ಭಾರತದ ಕ್ರಿಕೆಟ್ ತಂಡದ ಮುಂಚೂಣಿಯ ಪ್ರಾಯೋಜಕ ಅಪೋಲೋ ಟೈರ್ಸ್ ತನ್ನ ಹೊಸ ಬ್ರಾಂಡ್ ಅಭಿಯಾನ, ಪ್ರತಿ ಪ್ರಯಾಣಕ್ಕೂ ಒಂದು ಅವಕಾಶವಿದೆ (ಹರ್ ಸಫರ್ ಮೇ ದಮ್ ಹೈ)’ ಪ್ರಾರಂಭಿಸಿದೆ. ಖ್ಯಾತ ಕ್ರಿಕೆಟ್ ಪಟು ಸಚಿನ್ ತೆಂಡೂಲ್ಕರ್ ಅವರೊಂದಿಗೆ ಟೀಂ ಇಂಡಿಯಾದ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ಶುಭ್ ಮನ್ ಗಿಲ್ ಮತ್ತು ಅರ್ಷದೀಪ್ ಸಿಂಗ್ ಅವರು ಟೀಂ ಇಂಡಿಯಾ ಜೆರ್ಸೀಗಳಲ್ಲಿ ಕಾಣಿಸಿಕೊಳ್ಳಲಿದ್ದು ಈ ಅಭಿಯಾನವು ಅತ್ಯಂತ ಭಾವನಾತ್ಮಕವಾಗಿದ್ದು, ಅಪೋಲೋದ ತತ್ವಗಳೊಂದಿಗೆ ಭಾರತೀಯ ಕ್ರಿಕೆಟ್ ನ ಅನಂತ ಸ್ಫೂರ್ತಿ ಮತ್ತು ಸಾಮಾನ್ಯತೆಯನ್ನು ಸಂಭ್ರಮಿಸುತ್ತದೆ.
ಎ.ಆರ್. ರಹಮಾನ್ ಅವರ ಪ್ರಖ್ಯಾತ ಗೀತೆ ಮಾ ತುಜೇ ಸಲಾಂ ಹೊಂದಿರುವ ಮತ್ತು ಖ್ಯಾತ ಚಿತ್ರ ನಿರ್ದೇಶಕ ಅಭಿನಯ್ ದೇವ್ ನಿರ್ದೇಶಿಸಿರುವ ಈ ಚಲನಚಿತ್ರವು ಈ ನಾಲ್ಕು ಕ್ರಿಕೆಟ್ ಪಟುಗಳ ಬಾಲ್ಯ ಮತ್ತು ಅವರ ಕನಸುಗಳು ನನಸಾಗಿಸಲು ಅವರ ಕುಟುಂಬಗಳು ನೀಡಿದ ಅಸಾಧಾರಣ ಬೆಂಬಲ, ಪ್ರತಿ ಪ್ರಯತ್ನದಲ್ಲೂ ರಾಷ್ಟ್ರದ ಹೆಮ್ಮೆಯನ್ನು ಮುಂಚೂಣಿಯಲ್ಲಿರಿಸುವುದನ್ನು ತೋರುತ್ತದೆ. ಇದು ಭಾರತವನ್ನು ಪ್ರತಿನಿಧಿಸುವ ಕನಸನ್ನು ಮಾತ್ರವಲ್ಲದೆ ಆ ಗೌರವವನ್ನು ಪಡೆಯಲು ಎತ್ತಿ ಹಿಡಿಯಲು ಮತ್ತು ಅದನ್ನು ಉಳಿಸಿಕೊಳ್ಳಲು ಮಾನದಂಡಗಳು, ಶಿಸ್ತು ಮತ್ತು ಸದೃಢತೆಯನ್ನೂ ಬಿಂಬಿಸುತ್ತವೆ.
ಈ ಜಾಹೀರಾತು ಚಿತ್ರವು ಅವರು ಮಕ್ಕಳಿಂದ ಭಾರತದ ಜೆರ್ಸೀ ಧರಿಸಲು ದಿಟ್ಟ ಕನಸುಗಳನ್ನು ನನಸಾಗಿಸಿಕೊಳ್ಳುವ ಪರಿವರ್ತನೆಯನ್ನು ತೋರುವ ಮೂಲಕ ವಿಶ್ವಮಟ್ಟದ ವೇದಿಕೆಯಲ್ಲಿ ಬರೀ ಪ್ರತಿಭೆಯಿಂದ ಮಾತ್ರವಲ್ಲ, ಶ್ರೇಷ್ಠರಾಗಲು ಜೀವಿತಾವಧಿ ಬದ್ಧತೆಯನ್ನು ಹೊಂದಿರುವ ಕೋಟ್ಯಂತರ ಮಂದಿಯ ಹೃದಯಗಳ ಭರವಸೆಯನ್ನು ಬಿಂಬಿಸುತ್ತದೆ.
ಖ್ಯಾತ ಕ್ರಿಕೆಟ್ ಪಟು ಮತ್ತು ಅಪೋಲೋ ಟೈರ್ಸ್ ಬ್ರಾಂಡ್ ರಾಯಭಾರಿ ಸಚಿನ್ ತೆಂಡೂಲ್ಕರ್ ಅವರ ಉಪಸ್ಥಿತಿ ಮತ್ತು ನಿರೂಪಣೆಯನ್ನು ಸಮಾನಾಂತರವಾಗಿ ನಿರೂಪಿಸುತ್ತದೆ. ತಲೆಮಾರುಗಳ ಕ್ರಿಕೆಟಿಗರಿಗೆ ಮತ್ತು ಕೋಟ್ಯಂತರ ಭಾರತೀಯರಿಗೆ ಸ್ಫೂರ್ತಿಯಾದ ಅವರು ಭಾರತೀಯ ಕ್ರಿಕೆಟ್ ಅನ್ನು ವ್ಯಾಖ್ಯಾನಿಸುವುದನ್ನು ಮುಂದುವರಿಸುವ ಅನಂತ ಪರಂಪರೆ, ಮೌಲ್ಯಗಳು ಮತ್ತು ಮಾನದಂಡಗಳನ್ನು ಬಿಂಬಿಸುತ್ತಾರೆ.
ಈ ಅಭಿಯಾನವು ಅಪೋಲೋ ಟೈರ್ಸ್ ಹೊಂದಿರುವ ಶ್ರೇಷ್ಠತೆಯನ್ನು ಸದೃಢತೆ, ಶಿಸ್ತು ಮತ್ತು ಸ್ಥಿರತೆಯಿಂದ ನಿರ್ಮಿಸಲಾಗುತ್ತದೆ ಎಂಬ ಕೇಂದ್ರ ನಂಬಿಕೆಯನ್ನು ಬಿಂಬಿಸುತ್ತದೆ” ಎಂದು ಅಪೋಲೋ ಟೈರ್ಸ್ ಲಿಮಿಟೆಡ್ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ನೀರಜ್ ಕನ್ವರ್ ಹೇಳಿದ್ದಾರೆ.
ಹರ್ ಸಫರ್ ಮೆ ದಮ್ ಹೈ ಭಾರತೀಯ ಸ್ಫೂರ್ತಿಗೆ ಮತ್ತು ನೀವು ಮಾಡುವ ಕೆಲಸದಲ್ಲಿ ಶ್ರೇಷ್ಠರಾಗಲು ಎಣೆಯಿರದ ಬದ್ಧತೆಗೆ ನಮ್ಮ ಗೌರವ”ಇದು ಎಂದಿದ್ದಾರೆ.
ಸೃಜನಶೀಲ ದೃಷ್ಟಿಕೋನವನ್ನು ಹಂಚಿಕೊಂಡ ಈ ಜಾಹೀರಾತು ಚಿತ್ರವನ್ನು ರೂಪಿಸಿದ ಕಥೆ ಹಾಗೂ ಚಿತ್ರಕಥೆ ಬರೆದ ಸಿಮ್ರಾನ್ ಕನ್ವರ್, “ಪ್ರತಿ ಪ್ರಯಾಣಕ್ಕೂ ಒಂದು ಅವಕಾಶವಿದೆ (ಹರ್ ಸಫರ್ ಮೇ ದಮ್ ಹೈ) ಪ್ರಯಾಣವನ್ನು ಪ್ರಾರಂಭಿಸುವ ಕುರಿತಾಗಿ ಅಲ್ಲ. ಇದು ಶ್ರೇಷ್ಠತೆಗೆ ಸತತವಾದ ಪ್ರಯತ್ನದ ಕುರಿತಾಗಿದೆ. ಇದು ವಿಶ್ವದ ಶ್ರೇಷ್ಠ ಕ್ರೀಡಾಪಟುಗಳನ್ನು ಒಂದು ಚಲನಚಿತ್ರಕ್ಕೆ ತರುವ ನಮ್ಮ ಕ್ರಿಕೆಟ್ ಗೀತೆ ಮಾ ತುಜೇ ಸಲಾಂ ಹಿನ್ನೆಲೆಯಲ್ಲಿರುವ ಏಕೀಯ ಜಾಹೀರಾತು ಚಿತ್ರವಾಗಿರಬಹುದು. ಒಟ್ಟಿಗೆ ಈ ಅಂಶಗಳು ಈ ಚಲನಚಿತ್ರವನ್ನು ನಿಜಕ್ಕೂ ವಿಶಿಷ್ಟವಾಗಿಸುತ್ತಿದ್ದು ಜಾಗತಿಕ ಮಟ್ಟದಲ್ಲಿ ಶ್ರೇಷ್ಠತೆಯನ್ನು ವ್ಯಾಖ್ಯಾನಿಸುವ ಸ್ಫೂರ್ತಿ, ಹೆಮ್ಮೆ ಮತ್ತು ಮಾನದಂಡಗಳನ್ನು ಸೆರೆ ಹಿಡಿಯುತ್ತದೆ” ಎಂದಿದ್ದಾರೆ.





