ಸಲದ ದೀಪಾವಳಿಗೆ ಇತರ ಎಲ್ಲರಿಗಿಂತ ನಿಮ್ಮ ಮನೆ ಹೆಚ್ಚು ಯೂನಿಕ್ಬೆಟರ್ಎನಿಸುವಂತೆ ಏಕೆ ಮಾಡಬಾರದು....? ಎಲ್ಲೆಲ್ಲೂ ಜಗಮಗಿಸುವ ಬೆಳಕು, ಉತ್ಸಾಹದ ಗಲಾಟೆ, ಸಡಗರ, ಸಂಭ್ರಮ ಹರ್ಷೋಲ್ಲಾಸ…..

ಇದುವೇ ದೀಪಾವಳಿ ಹಬ್ಬದ ಸಂತಸಮಯ ವಾತಾವರಣ. 3 ದಿನಗಳ ಈ ಹಬ್ಬದಲ್ಲಿ ಹೆಂಗಸರು ಕೇವಲ ಮೇಕಪ್‌, ಉಡುಗೆ ತೊಡುಗೆಗಳಿಂದ ತಮ್ಮ ಅಂದಚೆಂದ ಹೆಚ್ಚಿಸಿಕೊಳ್ಳುವುದಷ್ಟೇ ಅಲ್ಲ, ಬದಲಿಗೆ ತಮ್ಮ ಮನೆಯನ್ನು ವಿಶಿಷ್ಟವಾಗಿ ತೋರಿಸಿಕೊಳ್ಳಲು ವಾರದ ಹಿಂದಿನಿಂದಲೇ ತಯಾರಿ ಶುರು ಮಾಡಿಕೊಳ್ಳುತ್ತಾರೆ. ಇಡೀ ಮನೆಯ ಸ್ವಚ್ಛತೆ, ಶುಭ್ರತೆಯೊಂದಿಗೆ, ಹಬ್ಬಕ್ಕೆ ಬೇಕಾದ ಎಲ್ಲಾ ಡೆಕೋರೇಶನ್‌ ಗಳಿಂದ ತಮ್ಮ ಮನೆಗೆ ಅಚ್ಚುಕಟ್ಟಾದ ಗೃಹಾಲಂಕಾರ ಒದಗಿಸಲು ತೊಡಗುತ್ತಾರೆ.

ಇದಕ್ಕಾಗಿ ಎಲ್ಲರೂ ಎಂದಿನಂತೆಯೇ ಕಲರ ಫುಲ್  ಲೈಟ್ಸ್ ನ ಸೀರಿಯಲ್ ಸೆಟ್‌, ಸೆಂಟೆಡ್‌ ಕ್ಯಾಂಡಲ್ಸ್, ಬಗೆಬಗೆಯ ಹಣತೆಗಳಿಂದ ತಮ್ಮ ಮನೆಯ ಮೂಲೆ ಮೂಲೆಯನ್ನೂ ಬೆಳಗಿಸುತ್ತಾರೆ. ಈ ಬಾರಿ ಎಂದಿನ ಅಲಂಕಾರದ ಬದಲಿಗೆ, ಇತರ ಎಲ್ಲರಿಗಿಂತಲೂ ನಿಮ್ಮ ಮನೆ ಅತಿ ವಿಶಿಷ್ಟ, ಅನನ್ಯ, ಅನುಪಮ ಗೃಹಾಲಂಕಾರ ಹೊಂದಿರುವಂತೆ ಏಕೆ ಮಾಡಬಾರದು? ಹೀಗಾಗಿ ಇಲ್ಲಿನ ಸಲಹೆ ಅನುಸರಿಸಿ ಈ ಸಲ ನಿಮ್ಮ ಮನೆಗೆ ಯೂನಿಕ್‌ ಲುಕ್‌ ಕೊಡಿಸಿ :

ಡೆಕೋರೇಶನ್ನಿನ ಬೊಂಬಾಟ್ಐಡಿಯಾ

ದೀಪಾವಳಿಯ ಜೋಶ್‌ ನಲ್ಲಿ ನೀವು ಮಾರುಕಟ್ಟೆಗೆ ಹೋಗಿ ನೋಡಿದಾಗ, ಒಂದಕ್ಕಿಂತ ಒಂದು ಮಿಗಿಲಾದ ಗೃಹಾಲಂಕಾರದ ಸಾಮಗ್ರಿ ಸಿಗುತ್ತವೆ. ಆದರೆ ನಿಮ್ಮ ಮನೆಯ ಅಗತ್ಯಗಳಿಗೆ ತಕ್ಕಂತೆ ಮಾತ್ರವೇ ಇಂಥ ವಸ್ತುಗಳನ್ನು ಆರಿಸಿ. ಅನಗತ್ಯ ವಸ್ತು ಕೊಂಡು ತಂದು ಗೃಹಾಲಂಕಾರದ ನೆಪದಲ್ಲಿ ಎಲ್ಲೆಡೆ ಎಲ್ಲವನ್ನೂ ತುಂಬಿಸಿ, ಮನೆಯನ್ನು ಸಂಗ್ರಹಾಲಯ ಮಾಡಿಬಿಡಬೇಡಿ! ಇದರ ಬದಲು ನೀವು ಕೆಲವು ಯೂನಿಕ್‌ ಐಡಿಯಾ ಫಾಲೋ ಮಾಡಿದರೆ ಮಾತ್ರ, ನಿಮ್ಮ ಮನೆಯ ಅಲಂಕಾರ ಸ್ಪೆಷಲ್ ಎನಿಸಲು ಸಾಧ್ಯ. ಹೀಗಾಗಿ ಈ ಸಲದ ಅಲಂಕಾರ ಮನೆಯ ಮೇನ್‌ ಗೇಟಿನಿಂದಲೇ ಶುರುವಾಗಲಿ.

ಮೇನ್ಗೇಟ್ನಿಂದ ಅಲಂಕಾರ ಶುರು

ದೀಪಾವಳಿ ಹಬ್ಬಕ್ಕಾಗಿ ಗೃಹಾಲಂಕಾರದ ಮೊದಲ ಹೆಜ್ಜೆ ಎಂದರೆ, ಮೆಯ್ನ್ ಗೇಟ್‌ ಮುಂದೆ ಪೇಂಟ್‌ ನಿಂದ ಬ್ಯೂಟಿಫುಲ್ ರಂಗೋಲಿ ಬಿಡಿಸಿ. ಇದು ಅತಿಥಿಗಳಿಗೆ ಬಲು ಆತ್ಮೀಯ ಸ್ವಾಗತ ಕೋರುತ್ತದೆ. ರಂಗೋಲಿ ದೊಡ್ಡದಿದ್ದಷ್ಟೂ ಹಬ್ಬ ಗ್ರಾಂಡಾಗಿ ಜರುಗುತ್ತಿದೆ ಎಂದೇ ಅರ್ಥ. ಸ್ವತಃ ಪೇಂಟಿಂಗ್‌ ನಿಂದ ರಂಗೋಲಿ ಬಿಡಸುವುದು ಕಷ್ಟ ಎನಿಸಿದರೆ, ಅತ್ಯಾಕರ್ಷಕ ವಿನ್ಯಾಸಗಳಿರುವ ಸ್ಟಿಕರ್‌ ರಂಗೋಲಿ ತಂದು ಅಂಟಿಸಿ, ಆನಂದಿಸಿ. ಈ ಬಾರಿ ಕ್ರಿಯೇಟಿವ್ ‌ಆಗಿರಲು ಬಯಸಿದರೆ, ಫ್ಲೋಟಿಂಗ್ ರಂಗೋಲಿ ರೆಡಿ ಮಾಡಿ. ಇದು ದೊಡ್ಡ ಬಟ್ಟಲಲ್ಲಿ ತುಂಬಿಸಿದ ನೀರು, ಅದರಲ್ಲಿ ತೇಲುವ ಹೂಗಳಿಂದ ಸಿದ್ಧಗೊಳ್ಳುತ್ತದೆ.

armchair-green-living-room-with-copy-space

ಫ್ಲೋಟಿಂಗ್ಫ್ಲೋರ್ಕಾರ್ನರ್ರಂಗೋಲಿ

ಇದಕ್ಕಾಗಿ ಒಂದು ದೊಡ್ಡ ಸುಂದರ ಡಿಸೈನ್‌ ವುಳ್ಳ ಬಟ್ಟಲು ಆರಿಸಿ. ಇದಕ್ಕೆ ನೀರು ತುಂಬಿಸಿ. ನಂತರ ಇದಕ್ಕೆ ಹಣತೆ, ಹೂವಿನ ದಳಗಳು, ಇನ್ನಿತರ ಸುಗಂಧಭರಿತ ವಸ್ತುಗಳಿಂದ ಅಲಂಕರಿಸಿ. ಇದರಲ್ಲಿ ನೀರಿನ ಮೇಲ್ನೈ ಮೇಲೆ ಡಿಸೈನ್‌ ಬಿಡಿಸಬಹುದು. ಈ ಬಗೆಯ ರಂಗೋಲಿ ನಿಜಕ್ಕೂ ಒಂದು ಅನನ್ಯ ಕಲೆ. ಇದನ್ನು ಮನೆಯ ಒಳಗೆ, ಹೊರಗೆ ಎಲ್ಲಾದರೂ ಇರಿಸಿಕೊಳ್ಳಬಹುದು. ಇದನ್ನು ನೋಡುತ್ತಿದ್ದಂತೆ ತಾಜಾತನ, ಪ್ರಪಲ್ಲತೆ ಉಕ್ಕುವಂತಿರಬೇಕು. ಇನ್ನಿದಕ್ಕಿಂತ ಅಲಂಕಾರ ಬೇಕೇ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ