ಬಾರಿಯ ದೀಪಾವಳಿಯ ಸಂದರ್ಭದಲ್ಲಿ ನಿಮ್ಮ ಮನೆ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಹಬ್ಬವನ್ನು ಸ್ಮರಣೀಯ ಆಗಿಸುವಂಥ ಏನನ್ನಾದರೂ ಏಕೆ ಮಾಡಬಾರದು.....?

ದೀಪಾವಳಿ ಎಂದರೆ ದೀಪಗಳ ಹಬ್ಬ. ಉತ್ಸಾಹ ಮತ್ತು ಮೋಜು ಮಸ್ತಿ, ಢಂ, ಢಮಾರ್‌ ಎನ್ನುವ ಪಟಾಕಿಗಳನ್ನು ಸಿಡಿಸುವ ಬಣ್ಣ ಬಣ್ಣದ ಹೂಕುಂಡಗಳು, ತರಹೇವಾರಿ ಸಿಡಿಮದ್ದುಗಳನ್ನು ಸಿಡಿಸುವ ಹಾಗೂ ಪ್ರೀತಿಪಾತ್ರರೊಂದಿಗೆ ಒಡನಾಡುವ ಹಬ್ಬ. ಇದರೊಂದಿಗೆ ದೀಪಾವಳಿ ನಿಮ್ಮಲ್ಲಿರುವುದನ್ನು ಪ್ರದರ್ಶಿಸುವ ಅಥವಾ ತೋರಿಸಿಕೊಳ್ಳುವ ಬೆಡಗಿನ ಆಡಂಬರ ವೈಭವದ ಹಬ್ಬ ಕೂಡ.

ಇತ್ತೀಚಿನ ದಿನಗಳಲ್ಲಿ ನಿಮ್ಮ ದುಬಾರಿ ಆಭರಣಗಳು ಮತ್ತು ಸೊಗಸಾದ ಉಡುಪುಗಳನ್ನು ಪ್ರದರ್ಶಿಸಲು ಮತ್ತು ಇತರರು ಆಸೂಯೆ ಪಡುವಂತೆ ಪ್ರದರ್ಶನ ಮಾಡಿಕೊಳ್ಳುವ ಸಂದರ್ಭಗಳಾದರೂ ಎಲ್ಲಿ ಸಿಗುತ್ತವೆ? ಇಂದಿನ ದಿನಗಳಲ್ಲಿ ಮದುವೆ ಅಥವಾ ಅಂತಹ ದೊಡ್ಡ ಸಂದರ್ಭಗಳು ಮನೆಗಳಲ್ಲಿ ನಡೆಯುವುದು ಬಹಳ ವಿರಳವಾಗಿ ಇರುವುದರಿಂದ, ಈ ಹಬ್ಬದ ಸಂದರ್ಭವನ್ನು ಮನೆ ಅಲಂಕಾರಕ್ಕಾಗಿ ಮಾತ್ರವಲ್ಲದೆ ಇದಕ್ಕೂ ಸಹ ಬಳಸಿಕೊಳ್ಳಬಹುದು.

ಹಿಂದೆ ಅವಿಭಕ್ತ ಕುಟುಂಬಗಳಿದ್ದವು. ಮನೆಯಲ್ಲಿ ಒಂದಲ್ಲಾ ಒಂದು ಮದುವೆ, ಮುಂಜಿ, ಸೀಮಂತ ಮುಂತಾದ ಶುಭ ಕಾರ್ಯಗಳು ನಡೆಯುತ್ತಿದ್ದವು. ಆಗ ಜನರು ತಮ್ಮ ಎಲ್ಲಾ ಆಸೆಗಳನ್ನು ಪೂರೈಸಿಕೊಳ್ಳುತ್ತಿದ್ದರು. ಆದರೆ ಇಂದು ಇಡೀ ಕುಟುಂಬದಲ್ಲಿ 2-3 ಅಥವಾ 3-4 ಸದಸ್ಯರು ಮಾತ್ರ ಇರುತ್ತಾರೆ. ಅವರೂ ಸಹ ತಮ್ಮ ತಮ್ಮ ಕೋಣೆಗಳಲ್ಲಿಯೇ ಇದ್ದುಕೊಂಡು ಮೊಬೈಲ್ ಫೋನ್‌, ಕಂಪ್ಯೂಟರ್‌ ಗಳಲ್ಲಿ ಮಗ್ನರಾಗಿರುತ್ತಾರೆ.

ಕುಟುಂಬದಲ್ಲಿ ಯಾರಾದರೂ ಇದ್ದರೆ 10-15 ವರ್ಷಕ್ಕೆ ಒಂದು ಮದುವೆಯಾಗುತ್ತದೆ. ನಮ್ಮ ಮನೆಗಳಲ್ಲಿ, ಸ್ವಂತ ಕುಟುಂಬದಲ್ಲಿ ನಡೆಯು ಮದುವೆಯಲ್ಲಿ ಸಿಗುವ ಸಂಭ್ರಮವೇ ವಿಭಿನ್ನವಾಗಿರುತ್ತದೆ. ಆಗ ಒಬ್ಬ ವ್ಯಕ್ತಿ ನೂರಾರು ಜನರು ನೋಡುವಂತೆ ಅತ್ಯುತ್ತಮವಾದ ಬಟ್ಟೆಗಳನ್ನು ಖರೀದಿಸುತ್ತಾನೆ. ಸ್ಟೈಲಿಶ್‌ ಹಾಗೂ ದುಬಾರಿ ಬಟ್ಟೆಗಳನ್ನು ಖರೀದಿಸಿ ಸುಂದರವಾದ ಆಭರಣಗಳನ್ನು ಧರಿಸಿ, ರಾಜರಾಣಿಯರಂತೆ ಸುತ್ತಾಡುತ್ತಾರೆ. ಈಗಲೂ ಮನೆಯನ್ನು ಅಲಂಕರಿಸುತ್ತಾರೆ, ದುಬಾರಿ ವಸ್ತುಗಳನ್ನು ಖರೀದಿಸುತ್ತಾರೆ. ಆದರೆ, ಮದುವೆ ಸಂಭ್ರಮದ ಸಂದರ್ಭ ಬರುವುದೇ 10-12 ವರ್ಷಗಳ ನಂತರವೇ.

ಇಂತಹ ಪರಿಸ್ಥಿತಿಯಲ್ಲಿ, ದೀಪಾವಳಿ ಎಲ್ಲರ ಮನೆಯಲ್ಲಿ ಆಚರಿಸುವ ದೊಡ್ಡ ಹಬ್ಬ. ಇದು ಯಾವುದೇ ವ್ಯಕ್ತಿ ಅಥವಾ ಒಂದು ಜಾತಿಗೆ ಸೀಮಿತವಾದ ಹಬ್ಬವಲ್ಲ. ನಾವು ವಾರ್ಷಿಕೋತ್ಸವ ಅಥವಾ ಹುಟ್ಟುಹಬ್ಬವನ್ನು ಆಚರಿಸುವ ವೈಯಕ್ತಿಕ ಸಂದರ್ಭ ಅಲ್ಲ. ಎಲ್ಲರೂ ಒಟ್ಟಾಗಿ ಸೇರಿ ಆಚರಿಸುತ್ತಿದ್ದರೆ, ಈ ಸಂದರ್ಭದಲ್ಲಿ ನಿಮಗಾಗಿ, ನಿಮ್ಮ ಮನೆಗಾಗಿ ಮತ್ತು ನಿಮ್ಮ ಪ್ರೀತಿಪಾತ್ರರಿಗಾಗಿ ಏನಾದರೂ ಸ್ಮರಣೀಯವಾದದ್ದು ಅಥವಾ ವಿಶೇಷವಾದದ್ದನ್ನು ಏಕೆ ಮಾಡಬಾರದು?

ಮನಸ್ಸಿಗೆ ಮುದ ನೀಡುವಷ್ಟು ಶಾಪಿಂಗ್

ನಿಮ್ಮ ಮನಸ್ಸಿಗೆ ಇಷ್ಟವಾಗುವಷ್ಟು ಶಾಪಿಂಗ್‌ ಮಾಡಿ ಎಂದರೆ, ಇಡೀ ಅಂಗಡಿಯನ್ನೇ ನೀವು ಖರೀದಿಸಬೇಕು ಎಂದಲ್ಲ. ಇದರರ್ಥ ನೀವು ಇಷ್ಟಪಡುವ ಮಕ್ಕು ನಿಮ್ಮ ಮನಸ್ಸಿಗೆ ಸಂತೋಷ ನೀಡುವ ವಸ್ತುಗಳನ್ನು ಖರೀದಿಸಿ. ನಿಮಗೆ ಕಂಫರ್ಟ್‌ ಆಗಿರುವ, ಮನಸ್ಸಿಗೆ ಮುದ ನೀಡುವಂತಹ ಬಟ್ಟೆ, ಆಭರಣ ಹಾಗೂ ಪರಿಕರಗಳನ್ನು ಖರೀದಿಸಿ. ಅವು ನಿಮಗೂ ವಿಶೇಷ ಎನ್ನಿಸಬೇಕು. ಹತ್ತು ಜನ ನಿಮ್ಮನ್ನು ನೋಡಿದಾಗ ಅವರ ಕಣ್ಣು ನಿಮ್ಮನ್ನು ಬಿಟ್ಟು ಬೇರೆ ಕಡೆ ನೋಡಲು ಸಾಧ್ಯವಾಗದಷ್ಟು ವಿಶೇಷವಾಗಿರಬೇಕು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ