ಭಾರತೀಯ ಚಿತ್ರರಂಗದ ಅಪ್ರತಿಮ ಹಿನ್ನೆಲೆ ಗಾಯಕಿ, ಕನ್ನಡ ಚಿತ್ರರಂಗದ ಮೇರುಗಾಯಕಿ, ಗಾನಕೋಗಿಲೆ ಎಸ್. ಜಾನಕಿ (88) ನಿಧನ ಹೊಂದಿದ್ದಾರೆ.

ಗಾನಕೋಗಿಲೆ, ಭಾರತದ ನೈಟಿಂಗೇಲ್ ಎಂತಲೇ ಹೆಸರುವಾಸಿಯಾಗಿದ್ದ ಜಾನಕಿ ಹುಟ್ಟಿದ್ದು ಆಂಧ್ರಪ್ರದೇಶವಾದರೂ ಮೈಸೂರಿನಲ್ಲೇ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಎಸ್. ಜಾನಕಿ ಅವರು ಹೃದಯಾಘಾತದಿಂದ ಇಡೀ ದೇಶದ ಚಿತ್ರರಂಗವನ್ನೇ ಅಗಲಿದ್ದಾರೆ.

ಶನಿವಾರ ಮಧ್ಯಾಹ್ನ 12.49ರ ಸಮಯದಲ್ಲಿ ಎಸ್. ಜಾನಕಿ ಅವರಿಗೆ ಹೃದಯಾಘಾತ ಆಗುತ್ತಿದ್ದಂತೆ ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸಿದಾಗಲೇ ಅವರ ಸ್ಥಿತಿ ಗಂಭೀರವಾಗಿತ್ತು. ಅವರನ್ನು ತಕ್ಷಣವೇ ತಪಾಸಣೆ ಮಾಡಿ ಹೆಚ್ಚಿನ ನಿರ್ವಹಣೆಗಾಗಿ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿತ್ತು. ತೀವ್ರ ವೈದ್ಯಕೀಯ ಆರೈಕೆ ಮತ್ತು ಬಹುಶಿಸ್ತೀಯ ತಂಡದ ನಿರಂತರ ಮೇಲ್ವಿಚಾರಣೆಯ ಹೊರತಾಗಿಯೂ, ಚಿಕಿತ್ಸೆಯ ಸಮಯದಲ್ಲಿ ಅವರಿಗೆ ಹೃದಯ ಸ್ತಂಭನ ಉಂಟಾಯಿತು. ಅಂತಿಮವಾಗಿ ಸಂಜೆ 7:30 ಕ್ಕೆ ಎಸ್​ ಜಾನಕಿ ನಿಧನರಾದರು ಎಂದು ಘೋಷಿಸಲಾಯಿತು.

ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ 20ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದ ಎಸ್ ಜಾನಕಿ ಇಡೀ ದೇಶವಷ್ಟೇ ಅಲ್ಲ, ಇಡೀ ವಿಶ್ವಾದ್ಯಂತ ತಮ್ಮ ಕಂಠಸಿರಿಯಿಂದಲೇ ಕೋಟಿ ಕೋಟಿ ಅಭಿಮಾನಿಗಳನ್ನು ಹೊಂದಿದ್ದರು. ತಮ್ಮ ಕಂಠಸಿರಿಯ ಮೂಲಕ ಕೋಟ್ಯಂತರ ಜನರ ಮನೆಮನಗಳಲ್ಲಿ ನೆಲೆಸಿದ್ದ ಬಹುಭಾಷಾ ಗಾಯಕಿ ಜಾನಕಮ್ಮನವರ ನಿಧನದಿಂದ ಸಂಗೀತ ಕ್ಷೇತ್ರದ ಮಹಾನ್ ಸ್ವರಮಾಧುರ್ಯ ಮೌನವಾದಂತಾಗಿದೆ.

ಕನ್ನಡ ಚಿತ್ರಂಗದಲ್ಲಿನ ಲೆಕ್ಕವಿಲ್ಲದಷ್ಟು ಸೂಪರ್ ಹಿಟ್ ಗೀತೆಗಳು ಈಗಲೂ ಕನ್ನಡ ಕಲಾಭಿಮಾನಿಗಳಲ್ಲಿ ಗುನುಗುತ್ತಿವೆ. ಅಂತಹ ಸ್ವರ ಸಾಮ್ರಾಜ್ಝಿಯಾಗಿದ್ದ ಎಸ್. ಜಾನಕಿ ಇಡೀ ಲೋಕವನ್ನ ತೊರೆದಿದ್ದು ಕನ್ನಡ ಚಿತ್ರರಂಗಕ್ಕೆ ದೊಡ್ಡ ನಷ್ಟ ಉಂಟಾದಂತಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ