ಮೆಹಂದಿಯ ಚಿತ್ತಾರದಿಂದ ಕೆಂಪಾದ ಕೈಗಳು, ನಡುವನ್ನು ಸುತ್ತಿ ಕಾಲುತುದಿಗೆ ಹರಡಿರುವ ಸುಂದರ ಲಹಂಗಾದಲ್ಲಿ ಅಲಂಕೃತಳಾದ ಮದುಮಗಳ ರೂಪ ಭಾವೀಪತಿಯ ನೆನಪಿನಿಂದ ಕಾಂತಿಯುತವಾಗಿ ಕಂಗೊಳಿಸುತ್ತದೆ. ಲಹಂಗಾದ ಬೆಡಗು ಬೇರೆ ಯಾವುದೇ ಉಡುಪಿನಲ್ಲಿ ತೋರುವುದಿಲ್ಲ. ವಿವಾಹ ಸಂದರ್ಭದಲ್ಲಿ ಮದುಮಗಳ ಲಹಂಗಾ ಮತ್ತು ಮೇಕಪ್‌ಗಾಗಿ ಯಾವ ಯಾವ ಅಂಶಗಳ ಬಗ್ಗೆ ಗಮನವಿರಿಸಬೇಕೆಂಬುದನ್ನು ತಜ್ಞರಿಂದ ತಿಳಿದುಕೊಳ್ಳೋಣ.

ಸ್ಟ್ರೇಟ್‌ ಕಟ್‌ ಲಹಂಗಾ

ಬರ್ಡ್‌ ಆಫ್‌ ಪ್ಯಾರಡೈಸ್‌ ಎಂಬ ಹೊಸ ನಮೂನೆಯ ಮೇಕಪ್‌, ಸ್ಟ್ರೇಟ್‌ ಕಟ್‌ ಲಹಂಗಾಗಳಿಗೆ ಹೊಂದಿಕೆಯಾಗುತ್ತದೆ. ಇದು ಸ್ಮೋಕಿ ಐ ಅಥವಾ ಕ್ಯಾಟ್‌ ಐ ಮೇಕಪ್‌ನ ಅಪ್‌ಗ್ರೇಡೆಡ್‌ ವರ್ಶನ್‌ ಆಗಿದೆ. ಈ ಮೇಕಪ್‌ ಮಾಡಲು ಹೆಚ್ಚು ಬಣ್ಣಗಳನ್ನು ಬಳಸಲಾಗುತ್ತದೆ. ನಿಮಗೆ ಬಣ್ಣ ಹೆಚ್ಚು ಗಾಢವೆನಿಸಿದರೆ ಕಪ್ಪು ಬಣ್ಣ ಸೇರಿಸಬಹುದು. ಒಳ್ಳೆಯ ಲುಕ್‌ಗಾಗಿ ನಿಯಾನ್‌, ಪಿಂಕ್‌, ಪೀಕಾಕ್‌ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಿ.

ಮೇಕಪ್‌ಗಾಗಿ ನರಿಶಿಂಗ್‌ ಮಾಯಿಶ್ಚರೈಸರ್‌ನಿಂದ ಮುಖ ಮತ್ತು ಕುತ್ತಿಗೆಯನ್ನು ಮಸಾಜ್‌ ಮಾಡಿ. ಕೆನ್ನೆ, ಜಾಲೈನ್‌ನ ಕೆಳಭಾಗ ಮತ್ತು ಹಣೆಯ ಮೇಲ್ಭಾಗಕ್ಕೆ ಕಾಂಟೂರಿಂಗ್‌ಗಾಗಿ ಗಾಢ ಶೇಡ್‌ ಹಚ್ಚಿ, ಕಣ್ಣುಗಳ ಕೆಳಗೆ ಕರೆಕ್ಟರ್‌ ಹಚ್ಚಿ.

ಮುಖದ ಉಳಿದ ಭಾಗಕ್ಕೆ ಫೌಂಡೇಶನ್‌ ಹಚ್ಚಿ ಒದ್ದೆ ಸ್ಪಾಂಜ್‌ನಿಂದ ಬ್ಲೆಂಡ್‌ ಮಾಡಿ. ಚೀಕ್‌ ಬೋನ್ಸ್ ನ ಮೇಲ್ಭಾಗಕ್ಕೆ ಹೈಲೈಟರ್‌ ಹಚ್ಚಿ ಮತ್ತು ಕೆನ್ನೆಯ ಉಬ್ಬಿದ ಭಾಗದ ಮೇಲೆ ಗುಲಾಬಿ ಬ್ಲಶ್‌ ಲೇಪಿಸಿ. ನ್ಯಾಚುರಲ್ ಲುಕ್ಸ್ ಗಾಗಿ ಚೆನ್ನಾಗಿ ಬ್ಲೆಂಡ್‌ ಮಾಡಿ. ಗಾಢ ಬಣ್ಣದ ಐ ಶ್ಯಾಡೋವನ್ನು ಪೆನ್ಸಿಲ್‌ ಬ್ರಶ್‌ನ ಸಹಾಯದಿಂದ ವಿಂಗ್ಸ್ ಶೇಪ್‌ನಲ್ಲಿ ತೀಡಿ. ಇದನ್ನು ಲ್ಯಾಶ್‌ ಲೈನ್‌ನಿಂದ ಪ್ರಾರಂಭಿಸಿ ಕಣ್ಣಿನ ಹೊರ ತುದಿಯವರೆಗೂ ಹಚ್ಚಿ. ಆಮೇಲೆ ನ್ಯಾಚುರಲ್ ಕ್ರೀಸ್‌ಲೈನ್‌ವರೆಗೂ ಎಳೆಯಿರಿ. ಐ ಲಿಡ್ಸ್ ನಡುವೆ ನೀಲಿ ಐ ಶ್ಯಾಡೋ ಹಚ್ಚಿ. ಗಾಢ ನೀಲಿ ಮತ್ತು ನೇರಳೆ ಬಣ್ಣದ ಐ ಶ್ಯಾಡೋವನ್ನು ಬ್ಲೆಂಡ್‌ ಮಾಡಲು ಬಳಸಿ.

ಕೆಳಭಾಗದ ಲ್ಯಾಶ್‌ಲೈನ್‌ಗೆ ಗುಲಾಬಿ ಅಥವಾ ನೇರಳೆ ಬಣ್ಣದ ಐ ಶ್ಯಾಡೋ ಹಚ್ಚಿ. ಕೆಳಗಿನ ವಾಟರ್‌ ಲೈನ್‌ಗೆ ಕಾಜಲ್ ಹಚ್ಚಿ. ಗುಲಾಬಿ ನ್ಯೂಡ್ ಕಲರ್‌ ಲಿಪ್‌ ಶೇಡ್‌ನಿಂದ ನಿಮ್ಮ ಅಲಂಕಾರ ಪೂರ್ಣಗೊಳ್ಳಲಿ.

ಅನಾರ್ಕಲೀ ಲಹಂಗಾ

ಅನಾರ್ಕಲಿ ಲಹಂಗಾಗೆ ಎಥ್ನಿಕ್‌ ಲುಕ್‌ನ ಮೇಕಪ್‌ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಎಥ್ನಿಕ್‌ ಮೇಕಪ್‌ಗೆ ಕಾಜಲ್ ಬಹಳ ಅಗತ್ಯ. ಡೇ ಈವೆಂಟ್‌ಗಾಗಿ ನೀವು ಸಿಂಪಲ್ ಅನಾರ್ಕಲಿ ಲಹಂಗಾ ಧರಿಸಿದ್ದರೆ, ಬೇಸಿಕ್‌ ಐ ಲೈನರ್‌ ಹಚ್ಚಿ ನಂತರ ಲೋಯರ್‌ ಲ್ಯಾಶ್‌ ಲೈನ್‌ಗೆ ಕಾಜಲ್ ಹಚ್ಚಿ.

ನೈಟ್‌ ಈವೆಂಟ್‌ ಆದರೆ ಸ್ಮೋಕಿ ಐಸ್‌ ಮೇಕಪ್‌ಗಾಗಿ ಡಾರ್ಕ್‌ ಕಾಜಲ್‌ನಿಂದ ಸೌಂದರ್ಯವನ್ನು ಕಳೆಗಟ್ಟಿಸಬಹುದು. ಎಥ್ನಿಕ್‌ ವೇರ್‌ನೊಂದಿಗೆ ಜ್ಯೂವೆಲರಿಯೂ ಸೂಕ್ತವಾಗಿರುತ್ತದೆ ಮತ್ತು ಮೇಕಪ್‌ ಕೂಡ ಅಗತ್ಯ.

ಹೆವಿ ಗೋಲ್ಡ್ ಜ್ಯೂವೆಲರಿಯೊಂದಿಗೆ ಗ್ಲಿಟರಿ ಡ್ರಮಾಟಿಕ್‌ ಐಸ್‌ನಂತಹ ಹೈಲೈಟ್‌ ಮೇಕಪ್‌ ಸೌಂದರ್ಯ ನಿಯಮಕ್ಕೆ ವಿರುದ್ಧವಾಗಿರುತ್ತದೆ. ಎಥ್ನಿಕ್‌ ಲುಕ್‌ಗೆ ಬ್ಲಶ್‌ನ ಬಳಕೆ ಸೂಕ್ತವಾಗಿರುತ್ತದೆ. ಆದ್ದರಿಂದ ಮೇಕಪ್‌ ಮಾಡುವ ಮೊದಲು ಮುಖವನ್ನು ಸ್ವಚ್ಛಗೊಳಿಸಿ ಫ್ರೆಶ್‌ ಲುಕ್‌ ಒದಗಿಸಬೇಕು. ಎಥ್ನಿಕ್‌ ಲುಕ್‌ಗೆ ಬ್ರೈಟ್‌ ಕಲರ್‌ ಲಿಪ್‌ಸ್ಟಿಕ್‌ ಹೊಂದುತ್ತದೆ. ಲೈಟ್‌ ಶೇಡ್‌ ಚೆನ್ನಾಗಿರುವುದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ