ಕಲೆ ಪ್ರದರ್ಶಿಸುವ ಅವಕಾಶ : ಡೌನ್‌ ಸಿಂಡ್ರೋಂ ರೋಗಗಳಿಗೆ ತುತ್ತಾದವರನ್ನು ಇತ್ತೀಚೆಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ಒದಗಿಸಿ ನೋಡಿಕೊಳ್ಳ ತೊಡಗಿದ್ದಾರೆ, ಆದರೆ ಈಗಲೂ ಇಂಥಕ್ಕೆ ಸಾಮಾಜಿಕ ಸ್ವೀಕೃತಿ ಇಲ್ಲ. ದುಬೈನ ಫೇಮ್ ಹೆಸರಿನ ಸಂಸ್ಥೆ, ಈ ಕುರಿತಾಗಿ ವಾರ್ಷಿಕ ಕಾರ್ಯಕ್ರಮ ನಡೆಸಿಕೊಡಲು ಶುರು ಮಾಡಿದೆ. ಇದರಲ್ಲಿ ಯುವಜನತೆಗೆ ತಮ್ಮ ಗ್ಲಾಮರಸ್‌ ಡ್ಯಾನ್ಸ್, ಮ್ಯೂಸಿಕ್‌, ನಾಟಕಗಳನ್ನು ಪ್ರದರ್ಶಿಸಲು ಒಂದು ಉತ್ತಮ ವೇದಿಕೆ ಸಿಗುತ್ತಿದೆ. ಈ ಕಾರ್ಯಕ್ರಮಗಳಿಂದ ಬರುವ ಆರ್ಥಿಕ ಲಾಭವನ್ನು ಅಲ್ಲಿ ಇಂಥ ರೋಗಿಗಳಿಗೆ ಬಳಸಿಕೊಳ್ಳುವುದು ಮಾತ್ರವಲ್ಲದೆ, ಅವರ ಆತ್ಮವಿಶ್ವಾಸ ಹೆಚ್ಚಿಸುವಲ್ಲಿಯೂ ಈ ಕಲೆ ಪ್ರಧಾನ ಪಾತ್ರ ವಹಿಸುತ್ತಿದೆ.

juana-martin-1

ಧೈರ್ಯ ಕಳೆದುಕೊಳ್ಳಬೇಡಿ : ಸ್ಪೇನಿನ ಜುಲಾನಾ ಮಾರ್ಟಿನ್‌ ತನ್ನ ಬ್ರಾಂಡ್‌ ನ 25ನೇ ವಾರ್ಷಿಕೋತ್ಸವದ ಸಲುವಾಗಿ ಸ್ಪೆಷಲ್ ಫ್ಯಾಷನ್‌ ಶೋ ನಡೆಸುತ್ತಿದ್ದಾಳೆ. ಈಕೆ ಅಲ್ಲಿ ಬ್ಲ್ಯಾಕ್‌ವೈಟ್‌ ನ್ನು ಸಹ ಕಲರ್‌ ಫುಲ್ ಮಾಡಬಲ್ಲಳು ಎಂಬುದೊಂದೇ ವಿಶೇಷ ಅಲ್ಲ, ಹೆಂಗಸಾಗಿದ್ದುಕೊಂಡೂ ಸಹ, ತನ್ನ ಬ್ರಾಂಡ್‌ ನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತರಬಲ್ಲಳು ಎಂಬುದೇ ಇಲ್ಲಿನ ವೈಶಿಷ್ಟ್ಯ. ಹೆಣ್ಣು ಈ ರೀತಿ ಧೈರ್ಯಗೆಡದೆ ಎದೆಗುಂದದೆ ಮುನ್ನುಗ್ಗಿದ್ದಲ್ಲಿ, ಎಲ್ಲಾ ಸಮಸ್ಯೆಗಳಿಂದಲೂ ಹೊರ ಬರಲು ಸಾಧ್ಯ!

martha-barrantes-4

ನಮ್ಮಿಂದಲೇ ಪ್ರತಿಭೆ ಕಲಿಯಿರಿ : ಬಿಸ್‌ ನೆಸ್‌ ನಡೆಸುವ ಕಲೆ ಕೇವಲ ಗಂಡಸರದ್ದು ಮಾತ್ರ ಎಂದುಕೊಳ್ಳಬೇಡಿ. ಕೋಸ್ಟರಿಕಾದ ಮಾರ್ಥೊ ಬೆರೆನೆಟ್ಸ್ ಈ ಸಣ್ಣ ದೇಶದಲ್ಲಿ ಬಲು ಜಾಣ್ಮೆಯಿಂದ, ವಿವೇಕಶಾಲಿಯಾಗಿ ಬಿಸ್‌ ನೆಸ್‌ ನಡೆಸುವುದು ಹೇಗೆಂದು ಅಲ್ಲಿನ ಗಂಡಸರಿಗೂ ಕಲಿಸುತ್ತಿದ್ದಾಳೆ. ಇನ್ನಾದರೂ ನಮ್ಮ ದೇಶದ ಹೆಂಗಸರು, ಪೂಜೆ ಪುನಸ್ಕಾರ ಸಂಪ್ರದಾಯ ಎಂದು ಕೂರದೆ, ಆಧುನಿಕ ಟೆಕ್ನಾಲಜಿ ಬಳಸಿಕೊಂಡು ಬಿಸ್‌ ನೆಸ್‌ ನಡೆಸುವುದು ಹೇಗೆ ಎಂದು ಯೋಚಿಸಬೇಕಿದೆ.

ghost-tour-guide-selfie

ಹುಚ್ಚುತನ ಎಲ್ಲೆಡೆ ತುಂಬಿದೆ : ನೀವೇನಾದರೂ ಅಮೆರಿಕಾವನ್ನು ಬಲು ಆಧುನಿಕ ವಿಚಾರಧಾರೆಯುಳ್ಳ, ತಾರ್ಕಿಕ, ರೇಶನಲಿಸ್ಟ್ ಸಮಾಜ ಎಂದುಕೊಂಡಿದ್ದರೆ, ಅದನ್ನು ಮರೆತುಬಿಡಿ. ಅಲ್ಲಿ ಹೆಚ್ಚು ಮಂದಿ ಜನತೆ ನಮ್ಮಲ್ಲಿ ನಡೆಯುವಂಥ ಜಾದೂ, ಪವಾಡ, ಚಮತ್ಕಾರಗಳಿಗೂ ಮಿಗಿಲಾಗಿ ದೆವ್ವ ಭೂತ ನಂಬುವರು. ಅತ್ಯುತ್ತಮ ಚಿಂತಕರು, ವಿಚಾರಶೀಲರು, ವಿಜ್ಞಾನಿಗಳೆಲ್ಲ ಇಲ್ಲಿ ತುಂಬಿದ್ದು ಆ ಮೂಲಕ ಆ ದೇಶ ಪ್ರಗತಿಪರ ಎನಿಸಿದೆ. ಆದರೆ ಈಗ ಪ್ರಗತಿಪರ ವಿಚಾರಗಳು ತಿರುಗುಬಾಣವಾಗಿವೆ. `ಘೋಸ್ಟ್ ಟೂರಿಸಂ'ನಂಥ ಸ್ಟಂಟ್‌ ಗಳು ಅಲ್ಲೀಗ ಸೇಲ್ ‌ಆಗುತ್ತಿವೆ, ನಮ್ಮಲ್ಲಿ `ಸ್ತ್ರೀ, ಭೂಲ್ ‌ಭುಲೈಯಾ' ಚಿತ್ರಗಳಲ್ಲಿ ಆಗಿದ್ದೂ ಅದೇ! ಈ ಭೂತ ಬಿಡಿಸುವವರು ಅಲ್ಲಿನ ಸಣ್ಣಪುಟ್ಟ ನಗರಗಳಲ್ಲಿ ಬೀಡುಬಿಟ್ಟಿದ್ದು, ಆ ದೇಶದ ಎಲ್ಲೆಡೆ ಪ್ರಭಾವ ಬೀರುವಲ್ಲಿ ಸಮರ್ಥಕರಾಗಿದ್ದಾರೆ. ಹುಚ್ಚುತನ ಎಲ್ಲಿಲ್ಲ ಹೇಳಿ?!

chips-gcbc

ಪರಿಶ್ರಮ ಅತ್ಯಗತ್ಯ : ನಮ್ಮಲ್ಲಿ ದಲಿತರು ಕಷ್ಟಪಡುತ್ತಿರುವಂತೆಯೇ ಅಮೆರಿಕಾದಲ್ಲಿ ಕರಿಯರು ನರಳುತ್ತಿದ್ದಾರೆ. ನ್ಯೂಯಾರ್ಕ್ ನಗರದಲ್ಲಿ 22% ಕರಿಯರೇ ತುಂಬಿದ್ದು, ಬಿಸ್‌ ನೆಸ್‌ ಮಾತ್ರ ಕೇವಲ 2% ಮಂದಿಗಷ್ಟೇ ಇದೆ. ಇದೀಗ ಬ್ಲ್ಯಾಕ್‌ ಬ್ಯೂಟೀಸ್‌ ಗಾಗಿ ಬ್ಲ್ಯಾಕ್‌ ಬಿಸ್‌ ನೆಸ್‌ ವುಮನ್‌ ಮುಂದೆ ಬರುತ್ತಿದ್ದಾರೆ. ಅಲ್ಲಿನ ಒಂದು ಸ್ಪೆಷಲ್ ಮಾರ್ಕೆಟ್‌ ನಲ್ಲಿ ಕೇವಲ ಕರಿಯರು ಮಾತ್ರವೇ ಸ್ಟಾಲ್ ಹಾಕಿದ್ದರು. ಪ್ರತಿ ಸಲ ಕಷ್ಟ ಬಂದಾಗೆಲ್ಲ ಕಂಬನಿ ಸುರಿಸುವ ಬದಲು, ಏನೇ ಆಗಲಿ, ಎಷ್ಟೇ ಕಷ್ಟ ಬರಲಿ, ಬಿಸ್‌ ನೆಸ್‌ ನ್ನು ತಮ್ಮ ಕೈಯಲ್ಲಿ ಹಿಡಿದು ಹೀಗೆ ಧೈರ್ಯದಿಂದ ಮುನ್ನುಗ್ಗಬೇಕಷ್ಟೆ. ಕೇವಲ ಮೀಸಲಾತಿ ಒಂದನ್ನೇ ನಂಬಿಕೊಂಡಿದ್ದರೆ, ಯಾವ ಸಮಾಜ ಮುಂದುವರಿಯವುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ