ಸೆಕ್ಸ್ ನ ಯಶಸ್ಸು `ಆರ್ಗಸಮ್’ನ್ನು ಅವಲಂಬಿಸಿದೆ. ಹೀಗಾಗಿ ಗಂಡ-ಹೆಂಡತಿ ಇಬ್ಬರೂ ಉತ್ತುಂಗಕ್ಕೆ ತಲುಪುವುದರ ಮೂಲಕ ಸೆಕ್ಸ್ ನ ಆನಂದ ಪಡೆಯಬೇಕು. ಸಮಾಗಮದ ಸಮಯದಲ್ಲಿ ಇಬ್ಬರೂ ಅತ್ಯಂತ ತನ್ಮಯರಾಗಿ ಲೈಂಗಿಕ ಆನಂದ ಪಡೆಯುತ್ತಿದ್ದರೆ, ಇಬ್ಬರಿಗೂ ಆರ್ಗಸಮ್ ತಲುಪುವುದು ಕಷ್ಟಕರ ಆಗದು. ಒಂದುವೇಳೆ ಆರ್ಗಸಮ್ ತನಕ ತಲುಪಲು ಸಾಧ್ಯವಾಗದೇ ಇದ್ದರೆ, ಇಬ್ಬರೂ ಒತ್ತಡದಲ್ಲಿಯೇ ಇದ್ದರೆ ಆಗ ಜಗಳಗಳು ಶುರುವಾಗುತ್ತವೆ.

ದಿಲೀಪ್‌ ತನ್ನ ಪತ್ನಿ ರೂಪಾಳ ಜೊತೆ ಸಮಾಗಮ ನಡೆಸುವಾಗ ಫೋರ್‌ಪ್ಲೇ ಬಗ್ಗೆ ಹೆಚ್ಚು ಗಮನಕೊಡುವುದಿಲ್ಲ. ಆದರೆ ಅವನ ಹೆಂಡತಿ ಫೋರ್‌ಪ್ಲೇ ಜೊತೆ ತನ್ಮಯಳಾಗಿ ಸೆಕ್ಸ್ ನ ಆನಂದ ಪಡೆಯಬೇಕೆನ್ನುತ್ತಾಳೆ. ಆದರೆ ದಿಲೀಪ್‌ ಆ ಬಗ್ಗೆ ಗಮನ ಕೊಡದೇ ಇರುವುದರಿಂದ ಆಕೆ ಆರ್ಗಸಮ್ ತಲುಪಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ಅವರಿಬ್ಬರ ನಡುವೆ ಆಗಾಗ ಜಗಳ ಆಗುತ್ತಿರುತ್ತದೆ.

ಏನಿದು ಆರ್ಗಸಮ್?

ಆರ್ಗಸಮ್ ಅಂದರೆ ಉತ್ತುಂಗತೆ. ಇದು ಲೈಂಗಿಕ ಸಂಬಂಧದ ಬಲಿಷ್ಠ ಕೊಂಡಿ. ವೈದ್ಯಕೀಯ ವಿಜ್ಞಾನದ ಪ್ರಕಾರ, ಸಮಾಗಮದ ಸಮಯದಲ್ಲಿ ದೇಹದಲ್ಲಾಗುವ ಬದಲಾವಣೆಗಳು ಹಾಗೂ ಉತ್ತುಂಗತೆಯನ್ನೇ `ಆರ್ಗಸಮ್’ ಎಂದು ಕರೆಯಲಾಗುತ್ತದೆ. ಹೊಸದಾಗಿ ಮದುವೆಯಾದ ಯುವತಿಯರು ಲೈಂಗಿಕ ಚಟುವಟಿಕೆ ನಡೆಸಿದಾಗ ಅವರು ಆರ್ಗಸಮ್ ನ ಆನಂದ ಪಡೆಯಲು ಆಗುವುದಿಲ್ಲ. ಆದರೆ ಕೆಲವು ದಿನಗಳ ಬಳಿಕ ನಿಯಮಿತವಾಗಿ ಸಮಾಗಮ ನಡೆಸಿದ ಬಳಿಕ ಆರ್ಗಸಮ್ ತಲುಪುತ್ತಾರೆ. ಒಂದು ಸಮೀಕ್ಷೆಯ ಪ್ರಕಾರ, ಮೊದಲ ಆರ್ಗಸಮ್ ಗಾಗಿ ಸೂಕ್ತ ವಯಸ್ಸು ಎಂದರೆ 18.

ಗಾಢ ಉಸಿರು ಎಳೆದುಕೊಳ್ಳಿ : ಆರ್ಗಸಮ್ ಗಾಗಿ ಗಂಡ-ಹೆಂಡತಿಯ ಮನಸ್ಸಿನಲ್ಲಿ ದೃಢನಿರ್ಧಾರ ಹಾಗೂ ಜಿಜ್ಞಾಸೆ ಇರುವುದು ಅತ್ಯವಶ್ಯಕ. ಅದರ ಆನಂದವನ್ನು ಇಡೀ ದೇಹ ಪಡೆದುಕೊಳ್ಳುತ್ತದೆ. ಅದು ಉಸಿರಾಟದಿಂದ ಆರಂಭವಾಗುತ್ತದೆ. ಸಮಾಗಮದ ಸಮಯದಲ್ಲಿ ಉಸಿರಾಟದ ಪ್ರಕ್ರಿಯೆಯ ಬಗ್ಗೆ ಗಮನ ಕೊಡಿ.

ಆರ್ಗಸಮ್ ಗೆ ನಿಕಟವಾಗಿರುವಾಗ ಉಸಿರು ತೆಗೆದುಕೊಳ್ಳುವುದು ಬಿಡುವುದು ಮಾಡಿ. ಆಕ್ಸಿಜನ್‌ ದೇಹದಲ್ಲಿ ರಕ್ತ ಪ್ರವಾಹವನ್ನು ತೀವ್ರಗೊಳಿಸುತ್ತದೆ. ನೀವು ಎಷ್ಟು ಆಕ್ಸಿಜನ್‌ ಪಡೆಯುತ್ತೀರೊ, ಲೈಂಗಿಕ ಸುಖ ಅಷ್ಟೇ ಸುಖಕರವಾಗಿರುತ್ತದೆ.

ಸೆಕ್ಸ್ ಆಟಿಕೆಗಳು : ಸೆಕ್ಸ್ ಟಾಯ್ಸ್ ಮುಖಾಂತರ ವಿಭಿನ್ನ ಆನಂದ ಪಡೆಯಬಹುದು. ಆರ್ಗಸಮ್ ತಲುಪಲು ಇವು ಅಷ್ಟು ಅವಶ್ಯವಲ್ಲವಾದರೂ ಸಮಾಗಮದಲ್ಲಿ ಉತ್ತೇಜನ ಹೆಚ್ಚಿಸಲು ನೆರವಾಗುತ್ತವೆ.

ಕಲ್ಪನೆಯ ಆಧಾರ : ಸೆಕ್ಸಿ ಕನಸು ಕಾಣುವುದರ ಮೂಲಕ ಉತ್ತುಂಗ ಸುಖದ ಆನಂದ ಪಡೆಯಬಹುದು. ಅದು ಸಮಾಗಮ ಕ್ರಿಯೆಯನ್ನು ಮತ್ತಷ್ಟು ಉತ್ತೇಜನದಾಯಕವಾಗಿಸಲು ಸಹಾಯಕವಾಗುತ್ತದೆ. ಸಂಗಾತಿಯ ಜೊತೆ ಖುಷಿ ಸಿಗದೇ ಇದ್ದಾಗ ಕಲ್ಪನೆಯ ಮೂಲಕ ಆನಂದ ಹೆಚ್ಚಿಸಿಕೊಳ್ಳಬಹುದು.

ದೇಹವನ್ನು ತೊಡಗಿಸಿ : ಸಮಾಗಮ ಕ್ರಿಯೆ ಯಾಂತ್ರಿಕ ಆಗದಿರಲು ದೇಹದ ಪ್ರತಿ ಅಂಗ ಸಕ್ರಿಯವಾಗಿರುವುದು ಅವಶ್ಯಕ. ಕೆಲವು ಮಹಿಳೆಯರು ತಮ್ಮ ದೇಹವನ್ನು ನಿಷ್ಕ್ರೆಯೆ ಎಂಬಂತೆ ಮಾಡಿಕೊಂಡು ಬಿಡುತ್ತಾರೆ. ಆರ್ಗಸಮ್ ಗಾಗಿ ದೇಹವನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ.

ಬೇರೆ ಬೇರೆ ಆಸನ ಅನುಸರಿಸಿ : ಸಮಾಗಮ ಸಮಯದಲ್ಲಿ ಸಾಮಾನ್ಯ ಹಾಗೂ ಸಾಧಾರಣ ವಿಧಾನ ಅನುಸರಿಸದೆ ಕೆಲವು ವಿಶೇಷ ಆಸನಗಳ ನೆರವು ಪಡೆದುಕೊಳ್ಳಿ. ಹೀಗೆ ಮಾಡುವುದರಿಂದ ಆರ್ಗಸಮ್ ತಲುಪಲು ಸುಲಭವಾಗುತ್ತದೆ.

ರಿಲ್ಯಾಕ್ಸ್ ಆಗಿರಿ : ಸಮಾಗಮದ ಸಮಯದಲ್ಲಿ ರಿಲ್ಯಾಕ್ಸ್ ಆಗಿರಲು ಪ್ರಯತ್ನಿಸಿ. ಕಾಮೋತ್ತೇಜನದ ಕಾರಣದಿಂದ ದೇಹದ ಮಾಂಸಖಂಡಗಳು ಸಂಕುಚಿತಗೊಂಡಂತೆ ಅನಿಸಿದರೆ ನಿರಾಳವಾಗಿರಲು ಪ್ರಯತ್ನಿಸಿ. ಫ್ರೆಶ್‌ ಮೂಡ್‌ನಿಂದ ಸಮಾಗಮ ನಡೆಸಿ ಆರ್ಗಸಮ್ ತನಕ ತಲುಪಿ.

ಫೋರ್‌ಪ್ಲೇಗೆ ಸ್ಥಾನ ಕೊಡಿ : ಸಮಾಗಮ ಪೂರ್ವದಲ್ಲಿ ಸ್ಪರ್ಶ, ಚುಂಬನ, ಆಲಿಂಗನ ಮಾಡಿ. ಹೀಗೆ ಮಾಡುವುದರಿಂದ ಆಸಕ್ತಿ ಹುಟ್ಟುತ್ತದೆ. ಡಾ. ಚಂದ್ರಕಿಶೋರ್‌ ಪ್ರಕಾರ, ಪುರುಷರ ಇಚ್ಛೆ ಕೇವಲ ಅವರ ದೇಹಕ್ಕೆ ಸಂಬಂಧಪಟ್ಟಿರುತ್ತದೆ. ಮಹಿಳೆಯರು ಮಾತ್ರ ಸಮಾಗಮವನ್ನು ಭಾವನೆಯ ಜೊತೆ ಜೋಡಿಸುತ್ತಾರೆ. ಹೀಗಾಗಿ ಫೋರ್‌ಪ್ಲೇಯಿಂದ ಆರ್ಗಸಮ್ ತನಕ ತಲುಪಿ ಸಮಾಗಮದ ಸಂಪೂರ್ಣ ಆನಂದ ಪಡೆಯಿರಿ.

ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ : ಇಷ್ಟೆಲ್ಲ ಮಾಡಿಯೂ ನಿಮಗೆ ಸಮಾಗಮದಿಂದ ಆನಂದ ದೊರೆಯದ್ದಿದರೆ, ಆರ್ಗಸಮ್ ತಲುಪಲು ಆಗದಿದ್ದರೆ, ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಿಕೊಳ್ಳಿ. ಎಷ್ಟೋ ಸಲ ಅತಿಯಾದ ಔಷಧಿ ಸೇವನೆ ಕೂಡ ಆರ್ಗಸಮ್ ತಲುಪಲು ತಡೆಯನ್ನುಂಟು ಮಾಡುತ್ತದೆ. ಉತ್ತುಂಗ ಸುಖದ ಅನುಭೂತಿ ದೊರಕದೇ ಇದ್ದರೆ ಸಂಬಂಧಗಳು ನಿರರ್ಥಕ ಎನಿಸತೊಡಗುತ್ತದೆ, ಮಾನಸಿಕ ಒತ್ತಡ ಉಂಟಾಗುತ್ತದೆ. ಅಷ್ಟೇ ಏಕೆ ಮದುವೆ ಮುರಿದು ಬೀಳುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಉತ್ತುಂಗ ಸುಖದ ಅನುಭೂತಿ ದೊರೆಯುವ ನಿಟ್ಟಿನಲ್ಲಿ ಪ್ರಯತ್ನ ಮಾಡಿ.

ಸೆಕ್ಸ್ ದಾಂಪತ್ಯ ಜೀವನದ ಪ್ರಮುಖ ಭಾಗ. ಅದನ್ನು ನಿರ್ಲಕ್ಷಿಸಬಾರದು. ಪರಸ್ಪರ ಸಹಕಾರ ಹಾಗೂ ವರ್ತನೆ ಹೇಗೆ ವೈವಾಹಿಕ ಜೀವನದಲ್ಲಿ ಮಾಧುರ್ಯತೆ ತುಂಬುತ್ತದೋ ಅದೇ ರೀತಿ ಸುಖೀ ಲೈಂಗಿಕ ಚಟುವಟಿಕೆ ದಾಂಪತ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.

– ಪ್ರಿಯಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ