧಾನಗಳನ್ನು ಕಂಡುಕೊಂಡಿದ್ದಾರೆ. ಏಕೆಂದರೆ ಇಂದಿನ ಸೆಲ್ಛಿ ಝಮಾನಾದಲ್ಲಿ ಇವರ ಬಿಸ್‌ನೆಸ್‌ ಡಲ್ಲೋ ಡಲ್ಲು! ಅತಿ ಎತ್ತರದ ಕಟ್ಟಡದ ನೆರಳಿನಲ್ಲೂ ಸಹ ರೋಚಕ, ಚಿತ್ತಾಕರ್ಷಕ ಫೋಟೊಗ್ರಫಿಯ ಈ ನಮೂನೆ ಇತ್ತೀಚಿನ ಬಾರ್ಟ್‌ ಹ್ಯಾರಿಸ್‌ನದು.

ಡಕಾರ್‌ ಮೋಟರ್‌ ಸೈಕಲ್ ರಾಲಿ ಅಂತಿಂಥದ್ದಲ್ಲ :  15 ದಿನಗಳಲ್ಲಿ ದಕ್ಷಿಣ ಅಮೆರಿಕಾದಲ್ಲಿ 9,000 ಕಿ.ಮೀ.ವರೆಗೂ ಈ ಭಾರಿ ಬೈಕ್‌ನ್ನು ಓಡಿಸುವುದು ತಮಾಷೆಯಲ್ಲ. ಇದರಲ್ಲಿ ಈಗ ಹೆಣ್ಣುಮಕ್ಕಳೂ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿನ ಜಿಯಾನಾ ಬರ್ಡೆ, ದ. ಅಮೆರಿಕಾದ ಪೆರು ಪ್ರಾಂತ್ಯಕ್ಕೆ ಸೇರಿದವಳು. ಇದರಲ್ಲಿ ಭಾಗಹಿಸುವುದು ಮಾತ್ರವಲ್ಲ, ಗೆದ್ದು ತೋರಿಸುತ್ತೀನಿ ಎನ್ನುತ್ತಾಳೆ! 1997ರಿಂದ ಇಲ್ಲಿಯವರೆಗೂ 70ಕ್ಕೂ ಹೆಚ್ಚು ಜನ ಈ ರಾಲಿಯಲ್ಲಿ ಭಾಗವಹಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಪ್ರತಿ ವರ್ಷ 500ಕ್ಕೂ ಹೆಚ್ಚು ಮಂದಿ ಭಾಗವಹಿಸುತ್ತಾರೆ.

ವಿಶಿಷ್ಟ ಉಡುಗೆಗಳ ಗ್ಲಾಮರಸ್‌ ಮೋಡಿ :  ಆಹಾ, ಇಲ್ಲಿನ ಮಾಡೆಲ್‌ಗಳ ರಾಂಪ್‌ ಲುಕ್ಸ್, ಕ್ಯಾಟ್‌ವಾಕ್‌, ಡ್ರೆಸ್‌ ಡಿಸೈನ್ಸ್ ನೋಡಿ! ನೋಡುವವರ ಕಂಗಳು ತೆರೆದಂತೆಯೇ ಇದ್ದುಬಿಡುವಂತೆ ಮಾಡುವುದೇ ಇಂದಿನ ಆಧುನಿಕ ಡಿಸೈನರ್‌ಗಳ ಕೈಚಳಕ! ಈ ಕಲರ್‌ಫುಲ್ ಫ್ರಿಂಜ್‌ ಡ್ರೆಸೆಸ್‌ ಒಂದು ವಿಶಿಷ್ಟ ಬಗೆಯ ಲೇಟೆಸ್ಟ್ ಟೆಕ್ನಿಕ್‌ನಿಂದ ರೆಡಿಯಾಗಿವೆ, ಅದುವೇ ಕಾಪ್‌ಮೂನ್‌ ಟೆಕ್ನಿಕ್‌!

ಫ್ಯಾಷನ್‌ ವಿತ್‌ ಡಿಫರೆನ್ಸ್ : ಯಾವುದೇ ಪಾರ್ಟಿ, ಮದುವೆಗೆ ಹೋಗಬೇಕೆಂದಿದ್ದರೆ, ಡ್ರೆಸ್‌ ಅಂತೂ ಎಷ್ಟು ಸ್ಟೈಲಿಶ್‌ ಆಗಿದ್ದರೂ ಸಾಲದೆನಿಸುತ್ತದೆ. ಈಗಂತೂ ಇನ್ನೂ ಸಲೀಸು, ಆನ್‌ಲೈನ್‌ನಲ್ಲಿ ಲಹಂಗಾ ಕೊಂಡು, ಧರಿಸಿದರಾಯ್ತು! ಈ ತರಹದ ಯೂರೋಪಿಯನ್‌ ಡಿಸೈನ್‌ ನಿಮ್ಮದಾಗಿಸಿಕೊಂಡು, ನಿಮ್ಮದೇ ಸ್ಟೈಲಿಶ್‌ ನಡಿಗೆಯಲ್ಲಿ ವೇದಿಕೆ ಮೇಲೆ ಕಾಣಿಸಿಕೊಳ್ಳಿ.

 

ಗಳಿಸಿದ ಖುಷಿಯೋ…. ಕಳೆದುಕೊಂಡ ದುಃಖವೋ? : ಈ ರೀತಿ ಮದ್ಯದ ಬಾಟಲಿ ತೆಗೆದುಕೊಂಡು ಗಟಗಟ ಕುಡಿಯುತ್ತಿದ್ದರೆ ಡೈವೋರ್ಸ್‌ ಆಗದೆ ಇನ್ನೇನಾದೀತು? ಇಲ್ಲಿನ ಈ ಅಪ್‌ಟುಡೇಟ್‌ ಲಲನಾಮಣಿಗಳು ಸಕಲ ಮೇಕಪ್‌ನೊಡಗೂಡಿ ತಮ್ಮ ಗೆಳತಿಗಾದ ಡೈವೋರ್ಸ್‌ಗೆ ವಿಷಾದ ತಿಳಿಸಲು ಕುಡಿತದ ಪಾರ್ಟಿ ನಡೆಸಿದ್ದಾರೆ. ಇದು ವಿಡಂಬನೆ ಅಲ್ಲದೆ ಮತ್ತೇನು? ಮದುವೆ ನಂತರ ನವ ವಧುವನ್ನು ಬೀಳ್ಕೊಡುವಂತೆ, ಡೈವೋರ್ಸ್‌ ಪಡೆದ ದಂಪತಿ ಅಗಲಿಕೆ ಸಂಕೇತವಾಗಿ ಸ್ನೇಹಿತರ ಜೊತೆ ಈ ರೀತಿ ಪಾರ್ಟಿ ನಡೆಸುತ್ತಾರೆ. ಹೆಂಡದ ಹೆಸರಲ್ಲಿ ನೋವು ಮರೆಯುವ ಈ ನಾಟಕಕ್ಕೆ ಹೇಳುವುದೇನು….?

 

ಹೆಸರಿನೊಂದಿಗೆ ಹಣ ಕೂಡ : ಮಾರ್ಶಲ್ ಆರ್ಟ್ಸ್ ಇಲ್ಲಿಯವರೆಗೂ ಹೆಚ್ಚಿನ ದೇಶಗಳಲ್ಲಿ ಗಂಡಸರಿಗಷ್ಟೇ ಸೀಮಿತವಾಗಿತ್ತು. ಜೂಡೋ, ಬಾಕ್ಸಿಂಗ್‌, ಕರಾಟೆಗಳಲ್ಲಿ ಹೆಂಗಸರು ಕಾಣುತ್ತಿದ್ದುದು ಅಪರೂಪ. ಆದರೆ ಭಾರತದಲ್ಲಿ ಮೇರಿಕೋಮ್ ಹೆಚ್ಚಿನ ಖ್ಯಾತಿ ಗಳಿಸಿದವರು. ಅನಾದಿ ಕಾಲದಿಂದಲೂ ಸಂಪ್ರದಾಯನಿಷ್ಠ ಆಗಿರುವ ಮಯನ್ಮಾರ್‌ನ (ಬರ್ಮಾ) ಬೋಕ್ಸೇನಾ ಟೋಟೋ ಆ್ಯಂಟನಿ ಇದೀಗ ಪ್ರೊಫೆಶನಲ್ ಬಾಕ್ಸಿಂಗ್‌ ವೃತ್ತಿಗಿಳಿದಿದ್ದಾಳೆ. ಇದೀಗ ಆಕೆಗೆ ಬರ್ಮಾದಲ್ಲಿ ಹಣ, ಹೆಸರು ಹರಿದು ಬರುತ್ತಿದೆ. ಬಾಕ್ಸಿಂಗ್‌ ಮಧ್ಯೆ ಯಾವಾಗ ಬೇಕಾದರೂ ದವಡೆ ಮುರಿಯಬಹುದು…. ಹಣ, ಕೀರ್ತಿಯ ವ್ಯಾಮೋಹ ಸುಮ್ಮನೆ ಬರುವುದೇ?

ಅಹಿಂಸೆಗೆ ಝಿಂದಾಬಾದ್‌ : ಮಲಾಲಾ ಯೂಸುಫ್‌ ವಿರೋಧಿಗಳನ್ನು ಎದುರು ಹಾಕಿಕೊಂಡು ಗುಂಡೇಟು ತಿಂದದ್ದಾಯ್ತು. ಜೊತೆಗೀಗ ಹೆಸರು ಬಂತು! ನೋಬೆಲ್ ಪ್ರಶಸ್ತಿ ಪಡೆದು ಈಕೆ ಶಿಕ್ಷಣದ ಕ್ಷೇತ್ರದಲ್ಲಿ ಎಂಥ ರಾಯಭಾರಿ ಆಗಿದ್ದಾಳೆ ನೋಡಿ. ಆಸ್ಟ್ರೇಲಿಯಾಗೆ ಈಕೆ ಪ್ರವಾಸಕ್ಕೆ ಬಂದಿದ್ದಾಗ, ಸ್ವಾಗತ ಕೋರಿ ಜಮೆಗೊಂಡಿರುವ ಜನ ಜಂಗುಳಿ ನೋಡಿ! ಧರ್ಮಾಂಧ ಕಂದಾಚಾರಿಗಳು ಈಗಲಾದರೂ ತಿಳಿಯಲಿ, ಕೋವಿ ಅಥವಾ ಬೂಟು ಎಸೆದು ವಿರೋಧಿಸಿದರೂ ಸತ್ಯಕ್ಕೆ ಸಾವಿಲ್ಲ ಎಂಬುದು. ಧರ್ಮ ತರ್ಕದ  ಟೆಕ್ನಿಕ್‌ ಆಧಾರಿತ ಆಯುಧ ಬಳಸಿದರೂ ಸತ್ಯ ಮಾರ್ಗದಿ ನಡೆದ ಮಲಾಲಾ ಜನಮನ್ನಣೆ ಗಳಿಸಿ ಹಿರಿಯ ಸ್ಥಾನಕ್ಕೇರಿದ್ದಾಳೆ!

TAGS : ಸುದ್ದಿ ಸಮಾಚಾರ, ಯಾರನ್ನು ಹೊಗಳುವುದು, ಡಕಾರ್ ಮೋಟರ್ ಸೈಕಲ್ ರಾಲಿ, ಗ್ಲಾಮರಸ್ ಉಡುಗೆಗಳ ಮೋಡಿ, ಫ್ಯಾಷನ್ ವಿತ್ ಡಿಫರೆನ್ಸ್, ಖುಷಿಯೋ-ದುಃಖವೋ, ಹೆಸರು-ಹಣ, ಅಹಿಂಸೆಗೆ ಜಯ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ