ಇಂದು ಹೆಣ್ಣು ಮನೆಯ ಹೊಸಿಲು ದಾಟಿ ಅತಿ ಎತ್ತರದ ಸ್ಥಾನ ತಲುಪಿದ್ದಾಳೆ. ಮಿಸ್‌ ವರ್ಲ್ಡ್ ಕಿರೀಟ ಗಿಟ್ಟಿಸುವುದಿರಲಿ ಅಥವಾ ಮಿಸ್‌ ಯೂನಿವರ್ಸ್‌, ಕಾರ್ಪೋರೇಟ್‌ ಲೋಕದಲ್ಲಿ  ಹೆಸರು ಗಳಿಸುವುದಿರಲಿ ಅಥವಾ ಪುರುಷಪ್ರಧಾನ ಕ್ಷೇತ್ರದಲ್ಲಿ ಉತ್ಕೃಷ್ಟತೆ ಸಾಬೀತು ಪಡಿಸುವುದಿರಲಿ, ಹೆಣ್ಣು ಸಾಮಾಜಿಕ ಬೇಡಿಗಳನ್ನು ಕಿತ್ತೊಗೆದು ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತಿದ್ದಾಳೆ. ಅವಳ ವಿಚಾರಧಾರೆಯೂ ಬೋಲ್ಡ್ ಆಯಿತು, ಇದರ ಜೊತೆ ಅವಳ ಲುಕ್ಸ್ ಮತ್ತು ವ್ಯಕ್ತಿತ್ವದಲ್ಲೂ ಹೊಳಪು ಬಂದಿದೆ. ಡ್ರೆಸ್‌ ಅಥವಾ ಮೇಕಪ್‌ ಇರಲಿ, ಬೋಲ್ಡ್ ನೆಸ್‌ ಇಂಡಿಪೆಂಡೆನ್ಸ್ ಎರಡರಲ್ಲೂ ಗೋಚರಿಸುತ್ತದೆ.

ಚರ್ಚೆಯಲ್ಲಿ ಉಳಿಯುವುದೇ ಇಷ್ಟ

ಇತ್ತೀಚೆಗೆ `ದಬಂಗ್' ಚಿತ್ರದಿಂದ ಫೇಮಸ್‌ ಆದ ಫಾತಿಮಾ ಶೇಖ್‌ ತನ್ನ ಬೋಲ್ಡ್ ಫೋಟೋ ಶೂಟ್‌ ಕಾರಣ ಹೆಚ್ಚು ಚರ್ಚೆಯಲ್ಲಿ ಉಳಿದಳು. ತಕ್ಷಣ ಆಕೆ ಇನ್‌ಸ್ಟಾಗ್ರಾಮ್ ನಲ್ಲಿ ತನ್ನ 2 ಬೋಲ್ಡ್ ಫೋಟೋಗಳನ್ನು ಪೋಸ್ಟ್ ಮಾಡಿದಳು. ಬೀಚಿನ ಸ್ವಿಮ್ ಸೂಟ್

ಎಲ್ಲರ ಕಣ್ಣು ಕುಕ್ಕುವಂತಿತ್ತು. ಇಂದಿನ ಆಧುನಿಕ ತರುಣಿಯರು ಹೀಗೆ ಚರ್ಚೆಯಲ್ಲಿ ಉಳಿಯಲು ಎಂಥ ಬೋಲ್ಡ್ ಸ್ಟೆಪ್‌ ತೆಗೆದುಕೊಳ್ಳಲಿಕ್ಕೂ ಹಿಂಜರಿಯುವುದಿಲ್ಲ. ಇದನ್ನು ಇನ್ನಷ್ಟು ಎಂಜಾಯ್‌ ಮಾಡುತ್ತಾರೆ. ಬೋಲ್ಡ್ ಲುಕ್ಸ್ ನ ಮತ್ತೊಂದು ಉದಾಹರಣೆ ಎಂದರೆ ಮಲೈಕಾ ಅರೋರಾ. ಈಕೆ ಸದಾ ತನ್ನ ಫ್ಯಾಷನ್‌, ಗ್ಲಾಮರ್‌, ಬೋಲ್ಡ್ ಸ್ಟೇಟ್‌ಮೆಂಟ್ಸ್ ನಿಂದಾಗಿ ಚರ್ಚೆಯಲ್ಲಿ ಉಳಿಯುತ್ತಾಳೆ.

ಕ್ರಿಯೇಟಿವಿಟಿಯ ಫಂಡಾ

ಇಂದಿನ ಹೆಣ್ಣು ಫ್ಯಾಷನೆಬಲ್ ಗ್ಲಾಮರಸ್‌ ಎನಿಸಲು ತನ್ನದೇ ಆದ ಸ್ಟೈಲ್‌ ಅನುಸರಿಸುತ್ತಾಳೆ. ಈ ಸ್ಟೈಲ್‌ನಿಂದಲೇ ಆ್ಯಟಿಟ್ಯೂಡ್

ಡೆವಲಪ್‌ ಆಗುತ್ತದೆ. ಅದನ್ನು ಜನ ಎಂದೂ ಮರೆಯುವುದಿಲ್ಲ.

ನೀವು ಎಂಥ ಫ್ಯಾನ್ಸಿ ಡ್ರೆಸ್‌ ಧರಿಸಿದ್ದೀರಿ ಎಂಬುದರತ್ತ ಜನರ ಗಮನ ಇರುವುದಿಲ್ಲ, ಅದನ್ನು ನೀವು ಹೇಗೆ ಕ್ಯಾರಿ ಮಾಡುತ್ತಿದ್ದೀರಿ ಎಂಬುದೇ ಇಲ್ಲಿ ಮುಖ್ಯವಾಗುತ್ತದೆ. ಡ್ರೆಸ್‌ ಜನರ ಮನಸ್ಸಿಗೆ ಬರಬೇಕು. ಅದು ಅವರಿಗೆ ಚೆನ್ನಾಗಿದೆ ಎನಿಸಬೇಕು ಎಂಬುದಷ್ಟೇ ಮುಖ್ಯ. ಅದು ಇಂಡಿಯನ್‌ ಆಗಿರಲಿ, ವೆಸ್ಟರ್ನ್‌ ಆಗಿರಲಿ. ಸ್ವಲ್ಪ ಪ್ರಯತ್ನಪಟ್ಟು ತುಸು ವಿಭಿನ್ನ ಸ್ಟೈಲ್ ನಿಮ್ಮದಾಗಿಸಿಕೊಳ್ಳಿ. ಅದು ಡಿಫರೆಂಟ್‌, ಬೋಲ್ಡ್ ಹಾಗೂ ನಿಮಗೆ ಒಪ್ಪುವಂತಿರಲಿ. ಉದಾ : ಸೀರೆ ಒಂದು ಸಾಂಪ್ರದಾಯಿಕ ಉಡುಗೆ. ಆದರೆ ಇಂದಿನ ಹುಡುಗಿಯರು ಸಿನಿ ತಾರೆಯರಿಂದ ಪ್ರಭಾವಿತರಾಗಿ ಇದಕ್ಕೆ ಗ್ಲಾಮರಸ್‌ ಟಚ್‌ ನೀಡಲು ಹಿಂಜರಿಯುವುದಿಲ್ಲ. ಸೀರೆ ಜೊತೆ ಮ್ಯಾಡರಿನ್‌ ಕಾಲರ್‌ ಬ್ಲೌಸ್‌, ಹಾಲ್ಟರ್‌ ನೆಕ್‌ ಬ್ಲೌಸ್‌, ಜಾಕೆಟ್‌, ಸ್ಲೀವ್ ಲೆಸ್ ಬ್ಲೌಸ್‌, ನೆಟ್‌ ಸ್ಲೀವ್ ವುಳ್ಳ ಬ್ಲೌಸ್‌ ಕ್ಯಾರಿ ಮಾಡುತ್ತಾ ಸಾಕಷ್ಟು ಬೋಲ್ಡ್ ಸ್ಟೈಲಿಶ್‌ ಎನಿಸುತ್ತಾರೆ.

ಫ್ಯಾಷನ್‌ : ಎಲ್ಲರ ಮೇಲೂ ಪ್ರಭಾವ

ಈಗ ಹೆಂಗಸರು ತಮ್ಮ ಮೇಲೆ ವಯಸ್ಸಿನ ಪ್ರಭಾವ ಆಗುವುದಕ್ಕೆ ಬಿಡುವುದಿಲ್ಲ. ಇಂದಿನ ಕಾಲದಲ್ಲಿ ಫ್ಯಾಷನ್ನಿನ ಬದಲಾವಣೆಯ ಪರಿಣಾಮ ಪ್ರತಿಯೊಬ್ಬ ವಯಸ್ಸಿನವರ ಮೇಲೂ ಆಗುತ್ತದೆ. ಅಮ್ಮ, ಅವರ ಅಕ್ಕ, ತಂಗಿ, ಅತ್ತೆ, ಅಜ್ಜಿ..... ಹಿಂದೆಲ್ಲ ಕೇವಲ ಸೀರೆಗಳಲ್ಲಿ ಅಥವಾ ಚೂಡಿದಾರ್‌ಗಳಲ್ಲಿ ಮಾತ್ರ ಕಾಣಿಸುತ್ತಿದ್ದರು. ಈಗ ಅವರೂ ಸಹ ತಮ್ಮ ಮಗಳು, ಸೊಸೆಯರ ತರಹವೇ ಮಾಡರ್ನ್ ಆಗಿ ಕಾಣಿಸಲು ಬಯಸುತ್ತಾರೆ. ಇವರಲ್ಲಿ ಎಷ್ಟೋ ಮಂದಿ ಜೀನ್ಸ್, ಟ್ರೌಸರ್ಸ್‌, ಟೀಶರ್ಟ್‌, ಫುಲ್ ಶರ್ಟ್‌ಗಳಲ್ಲಿ ಕಂಫರ್ಟೆಬಲ್ ಎನಿಸುತ್ತಾರೆ. ಆ ಮೂಲಕ ಮತ್ತಷ್ಟು ಯಂಗ್‌ ಆಗಬಯಸುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ