ಹೊಸ ವರ್ಷದ ಈ ಕೊಡುಗೆ ಬ್ರಾಲೆಟ್ ನಿಮ್ಮ ಹಳೆಯ ಬ್ರಾಗಿಂತ ಹೇಗೆ ವಿಭಿನ್ನ ಎಂದು ತಿಳಿಯೋಣವೇ......?
ನಟಿ ಅನನ್ಯಾ ಪಾಂಡೆ ತನ್ನ ಇತ್ತೀಚಿನ ಹೊಸ ವೆಬ್ ಸೀರೀಸ್ `ಕಾಲ್ ಮೀ ಬೇ'ನಲ್ಲಿ ಒಂದು ನಿಯಾನ್ ಬ್ಯಾಲನ್ಸಿಂಗ್ ಶರ್ಟ್ ಗೆ, ಒಂದು ಪ್ಲೇರ್ ರರಾ ಬ್ರಾಲೆಟ್ ಹಾಗೂ ಒಂದು ಕ್ವಿಲ್ ಟೆಡ್ ಲೆದರ್ ಸ್ಕರ್ಟ್ ಜೊತೆ ಧರಿಸಿ ಕ್ಯೂಟಾಗಿ ಮಿಂಚಿದಳು. ಇದನ್ನು ಇಂದಿನ ಆಧುನಿಕ ತರುಣಿಯರು ಬಹಳಷ್ಟು ಇಷ್ಟಪಡುತ್ತಿದ್ದಾರೆ. ಬಾಲಿವುಡ್ ನಲ್ಲಿ ಅನನ್ಯಾಳಿಂದ ಹಿಡಿದು ಜಾಹ್ನವಿಯವರೆಗೆ, ಬೇಲಾ ಹದೀದ್ ಳಿಂದ ಹಿಡಿದು ರೆಹಾನಾಳವರೆಗೆ, ಪ್ರತಿಯೊಬ್ಬರೂ ವಿಭಿನ್ನ ಮಾಡ್ ಡ್ರೆಸ್ ಗಳ ಜೊತೆ ಬ್ರಾಲೆಟ್ ಧರಿಸಿ, ಮಾಡ್ ಗ್ಲಾಮ್ ಲುಕ್ಸ್ ಪ್ರದರ್ಶಿಸುತ್ತಿದ್ದಾರೆ. ಹೀಗಾಗಿ ಇಂದಿನ ಆಧುನಿಕ ಫ್ಯಾಷನೆಬಲ್ ತರುಣಿಯರು ಇದನ್ನು ಹೆಚ್ಚು ಹೆಚ್ಚಾಗಿ ಫಾಲೋ ಮಾಡುತ್ತಿದ್ದಾರೆ.
ಅಸಲಿಗೆ `ಬ್ರಾಲೆಟ್' ಇದೀಗ ಕೇವಲ ಇನ್ನರ್ ವೇರ್ ಆಗಿ ಉಳಿದಿಲ್ಲ. ಅದಕ್ಕಿಂತ ಕೈ ಮುಂದುವರಿದು, ಆಧುನಿಕ ತರುಣಿಯರಿಗೆ, ಒಂದು ಸ್ಟೈಲಿಶ್ ಗ್ಲಾಮರಸ್ ಟಾಪ್ ಆಗಿ ಮೆರೆಯುತ್ತಿದೆ. ಇದು ದೈನಂದಿನ ಅದೇ ಯಾಂತ್ರಿಕ ಡ್ರೆಸ್ ಗಳಿಗಿಂತ ವಿಭಿನ್ನವಾಗಿ, ಸ್ಟೈಲಿಶ್, ಫ್ಯಾಷನೆಬಲ್, ಗ್ಲಾಮರಸ್ ಆಗಿ ಮಿಂಚಲು ಪ್ರಬಲ ಪ್ರೇರಣೆ ನೀಡುತ್ತಿದೆ. ಇದು ಒಂದು ಆರಾಮ ನೀಡುವ ಉಡುಗೆಯಾಗಿದ್ದು, ಕ್ಯಾಶ್ಯುಯೆಲ್‌ಡ್ರೆಸೀ ಲುಕ್ಸ್ ಎರಡೂ ಹೊಂದುವುದರಿಂದ, ಕಾಲಕ್ಕೆ ತಕ್ಕಂತೆ ಅತ್ಯಗತ್ಯ ಡ್ರೆಸ್ ಎನಿಸಿದೆ.
ಬ್ರಾ V/S ಬ್ರಾಲೆಟ್
ಬ್ರಾಲೆಟ್ ಎಂಬುದು ಬಲು ಲೈಟ್ ಆದ, ನೆಟೆಡ್ ಟಾಪ್ ಆಗಿದೆ. ಇದು ಸಾಂಪ್ರದಾಯಿಕ ಬ್ರಾಗಿಂತ ಅಧಿಕ ಆರಾಮದಾಯಕ ಎನಿಸುತ್ತದೆ, ತುಸು ಕಡಿಮೆ ಪ್ರಮಾಣದಲ್ಲಿ ಸ್ಟ್ರಕ್ಚರ್ಡ್ ಆಗಿರುತ್ತದೆ. ಆರಾಮದಾಯಕ ಆಗಿರಲಿ ಎಂದೇ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದನ್ನು ಒಂಟಿಯಾಗಿ ಯಾ ಲೇಯರ್ಡ್ ಔಟ್ ಫಿಟ್ ಜೊತೆ ಧರಿಸಬಹುದಾಗಿದೆ.
ಬ್ರಾ ಅಧಿಕ ಸ್ಟ್ರಕ್ಚರ್ಡ್‌ಪರ್ಫೆಕ್ಟ್ ಸಪೋರ್ಟ್ ನೀಡುವ ಇನ್ನರ್ ವೇರ್. ಆದರೆ ಬ್ರಾಲೆಟ್ ನಲ್ಲಿ ಕೇವಲ ಲೈಟ್ ಸಪೋರ್ಟ್ ಮಾತ್ರ ಇರುತ್ತದೆ. ಸ್ತನಕ್ಕೆ ಸಪೋರ್ಟ್‌ಶೇಪ್ ನೀಡಲೆಂದೇ ಬ್ರಾ ಧರಿಸಲಾಗುತ್ತದೆ, ಆದರೆ ಬ್ರಾಲೆಟ್ ಕೇವಲ ಒಂದು ಬ್ರಾ ಕ್ರಾಪ್ ಟಾಪ್, ವೈರ್ ಲೆಸ್, ಪ್ಯಾಡ್ ಲೆಸ್ ಆಗಿದ್ದು, ಅನಿವಾರ್ಯ ರೂಪದಲ್ಲಿ ಒಂದು ಸಾಧಾರಣ ಸ್ಲಿಪ್ ಆನ್ ನಂಥ ಡ್ರೆಸ್ ಆಗಿರುತ್ತದೆ. ಹೀಗಾಗಿಯೇ ಇಂದಿನ ಆಧುನಿಕ ತರುಣಿಯರಿಗೆ ಇದು ಅಚ್ಚುಮೆಚ್ಚಿನದಾಗಿದೆ.
ಬ್ರಾ ತಯಾರಿಕೆಗೆ ಟೆಕ್ನಾಲಜಿ ಅತ್ಯಗತ್ಯ ಬೇಕು. ಆದರೆ ಬ್ರಾಲೆಟ್ ನ್ನು ಅನ್ ಕನ್ವೆನ್ಶನ್ ಮೆಟೀರಿಯಲ್ಸ್ ನಿಂದ ರೂಪಿಸಲಾಗುತ್ತದೆ. ಸಾಮಾನ್ಯವಾಗಿ ಬ್ರಾ ವೈರ್ಡ್ ಆಗಿರುತ್ತದೆ, ಆದರೆ ಬ್ರಾಲೆಟ್ ನಲ್ಲಿ ವೈರ್ಸ್ ಇರುವುದಿಲ್ಲ. ಬ್ರಾಲೆಟ್ ನಲ್ಲಿ ಅನನ್ಯ ರೀತಿಯ ಕಟ್ಸ್ ಡಿಸೈನ್ಸ್ ಇರುತ್ತದೆ. ಬ್ರಾ ಯಾವಾಗಲೂ ಇನ್ನರ್ ವೇರ್ ಆಗಿ, ಮೇಲೊಂದು ಟಾಪ್ ಇದ್ದೇ ಇರುತ್ತದೆ. ಆದರೆ ಬ್ರಾಲೆಟ್ ನ್ನು ಸ್ಟೈಲಿಶ್, ಸ್ಮಾರ್ಟ್ ಲುಕ್ಸ್. ಗ್ಲಾಮರ್ ಗಾಗಿ ಧರಿಸಲಾಗುತ್ತದೆ. ಬ್ರಾಲೆಟ್ ನ್ನು ಕ್ರಾಪ್ ಟಾಪ್ ಆಗಿಯೂ ಬಳಸಬಹುದು. ಇದು ಬಹಳಷ್ಟು ಕಂಫರ್ಟೆಬಲ್ ಆಗಿದ್ದು, ಇದರಲ್ಲಿ ಪ್ಯಾಡಿಂಗ್, ವೈರ್ಸ್, ಟೈಟ್ ಬಟ್ಟೆಗಳ ಹಿಂಸೆ ಇರುವುದಿಲ್ಲ. ಬ್ರಾಲೆಟ್ಸ್ ಹಲವು ತರಹದ ಟೆಕ್ಸ್ ಚರ್‌ಮೇಕ್ ನಲ್ಲಿ ಸಿಗುತ್ತದೆ. ಹೆಚ್ಚು ಓಪನ್ ಮೈಂಡೆಡ್ ಆಗಿರುವ, ಮುಕ್ತ ಲೈಫ್ ಸ್ಟೈಲ್ ಗಾಗಿ ಪಾರ್ಟಿ ಎಂಜಾಯ್ ಮಾಡಬಯಸುವ ಗ್ಲಾಮರಸ್ ಸ್ಟೈಲ್ ನವರಿಗಾಗಿಯೇ, ಇವು ಫಂಕಿ ಪ್ರಿಂಟ್ಸ್ ನಲ್ಲಿ ಸಿಗುತ್ತವೆ.





