ಷೇರು ಮಾರುಕಟ್ಟೆ, ಸ್ಟಾಕ್ಎಕ್ಸ್ ಚೇಂಜ್ಮುಂತಾದವುಗಳಲ್ಲಿ ಹೂಡಿಕೆ, ಮೂಲಕ ಅಗತ್ಯವಿದ್ದಾಗ ಷೇರುಗಳನ್ನು ಕೊಂಡು, ಮಾರುವುದು ಇತ್ಯಾದಿಗಳೆಲ್ಲ ಸಾಮಾನ್ಯ ಜನರಿಗೆ ನಿಜಕ್ಕೂ ಕಬ್ಬಿಣದ ಕಡಲೆಯೇ ಸರಿ. ಇದನ್ನು ಸರಳವಾಗಿ ಅರಿಯೋಣವೇ........?

ಗೃಹಿಣಿಯರಿಗೆ, ವಿದ್ಯಾರ್ಥಿಗಳಿಗೆ, ಕೃಷಿಕರಿಗೆ, ನೌಕರಸ್ಥರಿಗೆ, ಸ್ವಂತ ಉದ್ಯೋಗಿಗಳಿಗೆ, ನಿವೃತ್ತರಿಗೆ ತಮ್ಮ ಸಂಪಾದನೆಯ ಹಣವನ್ನು ಉಳಿತಾಯ ಮಾಡಲು ಹಲವಾರು ಮಾರ್ಗಗಳಿವೆ. ಬ್ಯಾಂಕ್‌ ಠೇವಣಿಗಳು (ಡೆಪಾಸಿಟ್‌), ಅಂಚೆ ಕಛೇರಿ ಠೇವಣಿಗಳು. ಬ್ಯಾಂಕ್‌ ಅಥವಾ ಅಂಚೆ ಕಛೇರಿಗಳಲ್ಲಿ ತೆರೆಯಬಹುದಾದ ಸಾರ್ವಜನಿಕ ಭವಿಷ್ಯ ನಿಧಿ (ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ ಅಥವಾ ಪಿಪಿಎಫ್‌ ಖಾತೆಗಳು), ಉತ್ತಮ ಕಂಪನಿಗಳ ಸ್ಥಿರ ಠೇವಣಿಗಳು (ಎಫ್‌.ಡಿ),  ಚಿನ್ನ, ಮ್ಯೂಚುವಲ್ ‌ಫಂಡ್ಸ್ ಹೀಗೆ. ಅದೇ ರೀತಿಯಲ್ಲಿ ಕಂಪನಿಗಳ ಷೇರುಗಳಲ್ಲಿ ಹಣ ಹೂಡುವುದೂ ಒಂದು ಉತ್ತಮ ಹೂಡಿಕೆಯೇ ಸರಿ. ಷೇರು ಸೂಚ್ಯಂಕ ದಾಖಲೆಯ ಎತ್ತರಕ್ಕೆ ಏರಿತು, ಷೇರು ಹೂಡಿಕೆಯಲ್ಲಿ ಅಷ್ಟು ಲಾಭ ಆಯಿತು ಇಷ್ಟು ಲಾಭ ಆಯಿತು ಅಂತೆಲ್ಲ ನಾವು ದಿನ ಬೆಳಗಾದರೆ ಕೇಳುತ್ತಲೇ ಇರುತ್ತೇವೆ. ಹಾಗಾಗಿ, ಕಂಪನಿಯ ಷೇರುಗಳಲ್ಲಿ ಹಣವನ್ನು ಹೂಡುವುದು ಹೇಗೆ ಎಂಬ ಬಗ್ಗೆ ನಾವು ವಿವರವಾಗಿ ತಿಳಿಯೋಣ.

ಮುಂಬೈ ಷೇರು ಸಂವೇದಿ ಸೂಚ್ಯಂಕ, ಸೆನ್ಸೆಕ್ಸ್ 82,000 ಗಡಿ ದಾಟಿತು, ಕೆಲವು ತಿಂಗಳುಗಳ ಹಿಂದೆಯಷ್ಟೇ ಅದು 75,000ದ ಆಸುಪಾಸಿನಲ್ಲಿತ್ತು. ಕೆಲವು ವರ್ಷಗಳ ಹಿಂದೆಯಷ್ಟೇ 50,000 ದಲ್ಲಿತ್ತು ಅಂತೆಲ್ಲ ನಾವು ಮಾಧ್ಯಮಗಳಲ್ಲಿ ಓದಿರುತ್ತೇವೆ ಅಥವಾ ನೋಡಿರುತ್ತೇವೆ. ಹಾಗೆಯೇ ರಾಷ್ಟ್ರೀಯ ಷೇರು ಸೂಚ್ಯಂಕ, ನಿಫ್ಟಿ, 15,000ದ ಗಡಿಯನ್ನೂ, 20,000ದ ಮಟ್ಟವನ್ನೂ, 25,000ದ ಹಂತವನ್ನೂ ದಾಟಿತು ಅಂತಲೂ ಸುದ್ದಿ ಬರುತ್ತಿರುತ್ತದೆ.

ಮೋಟಾರು ಉದ್ಯಮ, ಬ್ಯಾಂಕಿಂಗ್‌ ಮತ್ತು ಹಣಕಾಸು ಎಂಜಿನಿಯರಿಂಗ್‌, ಮಾಹಿತಿ ತಂತ್ರಜ್ಞಾನ, ಉಕ್ಕು, ಸಿಮೆಂಟ್‌, ಟೆಲಿಕಾಂ ಮುಂತಾದ ಕ್ಷೇತ್ರಗಳ ಪ್ರಮುಖ ಕಂಪನಿಗಳ ಷೇರುಗಳು ಸೆನ್ಸೆಕ್ಸ್ ನಲ್ಲಿ ಸ್ಥಾನ ಪಡೆದಿವೆ. ಈ ಸೂಚ್ಯಂಕದಲ್ಲಿ 30 ಕಂಪನಿಗಳಿವೆ. ವಿವಿಧ ಕ್ಷೇತ್ರಗಳ ಉದ್ಯಮಗಳಲ್ಲಿರುವ ಈ ಎಲ್ಲ ಕಂಪನಿಗಳ ವಹಿವಾಟು, ಫಲಿತಾಂಶಗಳನ್ನು ಗಮನಿಸಿ ಹಾಗೂ ಮುಂದಿನ ವರ್ಷಗಳಿಗೂ ನಿರೀಕ್ಷೆಗಳನ್ನು ಇಟ್ಟುಕೊಂಡು ಅಂತಹ ಕಂಪನಿಗಳ ಷೇರು ಬೆಲೆಗಳಲ್ಲಿ ಏರಿಕೆ, ಇಳಿಕೆ ಉಂಟಾದಂತೆ, ಸೂಚ್ಯಂಕದಲ್ಲೂ ಏರಿಳಿತಗಳು ಉಂಟಾಗುತ್ತಿರುತ್ತವೆ.

ಹಾಗೆಯೇ ನಿಫ್ಟಿಯಲ್ಲಿ ಬೇರೆ ಬೇರೆ ಉದ್ಯಮಗಳ ಒಟ್ಟಾರೆ 50 ಕಂಪನಿಗಳಿವೆ. ಷೇರು ಬೆಲೆಗಳ ಏರಿಳಿತಗಳು ಒಂದು ರಾಷ್ಟ್ರದ ಆರ್ಥಿಕ ಸ್ಥಿತಿಗತಿ ಹಾಗೂ ಆಗುಹೋಗುಗಳನ್ನು ಪ್ರತಿಬಿಂಬಿಸುವ. ಯಾವುದೇ ಹೊಸ ಉದ್ಯಮವನ್ನು ಸ್ಥಾಪಿಸಬೇಕು ಎಂದಾದರೆ ಹಾಗೂ ಈಗಿರುವ ಉದ್ಯಮವನ್ನು ಇನ್ನಷ್ಟು ವಿಸ್ತರಿಸುವುದಾದರೆ ಹಣಕಾಸಿನ ಅಗತ್ಯಗಳಿಗಾಗಿ ಕಂಪನಿಗಳು ಸಾಮಾನ್ಯವಾಗಿ ಬ್ಯಾಂಕ್‌ ಗಳಿಂದ ದೊರಕುವ ಸಾಲವನ್ನು ಅವಲಂಬಿಸುತ್ತವೆ.

ಹಾಗೆಯೇ ಈಗಾಗಲೇ ತಮ್ಮ ಉತ್ಪನ್ನಗಳನ್ನು ತಯಾರಿಸುವ ಸ್ವಲ್ಪ ದೊಡ್ಡ ಕಂಪನಿಗಳು ಆರಂಭಿಕ ಸಾರ್ವನಿಕ ನೀಡಿಕೆ (ಐಪಿಒ)ಗಳ ಮೂಲಕ ಹೂಡಿಕೆದಾರರಿಂದ ಬಂಡವಾಳವನ್ನು ಸಂಗ್ರಹಿಸುವ ಮಾರ್ಗವನ್ನೂ ಹಿಡಿಯುತ್ತವೆ.

ಐಪಿಓಗಳಲ್ಲಿ ಹೂಡಿಕೆ : ಐಪಿಒಗಳಲ್ಲಿ ಹಣ ತೊಡಗಿಸಬೇಕಾದರೆ ಕನಿಷ್ಠ 15,000ಗಳು ಇದ್ದರೂ ಸಾಕು. ಉದಾಹರಣೆಗೆ ಎರಡು ವರ್ಷಗಳ ಹಿಂದೆ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಕಂಪನಿಯು ತನ್ನ ಐಪಿಒಗಳಿಗೆ ಅರ್ಜಿಗಳನ್ನು ಆಹ್ವಾನಿಸಿದಾಗ ಒಂದು ಷೇರಿಗೆ 904 ರೂ. ಎಂದು ನಿಗದಿಪಡಿಸಿತ್ತು. ಆಗ ಹೂಡಿಕೆದಾರರಿಗೆ ಒಟ್ಟಾರೆ 13,560 ರೂ.ಗಳಿಗೆ 15 ಷೇರುಗಳು ದೊರಕಿದ್ದವು. ಕೆಲವೇ ತಿಂಗಳುಗಳಲ್ಲಿ ಒಂದು ಷೇರಿನ ಬೆಲೆ 566ಕ್ಕೆ ಕುಸಿದಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ