ಬಹುನಿರೀಕ್ಷಿತ ದಳಪತಿ ವಿಜಯ್ ನಟಿಸಿರುವ ಜನ ನಾಯಗನ್ ಚಿತ್ರಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಜನ ನಾಯಗನ್ ಸಿನಿಮಾ ಬಿಡುಗಡೆ ಮತ್ತಷ್ಟು ವಿಳಂಬವಾಗಿದ್ದು, ಚಿತ್ರ ನಿರ್ಮಾಪಕರಿಗೆ ಮತ್ತು ಟಿವಿಕೆ ಪಕ್ಷದ ನಾಯಕ ವಿಜಯ್ ಗೆ ಭಾರೀ ಹಿನ್ನೆಡೆಯಾಗಿದೆ. ಮದ್ರಾಸ್ ಹೈಕೋರ್ಟ್ ನೀಡಿರುವ ಈ ತೀರ್ಪು ಹಿನ್ನೆಡೆಗೆ ಕಾರಣವಾಗಿದೆ.

ಟಿವಿಕೆ ಪಕ್ಷದ ನಾಯಕ ಹಾಗೂ ನಟ ದಳಪತಿ ವಿಜಯ್ ಅವರ ಕೊನೆಯ ಚಿತ್ರ ಎಂದೇ ಹೇಳಲಾಗುತ್ತಿರುವ ಜನ ನಾಯಗನ್, ಬಿಡುಗಡೆ ಮತ್ತೆ ವಿಳಂಬವಾಗಲಿದೆ. ಕಳೆದ ಪೊಂಗಲ್ ಹಬ್ಬದ ಸಂದರ್ಭದಲ್ಲಿಯೇ ಬಿಡುಗಡೆಯಾಗಬೇಕಾಗಿದ್ದ ಚಿತ್ರ ಇದೀಗ ಪ್ರಮಾಣೀಕರಣ ಪತ್ರದ ಸಮಸ್ಯೆಯಿಂದಾಗಿ ಮತ್ತೆ ವಿಳಂಬವಾಗಿದೆ. ಮದ್ರಾಸ್ ಹೈಕೋರ್ಟ್ ನೀಡಿರುವ ತೀರ್ಪಿನಿಂದಾಗಿ ಚಿತ್ರ ನಿರ್ಮಾಪಕರಿಗೆ ಮತ್ತು ದಳಪತಿ ವಿಜಯ್ ಅವರಿಗೆ ಸಾಕಷ್ಟು ಹಿನ್ನೆಡೆಯನ್ನುಂಟು ಮಾಡಿದೆ.

ಜನವರಿ 27 ರಂದು ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠವು ವಿಜಯ್ ಅಭಿನಯದ ಜನ ನಾಯಗನ್ ಚಿತ್ರಕ್ಕೆ ತಕ್ಷಣ ಸೆನ್ಸಾರ್ ಅನುಮತಿ ನೀಡುವಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC)ಗೆ ನಿರ್ದೇಶನ ನೀಡಿದ್ದ ಹಿಂದಿನ ಆದೇಶವನ್ನು ರದ್ದುಗೊಳಿಸಿ ಆದೇಶಿಸಿದೆ. ಈ ವಿಷಯವನ್ನು ಮರುಪರಿಶೀಲನೆ ನಡೆಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ. ಇದರಿಂದ ಪೊಂಗಲ್, ಸಂಕ್ರಾಂತಿ ಸಂದರ್ಭದಲ್ಲಿ ವಿಶ್ವದಾದ್ಯಂತ ತೆರೆಗೆ ಬರುವ ನಿರೀಕ್ಷೆಯಿದ್ದ ಚಿತ್ರದ ಸುತ್ತಲಿನ ಕಾನೂನು ಅನಿಶ್ಚಿತತೆ ಮತ್ತಷ್ಟು ಹೆಚ್ಚಿಸಿದೆ. ಇದರಿಂದ ಚಿತ್ರ ಬಿಡುಗಡೆಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ತೀವ್ರ ನಿರಾಶೆ ಉಂಟಾಗಿದೆ.ಮತ್ತಷ್ಟು ವಿಳಂಬ: ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಅರುಲ್ ಮುರುಗನ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಏಕನ್ಯಾಯಾಧೀಶರು ನೀಡಿದ ಆದೇಶದ ವಿರುದ್ಧ ಸಿಬಿಎಫ್ ಸಿ ಸಲ್ಲಿಸಿದ ಮೇಲ್ಮನವಿಯನ್ನು ಅಂಗೀಕರಿಸಿದೆ. ಇದರಿಂದ ಜನ ನಾಯಗನ್ ಚಿತ್ರದ ಬಿಡುಗಡೆ ಅನಿಶ್ಚಿತತೆ ಮೂಡಿದೆ.

ಜನವರಿ 9 ರಂದು ಪೊಂಗಲ್ ಹಬ್ಬದಂದು ಇದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು. ಆದರೆ, ಚಿತ್ರ ಬಿಡುಗಡೆ ಒಂದು ದಿನ ಮೊದಲು, ನಿರ್ಮಾಪಕರು ತಮ್ಮ ಸಾಮಾಜಿಕ ಜಾಲತಾಣದಲ್ಲಿ, ತಮ್ಮ ನಿಯಂತ್ರಣ ಮೀರಿದ ಸಂದರ್ಭಗಳನ್ನು ಉಲ್ಲೇಖಿಸಿ ಚಿತ್ರ ಬಿಡುಗಡೆಯನ್ನು ಮುಂದೂಡುವುದಾಗಿ ಘೋಷಿಸಿದ್ದರು.

ಅಧಿಕೃತ ಹೇಳಿಕೆಯಲ್ಲಿ ಈ ವಿಚಾರವನ್ನು ಸ್ಪಷ್ಟಪಡಿಸಿದ ಅವರು, ಚಿತ್ರ ತಂಡವು ವಿಳಂಬಕ್ಕೆ ವಿಷಾದ ವ್ಯಕ್ತಪಡಿಸುತ್ತದೆ ಮತ್ತು ತಮ್ಮ ನಿರೀಕ್ಷೆಗೆ ಅನುಗುಣವಾಗಿ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದಿನ ದಿನಗಳಲ್ಲಿ ಘೋಷಿಸುವುದಾಗಿ ತಿಳಿಸಿದ್ದರು.

ಜನವರಿ 9 ರಂದು ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಕೆವಿಎನ್ ಪ್ರೊಡಕ್ಷನ್ಸ್ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಹೈಕೋರ್ಟ್ ಏಕಸದಸ್ಯ ಪೀಠವು ಯುಎ ಪ್ರಮಾಣಪತ್ರವನ್ನು ತಕ್ಷಣ ನೀಡುವಂತೆ ನೀಡಿದ್ದ ಆದೇಶವನ್ನು ತಡೆಹಿಡಿದಿತ್ತು. ಇದರಿಂದಾಗಿ ಚಿತ್ರದ ಬಿಡುಗಡೆ ಅಡ್ಡಿಯಾಗಿದ್ದು, ಜನವರಿ 15 ರಂದು ವಿಭಾಗೀಯ ಪೀಠದ ತಡೆಯಾಜ್ಞೆ ಮತ್ತು ಅಂತಿಮ ಸೆನ್ಸಾರ್ ಪ್ರಮಾಣಪತ್ರ ನೀಡುವಲ್ಲಿನ ವಿಳಂಬವನ್ನು ಪ್ರಶ್ನಿಸಿತ್ತು. ಚಿತ್ರದ ನಿರ್ಮಾಪಕರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಜನವರಿ 20 ರಂದು ಈ ಪ್ರಕರಣದ ವಿಚಾರಣೆ ನಡದಿದ್ದು, ಇದೀಗ ತೀರ್ಪು ಪ್ರಕಟಿಸಲಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ