1964ರಲ್ಲಿ ತನ್ನ ಮೊದಲ ಮಳಿಗೆಯನ್ನು ತೆರೆದಾಗಿನಿಂದಲೂ ಜಿಆರ್‌ಟಿ ಜ್ಯುವೆಲ್ಲರ್ಸ್‌ ಚಿನ್ನಾಭರಣಗಳ ಕ್ಷೇತ್ರದಲ್ಲಿ ಅತ್ಯಂತ ವಿಶ್ವಾಸಾರ್ಹ ಹೆಸರಾಗಿ ಮೂಡಿಬಂದಿದೆ. ಇಂದು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ತೆಲಂಗಾಣಗಳಂತಹ ದಕ್ಷಿಣ ಭಾರತ ರಾಜ್ಯಗಳ 44ಕ್ಕೂ ಅಧಿಕ ಮಳಿಗೆಗಳಲ್ಲಿ ಜನರಿಗೆ ಚಿನ್ನ, ವಜ್ರ, ಪ್ಲಾಟಿನಮ್ ಮತ್ತು ಬೆಳ್ಳಿಯ ಆಭರಣಗಳು ಹಾಗೂ ಸಾಮಗ್ರಿಗಳ ಖರೀದಿಗೆ ಅಚ್ಚುಮೆಚ್ಚಿನ ತಾಣವಾಗಿ ರೂಪುಗೊಂಡಿದೆ. ಗ್ರಾಹಕರ ಸಂತುಷ್ಟಿಗಾಗಿ ವೈಯಕ್ತಿಕವಾಗಿ ಗಮನವಹಿಸುವುದರ ಜೊತೆಗೆ ವಿಶೇಷ ಸಂದರ್ಭ ಮತ್ತು ದೈನಂದಿನ ಬಳಕೆಗಾಗಿ ಪರಿಣಿತರಿಂದ ವಿಶೇಷವಾಗಿ ವಿನ್ಯಾಸಗೊಳಿಸಲ್ಪಟ್ಟ ಮತ್ತು ವಿಶಾಲ ಶ್ರೇಣಿಯ ಸಂಗ್ರಹಗಳ ಸಮರ್ಪಣೆ ಈ ಒಂದು ಅಭೂತಪೂರ್ವ ಯಶಸ್ಸಿಗೆ ಕಾರಣವಾದುದು ಎಂಬುದು ಸಂಸ್ಥೆಯ ಸಂಸ್ಥಾಪಕರ ಅಭಿಪ್ರಾಯ. ಈಗ ಜಿಆರ್‌ಟಿ ಜ್ಯುವೆಲ್ಲರ್ಸ್‌, ಪ್ರಸ್ತುತ ಆಷಾಢ ಮಾಸದ ಕೊಡುಗೆಯಾಗಿ ತನ್ನ ಕೊಡುಗೆಗಳ ಮತ್ತೊಂದು ಬತ್ತಳಿಕೆಯನ್ನು ನೀಡುವುದರ ಮೂಲಕ ಗ್ರಾಹಕರಿಗೆ ಮಗದೊಂದು ಸಂಭ್ರಮದ ಸದವಕಾಶವನ್ನು ಒದಗಿಸುತ್ತಿದೆ.

ಧಾರ್ಮಿಕ ಪಂಚಾಂಗದ ಪ್ರಕಾರ, ದಕ್ಷಿಣ ಭಾರತೀಯರಿಗೆ ಆಷಾಢ ಮಾಸ ಹಾಗೂ ಮಾನ್ಸೂನ್‌ ಋತುವನ್ನು ವಿಶೇಷವಾಗಿ ಆಚರಿಸುತ್ತಾರೆ. ಧಾರ್ಮಿಕ ಆಚರಣೆ ಮತ್ತು ಸಂಭ್ರಮಗಳಿಗೆ ಹೊಂದಿಕೊಂಡಿರುವ ಪವಿತ್ರವಾದ ಅವಧಿ ಇದಾಗಿದೆ. ಈ ಸಂದರ್ಭಕ್ಕೆ ವರ್ಷದ ಸಮೃದ್ಧಿಯ ಸಮಯ ಎಂಬ ಪ್ರತೀತಿಯೂ ಸಹ ಇದೆ. ಅತ್ಯಂತ ವಿಶೇಷವಾದ ಆಷಾಢ ಮಾಸವನ್ನು ಸಂಭ್ರಮಿಸುವ ಈ ಸಂದರ್ಭದಲ್ಲಿ ಗ್ರಾಹಕರಿಗೆ ತಮ್ಮ ನೆಚ್ಚಿನ ಆಭರಣಗಳನ್ನು ನೋಡಿ ಆನಂದಿಸುವ ಮತ್ತು ಖರೀದಿಸುವುದರ ಜೊತೆಗೆ ಉಡುಗೊರೆಗಳನ್ನು ಮನೆಗೆ ಕೊಂಡೊಯ್ಯುವ ಸದವಕಾಶವನ್ನು ನೀಡುವಂತಹ ಚಿನ್ನ ಮತ್ತು ವಜ್ರಾಭರಣಗಳ ಪ್ರಚಾರಾಂದೋಲನವನ್ನು ಜಿಆರ್‌ಟಿ ಜ್ಯುವೆಲ್ಲರ್ಸ್‌ ಆರಂಭಿಸಿದೆ. ದಕ್ಷಿಣ ಭಾರತದ ಯಾವುದೇ ಜಿಆರ್‌ಟಿ ಮಳಿಗೆಗಳಲ್ಲಿ ಎಲ್ಲಾ ವಜ್ರಾಭರಣಗಳ ಮೇಲೆ 15%ರವರೆಗೆ ರಿಯಾಯಿತಿ ಮತ್ತು ಆಕರ್ಷಕವಾದ ವಜ್ರದ ನೆಕ್‌ಲೇಸ್‌ ಮತ್ತು ಮನಮೋಹಕವಾದ ವಜ್ರದ ನೆಕ್‌ಲೇಸ್‌ ಸೆಟ್‌ಗಳ ಮೇಲೆ ವಿಶೇಷ ರಿಯಾಯಿತಿಯೊಂದಿಗೆ ಸಹ ಈ ಕ್ಯಾಂಪೇನ್‌ ಪ್ರಾರಂಭಗೊಂಡಿರುತ್ತದೆ.

ಜಿಆರ್‌ಟಿ ಜ್ಯುವೆಲ್ಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಆರ್‌. ಅನಂತಪದ್ಮನಾಭನ್‌ರವರು ಮಾತನಾಡುತ್ತಾ, ``ಜಿಆರ್‌ಟಿ ಜ್ಯುವೆಲ್ಲರ್ಸ್‌ನಲ್ಲಿ ನಮ್ಮೆಲ್ಲ ಗ್ರಾಹಕರಿಗೆ ಅತ್ಯುತ್ತಮವಾದ ಸಂಗ್ರಹ, ವಿನ್ಯಾಸ ಮತ್ತು ಕೊಡುಗೆಗಳನ್ನು ಒದಗಿಸುವುದು ನಮ್ಮ ನಿರಂತರ ಕಾಯಕ. ವಿವಿಧ ಯೋಜನೆಗಳು ಮತ್ತು ಕೊಡುಗೆಗಳ ಮುಖಾಂತರ ನಮ್ಮೆಲ್ಲಾ ಗ್ರಾಹಕರಿಗೆ ಸರಿಸಾಟಿಯಿಲ್ಲದಂತಹ ಸಂತೋಷ ದೊರಕಿಸುವುದಕ್ಕಾಗಿ ಅವರಿಗೆ ನಮ್ಮ ಆಭರಣಗಳು ಸುಲಭವಾಗಿ ದೊರಕುವಂತೆ ಮಾಡುವಲ್ಲಿಯೂ ಸಹ ನಾವು ಕಾರ್ಯೋನ್ಮುಖರಾಗಿದ್ದೇವೆ. ಈಗ ನಾವು ಅತ್ಯಂತ ಪವಿತ್ರವಾದ ಆಷಾಢ ತಿಂಗಳಿನಲ್ಲಿ ಈ ಒಂದು ವಿಶೇಷವಾದ ಕ್ಯಾಂಪೇನ್‌ನ್ನು ಪ್ರಾರಂಭಿಸುತ್ತಿದ್ದೇವೆ ಮತ್ತು ನಮ್ಮೆಲ್ಲಾ ಗ್ರಾಹಕರ ಈ ಸಮಯದ ಸಂಭ್ರಮಾಚರಣೆಯ ಸಂತಸಕ್ಕೆ ನಮ್ಮ ಕ್ಯಾಂಪೇನ್‌ ಒಂದು ಮೆರುಗಾಗಿ ಮಾರ್ಪಡಲಿದೆ ಎಂಬ ವಿಶ್ವಾಸ ನನ್ನದು,'' ಎಂದು ಹೇಳಿದರು. ಜಿಆರ್‌ಟಿ ಜ್ಯುವೆಲ್ಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಆರ್‌. ರಾಧಾಕೃಷ್ಣನ್‌ರವರು ಮಾತನಾಡುತ್ತಾ, ``ಜಿ.ಆರ್‌.ಟಿಯಲ್ಲಿ ನಾವು ನಮ್ಮ ಗ್ರಾಹಕರನ್ನು ಸಂತೋಷಗೊಳಿಸಲು ಸದಾ ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಾ ಬಂದಿದ್ದೇವೆ. ಅದು ಹೊಸ ಸಂಗ್ರಹಗಳ ಮುಖಾಂತರವಾಗಿರಲಿ ಅಥವಾ ವಿಶೇಷ ಕೊಡುಗೆಗಳ ರೂಪದಲ್ಲಿ ಅಥವಾ ಇನ್ನೂ ಹಲವು ಮಾರ್ಗಗಳ ಮುಖಾಂತರ. ಉದಾ : ನಮ್ಮ ಇತ್ತೀಚಿನ ಪ್ರಕ್ರಿಯೆಗಳಲ್ಲಿ ಒಂದಾದ ರೂ.5499/ ರಿಂದ ಆರಂಭಗೊಳ್ಳುವ ಓರಿಯಾನಾ ಸಂಗ್ರಹ, ಇದು ಉತ್ಕೃಷ್ಟ ಲೈಟ್‌ ವೆಯ್ಟ್ ಮತ್ತು ಆಕರ್ಷಕ ವಿನ್ಯಾಸಗಳೊಂದಿಗೆ ದೈನಂದಿನ ಬಳಕೆಗೆ ಸೂಕ್ತವಾಗುವಂತದ್ದು ಮತ್ತು ಇದನ್ನು ಇನ್‌ಸ್ಟೋರ್‌ನಲ್ಲಿ ಆನ್‌ಲೈನ್‌ಗಳ ಮುಖಾಂತರ ಸಹ ಪಡೆಯಬಹುದು. ಈಗ ನಾವು ಅತ್ಯಂತ ವಿಶೇಷವಾದ ಆಷಾಢವನ್ನು ಆಚರಿಸುತ್ತಿರುವುದರಿಂದ, ನಮ್ಮ ಗ್ರಾಹಕರಿಗೆ ಪ್ರತಿಯೊಂದು ಖರೀದಿಯ ಮೇಲೆ ಆಕರ್ಷಕ ಉಡುಗೊರೆಗಳನ್ನು ನೀಡಲು ನಮಗೆ ಸಂತೋಷವೆನಿಸುತ್ತದೆ. ಈ ಕ್ಯಾಂಪೇನ್‌ನಿಂದಾಗಿ ಅವರ ಸಂತಸ ಇಮ್ಮಡಿಗೊಳ್ಳುವುದೊಂದೇ ಅಲ್ಲದೆ ನಮ್ಮ ಗ್ರಾಹಕರ ಆಭರಣ ಸಂಗ್ರಹಗಳೂ ಇಮ್ಮಡಿಗೊಳ್ಳಲಿವೆ ಎಂಬ ವಿಶ್ವಾಸ ನಮಗಿದೆ,'' ಎಂದು ಹೇಳಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ