ಸಾಮಾನ್ಯವಾಗಿ ಮಹಿಳೆಯರು ತಮ್ಮ ಔಟ್‌ಫಿಟ್‌ಗೆ ಹೊಂದಿಕೆಯಾಗುವಂತಹ ನೇಲ್ ಪೇಂಟ್ ಆರಿಸಿಕೊಳ್ಳುತ್ತಾರೆ. ಆ ಉಡುಪಿನೊಂದಿಗೆ ಅದು ಸುಂದರವಾಗಿ ಕಾಣುತ್ತದೆ ನಿಜ. ಆದರೆ ಬೇರೆ ಔಟ್‌ಫಿಟ್ ಧರಿಸಿದಾಗ ಅದರ ಸೌಂದರ್ಯವೆಲ್ಲ ಇಲ್ಲದಂತಾಗುತ್ತದೆ.
ಆದ್ದರಿಂದ ನೇಲ್ ಪೇಂಟ್‌ನ ಆಯ್ಕೆಯನ್ನು ಉಡುಪಿಗೆ ತಕ್ಕಂತೆ ಮಾಡದೆ ಸ್ಕಿನ್ ಟೋನ್‌ನ್ನು ಗಮನದಲ್ಲಿರಿಸಿಕೊಂಡು ಮಾಡಿ. ಇದರಿಂದ ಕೈಗಳ ಸೌಂದರ್ಯ ಎದ್ದು ತೋರುತ್ತದೆ. ಯಾವ ಸ್ಕಿನ್ ಟೋನ್‌ಗೆ ಯಾವ ಶೇಡ್‌ನ ನೇಲ್ ಪೇಂಟ್ ಹೊಂದುತ್ತದೆ ಎಂಬುದನ್ನು ಮೇಕಪ್ ಆರ್ಟಿಸ್ಟ್ ನಿಂದ ತಿಳಿದುಕೊಳ್ಳೋಣವೇ ? :
ವೆರಿ ಫೇರ್ ಸ್ಕಿನ್ ಟೋನ್
ಅತಿಯಾದ ಗೌರವರ್ಣದ ಮಹಿಳೆಯರಿಗೆ ಪಿಂಕ್ ಮತ್ತು ಪಿಂಕ್‌ಗೆ ಸಂಬಂಧಿಸಿದ ಶೇಡ್‌ಗಳ ನೇಲ್ ಪೇಂಟ್ ಅತ್ಯುತ್ತಮ ಆಯ್ಕೆ.
ಅಂತಹ ಮಹಿಳೆಯರ ಸ್ಕಿನ್ ಟೋನ್‌ಗೆ ಪೇಸ್ಟಲ್ ಶೇಡ್‌ನ ನೇಲ್ ಪೇಂಟ್ ಕೂಡ ಚೆನ್ನಾಗಿ ಹೊಂದುತ್ತದೆ.
ಬೋಲ್ಡ್ ಲುಕ್‌ಗಾಗಿ ಈ ಮಹಿಳೆಯರು ಡಾರ್ಕ್ ರೆಡ್ ಶೇಡ್‌ನ ನೇಲ್ ಪೇಂಟ್‌ನ್ನು ತಮ್ಮ ಮೊದಲ ಆಯ್ಕೆಯನ್ನಾಗಿಸಿಕೊಳ್ಳಬಹುದು.
ಡಾರ್ಕ್ ಶೇಡ್ ನೇಲ್ ಪೇಂಟ್ ಹಚ್ಚಲು ಬಯಸುವಿರಾದರೆ ಡಾರ್ಕ್ ಬ್ಲೂ, ನೇವಿ ಬ್ಲೂ, ಮಿಡ್ ನೈಟ್ ಬ್ಲೂನಂತಹ ಶೇಡ್‌ಗಳನ್ನು ಪ್ರಯತ್ನಿಸಬಹುದು.
ಸಲಹೆ : ಶೀರ್ ಶೇಡ್ಸ್ ನ ನೇಲ್ ಪೇಂಟ್ ಹಚ್ಚದಿರಿ.
ಫೇರ್ ಸ್ಕಿನ್ ಟೋನ್
ಗೌರವರ್ಣದ ಮಹಿಳೆಯರಿಗೆ ಡಾರ್ಕ್ ರೆಡ್ ಮತ್ತು ರೂಬಿ ಶೇಡ್‌ನ ನೇಲ್ ಪೇಂಟ್ ಅತ್ಯುತ್ತಮ. ಅದರಿಂದ ಕೈಗಳ ಸೌಂದರ್ಯ ದ್ವಿಗುಣವಾಗುತ್ತದೆ. ಪೇಸ್ಟಲ್ ಶೇಡ್ ಕೂಡ ಇವರಿಗೆ ಹೊಂದುತ್ತದೆ.
ಪ್ಲಮ್, ಬರ್ಗಂಡಿ ಪರ್ಪಲ್‌ನಂತಹ ಡಾರ್ಕ್ ಶೇಡ್ ನೇಲ್ ಪೇಂಟ್ಲ್ ಇವರಿಗೆ ಸೂಕ್ತ.
ಫ್ರೆಶ್ ಲುಕ್‌ಗಾಗಿ ಬ್ಲೂ, ಆರೆಂಜ್, ಪೀಚ್ ಶೇಡ್ಸ್ ಇವರ ಸ್ಕಿನ್ ಟೋನ್‌ಗೆ ಹೊಂದಿಕೆಯಾಗುತ್ತವೆ.
ಸಲಹೆ : ಟ್ರಾನ್ಸ್ ಪರೆಂಟ್ ಅಥವಾ ಇನ್‌ವಿಸಿಬಲ್ ಶೇಡ್‌ನ ನೇಲ್ ಪೇಂಟ್ ಹಚ್ಚಿಕೊಳ್ಳಬೇಡಿ. ಅವು ನಿಮ್ಮ ಸ್ಕಿನ್‌ಟೋನ್‌ಗೆ ಸರಿ ಹೊಂದುವುದಿಲ್ಲ.
ಮೀಡಿಯಮ್ ಸ್ಕಿನ್ ಟೋನ್
ಪೀಚ್ ಮತ್ತು ಪೇಲ್ ಶೇಡ್‌ನ ನೇಲ್ ಪೇಂಟ್‌ನ್ನು ಮೀಡಿಯಮ್ ಸ್ಕಿನ್ ಟೋನ್ ಮಹಿಳೆಯರು ತಮ್ಮ ಮೊದಲ ಆಯ್ಕೆಯನ್ನಾಗಿಸಿಕೊಳ್ಳಬಹುದು.
ಡಾರ್ಕ್‌ಶೇಡ್ಸ್ ಗೆ ಬದಲು ಪಿಂಕ್, ರೆಡ್, ಬ್ಲೂ ಮತ್ತು ಪರ್ಪಲ್ ಲೈಟ್ ಶೇಡ್‌ಗಳೂ ಸಹ ಈ ಮಹಿಳೆಯರ ಸ್ಕಿನ್ ಟೋನ್‌ಗೆ ಹೊಂದುತ್ತವೆ.
ಡಾರ್ಕ್ ಶೇಡ್ ಹಾಕಲು ಇಷ್ಟಪಡುವಿರಾದರೆ ಕಾಪರ್ ಆರೆಂಜ್ ನೇಲ್ ಪೇಂಟ್‌ನ್ನು ಆರಿಸಿಕೊಳ್ಳಬಹುದು.
ಪಾರ್ಟಿಯ ಸಂದರ್ಭದಲ್ಲಿ ಸಿಲ್ವರ್ ಶೇಡ್‌ನ ನೇಲ್ ಪೇಂಟ್ ಇವರ ಕೈಗಳ ಸೌಂದರ್ಯಕ್ಕೆ ಮೆರುಗು ನೀಡುತ್ತದೆ.
ಸಲಹೆ : ಮೀಡಿಯಂ ಸ್ಕಿನ್ ಟೋನ್‌ನ ಮಹಿಳೆಯರಿಗೆ ಗೋಲ್ಡ್ ಮತ್ತು ರಸ್ಟ್ ಶೇಡ್‌ನ ನೇಲ್ ಪೇಂಟ್ ಚೆನ್ನಾಗಿ ಕಾಣುವುದಿಲ್ಲ. ಆದ್ದರಿಂದ ಅವುಗಳನ್ನು ಹಚ್ಚದಿರಿ.
ಡಾರ್ಕ್ ಸ್ಕಿನ್ ಟೋನ್
ಶ್ಯಾಮಲ ವರ್ಣದ ಮಹಿಳೆಯರು ಡಾರ್ಕ್‌ಗೆ ಬದಲು ಬ್ರೈಟ್ ಶೇಡ್ಸ್ ಆರಿಸುವುದು ಒಳ್ಳೆಯದು. ಅವು ನಿಮ್ಮ ಸ್ಕಿನ್ ಟೋನ್‌ಗೆ ಹೆಚ್ಚು ಹೊಂದಿಕೆಯಾಗುತ್ತದೆ.
ಬ್ರೈಟ್ ಆರೆಂಜ್ ಮತ್ತು ಬ್ರೈಟ್ ಮಿಂಟ್ ಶೇಡ್‌ನ ನೇಲ್ ಪೇಂಟ್ಸ್ ನಿಮಗೆ ಫ್ರೆಶ್ ಲುಕ್ ನೀಡಬಲ್ಲವು.
ಬ್ಲೂ ಶೇಡ್ ಹಚ್ಚಲು ಬಯಸುವಿರಾದರೆ ಬೇಬಿ ಬ್ಲೂ ನೇಲ್ ಪೇಂಟ್ ಆರಿಸಿಕೊಳ್ಳಿ.
ಪಿಂಕ್ ಶೇಡ್ ಬೇಕಾದರೆ ಪಿಂಕ್‌ನ ನ್ಯೂಡ್ ಶೇಡ್ ಒಳ್ಳೆಯದು. ಇವು ಡಾರ್ಕ್ ಸ್ಕಿನ್‌ಗೆ ಸಹ ಹೊಂದುತ್ತವೆ.
ಸಲಹೆ : ಪೇಸ್ಟಲ್ ಶೇಡ್‌ನ ನೇಲ್ ಪೇಂಟ್‌ನ್ನು ದೂರವಿರಿಸಿ. ಇದು ನಿಮ್ಮ ಉಗುರಿನ ಮೇಲೆ ಗಾಢವಾಗಿ ತೋರುತ್ತದೆ.
– ಪ್ರೇಮಲತಾ