ಫೆಸ್ಟಿವ್ ಗೆಟ್ ಟು ಗೆದರ್ ಇರಲಿ ಅಥವಾ ಕುಟುಂಬ, ಫ್ರೆಂಡ್ಸ್ ಜೊತೆ ಔಟಿಂಗ್ ಪ್ಲಾನ್, ನಿಮ್ಮ ರೆಗ್ಯುಲರ್ ಔಟ್‌ಫಿಟ್‌ನ್ನು ಹೊಸ ರೀತಿಯಲ್ಲಿ ಧರಿಸಿ ಹಾಗೂ ಸ್ಟೈಲಿಂಗ್‌ನ ಈ ಸ್ಮಾರ್ಟ್ ವಿಧಾನಗಳನ್ನು ಗಮನದಲ್ಲಿರಿಸಿಕೊಂಡು ನೀವು ಸೂಪರ್ ಫ್ಯಾಷನೆಬಲ್ ಆಗಿ ಕಂಗೊಳಿಸಬಹುದು :
ನೀವು ಫುಲ್ ಸ್ಲೀವ್, ಕ್ಯಾಶ್ಯುಯೆಲ್ ಶರ್ಟ್, ಟೀಶರ್ಟ್ ಯಾ ಟಾಪ್ ಧರಿಸಿದ ಮೇಲೆ, ಅದರ ಬಾಹುಗಳನ್ನು 2-3 ಸಲ ಫೋಲ್ಡ್ ಮಾಡಿ ಥ್ರೀಫೋರ್ತ್ ಸ್ಲೀವ್ ಮಾಡಿಕೊಳ್ಳಿ. ಇದೇ ತರಹ ಥ್ರಿಫೋರ್ತ್ ಸ್ಲೀವ್ಸ್ ನ್ನು ಫೋಲ್ಡ್ ಮಾಡಿ ಹಾಫ್ ಸ್ಲೀವ್ ಮಾಡಿ. ಈ ಸ್ಟೈಲ್ ನಿಮಗೆ ಫ್ಯಾಷನೆಬಲ್ ಲುಕ್ಸ್ ತಂದುಕೊಡುತ್ತದೆ.
ಶರ್ಟ್ಸ್ ಮತ್ತು ಟೀಶರ್ಟ್ಸ್ ಸ್ಲೀವ್ಸ್ ನ ತರಹ ಜೀನ್ಸ್, ಲೆಗಿಂಗ್ಸ್, ಪ್ಯಾಂಟ್ಸ್ ತರಹದ ಬಾಟಮ್ ವೇರ್‌ಗಳನ್ನೂ ಸಹ ರೆಗ್ಯುಲರ್‌ಸ್ಟೈಲ್‌ನಲ್ಲಿ ಧರಿಸುವ ಬದಲು, ಅದರ ಬಾಟಮ್ಸ್ ನ್ನು ನಾಜೂಕಾಗಿ ಫೋಲ್ಡ್ ಮಾಡಿ, ಸಿಂಗಲ್ ಯಾ ಡಬಲ್ ಕಫ್ ಮಾಡಿಕೊಳ್ಳಿ. ನೀವು ಹೊರ ಹೋಗುವಾಗ ಟಾಪ್, ಶರ್ಟ್, ಟೀಶರ್ಟ್, ಶಾರ್ಟ್ಸ್ ಯಾ ಲಾಂಗ್ ಡ್ರೆಸ್ ಜೊತೆ ಜ್ಯಾಕೆಟ್ ಧರಿಸಲು ಬಯಸಿದರೆ, ಮುಂದಿನ ಸಲ ಜ್ಯಾಕೆಟ್ ಧರಿಸುವ ಬದಲು ಅದನ್ನು ಎರಡೂ ಕಡೆ ಭುಜಗಳ ಬಳಿ ಇಳಿಬಿಟ್ಟು, ಅದರ ಸ್ಲೀವ್ಸ್ ನ್ನು ಫ್ರೀ ಬಿಟ್ಟುಬಿಡಿ. ಜ್ಯಾಕೆಟ್‌ನ್ನು ಕ್ಯಾರಿ ಮಾಡುವ ಈ ವಿಧಾನ ಜನರಿಗೆ ಹೆಚ್ಚು ಆಕರ್ಷಕ ಎನಿಸುತ್ತದೆ.
ಹ್ಯೂಜ್ ಸೈಜ್ ಜೊತೆ ಸ್ಮಾಲ್ ಸೈಜ್ ಔಟ್‌ಫಿಟ್‌ನ ಕಾಂಬಿನೇಶನ್ ಸಹ ನಿಮಗೆ ಫ್ಯಾಷನೆಬಲ್ ಲುಕ್ ಕೊಡುತ್ತದೆ. ಉದಾ : ಕ್ರಾಪ್ ಟಾಪ್ ಜೊತೆ ಪ್ಲಾಜೋ, ಶಾರ್ಟ್ ಶರ್ಟ್ ಜೊತೆ ಲೇಯರ್ಡ್ ಸ್ಕರ್ಟ್, ಶಾರ್ಟ್ಸ್ ಜೊತೆ ಓವರ್ ಸೈಜ್ಡ್ ಟಾಪ್, ಶಾರ್ಟ್ ಡ್ರೆಸ್ ಜೊತೆ ನೀವು ಯಾವ ಆ್ಯಂಕಲ್ ಲೆಂಥ್ ಜ್ಯಾಕೆಟ್ ಅಥವಾ ಶ್ರಗ್ ಧರಿಸಬಹುದು.
ಪೈಲೆಟ್ ಲುಕ್ ಸಹ ನಿಮಗೆ ಫ್ಯಾಷನೆಬಲ್ ಲುಕ್ ಕೊಡಬಹುದು. ಉದಾ : ಲೈಟ್ ಜೀನ್ಸ್ ಜೊತೆ ಲೈಟ್ ಶರ್ಟ್. ಅದರ ಜೊತೆ ಲೈಟ್ ಫುಟ್‌ವೇರ್ ಮತ್ತು ಲೈಟ್ ಹ್ಯಾಂಡ್ ಬ್ಯಾಗ್ ಕ್ಯಾರಿ ಮಾಡಿ. ಬಾಕಿ ಆ್ಯಕ್ಸೆಸರೀಸ್ ಅಂದ್ರೆ ವಾಚ್, ಇಯರ್ ರಿಂಗ್ಸ್, ನೆಕ್ ಪೀಸ್, ಕಫ್ ಇತ್ಯಾದಿ ಕಲರ್‌ಫುಲ್ ಆಗಿರಲಿ. ನೀವು ಫ್ಯಾಷನೆಬಲ್ ಆಗಿ ಕಾಣಿಸಿಕೊಳ್ಳಲು ಬಯಸಿದರೆ, ಆಗ ಲೈಟ್ ಜೊತೆ ಬ್ಲ್ಯಾಕ್, ಗ್ರೀನ್, ರೆಡ್ ತರಹದ ಕಾಮನ್ ಕಾಂಬಿನೇಶನ್ ಧರಿಸುವ ಬದಲು ಅನ್‌ಕಾಮನ್ ಶೇಡ್ಸ್ ನ ಕಾಂಬಿನೇಶನ್ ಟ್ರೈ ಮಾಡಿ. ಉದಾ : ಬೇಬಿ ಬ್ಲೂ ಜೊತೆ ಡೀಪ್ ಯೆಲ್ಲೋ, ಬ್ಲೂ ಜೊತೆ ಇಂಡಿಗೋ, ಪ್ಲಮ್ ಜೊತೆ ಮಸ್ಟರ್ಡ್ ಶೇಡ್, ಪರ್ಪಲ್ ಜೊತೆ ರೆಡ್, ಡಾರ್ಕ್ ಬ್ಲೂ ಜೊತೆ ಸೀ ಬ್ಲೂ, ಆರೆಂಜ್ ಜೊತೆ ಯೆಲ್ಲೋ.... ಇತ್ಯಾದಿ.
ಪ್ರಿಂಟೆಡ್ ಔಟ್‌ಫಿಟ್ಸ್ ಜೊತೆ ಸಿಂಗಲ್ ಶೇಡ್ ವೇರ್‌ನ ಕಾಂಬಿನೇಶನ್ ಸಹ ನಿಮಗೆ ಮಿಸ್ ಬ್ಯೂಟಿಫುಲ್ ಪಟ್ಟ ದೊರಕಿಸಿಕೊಡಲಿದೆ. ಉದಾ : ಪ್ಲೇನ್ ವೈಟ್ ಟಾಪ್‌ಪ್ರಿಂಟೆಡ್ ಸ್ಕರ್ಟ್, ಪ್ರಿಂಟೆಡ್ ಪ್ಯಾಂಟ್ ಪ್ಲೇನ್ ವೈಟ್, ಆಫ್ ವೈಟ್ ಯಾ ಯೆಲ್ಲೋ ಶರ್ಟ್, ಪ್ರಿಂಟೆಡ್ ಡ್ರೆಸೆಸ್ ಮೇಲೆ ಸಿಂಗಲ್ ಶೇಡ್ ಜ್ಯಾಕೆಟ್ ಇತ್ಯಾದಿ.