ವಿಷ ಖುಲ್ಲಂಖುಲ್ಲ  ಮಾರಾಟವಾಗುತ್ತಿದೆ!

ಡೆಹರಾಡೂನ್‌ ನಗರದಲ್ಲಿ ರಾತ್ರಿ ಹೊತ್ತು, ಅತಿ ವೇಗವಾಗಿ ಚಲಿಸುತ್ತಿದ್ದ ಅತ್ಯಾಧುನಿಕ ಕಾರೊಂದು, ಅಲ್ಲಿನ ಪ್ರಮುಖ ಸರ್ಕಲ್ ಒಂದರ ಬಳಿ ಬರುತ್ತಿದ್ದ ಟ್ರಕ್‌ ಗೆ ಡಿಕ್ಕಿ ಹೊಡೆದು ಘನಘೋರ ಅಪಘಾತವಾಗಿ, ಆ ಸ್ಪಾಟ್‌ ನಲ್ಲೇ 5 ಮಂದಿ ತೀರಿಹೋದರು. 6ನೇ ವ್ಯಕ್ತಿ ಆಸ್ಪತ್ರೆ ತಲುಪುತ್ತಿದ್ದಂತೆ ಸತ್ತ. ಇದರಿಂದ ಸ್ಪಷ್ಟವಾಗುವುದು ಅಂದ್ರೆ ಹೆಂಡ ಕುಡಿದು ಅತಿಯಾದ ಬಿ‌ಪಿ ಹೆಚ್ಚಿಸಿಕೊಂಡು, ಡಿಪ್ರೆಶನ್‌ ಗೆ ಇಳಿದು, ವಿವೇಕಶೂನ್ಯರಾಗಿ ಹೀಗೆ ಅಪಘಾತ ಮಾಡುತ್ತಾರೆ ಎಂಬುದು. ನಮ್ಮ ದೇಶದ ಅತಿ ದೊಡ್ಡ ವಿಡಂಬನೆ ಎಂದರೆ ಈ ಹೆಂಡವೆಂಬ ವಿಷ ಖುಲ್ಲಂಖುಲ್ಲ ಎಲ್ಲೆಡೆ ಸೇಲ್ ‌ಆಗುತ್ತಿರುವುದು! ಇದನ್ನು ಕುಡಿದು ಮತ್ತೇರಿಸಿಕೊಳ್ಳುವವರಿಗೆ ಗನ್‌, ರಿವಾಲ್ವರ್‌ ಗಳ ಲೈಸೆನ್ಸ್ ಏನೂ ಬೇಡ, ಯಾವ ಡಾಕ್ಟರ್‌ ಬಳಿ ಚಿಕಿತ್ಸಾ ಚೀಟಿಯೂ ಬೇಡ, ಗಾಡಿ ಹತ್ತಿ ರೋಡಿಗಿಳಿದರೆ ಯಮದೂತರೂ ನಾಚಬೇಕು!

ಈಗ ವಿಶ್ವದೆಲ್ಲೆಡೆಯ ವೈದ್ಯರ ಒಂದೇ ಸಲಹೆ ಎಂದರೆ, ಒಂದಿಷ್ಟು ಅಲ್ಪ ಪ್ರಮಾಣದ ಹೆಂಡ ಖಂಡಿತಾ ಒಳ್ಳೆಯದಲ್ಲ. ಹೆಂಡದ ಗುಣಗಾನ ಮಾಡುತ್ತಾ ಅದನ್ನು ಎಲ್ಲೆಡೆ ಹರಡುವರು, ಅದರ ಸೇಲ್ ಹೆಚ್ಚಲಿ ಎಂದು ಮಾತ್ರ ನೋಡುತ್ತಾರಷ್ಟೆ. ಇಷ್ಟೆಲ್ಲ ಆದರೂ ಹೆಂಡ ಘನಂದಾರಿಯಾಗಿ ಸೇಲ್ ‌ಆಗುತ್ತಿದೆ ಅಂದ್ರೆ, ಇದಕ್ಕೆ ಮೂಲಕಾರಣ, ಇದರ ಮಾರಾಟದಿಂದ, ಸರ್ಕಾರಕ್ಕೆ ಸಿಗುತ್ತಿರುವ ಟ್ಯಾಕ್ಸ್. ಅನಾದಿಕಾಲದಿಂದಲೂ ರಾಜರು, ಧರ್ಮಕ್ಕೂ ಖಂಡಿತಾ ಇದರಿಂದ ಹೆಚ್ಚಿನ ಲಾಭವಿದೆ ಎಂಬುದು ನಿರ್ವಿವಾದ. ಹೆಂಡದ ಮೇಲೆ ಅಧಿಕ ತೆರಿಗೆ ಹೇರುವುದೇನೋ ಸುಲಭ, ಏಕೆಂದರೆ ಹೆಂಡದ ತಯಾರಿಕೆಯಿಂದ ಇದರ ದುರ್ವಾಸನೆ ಎಲ್ಲೆಡೆ ಖಂಡಿತಾ ಹರಡುತ್ತದೆ. ಹಾಗಾಗಿ ಅದು ಎಲ್ಲಿ ತಯಾರಾಗುತ್ತಿದೆ ಎಂಬುದು ಎಲ್ಲರಿಗೂ ಸುಲಭವಾಗಿ ಗೊತ್ತಾಗುತ್ತದೆ, ಹಾಗಾಗಿ ಅದರಿಂದ ಟ್ಯಾಕ್ಸ್ ವಸೂಲಿ ಸುಲಭ. ಹೀಗಾಗಿ ಸಣ್ಣ, ಅತಿ ಸಣ್ಣ ಮಾತ್ರವಲ್ಲದೆ, ಬೃಹತ್‌ ಕೈಗಾರಿಕೆಗಳವರೆಗೂ ಈ ಹೆಂಡದ ತಯಾರಿಗೆ ಕುಮ್ಮಕ್ಕಿದೆ. ಇಡೀ ದೇಶದಲ್ಲಿ ಹಲವಾರು ಜನರಿಂದ ವಸೂಲಿ ಮಾಡಬಹುದಾದ ದೊಡ್ಡ ಮೊತ್ತದ ತೆರಿಗೆ, ಈ ಕೆಲವೇ ಕಾರ್ಖಾನೆಗಳಿಂದ ಸುಲಭವಾಗಿ ಬರುತ್ತದೆ.

ಟ್ಯಾಕ್ಸ್ ಮಾತ್ರವಲ್ಲದೆ, ಹೆಂಡದ ಮತ್ತೊಂದು ದೊಡ್ಡ ಲಾಭ ಎಂದರೆ, ಇದನ್ನು ಕುಡಿಸುವ ರಾಜನ ಸೈನಿಕರು ಸಾಯಲು, ಸಾಯಿಸಲು ಧಾವಿಸಿ ಬರುತ್ತಿದ್ದರು. ಪ್ರತಿ ಯುದ್ಧದಲ್ಲೂ ರಾಜ ಧಾರಾಳವಾಗಿ ಹೆಂಡ ಕುಡಿಸುತ್ತಿದ್ದ. ಇದರಿಂದ ಮತ್ತಿನಲ್ಲಿ ಮೈಮರೆತ ಸೈನಿಕರು ಗಂಟೆಗಟ್ಟಲೇ ಹೋರಾಡುತ್ತಿದ್ದರು, ಅವರಿಗೆ ಗಾಯವಾದರೂ ತಿಳಿಯದೆ ಹೋರಾಡಿ ಸಾಯುತ್ತಿದ್ದರು. ಪ್ರತಿ ಯುದ್ಧದಲ್ಲೂ ಎರಡೂ ಪಕ್ಷಗಳ ಸೈನಿಕರು ಸದಾ ನಶೆಯಲ್ಲೇ ಓಲಾಡುತ್ತಿದ್ದರು, ಆಗ ಮಾತ್ರ ಹೋರಾಡಲು ಅವರಿಗೆ ಹುಮ್ಮಸ್ಸು ಬರುತ್ತಿತ್ತು. ಹೀಗೆ ಸೈನಿಕರು ಹೆಂಡದ ದಾಸರಾದ ಕಾರಣ, ರಾಜ ಅವರಿಗೆ ಕೊಡಬೇಕಾದ ಸಂಬಳದ ಜೊತೆ ಇದನ್ನು ಬಿಟ್ಟಿ ಹಂಚುತ್ತಿದ್ದ, ಹೀಗಾಗಿ ಸೈನಿಕರ ದಂಡು ಎಂದೂ ಕಡಿಮೆ ಆಗುತ್ತಿರಲಿಲ್ಲ.

ಯಾವ ಧರ್ಮ ಎಂದೂ ಹೆಂಡ ಕುಡಿಯಬೇಡಿ ಎಂದು ಎಲ್ಲೂ ತಡೆಹಾಕಲಿಲ್ಲ. ಹೆಂಡದ  ಕಾರಣ ಗಂಡಸರಿಂದ ಸದಾ ಹೊಡೆತ ತಿನ್ನುವ, ಅತ್ಯಾಚಾರಕ್ಕೆ ಒಳಗಾಗುವ ಕರ್ಮ ಹೆಂಗಸರಿಗೆ ತಪ್ಪಲಿಲ್ಲ. ಎಷ್ಟೋ ಸಲ ಅವರೂ ಈ ಧರ್ಮದ ಗ್ರಾಹಕರೇ ಆಗಿಹೋಗಿದ್ದಾರೆ, ಈಗಲೂ ಸಹ. ಗಂಡನ ಹೆಂಡದ ಹುಚ್ಚಿನಿಂದಾಗಿ ಅವನ ಹೆಂಡತಿ ಮಕ್ಕಳು ಉಪವಾಸ ಸಾಯುವುದು ತಪ್ಪುವುದಿಲ್ಲ. ಇಂಥ ವಿಷ ಕುಡಿದು ಗಂಡ ಸತ್ತರೆ, ಆ ವಿಧವೆಯರು ಧರ್ಮದ ದೃಷ್ಟಿಯಲ್ಲಿ ಇನ್ನಷ್ಟು ದುರಾಚಾರಕ್ಕೆ ಗುರಿಯಾಗುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ