GRT ಜ್ಯೂವೆಲರ್ಸ್ ಕಳೆದ 54 ವರ್ಷಗಳಿಂದ ದಕ್ಷಿಣ ಭಾರತದಲ್ಲೇ ನಂಬಿಕೆಯಾದ ಬ್ರಾಂಡ್‌ಗಳಲ್ಲಿ ಒಂದಾಗಿ ಖ್ಯಾತಿ ಪಡೆದಿದೆ. ಈ ಬ್ರಾಂಡ್‌ನ ಏಕೈಕ ಲಕ್ಷ್ಯ ತನ್ನ ಗ್ರಾಹಕರೇ. ಇದಕ್ಕೆ ಹೆಸರನ್ನು ತಂದಿದ್ದು ಅದರ ಸುಂದರವಾದ, ಹಸ್ತ ಕೌಶಲ್ಯದಿಂದ ರೂಪಿಸಲ್ಪಟ್ಟ ಉತ್ತಮ ಗುಣಮಟ್ಟದ ಆಭರಣಗಳು. ಇಂದು GRT ಎಲ್ಲಾ ವಯಸ್ಸಿನ ಗ್ರಾಹಕರಿಗೂ ವಿಸ್ತೃತ ಶ್ರೇಣಿಯ ಚಿನ್ನ, ವಜ್ರ, ಪ್ಲಾಟಿನಂ, ಬೆಳ್ಳಿ ಆಭರಣಗಳನ್ನು ಒದಗಿಸುತ್ತಾ ಅವರಿಗೆ ಹತ್ತಿರವಾಗುತ್ತಿದೆ. ಇದರ ಫಲವಾಗಿ GRT ಹಲವಾರು ವಿಶಿಷ್ಟ ಮಧುರ ಕ್ಷಣಗಳನ್ನು ಆಸ್ವಾದಿಸುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.
ತನ್ನ ಗ್ರಾಹಕರನ್ನು ಸದಾ ಆನಂದವಾಗಿಡಲು ವಿವಿಧ ಮಾರ್ಗಗಳನ್ನು ಹುಡುಕುತ್ತಿರುವ GRT ಪ್ರತಿದಿನದ ಬಳಕೆಗೂ, ಕೆಲಸದ ಪ್ರದೇಶಕ್ಕೂ, ಪಾರ್ಟಿಗಳಿಗೂ ಧರಿಸಲು ಅನುಕೂಲವಾದ ಹಗುರವಾದ ಬ್ರಾಂಡ್ ಒರಿಯಾನಾವನ್ನು ತನ್ನ ಶೋರೂಮುಗಳಲ್ಲಿರುವ ಪ್ರತ್ಯೇಕ ಕೌಂಟರ್‌ಗಳ ಮೂಲಕ, ಆಕರ್ಷಕವಾದ ವೆಬ್‌ಸೈಟ್‌ಗಳ ಮೂಲಕ ಪರಿಚಯಿಸುತ್ತಿದೆ. ಸದ್ಯ GRT ತನ್ನ ಎರಡನೇ ಪ್ರಚಾರದ ಮೂಲಕ ಅಸಂಖ್ಯಾತರ ಹೃದಯಗಳನ್ನು ಸೂರೆಗೊಂಡು ಈ ಅದ್ಭುತ ಕಲೆಕ್ಷನ್‌ನ್ನು ಪರಿಚಯಿಸಿದೆ.
ಒರಿಯಾನಾ ಆಭರಣಗಳ ಕಲೆಕ್ಷನ್‌ನಿಂದ ಪರವಶರಾದ ಗ್ರಾಹಕರು ಈ ಆಭರಣಗಳನ್ನು ಬಣ್ಣಿಸಲು ಬಳಸುವ ಪದಗಳು `ಸುಕುಮಾರ’ `ನಯವಾದ’ `ವೈವಿಧ್ಯತೆ’ `ಚಿಕ್.’ ರೂ.5,499 ರಿಂದ ಶುರುವಾಗುವ ಇವು ಗ್ರಾಹಕರನ್ನು ಆಕರ್ಷಿಸುವುದು ಮಾತ್ರವಲ್ಲ, ಅವರಿಗೆ ಎಟುಕುವ ಬೆಲೆಯಲ್ಲಿ ಸಿಗುತ್ತವೆ. ನಿಸರ್ಗದ ಸ್ಛೂರ್ತಿಯಿಂದ ತಯಾರಾದ ಈ ಕಲೆಕ್ಷನ್‌ಗಳಲ್ಲಿರುವ ಸೂಕ್ಷ್ಮವಾದ ಡಿಸೈನ್ಸ್ ಎಲ್ಲಾ ವಯಸ್ಸಿನ ಮಹಿಳೆಯರನ್ನೂ ಆಕರ್ಷಿಸುತ್ತಿವೆ. ಈ ಒರಿಯಾನಾ ವೆಬ್‌ಸೈಟ್ ಲೋಹ, ಕಲ್ಲು, ಸಂದರ್ಭ, ಬಜೆಟ್ ಆಧಾರವಾಗಿ ಗ್ರಾಹಕರಿಗೆ ಆಯ್ಕೆಯಲ್ಲಿ ಆನಂದವನ್ನು ನೀಡುತ್ತದೆ. ಛಾಟ್, GRT ಲೈನ್ ಸೌಲಭ್ಯಗಳು, ಶೋರೂಮಿಗೆ ಭೇಟಿ ನೀಡಲಾಗದ ಗ್ರಾಹಕರಿಗೆ ಆನ್‌ಲೈನ್‌ನಲ್ಲಿ ಶಾಪಿಂಗ್ ಅನುಭವವನ್ನು ಸರಳವಾಗಿಸುತ್ತವೆ. ಈ ಕಲೆಕ್ಷನ್‌ಗಳನ್ನು ಪ್ರೋತ್ಸಾಹಿಸುವ ಈ ಹೊಸ ಪ್ರಚಾರ ವಿಧಾನ ಆಭರಣಗಳ ಕುರಿತು ಮೂಲತತ್ವವನ್ನು ಪುನರುದ್ಘಾಟಿಸಿ ಪ್ರತಿದಿನವನ್ನೂ ವಿಶಿಷ್ಟ ದಿನವನ್ನಾಗಿಸುತ್ತದೆ.
ಈ ಹೊಸ ಪ್ರಚಾರ, ಕಲೆಕ್ಷನ್‌ಗಳ ಕುರಿತು GRT ಮ್ಯಾನೇಜಿಂಗ್ ಡೈರಕ್ಟರ್`ಜಿ.ಆರ್. ಅನಂತ ಪದ್ಮನಾಭನ್’ರವರು ಹೀಗೆನ್ನುತ್ತಾರೆ. “ GRT ಜ್ಯುವೆಲರ್ಸ್‌ನಲ್ಲಿ ಮೊದಲನೇ ಬಾರಿ ಖರೀದಿಸಿದ ಗ್ರಾಹಕರು ಇಲ್ಲಿಗೆ ಮತ್ತೆ ಮತ್ತೆ ಬರುತ್ತಾರೆ ಎನ್ನುವುದು ನಮ್ಮ ವಿಶ್ವಾಸ. ಆದ್ದರಿಂದ ನಾವು ವಿಸ್ತೃತ ಶ್ರೇಣಿ ಆಫರಿಂಗ್, ಪ್ರತ್ಯೇಕ ಸಂದರ್ಭಗಳಿಗೆ ಪ್ರತ್ಯೇಕ ಕಲೆಕ್ಷನ್ಸ್, ಆಕರ್ಷಕವಾದ ಆಫರ್‌ಗಳು, ಯೋಜನೆಗಳೊಂದಿಗೆ ಅವರ ಮೇಲೆ ದೃಷ್ಟಿ ಇಡುತ್ತೇವೆ.
“ಒರಿಯಾನಾ ಪರಿಚಯಿಸುವುದರಿಂದ ಆಭರಣಗಳು ಕೇವಲ ಪ್ರತ್ಯೇಕ ಸಂದರ್ಭಗಳಿಗಿ ಮಾತ್ರ ಎನ್ನುವ ಮಾತನ್ನು ಮರೆತು, ಅವರು ಇವುಗಳನ್ನು ಸದಾ ಧರಿಸಿ, ಪ್ರತಿದಿನ ಆನಂದಿಸುವ ಸದವಕಾಶವನ್ನು ಕಲ್ಪಿಸುತ್ತಿದ್ದೇವೆ. ನಾವು ನಮ್ಮ ಕಲೆಕ್ಷನ್‌ಗಳ ಹೊಸ ಪ್ರಚಾರವನ್ನು ಶುರು ಮಾಡುವುದರಿಂದ ಒರಿಯಾನಾ ಕಲೆಕ್ಷನ್ ಸ್ತ್ರೀ ಪುರುಷರೆಲ್ಲರಿಗೂ, ಯಾವುದೇ ವಯಸ್ಸಿನವರಾದರೂ ಅವರಿಗೆ ಆನಂದವನ್ನು ಉಂಟು ಮಾಡುತ್ತದೆಂದು ಬಲವಾಗಿ ನಂಬುತ್ತಿದ್ದೇವೆ.”
ಮ್ಯಾನೇಜಿಂಗ್ ಡೈರೆಕ್ಟರ್ ಜಿ.ಆರ್. ರಾಧಾಕೃಷ್ಣನ್ ಮಾತನಾಡುತ್ತಾ, “ಗ್ರಾಹಕರಿಗೆ ತೃಪ್ತಿಯನ್ನು ಉಂಟು ಮಾಡುವ ನಮ್ಮ ಲಕ್ಷ್ಯದಲ್ಲಿ ಮುಖ್ಯ ಹಂತ ನಮ್ಮ ಆಭರಣಗಳು ಅವರಿಗೆ ಎಟುಕುವಂತೆ ಇರಬೇಕು ಎನ್ನುವುದೇ. ನಮ್ಮ ಹಗುರವಾದ ಕಲೆಕ್ಷನ್ ಆದ ಒರಿಯಾನಾ ಪ್ರತಿದಿನ ಧರಿಸುವ ಆಭರಣಗಳು ಅವರಿಗೆ ಎಟುಕುವ ಬೆಲೆಯಲ್ಲಿರುವಂತೆ ಮಾಡಿದರೆ ನಮ್ಮ ಪ್ರತ್ಯೇಕವಾದ ಒರಿಯಾನಾ ವೆಬ್‌ಸೈಟ್ GRT ಲೈನ್ ವಿಧಾನ ಆಭರಣಗಳ ಶಾಪಿಂಗ್ ಅನುಭವವನ್ನು ಪೂರ್ತಿಯಾಗಿ ಬದಲಾಯಿಸಿ ಅವರನ್ನು ಈ ಡಿಜಿಟಲ್ ಯುಗಕ್ಕೆ ಪರಿಚಯ ಮಾಡಿಸಿದೆ.
“ಇಂದು ನಾವು ನಮ್ಮ ಒರಿಯಾನಾ ಕಲೆಕ್ಷನ್ ಎರಡನೇ ಪ್ರಚಾರವನ್ನು ಸಂಭ್ರಮವಾಗಿ ಆಚರಿಸುತ್ತಾ, ನಮ್ಮ ವಿನೂತನ ವಿಧಾನಗಳಿಗೆ ನಮ್ಮ ವ್ಯಾಪಾರ ವಿಸ್ತರಣೆಗೆ, ನಮ್ಮ ಗ್ರಾಹಕರ ಸಂತೃಪ್ತಿಗೆ ಬದ್ಧರಾಗಿರುತ್ತೇವೆಂದು ಮಾತುಕೊಡುತ್ತಿದ್ದೇವೆ,” ಎನ್ನುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಜಯನಗರ : 080 2665 1515 ಮಲ್ಲೇಶ್ವರಂ : 080 2292 1515 ಕಮ್ಮನಹಳ್ಳಿ : 080 2546 1515 ಮಾರತ್‌ಹಳ್ಳಿ: 080 2540 1515