ದಿನವಿಡೀ ದುಡಿತದ ನಂತರ ಮನೆಗೆ ಹೋದಾಗ, ಸುಂದರವಾಗಿ ಸಿಂಗರಿಸಲಾದ ಬೆಡ್‌ ರೂಮ್ ನಿಮ್ಮ ಸುಸ್ತು ಸಂಕಟಗಳನ್ನು ಕ್ಷಣಾರ್ಧದಲ್ಲಿ ದೂರ ಮಾಡುತ್ತದೆ. ಆದ್ದರಿಂದ ಬೆಡ್‌ ರೂಮ್ ನ್ನು ವ್ಯವಸ್ಥಿತವಾಗಿ ಸಿಂಗರಿಸಬೇಕಾದುದು ಅತ್ಯಗತ್ಯ. ನೀವೇ ಹೀಗೆ ಸಿಂಗರಿಸಿದ ಬೆಡ್‌ ರೂಮ್ ನಿಮಗೆ ವಿಭಿನ್ನ ರೋಮಾಂಚನ ನೀಡುತ್ತದೆ. ಯಾವ ರೀತಿ ಬೆಡ್‌ ರೂಂನ್ನು ಸಿಂಗರಿಸುವುದು ಎಂದು ಯೋಚಿಸುತ್ತಿದ್ದೀರಾ? ಇಂಟೀರಿಯರ್‌ ಡಿಸೈನರ್‌ ಅಶ್ವಿನಿ ವೈದ್ಯ ಈ ಕುರಿತಾಗಿ ಹೀಗೆ ಸಲಹೆ ನೀಡುತ್ತಾರೆ :

ಮಲಗುವ ಕೋಣೆಯಲ್ಲಿ ಬೆಡ್‌ನ್ನು ಸಮರ್ಪಕವಾಗಿ ಸಿಂಗರಿಸುವುದು ನಿಜಕ್ಕೂ ಒಂದು ಕಲೆ. ಇದಕ್ಕಾಗಿ ಸರಿಯಾದ ಆಕಾರವುಳ್ಳ ಬೆಡ್‌ ಆರಿಸಿ. ಇದನ್ನು ಮಂಚದಲ್ಲಿ ಸೆಟ್‌ ಮಾಡಿದ ನಂತರ ಕೋಣೆಯಲ್ಲಿ ತುಸು ಜಾಗವಿರಬೇಕು, ತೀರಾ ಇಕ್ಕಟ್ಟಾಗಬಾರದು.

ಯಾವುದೇ ಸಾಮಗ್ರಿಯನ್ನು ಹೊರಗೆ ಇಡುವ ಅಗತ್ಯವಿಲ್ಲ ಎನಿಸಿದರೆ, ಮಂಚದ ಕೆಳಗೆ ಬಾಕ್ಸ್ ತರಹ ಮಾಡಿಸಿ, ಅದರಲ್ಲಿ ಇರಿಸಿ.

ಗೋಡೆಗೆ ಹಚ್ಚಿರುವ ಬಣ್ಣದ ಆಧಾರದಿಂದ ಬೆಡ್‌ ಖರೀದಿಸಿ. ಏಕೆಂದರೆ ಇದರಿಂದ ಕೋಣೆ ಶುಭ್ರ, ಸ್ವಚ್ಛ ಹಾಗೂ ಆರಾಮದಾಯಕ ಎನಿಸುತ್ತದೆ. ನಿಮ್ಮಿಷ್ಟದ ಆಕಾರದ ಬೆಡ್‌ ಖರೀದಿಸಲು ನೀವು ಆನ್‌ಲೈನ್‌ ಶಾಪಿಂಗ್‌ ಸಹ ಮಾಡಬಹುದು.

ಬೆಡ್‌ಗಾಗಿ ಆರಾಮ ನೀಡುವ ಒರಗುವ ಗಾದಿಗಳಿರಲಿ. ಇದು ಅತಿ ಮೃದು ಅಥವಾ ಅತಿ ಒರಟಾಗಿ ಗಟ್ಟಿ ಎನಿಸಬಾರದು. ಆಗ ಮಾತ್ರ ನಿಮ್ಮ ಬೆನ್ನಿಗೆ ಧಾರಾಳ ಆರಾಮ ಸಿಗುತ್ತದೆ.

ಬೆಡ್‌ನ್ನು ಸಿಂಗರಿಸಲು ಡೆಕೋರೇಟಿವ್ ‌ತಲೆದಿಂಬು, ಉತ್ತಮ ಕ್ವಾಲಿಟಿಯ ಕಂಬಳಿ, ರಗ್ಗು, ಬೆಡ್‌ ಶೀಟ್‌, ಬೆಡ್‌ ಸ್ಪ್ರೆಡ್‌, ಪಿಲ್ಲೋ ಕವರ್‌ಗಳಿರಬೇಕು. ದಿಂಬುಗಳ ಆಕಾರ ಬೆಡ್‌ಗೆ ಹೊಂದುವಂತಿರಲಿ. ಇತ್ತೀಚೆಗೆ ದಿಂಬುಗಳಂತೂ ವೈವಿಧ್ಯಮಯ ಆಕಾರ, ಬಣ್ಣಗಳಲ್ಲಿ ಲಭ್ಯ. ನಿಮ್ಮಿಷ್ಟದಂತೆ  3-4 ಸೆಟ್‌ ಖರೀದಿಸಿ.

ಬೆಡ್‌ ಸ್ಪ್ರೆಡ್‌, ಬೆಡ್‌ ಶೀಟ್ಸ್ ಸದಾ ಲೈಟ್‌ ಬಣ್ಣದ್ದೇ ಆಗಿರಲಿ, ಗೋಡೆಗೆ ಹೊಂದುವಂತಿರಲಿ. ನಿಮ್ಮ ಕೋಣೆ ಚಿಕ್ಕದೆನಿಸಿದರೆ, ದೊಡ್ಡ ಪ್ರಿಂಟ್‌ ಹಾಗೂ ಗಾಢ ಬಣ್ಣದ ಬೆಡ್‌ ಶೀಟ್ಸ್ ಎಂದೂ ಕೊಳ್ಳಬೇಡಿ. ಇದರ ಮೇಲೆ ಮಾಡಲಾದ ಕಸೂತಿ ಇದಕ್ಕೆ ಹೆಚ್ಚಿನ ಮೆರುಗು ನೀಡುತ್ತದೆ.

ಈ ಕೋಣೆಯಲ್ಲಿ ಪ್ರಧಾನವಾಗಿ ಬೆಡ್‌ ಇಡೀ ಕೋಣೆಯ ಸಿಂಹಪಾಲನ್ನು ಆಕ್ರಮಿಸುತ್ತದೆ. ಹಾಗಾಗಿ ಉಳಿದ ಜಾಗದಲ್ಲಿ  ಸೈಡ್

ಟೇಬಲ್, ಬೀರು, 1-2 ಲೈಟ್‌ ಫರ್ನೀಚರ್‌ ಇಡುವಂತೆ ಮಾಡಿ. ಇದರ ಮೇಲೆ ಕುಳಿತು ಪತ್ರಿಕೆ ಇತ್ಯಾದಿ ಓದಲು ಅನುಕೂಲವಿರಲಿ. ಜೊತೆಗೆ ಸೈಡ್‌ ಟೇಬಲ್ ಮೇಲೆ ಕೆಲವು ಡೆಕೋರೇಟಿವ್ ‌ಐಟಂ ಯಾ ಹೂದಾನಿ ಇರಿಸಿ, ಕೋಣೆಯ ಶೋಭೆ ಹೆಚ್ಚಿಸಿ.

ಬೆಡ್‌ರೂಮಿನಲ್ಲಿ ಸಮರ್ಪಕ ಲೈಟಿಂಗ್‌ ವ್ಯವಸ್ಥೆ ಅತಿ ಮುಖ್ಯ. ಅತಿಯಾದ ಫ್ಲಾಶಿಂಗ್‌, ಕಣ್ಣು ಕೋರೈಸುವ ಕಾಂತಿಯ ಲೈಟಿಂಗ್

ಬೇಡ. ಯೆಲ್ಲೋ ಯಾ ಡಿಮ್ ಲೈಟ್‌ ಪ್ರಯೋಗ ಬೆಡ್‌ ರೂಮಿಗೆ ಸೂಕ್ತ. ಮಧ್ಯಮ ಬೆಳಕು ಹರಡಿದ್ದರೆ ಬೆಡ್‌ ರೂಮ್ ಹೆಚ್ಚು ರೊಮ್ಯಾಂಟಿಕ್‌ ಎನಿಸುತ್ತದೆ.

ಬೆಡ್‌ ರೂಮಿನಲ್ಲಿ ಅತಿ ಸಾಮಗ್ರಿ ತುಂಬಿಸಿ ಗಿಜಿಗಿಜಿ ಮಾಡಬೇಡಿ. ಅತಿ ಕನಿಷ್ಠ ಸಾಮಗ್ರಿಗಳಿಂದ ಬೆಡ್‌ ರೂಮ್ ಸದಾ ನೀಟಾಗಿರುವಂತೆ ಮಾಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ