ಪ್ರತಿಯೊಬ್ಬರಿಗೂ ಸುಂದರವಾಗಿ ಕಂಡು ಬರಬೇಕೆನ್ನುವ ಹಂಬಲ ಇದ್ದೇ ಇರುತ್ತದೆ. ಇದಕ್ಕಾಗಿ ಲೇಟೆಸ್ಟ್ ಫ್ಯಾಷನ್ ಟ್ರೆಂಡ್‌ನ್ನು ಅರ್ಥ ಮಾಡಿಕೊಳ್ಳಬೇಕಾದುದು ಅನಿವಾರ್ಯ. ಇದನ್ನು ಫಾಲೋ ಮಾಡುವವರು ಫ್ಯಾಷನ್ ಲೋಕದಲ್ಲಿ ಜನಪ್ರಿಯರಾಗುತ್ತಾರೆ. ಅಷ್ಟೇ ಅಲ್ಲ, ಜೊತೆಗೆ ಬದಲಾಗುತ್ತಿರುವ ಟ್ರೆಂಡ್‌ಗೆ ತಕ್ಕಂತೆ ತಮ್ಮ ಲುಕ್ಸ್ ಸಹ ಬದಲಿಸಿಕೊಳ್ಳುತ್ತಿರುತ್ತಾರೆ. ನೀವು ಸಹ ನಿಮ್ಮ ಲುಕ್ಸ್ ಬದಲಾಯಿಸಿಕೊಂಡು ಫ್ಯಾಷನೆಬಲ್ ಎನಿಸಿಕೊಳ್ಳಿ. ಇದಕ್ಕಾಗಿ ಕೆಲವು ಸಲಹೆಗಳು :
ಇತ್ತೀಚೆಗೆ ಅಗಲ ಸೈಜ್‌ನ ಪ್ಲಾಜೋ, ಕುಲೋಟ್ಸ್, ಟ್ರೌಸರ್ಸ್ ಫ್ಯಾಷನ್‌ನಲ್ಲಿ ಇನ್. ಡೆನಿಮ್ ನಿಂದ ಸಿಲ್ಕ್, ಚಿಕನ್‌ಕಾರಿ ಕಸೂತಿಯವರೆಗೂ ಯಾವುದು ನಿಮಗೆ ಇಷ್ಟವೋ ಅದರ ಪ್ಲಾಜೋ ಯಾ ಟ್ರೌಸರ್ಸ್ ಖರೀದಿಸಿ. ಇದರ ಜೊತೆ ಚಿಕ್ಕ ಯಾ ಉದ್ದದ ಕುರ್ತಾ, ಟಾಪ್, ಟೀಶರ್ಟ್… ಇತ್ಯಾದಿ ಎಲ್ಲ ಒಪ್ಪುತ್ತವೆ.
ನೀವು ಸೀರೆ ಅಥವಾ ಸಲ್ವಾರ್ ಕುರ್ತಾ ಧರಿಸಿರಲಿ, ಅದರ ಮೇಲೆ ಒಂದು ಜ್ಯಾಕೆಟ್ ಅಥವಾ ಪೋಂಚ್ ಧರಿಸಿರಿ, ನೀವು ಫ್ಯಾಷನ್‌ನಲ್ಲಿ ಅಪ್ ಟು ಡೇಟ್ ಎಂದೇ ಅರ್ಥ.
ಇತ್ತೀಚೆಗೆ ಶರಾರಾ ಸಹ ಫ್ಯಾಷನ್‌ನಲ್ಲಿ ಮರಳಿ ಬಂದಿದೆ. ಲೂಸು ಲೂಸಾದ ಶರಾರಾ ಸಲ್ವಾರ್, ನಿಮಗೆ ದೈನಂದಿನ ಕುರ್ತಾ ಯಾ ಪಾರ್ಟಿವೇರ್, ಯಾವುದರ ಜೊತೆಗಾದರೂ ಧರಿಸಿ ಎಂಜಾಯ್ ಮಾಡಿ.
ಕಾಕ್‌ಟೇಲ್ ರಿಂಗ್ ಬಹಳ ಫ್ಯಾಷನೆಬಲ್ ಒಡವೆ ಎನಿಸಿದೆ. ಇದನ್ನು ನೀವು ಇಂಡೋವೆಸ್ಟರ್ನ್ ಅಥವಾ ಇಂಡಿಯನ್….. ಯಾವುದೇ ಶೈಲಿಗಾದರೂ ಧರಿಸಬಹುದು. ಇದರಿಂದ ನಿಮ್ಮ ಲುಕ್ಸ್ ಟೋಟಲಿ ಚೇಂಜ್ ಆಗುತ್ತದೆ.
– ಪಿ. ಪರಿಮಳಾ
ಇತ್ತೀಚೆಗೆ ಒದ್ದೆ ಕೂದಲಿನ ಲುಕ್ಸ್ ಫ್ಯಾಷನ್ ಕೂದಲಿಗೆ ಜೆಲ್ ಹಚ್ಚಿ, ಬೈತಲೆ ತೆಗೆದು ಒತ್ತರಿಸಿ ಬಿಗಿಯಾಗುತ್ತದೆ. ಇದಂತೂ ತುಂಬಾ ಬೋಲ್ಡ್ ಲುಕ್!
ನೀವು ಪ್ರತಿ ಸಲ ಚಿಕ್ಕ ಬಿಂದಿ ಇಡುತ್ತೀರಿ ಅಥವಾ ಇಡುವುದಿಲ್ಲವಾದರೆ, ಮುಂದಿನ ಸಲ ನೀವು ದೊಡ್ಡ ಬಿಂದಿ ಇಟ್ಟುಕೊಳ್ಳಿ. ಆಗ ಲುಕ್ ಬಿಲ್‌ಕುಲ್ ಬದಲಾಗುತ್ತದೆ.
ನೀವು ಧರಿಸಿರುವುದು ಸಾಧಾರಣ ಡ್ರೆಸ್ ಇರಬಹುದು, ಅದರ ಜೊತೆ ಕರ್ಣಾಭರಣ ಹೀಗಿದ್ದರೆ, ನಿಮ್ಮ ಇಡೀ ಲುಕ್ ಚೇಂಜ್ ಆಗುತ್ತದೆ. ಕಿವಿಗೆ ದೊಡ್ಡ ಗಾತ್ರದ ಜುಮಕಿ, ಓಲೆ, ಸ್ಟಡ್ಸ್ ಇರಿಸಿಕೊಳ್ಳಿ. ನಿಮ್ಮ ಸಾಧಾರಣ ಡ್ರೆಸ್ ಕೂಡ ಆಗ ಮಿಂಚುತ್ತದೆ.
ಮೂಗಿಗೆ ಹಳೆ ಶೈಲಿಯ ಮೂಗುತಿ ಬೇಡ. ಇಲ್ಲಿ ತೋರಿಸಿರುವಂತೆ ಆಧುನಿಕ ಡಿಸೈನ್‌ನ ನತ್ತು ಧರಿಸಿ, ನಿಮ್ಮ ಗೆಟಪ್‌ಗೆ ಹೊಸತನ ನೀಡಿ.`ಪದ್ಮಾವತ್’ ಚಿತ್ರದ ದೀಪಿಕಾಳಂತೆ ಒಂದೇ ಮೂಗಿಗೆ ಚಿಕ್ಕ ಹಾಗೂ ದೊಡ್ಡ ಬುಲಾಕು ಧರಿಸಿ ಹೊಸ ಸ್ಟೈಲ್‌ಗೆ ನಾಂದಿ ಹಾಡಿ, ಆಗ ಲುಕ್ ಬದಲಾಗುತ್ತದೆ.
90ರ ದಶಕದಲ್ಲಿ ರೂಢಿಗೆ ಬಂದ ಬ್ರಾಡ್ ಬೆಲ್ಟ್ ಇದೀಗ ಮತ್ತೆ ಫ್ಯಾಷನ್‌ನಲ್ಲಿದೆ. ನಿಮ್ಮ ಒನ್ ಪೀಸ್ ಡ್ರೆಸ್‌ಗೆ ಇಂಥ ಬೆಲ್ಟ್ ಲೇಟೆಸ್ಟ್ ಫ್ಯಾಷನ್ನಿನ ಲುಕ್ ನೀಡುವುದರಲ್ಲಿ ಎತ್ತಿದ ಕೈ ಆಗುತ್ತದೆ.
ಡ್ರೆಸ್ ಚಿಕ್ಕದಾಗಿರುವಾಗ, ಕಾಲಿಗೆ ಒಂದು ಜೊತೆ ಆಧುನಿಕ ಗೆಜ್ಜೆ ಅಥವಾ ಆ್ಯಂಕ್ಲೆಟ್ ಧರಿಸಿ. ಇದರಿಂದ ನಿಮಗೆ ಹೊಸ ಲುಕ್ ಬರುತ್ತದೆ.