ಮದುವೆ ಸುಲಭ ಆದರೆ ವಿಚ್ಛೇದನ ಕಷ್ಟಕರ ಏಕೆ?
ಹಿಂದೂ ವಿವಾಹ ಕಾನೂನಿನನ್ವಯ ಮದುವೆ ಮಾಡಿಕೊಳ್ಳುವುದು ಸುಲಭ. ಆದರೆ ವಿಚ್ಛೇದನ ಪಡೆಯುವುದು ಕಠಿಣ. ದೇಶದ ನ್ಯಾಯಾಲಯಗಳಲ್ಲಿ ಇಂತಹ ಪ್ರಕರಣಗಳು ತುಂಬಿಹೋಗಿವೆ. ಆಶ್ಚರ್ಯದ ಸಂಗತಿಯೆಂದರೆ, ಒಬ್ಬರು ವಿಚ್ಛೇದನಕ್ಕಾಗಿ ನಿರೀಕ್ಷಿಸುತ್ತಿರುತ್ತಾರೆ. ಮತ್ತೊಬ್ಬರು ಅದನ್ನು ವಿರೋಧಿಸುತ್ತಾರೆ.
5-6 ವರ್ಷಗಳ ಬಳಿಕ ವಿಚ್ಛೇದನ ದೊರಕಿದರೂ ಇಬ್ಬರಲ್ಲಿ ಒಬ್ಬರು ಕೋರ್ಟ್‌ನಲ್ಲಿ ಅಪೀಲ್ ಮಾಡುತ್ತಾರೆ. ಎಷ್ಟೋ ಪ್ರಕರಣಗಳು 10-15 ವರ್ಷಗಳ ಬಳಿಕ ಸುಪ್ರೀಂ ಕೋರ್ಟ್ ಕಟ್ಟೆ ಏರುತ್ತವೆ. ಆಗ ಸುಪ್ರೀಂ ಕೋರ್ಟ್ ಕಾನೂನಿನ ವ್ಯಾಖ್ಯೆ ನೀಡುತ್ತದೆ.
ವಾಸ್ತವದಲ್ಲಿ ವಿಚ್ಛೇದನದ ಕಾನೂನನ್ನು ಸರಳ ಹಾಗೂ ಸಹಜಗೊಳಿಸಬೇಕು. ಗಂಡ ಹೆಂಡತಿ ಜೊತೆ ಜೊತೆಗೆ ಇರಲು ಇಷ್ಟಪಡದೇ ಇದ್ದರೆ ಅವರನ್ನು ದೇಶದ ಯಾವುದೇ ಶಕ್ತಿ ಕೂಡ ಜೊತೆ ಜೊತೆಗೆ ಇರುವಂತೆ ಒತ್ತಾಯ ಹೇರಲು ಸಾಧ್ಯವಿಲ್ಲ.
ಗಂಡ ಹೆಂಡತಿ ಸಂಬಂಧ ಬಲಪೂರ್ವಕವಾದುದಲ್ಲ. 1956ಕ್ಕೂ ಮುಂಚೆ ಹಿಂದೂ ವಿವಾಹ ಕಾನೂನು ಇರದೇ ಇದ್ದಾಗಲೂ ಕೂಡ ಮಹಿಳೆಯರು ತಮಗೆ ಬೇಕೆಂದಾಗ ತವರಿಗೆ ಹೋಗಿಬಿಡುತ್ತಿದ್ದರು. ಆಗ ಗಂಡ ಆಕೆಗೆ ಹೇಳದೇ ಕೇಳದೇ ಇನ್ನೊಬ್ಬಳ ಜೊತೆಗೆ ಮದುವೆ ಆಗಿಬಿಡುತ್ತಿದ್ದ.
1956ರಲ್ಲಿ ತಿದ್ದುಪಡಿ ಮಹಿಳೆಯರಿಗೆ ಒಂದು ಆಪತ್ತಿನಂತೆ ಆಗಿಬಿಟ್ಟಿತು. ಏಕೆಂದರೆ ಮಧ್ಯವರ್ತಿಗಳಾಗಿರುವ ನ್ಯಾಯಾಲಯಗಳು ಕುಟುಂಬವನ್ನು ಒಗ್ಗೂಡಿಸುವ ಬದಲು ಅವರ ಜೀವನದ ಚೆಲ್ಲಾಪಿಲ್ಲಿಯಾಗಿರುವ ಪಾತ್ರಗಳನ್ನು ಒಗ್ಗೂಡಿಸಲು ವರ್ಷಾನುವರ್ಷ ತಗುಲುತ್ತದೆ.
2011ರಲ್ಲಿ ಆದ ವಿಚ್ಛೇದನ ಹಾಗೂ ಎರಡನೇ ಮದುವೆಯ ಸಿಂಧುತ್ವದ ನಿರ್ಧಾರವನ್ನು ಈಚೆಗಷ್ಟೆ ಸುಪ್ರಿಂ ಕೋರ್ಟ್ 2018ರಲ್ಲಿ ನೀಡಿತು. ಹೊಸ ಗಂಡ ಹೆಂಡತಿ ಇಬ್ಬರೂ ತಮ್ಮ ಮದುವೆ ಕಾನೂನು ರೀತ್ಯ ಸರಿಯೋ ಅಲ್ಲವೋ ಎಂದು ಜಗಳಕ್ಕೆ ನಿಂತಿದ್ದರು. ಏಕೆಂದರೆ ಹಿಂದಿನ ವಿಚ್ಛೇದನದ ತೀರ್ಪನ್ನು ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.
ಪ್ರಶ್ನೆ ಅದಲ್ಲ. ಪ್ರಶ್ನೆ ಏನೆಂದರೆ, ವಿಚ್ಛೇದನದ ಪ್ರಕರಣಗಳಲ್ಲಿ ಗಂಡ ಹೆಂಡತಿಯನ್ನು ಒತ್ತಾಯಪೂರ್ವಕವಾಗಿ ಒಗ್ಗೂಡಿಸಲು ಏಕೆ ಪ್ರಯತ್ನಿಸುತ್ತದೆ? ಪ್ರಕರಣ ನ್ಯಾಯಾಲಯದ ಮುಂದೆ ಬಂದರೆ ಪರಿಪೂರ್ಣ ವಿಚ್ಛೇದನ ಕೊಟ್ಟುಬಿಡಬೇಕು. ಒಂದು ಸಲ ತೀರ್ಪು ಬಂದ ಬಳಿಕ ಅಪೀಲ್ ಹಾಕಲು ಅವಕಾಶ ಇರಲೇಬಾರದು. ಮಕ್ಕಳನ್ನು ಕಸ್ಟಡಿಗೆ ತೆಗೆದುಕೊಳ್ಳಲು, ಖರ್ಚಿಗೆ ಮೊತ್ತ ಕೇಳಲು ಮಾತ್ರ ಅಪೀಲ್ ಹಾಕಲು ಅವಕಾಶ ಇರಬೇಕು.
ಗಂಡ ಮತ್ತು ಹೆಂಡತಿಗೆ ತಮ್ಮ ನಿರ್ಧಾರ ತೆಗೆದುಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯ ಇರಬೇಕು. ಮದುವೆಗೂ ಮುಂಚೆ ಅವರು ಸ್ನೇಹಿತರಂತೆ ಇದ್ದು ಆ ಬಳಿಕ ಸ್ನೇಹ ಕಡಿಮೆಗೊಳ್ಳುವಂತೆ ಮದುವೆಯ ಬಳಿಕ ಕಾನೂನಿನ ಪ್ರಕಾರ ವಿಚ್ಛೇದನ ಪಡೆದುಕೊಳ್ಳಲು ಸಾಧ್ಯವಾಗಬೇಕು. ಇದರಲ್ಲಿ ವಕೀಲರಿಗೆ ಅವಕಾಶವೇ ಇರಬಾರದು.
ವಿಚ್ಛೇದನ ಕೇಳಿದರೆ ಸಿಗುವಂತಿರಬೇಕು. ಈ ಪ್ರಕ್ರಿಯೆ ಕಾನೂನಿನಲ್ಲಿಯೇ ಇರಬೇಕು. ನ್ಯಾಯಾಲಯಗಳಿಗೆ ಇದರಲ್ಲಿ ಹೆಚ್ಚಿನ ಅವಕಾಶ ಇರಬಾರದು.
ಅಂದಹಾಗೆ, ಜೀವನಾಂಶದ ಬಾಬತ್ತಿನಲ್ಲಿ ಗಳಿಸುವ ವ್ಯಕ್ತಿ ಹೋದ ಬಳಿಕ ವಿಚ್ಛೇದನವನ್ನು ದೊಡ್ಡ ವಿಷಯ ಮಾಡುವ ಸಾಧ್ಯತೆ ಇದೆ. ಸುಪ್ರೀಂ ಕೋರ್ಟ್ 497ನೇ ಪೀನ್ ಕೋಡ್‌ನ್ನು ಮುಕ್ತಾಯಗೊಳಿಸಿ ಮಹಿಳೆಯರನ್ನು ಸ್ವಾತಂತ್ರ್ಯ ಗೊಳಿಸಿತು. ವಿಚ್ಛೇದನದ ಬಾಬತ್ತಿನಲ್ಲೂ ಹಾಗೆಯೇ ಆಗಬೇಕು.