ಕೂದಲಿನ ಒಂದು ದೊಡ್ಡ ಸಮಸ್ಯೆ ಎಂದರೆ, ಬಿಸಿಲಿನಲ್ಲಿ ಓಡಾಟ. ಬಿಸಿಲಿನಿಂದ ಕೂದಲಿನ ಬಣ್ಣ ಕಳೆಗುಂದುತ್ತದೆ. ಬಿಸಿಲಿನಲ್ಲಿ ದೀರ್ಘ ಕಾಲ ಕಳೆಯುವುದರಿಂದ, ಕೂದಲಿಗೆ ಹೈಲೈಟ್‌ ಆಕ್ಸಿಡೈಸ್‌ನ ಕಾಟ ತಪ್ಪಿದ್ದಲ್ಲ. ಇದರಿಂದ ಕೂದಲಿಗೆ ಅನಗತ್ಯ ಶೇಡ್ಸ್ ತಗುಲುತ್ತದೆ. ಆದ್ದರಿಂದ ಹೈಲೈಟೆಡ್‌ ಕೂದಲಿನ ಸಂರಕ್ಷಣೆಗಾಗಿ ಈ ಸಲಹೆಗಳನ್ನು ಅನುಸರಿಸಿ :

ಕೇವಲ ಸೋಡಿಯಂ

ಕಾಪರ್ ಸಲ್ಫೇಟ್‌ ಮುಕ್ತ ಶ್ಯಾಂಪೂ ಮಾತ್ರ ಬಳಸಬೇಕು. ಇದು ಕಲರ್ಡ್‌ ಯಾ ಹೈಲೈಟೆಡ್‌ ಕೂದಲನ್ನು ಟ್ರೀಟ್‌ ಮಾಡಲೆಂದೇ ಬಳಸುತ್ತಾರೆ. ಕೂದಲಿಗೆ ಹಚ್ಚಿದ ಬಣ್ಣವನ್ನು ಸುದೀರ್ಘ ಕಾಲ ಉಳಿಸಿಕೊಳ್ಳಲು, ಇದನ್ನು ಅಗತ್ಯ ಮಾಡಿಸಿ. ಇದರ ಜೊತೆ ಕಲರ್ ಸ್ಪೆಸಿಫಿಕ್‌ ಶ್ಯಾಂಪೂವನ್ನು ಆಲ್ಟರ್‌ನೇಟ್‌ ಆಗಿ ಬಳಸಿರಿ. ಇದು ವಿಶೇಷವಾಗಿ ಕೂದಲಿಗೆ ಹಚ್ಚಿದ ಬಣ್ಣ ಕಾಪಾಡಲಿಕ್ಕೆಂದೇ ರೂಪುಗೊಂಡಿದೆ.

ಕೂದಲಿನ ಬಣ್ಣ ಸುದೀರ್ಘ ಕಾಲ ಉಳಿಸಿಕೊಳ್ಳಲು ಸಲ್ಫೇಟ್‌ ಮುಕ್ತ ಹೇರ್‌ ಕಂಡೀಶನರ್‌ ಬಳಸಿಕೊಳ್ಳಿ. ಇದರಿಂದ ಕೂದಲಿಗೆ ಪೋಷಣೆ ಸಿಗುತ್ತದೆ.

ಯಾರ ಕೂದಲು ಡಾರ್ಕ್‌ ಬಣ್ಣದಿಂದ ಕಲರ್‌ ಆಗಿದೆಯೋ ಅಂಥವರು ಶೈನ್‌ ಎನ್‌ಹ್ಯಾನ್ಸಿಂಗ್‌ ಸ್ಟೈಲಿಂಗ್‌ ಉತ್ಪನ್ನಗಳನ್ನು ಬಳಸುತ್ತಿರಬೇಕು.

ಇಷ್ಟು ಮಾತ್ರವಲ್ಲ, ಈ ಶೈನಿಂಗ್‌ ಎಷ್ಟು ಕಾಲ ಉಳಿಯಬಲ್ಲದು ಎಂದು ತಿಳಿದುಕೊಳ್ಳುವುದೂ ಅಷ್ಟೇ ಮುಖ್ಯ. ಕೂದಲು ಎಷ್ಟು ಆರೋಗ್ಯಕರವಾಗಿರುತ್ತದೆ ಎಂಬುದೂ ಮುಖ್ಯ. ನೀವು ಯಾವ ರೀತಿ ಕೇಶ ಸಂಕರಕ್ಷಣೆಗೆ ತೊಡಗುವಿರಿ ಎಂಬುದರ ಮೇಲೆ ಈ ಅಂಶಗಳು ನಿಂತಿವೆ.

ಹೈಲೈಟೆಡ್‌ ಕೂದಲಿಗಾಗಿ ಎಂಥ ಸಂರಕ್ಷಣೆ ಮುಖ್ಯ ಎಂಬುದನ್ನು ತಿಳಿದುಕೊಳ್ಳೋಣವೇ?

ನಿಮ್ಮ ಕೂದಲು ಎಷ್ಟು ಬೇಗ ಬೆಳೆಯುತ್ತದೆ? ಸಾಮಾನ್ಯವಾಗಿ ಸ್ವಸ್ಥ ಕೂದಲು ತಿಂಗಳಿಗೊಮ್ಮೆ 5-10 ಮಿ.ಮೀ. ಉದ್ದ ಬೆಳೆಯುತ್ತದೆ. ಈ ರೀತಿಯ ಕೂದಲಿನ ಬೆಳವಣಿಗೆಗೆ ದೇಹದ ಮೆಟಬಾಲಿಸಂ, ಆಹಾರ ಪದ್ಧತಿ, ತಲೆಗೆ ಎಂತೆಂಥ ಉತ್ಪನ್ನ ಬಳಸುತ್ತೀರಿ ಎಂಬುದರ ಮೇಲೆ ನಿಂತಿದೆ.

ಬಣ್ಣ ಹಚ್ಚಿದ ಕೂದಲು ನೈಸರ್ಗಿಕ ಶೇಡ್ಸ್ ಗಿಂತ ಹೇಗೆ ಬೇರೆ ಎನಿಸುತ್ತದೆ?

ನಿಮ್ಮ ಕೂದಲಿಗೆ ಎಂಥ ಬಣ್ಣ ಆರಿಸುತ್ತೀರಿ ಎಂಬುದರ ಮೇಲೆ ಈ ಕೆಳಗಿನ ಕೆಲವು ವಿಶೇಷ ಅಂಶಗಳ ಕಡೆ ಗಮನಹರಿಸ ಬೇಕಾಗುತ್ತದೆ.

ಡೀಪ್‌ ಕಂಡೀಶನಿಂಗ್‌

ಕೂದಲನ್ನು ಹೈಲೈಟೆಡ್‌ ಮಾಡಿದ ನಂತರ ಎಲ್ಲಕ್ಕೂ ಮುಖ್ಯವಾದುದು ಎಂದರೆ, ಇದರ ಡೀಪ್‌ ಕಂಡೀನಶನಿಂಗ್‌. ಅದಕ್ಕೆ ಕಾರಣ, ಹೈಲೈಟೆಡ್‌ ಕೂದಲು ಸಾಕಷ್ಟು  ಛಿದ್ರಯುಕ್ತ ಆಗಿರುತ್ತದೆ. ಹೀಗಾಗಿ ವಾರದಲ್ಲಿ ಕನಿಷ್ಠ 1 ಸಲ ಈ ದಿನಚರ್ಯೆ ಪಾಲಿಸುವುದು ಅನಿವಾರ್ಯ. ಕೂದಲಿಗೆ ಕಂಡೀಶನಿಂಗ್‌ ಮಾಡಿಸುವ ಮುಖ್ಯ ಉದ್ದೇಶ, ಅದನ್ನು ಹೈಡ್ರೇಟ್‌ಗೊಳಿಸಿ, ಅದರ ಆರ್ದ್ರತೆ ಉಳಿಸಿಕೊಳ್ಳುವುದು. ಇದರಿಂದ ಅದು ಹೆಚ್ಚು ಬ್ಯೂಟಿಫುಲ್ ಶೈನಿಂಗ್‌ ಆಗುತ್ತದೆ.

ಜೋಜೋಬಾ ಆಯಿಲ್‌ಯುಕ್ತ ಕಂಡೀಶನರ್‌ ಡೀಪ್‌ ಕಂಡೀಶನಿಂಗ್‌ ಹೇರ್‌ ಮಾಸ್ಕನ್ನು ರೂಪಿಸುತ್ತದೆ. ವಾರದಲ್ಲಿ 2 ಸಲ ಕೂದಲನ್ನು ತೊಳೆದ ನಂತರ ಇದನ್ನು ಹಚ್ಚಿಕೊಳ್ಳಿ.

ಬೇಬಿ ಟ್ರಿಮ್ಸ್ ಕೆಮಿಕಲ್ಸ್ ನ ಅತ್ಯಧಿಕ ಬಳಕೆಯ ಕಾರಣ ಹೈಲೈಟ್‌ ಮಾಡುವಾಗ ಕೂದಲು ಅತ್ಯಧಿಕ ಡ್ರೈ ಆಗುತ್ತದೆ. ಅದರಿಂದ ಅದರ ತುದಿ ಬಲು ದುರ್ಬಲವಾಗುತ್ತದೆ. ಆಗ ಅದು ಮುರಿಯತೊಡಗುತ್ತದೆ. ಕೂದಲಿನ ತುದಿ ಹೀಗೆ ಮುರಿಯುವುದನ್ನು ತಪ್ಪಿಸಲು 8-10 ವಾರಗಳಿಗೊಮ್ಮೆ ಕೂದಲನ್ನು ಟ್ರಿಮ್ ಮಾಡಿಸಿ. ಆಗ ಕೂದಲು ಸ್ವಸ್ಥ, ಆರೋಗ್ಯಪೂರ್ಣ ಆಗುತ್ತದೆ. ಹೀಗೆ ಮುರಿದ ತುದಿಗಳನ್ನು ರಿಪೇರಿ ಮಾಡಲು ಕ್ಯಾಸ್ಟರ್‌ ಆಯಿಲ್‌ ಜೊತೆ ಲ್ಯಾವೆಂಡರ್‌ ಎಸೆನ್ಶಿಯಲ್ ಆಯಿಲ್‌ ಬೆರೆಸಿಕೊಳ್ಳಿ.

ಅಡೆತಡೆ

ಕೂದಲಿಗೆ ಅತಿ ಬಿಸಿಲು, ತಾಪ, ಧೂಳು, ಮಳೆಯ ಪ್ರಭಾವ ಕಾಡುತ್ತಿರುತ್ತದೆ. ಇವುಗಳ ದೆಸೆಯಿಂದ ಹೈಲೈಟ್ಸ್ ಹಾನಿಗೊಳ್ಳುವ ಸಾಧ್ಯತೆ ಹೆಚ್ಚು. ಈ ತರಹದ ಹೊರಗಿನ ಅಂಶಗಳು ಹೇರ್‌ ಕಲರ್‌ನ್ನು ಹಾಳು ಮಾಡುತ್ತವೆ. ಕೂದಲಿನಲ್ಲಿರುವ ಆರ್ದ್ರತೆ ಅದನ್ನು ಡ್ರೈ ಮತ್ತು ನಿರ್ಜೀವ ಆಗಿಸುತ್ತದೆ. ಆದ್ದರಿಂದ ಕೂದಲನ್ನು ನೀರಿನಿಂದ ತೊಳೆದು, ನಂತರ ಡೀಹೈಡ್ರೇಶನ್‌ನಿಂದ ಕಾಪಾಡಲು, ಹೊರಗೆ ಹೊರಡುವ ಮುನ್ನ ಕಲರ್ಡ್‌ ಕೂದಲಿಗೆ ಜೋಜೋಬಾ ಆಯಿಲ್ ಹಚ್ಚಲು ಮರೆಯದಿರಿ.

ಸುರಕ್ಷತೆ

ಹೀಟೆಡ್‌ ಸ್ಟೈಲಿಂಗ್ ಟೂಲ್ಸ್ ಗಳಾದ ಸ್ಟ್ರೇಟನರ್‌, ಬ್ಲೋ ಡ್ರೈಯರ್‌, ಕರ್ಲಿಂಗ್‌ ಐರನ್‌ ಮುಂತಾದವುಗಳ ಬಳಕೆಯಿಂದ ಹೈಲೈಟೆಡ್‌ ಹೇರ್‌ ಖಂಡಿತಾ ಹಾನಿಗೊಳ್ಳುತ್ತದೆ. ಅದರ ಆರೋಗ್ಯ, ಶಕ್ತಿ ಕಾಪಾಡಲು, ಅಗತ್ಯವಾಗಿ ಹೆಚ್ಚಿನ ತಾಪಮಾನ ತಗುಲದಂತೆ ನೋಡಿಕೊಳ್ಳಿ. ಈ ಕೂದಲಿಗೆ ಆರ್ಗನ್‌ ಆಯಿಲ್‌ ಹಚ್ಚಿರಿ. ಇದರಿಂದ ಕೂದಲಿಗೆ ಹೆಚ್ಚಿನ ತಾಪಮಾನದ ವಿರುದ್ಧ  ಸುರಕ್ಷತೆ ಪಡೆಯಲು ನೆರವು ಸಿಗುತ್ತದೆ.

ಆಫ್ಟರ್‌ ಕೇರ್‌ ಟಿಪ್ಸ್

ಫಾಯಿಲ್‌ ಹೈಲೈಟಿಂಗ್‌ ಟ್ರೀಟ್‌ಮೆಂಟ್‌ ನಂತರ 2 ಕೆಲಸ ಮಾಡಬೇಕು…. ಮೊದಲು, ದೀರ್ಘ ಕಾಲ ಕೂದಲಿನ ಬಣ್ಣ ಹೊಸದಾಗಿ ಇರುವಂತೆ ಉಳಿಸಿಕೊಳ್ಳಲು, ಇದರ ಸುರಕ್ಷತೆಯತ್ತ ಗಮನಕೊಡಿ. ಮತ್ತೊಂದು, ಅದನ್ನು ಸಶಕ್ತ, ಹೊಳೆ ಹೊಳೆಯುವ, ಆರೋಗ್ಯಕರ ಆಗಿಸಲು ಅದನ್ನು ಸೂಕ್ತ ರೀತಿಯಲ್ಲಿ ಪೋಷಿಸುತ್ತಿರಬೇಕು.

ಒದ್ದೆ ಕೂದಲಿನ ಮೇಲೆ ಕ್ಯಾಸ್ಟರ್‌ ಆಯಿಲ್ ಹಚ್ಚಿರಿ. ಕೂದಲಿಗೆ ಟವೆಲ್‌ ಕಟ್ಟಿಕೊಳ್ಳಿ. 10 ನಿಮಿಷಗಳ ನಂತರ ಕೂದಲನ್ನು ತೊಳೆಯಿರಿ. ಈ ಪ್ರಕ್ರಿಯೆಯಲ್ಲಿ ಕೂದಲು ಹೆಚ್ಚು ಹೆಲ್ದಿ ಶೈನಿಂಗ್‌ ಆಗುತ್ತದೆ, ಏಕೆಂದರೆ ಸೆಂಟೆಡ್‌ ಕ್ಯಾಸ್ಟರ್‌ ಆಯಿಲ್‌ ಕೂದಲಿಗೆ ಹೆಚ್ಚಿನ ಆರ್ದ್ರತೆ ನೀಡುತ್ತದೆ.

ಸ್ಟೈಲಿಂಗ್‌ ಟಿಪ್ಸ್

ಹೀಟ್‌ ಸ್ಟೈಲಿಂಗ್‌ ಟೂಲ್ಸನ್ನು ಆದಷ್ಟು ಕಡಿಮೆ ಬಳಸಬೇಕು. ಅದರ ಬಳಸುವಿಕೆ ಅನಿವಾರ್ಯವಾದರೆ, ಕೂದಲಿಗೆ ಮೊದಲೇ ಹೀಟ್‌ ಪ್ರೊಟೆಕ್ಟಿಂಗ್‌ ಸ್ಪ್ರೇ ಸಿಂಪಡಿಸಿ.

ವಾಶಿಂಗ್‌ ಟಿಪ್ಸ್ ಕ್ಲೋರಿನ್‌

ನೀವು ರೆಗ್ಯುಲರ್‌ ಈಜಲು ಹೋದರೆ, ಕೊಳಕ್ಕೆ ಇಳಿಯುವ ಮೊದಲು ಕೂದಲಿಗೆ ಕಂಡೀಶನರ್‌ ಅಥವಾ ಜೋಜೋಬಾ ಆಯಿಲ್ ಹಚ್ಚಿರಿ. ಇದರಿಂದ ಈಜುಕೊಳದಲ್ಲಿನ ಕ್ಲೋರಿನ್‌ಯುಕ್ತ ನೀರು ಕೂದಲಿಗೆ ಹಾನಿ ಮಾಡದು.

– ಜಿ. ಅನುರಾಧಾ   

Tags:
COMMENT