ಭಾರತೀಯ ಸಾಂಪ್ರದಾಯಿಕ ಆಚರಣೆಗಳು ತಮ್ಮ ಸಡಗರ, ಸಂಭ್ರಮಕ್ಕೆ ಹೆಸರುವಾಸಿ. ಅದು ಮದುವೆ, ಮುಂಜಿ, ಗೃಹಪ್ರವೇಶ, ಸೀಮಂತ, ಹಬ್ಬಹರಿದಿನಗಳ ಯಾವುದೇ ಸಂದರ್ಭ ಇರಬಹುದು. ಇತ್ತೀಚೆಗಂತೂ ಇಂಥ ಶುಭ ಸಮಾರಂಭಗಳಿಗೆ ಗ್ರಾಂಡಾಗಿ ಸೀರೆ ಉಡುವುದು ಮಾತ್ರವಲ್ಲದೆ, ಬಂದ ಅತಿಥಿಗಳಿಗ ಭರ್ಜರಿ ರಿಟರ್ನ್ ಗಿಫ್ಟ್ ಕೊಡುವುದೂ ಪದ್ಧತಿಯಾಗಿದೆ.
ಈ ನಿಟ್ಟಿನಲ್ಲಿ ಸೀರೆಗಳು ಪ್ರತಿ ಭಾರತೀಯ ನಾರಿಯ ಸೌಂದರ್ಯದ, ಹೆಣ್ತನದ ಪ್ರತೀಕವೆನಿಸಿವೆ. ಸಣ್ಣ ಪೂಜಾ ಸಮಾರಂಭ ಅಥವಾ ದೊಡ್ಡ ಮದುವೆ ಇರಲಿ, ವೈವಿಧ್ಯಮಯ ಸೀರೆಗಳ ಸರಭರ ಇಲ್ಲದೆ ಅದೆಂದೂ ಕಳೆಗಟ್ಟದು. ಅದೇ ರೀತಿ ಈ ಶುಭ ಸಮಾರಂಭಗಳಿಗೆ ಬಂದವರು ತಾಂಬೂಲದೊಂದಿಗೆ ರಿಟರ್ನ್ ಗಿಫ್ಟ್ಸ್ ಪಡೆಯುವುದೂ ಮುಖ್ಯವಾಗಿ ಮದುವೆ, ಮುಂಜಿ, ಗೃಹಪ್ರವೇಶಗಳ ಸಂದರ್ಭದಲ್ಲಿ ಇತ್ತೀಚೆಗೆ ಬಹಳ ಸಾಮಾನ್ಯವಾಗುತ್ತಿದೆ. ಇಂಥ ರಿಟರ್ನ್ ಗಿಫ್ಟ್ ಆರಿಸುವಲ್ಲಿ ಆತಿಥೇಯರು ಬಲು ಎಚ್ಚರಿಕೆ ವಹಿಸುತ್ತಿದ್ದಾರೆ. ಅದನ್ನು ಪಡೆದು ಅತಿಥಿಗಳು ಬಲು ಸಂತೋಷವಾಗಿ ವಿದಾಯ ಕೋರುತ್ತಾರೆ.
ಹೆಣ್ಣಿನ ಇಂಥ ಅಮೋಘ ಹೆಗ್ಗುರುತಾದ ಸೀರೆಗಳ ವೈಭವ ಹೆಚ್ಚಿಸಲೆಂದೇ, ಉಡುಗೊರೆಗಳು ಶುಭ ಸಮಾರಂಭಗಳ ಕಳೆಗೂಡಿಸಲಿ ಎಂದು ಚೆನ್ನೈ ಮೂಲದ ಎಂಜಿನಿಯರ್ ದಂಪತಿಗಳಾದ ಬೃಂದಾ ಪದ್ಮನಾಭನ್ ಹಾಗೂ ಆನಂದ್ ಕೃಷ್ಣಮೂರ್ತಿಯವರು `ಪ್ರಶಾಂತ್ ಸ್ಯಾರೀಸ್' ಹೊರತಂದಿದ್ದಾರೆ. ಇದು ದ. ಭಾರತದ ಖ್ಯಾತ ಸ್ಟೋರ್ ಆಗಿದ್ದು ಕೈ ಮಗ್ಗದ ಸಿಲ್ಕ್ ಕಾಟನ್, ರೇಷ್ಮೆ ಸೀರೆಗಳಿಗೆ 2016ರಿಂದ ಹಾಗೂ ಭಾರತದ ಅತಿ ದೊಡ್ಡ ರಿಟರ್ನ್ಸ್ ಗಿಫ್ಟ್ ಸ್ಟೋರ್ ಆದ `ವೆಡ್ ಟ್ರೀ'ಯನ್ನು 2014ರಲ್ಲಿ ಸ್ಥಾಪಿಸಿದ್ದಾರೆ.
ಪ್ರಶಾಂತಿ ಸ್ಯಾರೀಸ್
ಇದೀಗ 25ರ ಹರೆಯಕ್ಕೆ ಕಾಲಿಟ್ಟಿರುವ `ಪ್ರಶಾಂತಿ ಸ್ಯಾರೀಸ್' ಆ ತಲೆಮಾರಿನಿಂದ ಈ ತಲೆಮಾರಿನವರೆಗೂ ಎಲ್ಲಾ ವಯೋಮಾನದ ಹೆಂಗಸರಿಗೂ ಅಚ್ಚುಮೆಚ್ಚಿನ ಪ್ರೀಮಿಯಂ ಸಿಲ್ಕ್, ಸಿಲ್ಕ್ ಕಾಟನ್ ಸ್ಯಾರೀಸ್ ಒದಗಿಸುತ್ತಿದೆ. ಇವರು ತಮ್ಮದೇ ಆದ `ಜರಿ' ಹೊಂದಿದ್ದು, ಆ ಮೂಲಕ ಅತ್ಯುತ್ತಮ ಗುಣಮಟ್ಟದ ಸಿಲ್ಕ್ ಕಾಟನ್ ಸೀರೆಗಳು, ಅದರಲ್ಲೂ ಕೈಮಗ್ಗದ ಸೀರೆಗಳಿಗೆ ಖ್ಯಾತಿ ಪಡೆದಿದ್ದಾರೆ. ಇವರ ಸಿಲ್ಕ್ ಕಾಟನ್ ಸೀರೆಗಳ ಅಭಿಮಾನಿಗಳ ಬಳಗ ಬಲು ದೊಡ್ಡದು. ಇಂದಿನ ಆಧುನಿಕ ಯುವತಿಯರು, ನಡು ವಯಸ್ಸಿನ ಹಾಗೂ ಪ್ರೌಢ ಮಹಿಳೆಯರು ಹೆಚ್ಚು ಇಷ್ಟಪಟ್ಟು ಇವನ್ನು ಕೊಳ್ಳುತ್ತಾರೆ.
ಸಿಲ್ಕ್ ಕಾಟನ್ ಸೀರೆಗಳು ಮಾತ್ರವಲ್ಲದೆ, ಇಲ್ಲಿ ಅಪ್ಪಟ ರೇಷ್ಮೆ ಸೀರೆಗಳು, ಕಾಂಜೀವರಂ, ರಾ ಸಿಲ್ಕ್ ಸ್ಯಾರೀಸ್, ಪರ್ಫೆಕ್ಟ್ ವರ್ಕ್‌ವೇರ್ ಎನಿಸಿದ ಟಸರ್, ಸಲ್ವಾರ್ ಸೂಟ್ ಮೆಟೀರಿಯಲ್ಸ್ ಹಾಗೂ ಕಿಡ್ಸ್ ಎಥ್ನಿಕ್ ಕಲೆಕ್ಷನ್ ಸಹ ಇವೆ. ಇವರು ಚೆನ್ನೈ ಮಹಾನಗರದಲ್ಲಿ ಮೈಲಾಪುರ್, ಟಿ.ನಗರ್ ಮತ್ತು ಬೆಂಗಳೂರಿನಲ್ಲಿ ದೊಡ್ಡ ಮಳಿಗೆಗಳನ್ನು ಹೊಂದಿದ್ದಾರೆ. ಪ್ರತಿ ಮಳಿಗೆಯೂ ತನ್ನ ಟ್ರೆಂಡಿ ಸಂಗ್ರಹಕ್ಕೆ ಹೆಸರುವಾಸಿ. ಸ್ಟೋರ್‌ನ ಆ್ಯಂಬಿಯೆನ್ಸ್ ನಿಮಗೆ ಅತ್ಯುತ್ತಮ ಶಾಪಿಂಗ್ ಅನುಭವ ನೀಡಲಿದೆ.
ಪ್ರತಿ ವರ್ಷ ದಸರಾ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಇರುವ ದೊಡ್ಡ ಎಗ್ಸಿಬಿಷನ್ ಏರ್ಪಡಿಸುತ್ತಾರೆ. ಇದರಲ್ಲಿ ರೇಷ್ಮೆ ಸೀರೆ ಮತ್ತು ಸಿಲ್ಕ್ ಕಾಟನ್ ಸೀರೆಗಳ ಲೇಟೆಸ್ಟ್ ಕಲೆಕ್ಷನ್ ಇರುತ್ತದೆ. ಭಾರತದ ಅತಿ ದೊಡ್ಡ ಕಾಸ್ಮೊಪಾಲಿಟಿನ್ ಸಿಟಿ ಬೆಂಗಳೂರಲ್ಲಿ ಕಂಡು ಬರದ ವಿಭಿನ್ನ ಸಂಸ್ಕೃತಿಗಳಿಲ್ಲ. ಇಲ್ಲಿನ ಎಲ್ಲಾ ಜನರೂ ಮುಗಿಬಿದ್ದು ಈ ಪ್ರದರ್ಶನಕ್ಕೆ ಬರುತ್ತಾರೆಂದರೆ ಅದರ ಅಗಾಧತೆ ಊಹಿಸಬಹುದು.