ಮೆಹಂದಿಯ ಚಿತ್ತಾರದಿಂದ ಕೆಂಪಾದ ಕೈಗಳು, ನಡುವನ್ನು ಸುತ್ತಿ ಕಾಲುತುದಿಗೆ ಹರಡಿರುವ ಸುಂದರ ಲಹಂಗಾದಲ್ಲಿ ಅಲಂಕೃತಳಾದ ಮದುಮಗಳ ರೂಪ ಭಾವೀಪತಿಯ ನೆನಪಿನಿಂದ ಕಾಂತಿಯುತವಾಗಿ ಕಂಗೊಳಿಸುತ್ತದೆ. ಲಹಂಗಾದ ಬೆಡಗು ಬೇರೆ ಯಾವುದೇ ಉಡುಪಿನಲ್ಲಿ ತೋರುವುದಿಲ್ಲ. ವಿವಾಹ ಸಂದರ್ಭದಲ್ಲಿ ಮದುಮಗಳ ಲಹಂಗಾ ಮತ್ತು ಮೇಕಪ್‌ಗಾಗಿ ಯಾವ ಯಾವ ಅಂಶಗಳ ಬಗ್ಗೆ ಗಮನವಿರಿಸಬೇಕೆಂಬುದನ್ನು ತಜ್ಞರಿಂದ ತಿಳಿದುಕೊಳ್ಳೋಣ.
ಸ್ಟ್ರೇಟ್ ಕಟ್ ಲಹಂಗಾ
ಬರ್ಡ್ ಆಫ್ ಪ್ಯಾರಡೈಸ್ ಎಂಬ ಹೊಸ ನಮೂನೆಯ ಮೇಕಪ್, ಸ್ಟ್ರೇಟ್ ಕಟ್ ಲಹಂಗಾಗಳಿಗೆ ಹೊಂದಿಕೆಯಾಗುತ್ತದೆ. ಇದು ಸ್ಮೋಕಿ ಐ ಅಥವಾ ಕ್ಯಾಟ್ ಐ ಮೇಕಪ್‌ನ ಅಪ್‌ಗ್ರೇಡೆಡ್ ವರ್ಶನ್ ಆಗಿದೆ. ಈ ಮೇಕಪ್ ಮಾಡಲು ಹೆಚ್ಚು ಬಣ್ಣಗಳನ್ನು ಬಳಸಲಾಗುತ್ತದೆ. ನಿಮಗೆ ಬಣ್ಣ ಹೆಚ್ಚು ಗಾಢವೆನಿಸಿದರೆ ಕಪ್ಪು ಬಣ್ಣ ಸೇರಿಸಬಹುದು. ಒಳ್ಳೆಯ ಲುಕ್‌ಗಾಗಿ ನಿಯಾನ್, ಪಿಂಕ್, ಪೀಕಾಕ್ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಿ.
ಮೇಕಪ್‌ಗಾಗಿ ನರಿಶಿಂಗ್ ಮಾಯಿಶ್ಚರೈಸರ್‌ನಿಂದ ಮುಖ ಮತ್ತು ಕುತ್ತಿಗೆಯನ್ನು ಮಸಾಜ್ ಮಾಡಿ. ಕೆನ್ನೆ, ಜಾಲೈನ್‌ನ ಕೆಳಭಾಗ ಮತ್ತು ಹಣೆಯ ಮೇಲ್ಭಾಗಕ್ಕೆ ಕಾಂಟೂರಿಂಗ್‌ಗಾಗಿ ಗಾಢ ಶೇಡ್ ಹಚ್ಚಿ, ಕಣ್ಣುಗಳ ಕೆಳಗೆ ಕರೆಕ್ಟರ್ ಹಚ್ಚಿ.
ಮುಖದ ಉಳಿದ ಭಾಗಕ್ಕೆ ಫೌಂಡೇಶನ್ ಹಚ್ಚಿ ಒದ್ದೆ ಸ್ಪಾಂಜ್‌ನಿಂದ ಬ್ಲೆಂಡ್ ಮಾಡಿ. ಚೀಕ್ ಬೋನ್ಸ್ ನ ಮೇಲ್ಭಾಗಕ್ಕೆ ಹೈಲೈಟರ್ ಹಚ್ಚಿ ಮತ್ತು ಕೆನ್ನೆಯ ಉಬ್ಬಿದ ಭಾಗದ ಮೇಲೆ ಗುಲಾಬಿ ಬ್ಲಶ್ ಲೇಪಿಸಿ. ನ್ಯಾಚುರಲ್ ಲುಕ್ಸ್ ಗಾಗಿ ಚೆನ್ನಾಗಿ ಬ್ಲೆಂಡ್ ಮಾಡಿ. ಗಾಢ ಬಣ್ಣದ ಐ ಶ್ಯಾಡೋವನ್ನು ಪೆನ್ಸಿಲ್ ಬ್ರಶ್‌ನ ಸಹಾಯದಿಂದ ವಿಂಗ್ಸ್ ಶೇಪ್‌ನಲ್ಲಿ ತೀಡಿ. ಇದನ್ನು ಲ್ಯಾಶ್ ಲೈನ್‌ನಿಂದ ಪ್ರಾರಂಭಿಸಿ ಕಣ್ಣಿನ ಹೊರ ತುದಿಯವರೆಗೂ ಹಚ್ಚಿ. ಆಮೇಲೆ ನ್ಯಾಚುರಲ್ ಕ್ರೀಸ್‌ಲೈನ್‌ವರೆಗೂ ಎಳೆಯಿರಿ. ಐ ಲಿಡ್ಸ್ ನಡುವೆ ನೀಲಿ ಐ ಶ್ಯಾಡೋ ಹಚ್ಚಿ. ಗಾಢ ನೀಲಿ ಮತ್ತು ನೇರಳೆ ಬಣ್ಣದ ಐ ಶ್ಯಾಡೋವನ್ನು ಬ್ಲೆಂಡ್ ಮಾಡಲು ಬಳಸಿ.
ಕೆಳಭಾಗದ ಲ್ಯಾಶ್‌ಲೈನ್‌ಗೆ ಗುಲಾಬಿ ಅಥವಾ ನೇರಳೆ ಬಣ್ಣದ ಐ ಶ್ಯಾಡೋ ಹಚ್ಚಿ. ಕೆಳಗಿನ ವಾಟರ್ ಲೈನ್‌ಗೆ ಕಾಜಲ್ ಹಚ್ಚಿ. ಗುಲಾಬಿ ನ್ಯೂಡ್ ಕಲರ್ ಲಿಪ್ ಶೇಡ್‌ನಿಂದ ನಿಮ್ಮ ಅಲಂಕಾರ ಪೂರ್ಣಗೊಳ್ಳಲಿ.
ಅನಾರ್ಕಲೀ ಲಹಂಗಾ
ಅನಾರ್ಕಲಿ ಲಹಂಗಾಗೆ ಎಥ್ನಿಕ್ ಲುಕ್‌ನ ಮೇಕಪ್ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಎಥ್ನಿಕ್ ಮೇಕಪ್‌ಗೆ ಕಾಜಲ್ ಬಹಳ ಅಗತ್ಯ. ಡೇ ಈವೆಂಟ್‌ಗಾಗಿ ನೀವು ಸಿಂಪಲ್ ಅನಾರ್ಕಲಿ ಲಹಂಗಾ ಧರಿಸಿದ್ದರೆ, ಬೇಸಿಕ್ ಐ ಲೈನರ್ ಹಚ್ಚಿ ನಂತರ ಲೋಯರ್ ಲ್ಯಾಶ್ ಲೈನ್‌ಗೆ ಕಾಜಲ್ ಹಚ್ಚಿ.
ನೈಟ್ ಈವೆಂಟ್ ಆದರೆ ಸ್ಮೋಕಿ ಐಸ್ ಮೇಕಪ್‌ಗಾಗಿ ಡಾರ್ಕ್ ಕಾಜಲ್‌ನಿಂದ ಸೌಂದರ್ಯವನ್ನು ಕಳೆಗಟ್ಟಿಸಬಹುದು. ಎಥ್ನಿಕ್ ವೇರ್‌ನೊಂದಿಗೆ ಜ್ಯೂವೆಲರಿಯೂ ಸೂಕ್ತವಾಗಿರುತ್ತದೆ ಮತ್ತು ಮೇಕಪ್ ಕೂಡ ಅಗತ್ಯ.
ಹೆವಿ ಗೋಲ್ಡ್ ಜ್ಯೂವೆಲರಿಯೊಂದಿಗೆ ಗ್ಲಿಟರಿ ಡ್ರಮಾಟಿಕ್ ಐಸ್‌ನಂತಹ ಹೈಲೈಟ್ ಮೇಕಪ್ ಸೌಂದರ್ಯ ನಿಯಮಕ್ಕೆ ವಿರುದ್ಧವಾಗಿರುತ್ತದೆ. ಎಥ್ನಿಕ್ ಲುಕ್‌ಗೆ ಬ್ಲಶ್‌ನ ಬಳಕೆ ಸೂಕ್ತವಾಗಿರುತ್ತದೆ. ಆದ್ದರಿಂದ ಮೇಕಪ್ ಮಾಡುವ ಮೊದಲು ಮುಖವನ್ನು ಸ್ವಚ್ಛಗೊಳಿಸಿ ಫ್ರೆಶ್ ಲುಕ್ ಒದಗಿಸಬೇಕು. ಎಥ್ನಿಕ್ ಲುಕ್‌ಗೆ ಬ್ರೈಟ್ ಕಲರ್ ಲಿಪ್‌ಸ್ಟಿಕ್ ಹೊಂದುತ್ತದೆ. ಲೈಟ್ ಶೇಡ್ ಚೆನ್ನಾಗಿರುವುದಿಲ್ಲ.
ಫಿಶ್ ಕಟ್ ಲಹಂಗಾ
ಫಿಶ್ ಕಟ್ ಲಹಂಗಾ ಧರಿಸಿದಾಗ ನ್ಯೂಡ್ ಮೇಕಪ್ ಮೂಲಕ ನೀವು ಆಕರ್ಷಕ ಲುಕ್ ಪಡೆಯಬಹುದು. ನ್ಯೂಡ್ ಮೇಕಪ್ ನಿಮ್ಮ ಚರ್ಮವನ್ನು ಈವೆನ್ ಟೋನ್ ಆಗಿರಿಸುತ್ತದೆ. ನಿಮ್ಮ ಮೇಕಪ್‌ಗೆ ಬೇಸ್ ಎಷ್ಟು ನ್ಯೂಟ್ರಲ್ ಆಗಿರುವುದೋ ನೀವು ಅಷ್ಟು ಸುಂದರವಾಗಿ ಕಾಣುವಿರಿ. ಡಾರ್ಕ್ ಸ್ಕಿನ್‌ನ ನ್ಯೂಡ್ ಮೇಕಪ್‌ಗಾಗಿ ಬ್ರಾಂಜ್ ಅಥವಾ ಗೋಲ್ಡನ್ ಕಲರ್ ಲಿಪ್‌ಸ್ಟಿಕ್ ನಿಮಗೆ ಶೈನರ್ ಲುಕ್ ನೀಡುತ್ತದೆ. ಡಾರ್ಕ್ ಸ್ಕಿನ್ ಟೋನ್‌ಗೆ ಗೋಲ್ಡನ್ ಬ್ರೌನ್ ಐ ಶ್ಯಾಡೋ ಜೊತೆಗೆ ಪಿಂಕ್ ಬ್ರೌನ್ ಶೇಡ್‌ನ ಬ್ಲಶರ್ ಬಳಸಿ. ಮೀಡಿಯಮ್ ಸ್ಕಿನ್‌ನ ನ್ಯೂಡ್ ಮೇಕಪ್‌ಗೆ ವೋವ್ ಕಲರ್ ಲಿಪ್ ಶೇಡ್‌ನಿಂದ ಫ್ಲಾಲೆಸ್ ಲುಕ್ಸ್ ದೊರೆಯುತ್ತದೆ. ಇಂತಹ ಸ್ಕಿನ್‌ಗಾಗಿ ಪೇಲ್ ಗೋಲ್ಡನ್ ಬ್ರೌನ್ ಐ ಶ್ಯಾಡೋ ಜೊತೆಗೆ ಪಿಂಕ್ ಬ್ರೌನ್ ಬ್ಲಶರ್ ಬಳಸಿ. ಇದು ನ್ಯಾಚುರಲ್ ಲುಕ್ ನೀಡುತ್ತದೆ.
ಫೇರ್ ಸ್ಕಿನ್‌ನ ನ್ಯೂಡ್ ಮೇಕಪ್‌ಗೆ ಚೀಕ್ ಬೋನ್ಸ್ ಮೇಲೆ ಒಳ್ಳೆಯ ಹನಿ ಏಪ್ರಿಕಾಟ್ ಕಲರ್‌ನ ಬ್ಲಶ್ ಹಚ್ಚಿ. ಐ ಸಾಕೆಟ್ಸ್ ಮೇಲೆ ಲೈಟ್ ಕಲರ್‌ನ ಶಿಮರಿ ಐ ಶ್ಯಾಡೋ ಬಳಸಿ. ತುಟಿಗಳು ಓವರ್‌ಗ್ಲಾಸಿ ಆಗಲಿ, ಮ್ಯಾಟ್ ಆಗಲಿ ಆಗುವುದು ಬೇಡ. ಇದಕ್ಕಾಗಿ ಕ್ರೀಮ್ ಬೇಸ್ಡ್ ಲಿಪ್ ಶೇಡ್ ಅಥವಾ ಬಾಮ್ ಬಳಸಬಹುದು. ಇದರಿಂದ ನಿಮ್ಮ ಮುಖ ಇನ್ನೂ ಹೆಚ್ಚು ಕಾಂತಿಯುತವಾಗಿ ಕಾಣುತ್ತದೆ. ನ್ಯಾಚುರಲ್ ಮೇಕಪ್‌ನೊಂದಿಗೆ ಹರಡಿದ ಸ್ಟ್ರೇಟ್ ಹೇರ್, ಚಿಕ್ಕ ಬಿಂದಿ, ಹಣೆಬೊಟ್ಟು…… ಇವು ವೆಡ್ಡಿಂಗ್ ಡೇಗೆ ಪರ್ಫೆಕ್ಟ್ ಲುಕ್ ನೀಡುತ್ತದೆ.
ಹೆವಿ ವರ್ಕ್ ಲಹಂಗಾ
ಹೆವಿ ವರ್ಕ್ ಲಹಂಗಾ ಧರಿಸುವುದಾದರೆ ನೀವು ಅರೇಬಿಕ್ ಮೇಕಪ್ ಮಾಡಿಕೊಳ್ಳಬಹುದು. ಅರೇಬಿಯನ್ ಲುಕ್‌ನಲ್ಲಿ ಐ ಮೇಕಪ್ ಪ್ರಮುಖವಾಗಿರುತ್ತದೆ. ಕಣ್ಣುಗಳನ್ನೂ ಬ್ರೈಟ್ ಅಂಡ್ ಕಲರ್‌ಫುಲ್ ಆಗಿ ಮಾಡಲಾಗುತ್ತದೆ. ಕಣ್ಣುಗಳನ್ನು ಆಕರ್ಷಕಗೊಳಿಸಲು ಅವುಗಳ ಇನ್ನರ್ ಕಾರ್ನರ್ಸ್ ಗೆ ಸಿಲ್ವರ್, ಸೆಂಟರ್‌ಗೆ ಗೋಲ್ಡನ್ ಮತ್ತು ಔಟರ್ ಕಾರ್ನರ್ಸ್ ಗೆ ಡಾರ್ಕ್ ಕಲರ್ ಐ ಶ್ಯಾಡೋವನ್ನು ಹಚ್ಚಲಾಗುತ್ತದೆ. ನಂತರ ಕಟ್ ಕ್ರೀಸ್ ಲುಕ್ ಕೊಡಲು ಕಣ್ಣುಗಳ ಅಕ್ಕಪಕ್ಕ ಬ್ಲಾಕ್ ಕಲರ್‌ನಿಂದ ಕಾಂಟೂರಿಂಗ್ ಮಾಡಲಾಗುತ್ತದೆ. ಇದರಿಂದ ಕಣ್ಣುಗಳು ದೊಡ್ಡದಾಗಿ ಆಕರ್ಷಕವಾಗಿ ಕಾಣುತ್ತವೆ. ಐ ಬ್ರೋಸ್ ಕೆಳಗೆ ಪರ್ಲ್ ಗೋಲ್ಡ್ ಶೇಡ್‌ನಿಂದ ಹೈಲೈಟ್‌ಗೊಳಿಸಲಾಗುತ್ತದೆ. ಹೊಳಪಿಗಾಗಿ ಐ ಲಿಡ್ ಮೇಲೆ ಗ್ಲಿಟರ್ ಹಚ್ಚಲಾಗುತ್ತದೆ.
ಕಣ್ಣುಗಳಿಗೆ ಕಂಪ್ಲೀಟ್ ಸೆನ್ಶುಯಸ್ ಲುಕ್ ನೀಡಲು ರೆಪ್ಪೆಗಳಿಗೆ ಆರ್ಟಿಫಿಶಿಯಲ್ ಲ್ಯಾಶೆಸ್ ಜೋಡಿಸಿಕೊಳ್ಳಿ. ಅವುಗಳನ್ನು ಲ್ಯಾಶೆಸ್ ಕಲರ್‌ನಿಂದ ಕರ್ಲ್ ಮಾಡಿ ಮಸ್ಕರಾ ಕೋಟ್ ಹಚ್ಚಿ. ಆಗ ಅವು ನ್ಯಾಚುರಲ್ ಲ್ಯಾಶೆಸ್‌ನಂತೆ ಕಾಣುತ್ತವೆ. ವಾಟರ್ ಲೈನ್ ಮೇಲೆ ಬೋಲ್ಡ್ ಕಾಜಲ್ ಹಚ್ಚಿದಾಗ ನಿಮ್ಮ ಮೇಕಪ್ ಪೂರ್ಣಗೊಳ್ಳುವುದು.
– ಭಾರತಿ ಹೆಗಡೆ
ಇನ್ನರ್ ವೇರ್‌ನ್ನು ಗಮನಿಸಿ
ಪರ್ಫೆಕ್ಟ್ ಬ್ರೈಡಲ್ ಲುಕ್ ಪಡೆಯಲು ಔಟರ್‌ವೇರ್ ಪಾತ್ರ ಹಿರಿದು ನಿಜ. ಆದರೆ ಇನ್ನರ್‌ವೇರ್‌ನ್ನು ಅಲಕ್ಷಿಸುವುದು ಸರಿಯಲ್ಲ. ಇನ್ನರ್‌ವೇರ್ ಆರಿಸುವಾಗ ಈ ವಿಷಯಗಳನ್ನು ಗಮನಿಸಿ :
ಆರಾಮದಾಯಕ ಫ್ಯಾಬ್ರಿಕ್ ಮತ್ತು ಸರಿಯಾದ ಫಿಟಿಂಗ್‌ವುಳ್ಳ ಇನ್ನರ್‌ವೇರ್ ಆರಿಸುವುದರಿಂದ ಅಸಹಜ ಅನುಭವ ತಪ್ಪುತ್ತದೆ.
ವೆಡ್ಡಿಂಗ್ ಔಟ್‌ಫಿಟ್‌ಗೆ ತಕ್ಕಂತಹ ಬ್ರಾ ಆರಿಸಿ. ಇಂದು ಸ್ಲೀವ್ ಲೆಸ್, ಸ್ಟ್ರಾಪೀ, ಸ್ಕಿನ್ ಕಲರ್ ಮುಂತಾದ ಬ್ರಾ ನಮೂನೆಗಳು ದೊರೆಯುತ್ತವೆ.
ವೆಡ್ಡಿಂಗ್ ಡೇಗೆ ಮಾತ್ರವಲ್ಲ, ನಂತರದ ದಿನಗಳಲ್ಲಿಯೂ ಇನ್ನರ್‌ವೇರ್ ಶಾಪಿಂಗ್ ಮಾಡುವಾಗ ಆರಾಮದ ಬಗ್ಗೆ ಗಮನ ನೀಡಿ.