ಎಂಬತ್ತರ ದಶಕದಲ್ಲಿ ತಮ್ಮ ಸುಮಧುರ ಕಂಠದಿಂದ ಸಂಗೀತ ಪ್ರಿಯರನ್ನು ಮೋಡಿ ಮಾಡಿದ್ದ ಸಂಗೀತ ಲೋಕದ ಸಾಮ್ರಾಜ್ಞೆಎಸ್.ಜಾನಕಿ ಗಾಯನ ಶನಿವಾರ ತಮ್ಮ ಸ್ವರ ನಿಲ್ಲಿಸಿದ್ದಾರೆ.
ಸುಮಧುರ ಗಾಯನದಿಂದ ಮನೆಮಾತಾಗಿದ್ದ ಜಾನಕಮ್ಮ ಸುಮಾರು 48,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.
ಆಂಧ್ರಪ್ರದೇಶದಲ್ಲಿ ಹುಟ್ಟಿದ್ದರೂ, ಎಸ್ ಜಾನಕಿಯವರಿಗೆ ಕರ್ನಾಟಕದ ಮೇಲೆ ವಿಶೇಷ ಒಲವಿತ್ತು. ಹೀಗಾಗಿ ಕನ್ನಡದಲ್ಲಿ 8,000 ಹಾಡುಗಳನ್ನು ಹಾಡಿ ಸಂಗೀತ ಆಸಕ್ತರ ಮನಗೆದ್ದಿದ್ದರು.
ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್, ಅನಂತ್ ನಾಗ್ ಸೇರಿದಂತೆ ಹಲವು ದಿಗ್ಗಜ ನಟರ ಸಿನಿಮಾಗಳಲ್ಲಿ ಅವರ ಧ್ವನಿ ಭಾವನೆಗಳಿಗೆ ಜೀವ ತುಂಬಿತ್ತು. ಪಲ್ಲವಿ ಅನುಪಲ್ಲವಿ ಸಿನಿಮಾದ ‘ನಗುವ ನಯನ’, ಗೀತಾ ಸಿನಿಮಾದ ‘ಜೊತೆಯಲಿ ಜೊತೆ ಜೊತೆಯಲಿ’, ಬಯಲುದಾರಿ ಸಿನಿಮಾದ ‘ಬಾನಲ್ಲೂ ನೀನೆ, ಭುವಿಯಲ್ಲು ನೀನೆ’, ಯುದ್ಧಕಾಂಡ ಸಿನಿಮಾದ ‘ಸೋಲೇ ಇಲ್ಲ ನಿನ್ನ ಹಾಡಸು ಹಾಡುವಾಗ’ ಹೀಗೆ ಹಲವಾರು ಜನಪ್ರಿಯ ಹಾಡುಗಳಿಗೆ ದನಿಯಾಗಿದ್ದಾರೆ.
ಎಸ್.ಜಾನಕಿಯವರ ಕೆಲವು ಅತ್ಯಂತ ಜನಪ್ರಿಯ ಕನ್ನಡ ಹಾಡುಗಳು:
ನಗುವ ನಯನ – ಪಲ್ಲವಿ ಅನುಪಲ್ಲವಿ
ಓಮ್ಮೆ ನಿನ್ನನ್ನು – ಗಾಳಿ ಮಾತು
ನಗಿಸಲು ನೀನು – ಗಾಳಿ ಮಾತು
ಆಕಾಶ ದೀಪವು ನೀನು – ಪಾವನ ಗಂಗಾ
ಮೂಡಲ ಮನೆಯ – ಬೆಳ್ಳಿ ಮೋಡ
ಬಾನಲ್ಲು ನೀನೆ, ಭುವಿಯಲ್ಲು ನೀನೆ – ಬಯಲು ದಾರಿ
ಯಾವ ಜನ್ಮದ ಮೈತ್ರಿ – ಯಾವ ಜನ್ಮದ ಮೈತ್ರಿ
ಶಿವ ಶಿವ ಎನ್ನದ ನಾಲಿಗೆಯೇಕೆ – ಹೇಮಾವತಿ
ಮಂಜಿನ ಹನಿ ತಂಪು – ಕೆಸರಿನ ಕಮಲ
ಸಂಜೆ ತಂಗಾಳಿ ಮೈ ಸೋಕಲು – ಕೋಕಿಲ
ಸ್ವಾತಿ ಮುತ್ತಿನ ಮಳೆ ಹನಿಯೇ – ಬಣ್ಣದ ಗೆಜ್ಜೆ
ಇದು ನನ್ನ ನಿನ್ನ ಪ್ರೇಮ ಗೀತೆ – ಪ್ರೇಮಲೋಕ
ಜೀವ ವೀಣೆ – ಹೊಂಬಿಸಿಲು
ನೀ ಇರಲು ಜೊತೆಯಲ್ಲಿ – ಗೀತಾ
ಮುತ್ತಿನ ಹನಿಗಳು – ಅನುರಾಗ ಅರಳಿತು
ತಂಗಾಳಿಯಲ್ಲಿ ನಾನು ತೇಲಿ ಬಂದೆ- ಜನ್ಮ ಜನ್ಮದ ಅನುಬಂಧ
ಹೇಳಿದ್ದೂ ಸುಳ್ಳಾಗಬಹುದು – ರಾಮಲಕ್ಷ್ಮಣ





