ಈ ದೀಪಾವಳಿ ಸಂದರ್ಭದಲ್ಲಿ ನೀವು ಸ್ಮಾರ್ಟ್ ಹಾಗೂ ಟ್ರೆಂಡಿಯಾಗಿ ಕಾಣಿಸಬೇಕು ಎಂದು ಬಯಸಿದರೆ, ಇದನ್ನೂ ತಿಳಿದುಕೊಳ್ಳಿ…..
ಚಿನ್ನದ ಆಭರಣಗಳ ಹೆಸರನ್ನು ಕೇಳಿದಾಗ ಮಹಿಳೆಯರ ಮುಖ ಅರಳುತ್ತದೆ ಹಾಗೂ ಮನಸ್ಸು ಸಂತೋಷದಿಂದ ತುಂಬಿ ತುಳುಕುತ್ತದೆ. ಅದಕ್ಕೆ ಕಾರಣ ಆಭರಣಗಳು.
ಈ ಚಿನ್ನದ ಆಭರಣಗಳು ಹಲವಾರು ವರ್ಷಗಳಿಂದ ತಮ್ಮದೇ ಆದ ವಿಭಿನ್ನ ಹೊಳಪನ್ನು ಹೊಂದಿರುತ್ತದೆ. ಇವು ಯಾವುದೇ ಮಹಿಳೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಚಿನ್ನ ಅಮೂಲ್ಯವಾಗಿ ಇರುವುದರ ಜೊತೆಗೆ, ಮಹಿಳೆಯರಿಗೆ ವಿಭಿನ್ನವಾದ ಲುಕ್ ನೀಡುತ್ತವೆ. ರಾಜಮಹಾರಾಜರ ಕಾಲದಿಂದ ಹಿಡಿದು ಇಲ್ಲಿಯವರೆಗೂ, ಪ್ರತಿಯೊಬ್ಬರೂ ವಿಶೇಷ ಸಂದರ್ಭಗಳಲ್ಲಿ ಚಿನ್ನದ ಆಭರಣಗಳನ್ನು ಧರಿಸಲು ಇಷ್ಟಪಡುತ್ತಾರೆ. ಚಿನ್ನದ ಬೆಲೆ ನಿರಂತರವಾಗಿ ಹೆಚ್ಚುತ್ತಿದ್ದರೂ, ಆಭರಣಗಳನ್ನು ಖರೀದಿಸುವ ಪ್ರವೃತ್ತಿ ಬಹಳಷ್ಟು ಬದಲಾಗಿದೆ.
ಇಂದು ಎಲ್ಲರೂ ಚಿನ್ನ ಲೇಪಿತ ಆಭರಣಗಳನ್ನು ಖರೀದಿಸಲು ಬಯಸುತ್ತಾರೆ. ಏಕೆಂದರೆ ಅದು ಉತ್ತಮ, ಸ್ಮಾರ್ಟ್ ಹಾಗೂ ಟ್ರೆಂಡಿ ಲುಕ್ ನೀಡುತ್ತದೆ. ಇದರೊಂದಿಗೆ ನಿಮ್ಮ ಬಜೆಟ್ ಗೂ ತೊಂದರೆ ಆಗುವುದಿಲ್ಲ ಹಾಗೂ ಅಗತ್ಯ ಖರೀದಿಗಳನ್ನು ಸಹ ಮಾಡಬಹುದು. ಕಳೆದ 1 ವರ್ಷದ ಅಂಕಿಅಂಶಗಳನ್ನು ನೋಡಿದರೆ, 10 ಗ್ರಾಂ ಚಿನ್ನದ ಬೆಲೆ 75 ಸಾವಿರದಿಂದ 1 ಲಕ್ಷ ರೂ.ಗೆ ತಲುಪಿದೆ. ಇದು ಸಾಕಷ್ಟು ಹೆಚ್ಚಾಗಿದೆ ಹಾಗೂ ಸಾಮಾನ್ಯ ಜನರ ಬಜೆಟ್ ಗೆ ಭಾರವಾಗಿರುತ್ತದೆ.
ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಚಿನ್ನ ಲೇಪಿತ ಅಂದರೆ, ಗೋಲ್ಡ್ ಪ್ಲೇಟೆಡ್ ಆಭರಣಗಳು ಬಂದಿವೆ. ಇದನ್ನು ನಿರ್ವಹಿಸುವುದು ಹಾಗೂ ಧರಿಸುವುದು ಸುಲಭವಾಗಿರುತ್ತದೆ. ಆಧುನಿಕ ಫ್ಯಾಷನ್ ಜಗತ್ತಿನಲ್ಲಿ ಚಿನ್ನ ಲೇಪಿತ ಆಭರಣಗಳು ವಿಭಿನ್ನ ಇಮೇಜ್ ಸೃಷ್ಟಿಸಿಕೊಂಡಿವೆ. ಕಡಿಮೆ ಬೆಲೆಯಲ್ಲಿ ಅದೇ ಸುಂದರ ಹಾಗೂ ಸೊಗಸಾದ ಲುಕ್ ನೀಡುವ ಘನ ಚಿನ್ನದ ಆಭರಣಗಳಿಗೆ ಇವು ಕೈಗೆಟುಕುವ ಪರ್ಯಾಯವಾಗಿದೆ. ಇನ್ನು ನೀವು ಆನ್ ಲೈನ್ ನಲ್ಲಿ ಅಥವಾ ಮಾರುಕಟ್ಟೆಗೆ ಹೋಗಿಯೂ ಸುಲಭವಾಗಿ ಖರೀದಿಸಬಹುದು.
ಈ ಆಭರಣಗಳ ತಯಾರಿಕೆ ಹೇಗೆ?
ಚಿನ್ನದ ಲೇಪನ ಹಿತ್ತಾಳೆ ಅಥವಾ ತಾಮ್ರದಂಥ ಲೋಹದ ಮೇಲೆ ತೆಳುವಾದ ಪದರವನ್ನು ಲೇಪಿಸುವುದನ್ನು ಒಳಗೊಂಡಿರುತ್ತದೆ. ಆದ್ದರಿಂದ ಕನಿಷ್ಠ ಪ್ರಮಾಣದ ಚಿನ್ನವನ್ನು ಬಳಸುವ ಮೂಲಕ, ಗಣಿಗಾರಿಕೆಗೆ ಸಂಬಂಧಿಸಿದ ಪರಿಸರದ ದುಷ್ಪರಿಣಾಮವನ್ನು ಸಹ ಕಡಿಮೆ ಮಾಡಬಹುದು. ಇದು ಆಧುನಿಕ ಗ್ರಾಹಕರ ಪರಿಸರ ಜಾಗೃತಿಗೂ ಸರಿ ಹೊಂದುತ್ತದೆ.
ತಯಾರಿಕೆಯ ಪ್ರಕ್ರಿಯೆ ತಿಳಿದುಕೊಳ್ಳಿ
ಮೊದಲನೆಯದಾಗಿ ಮೂಲ ಲೋಹವನ್ನು ತುಕ್ಕು ಹಿಡಿಯದಂತೆ, ಚಿನ್ನದ ಪದರದ ಮೇಲೆ ಯಾವುದೇ ಪರಿಣಾಮ ಬೀರದಂತೆ ಕಲಾಯಿ ಮಾಡಲಾಗುತ್ತದೆ. ಇದರ ನಂತರ ಚಿನ್ನದ ಪದರವನ್ನು ಎಲೆಕ್ಟ್ರೋ ಪ್ಲೇಟಿಂಗ್ ಪ್ರಕ್ರಿಯೆ ಮೂಲಕ ಅನ್ವಯಿಸಲಾಗುತ್ತದೆ. ಇದರಲ್ಲಿ, ವಿದ್ಯುತ್ ಪ್ರವಾಹಗಳನ್ನು ಬಳಸಿಕೊಂಡು ಮೂಲ ಲೋಹದ ಮೇಲೆ ಚಿನ್ನದ ಪದರವನ್ನು ಹಾಕಲಾಗುತ್ತದೆ.
ಚಿನ್ನದ ಲೇಪನವನ್ನು ಅನ್ವಯಿಸಲು ಅಥವಾ ಹಚ್ಚಲು, ಆಭರಣವನ್ನು ಲೇಪನ ದ್ರಾವಣದಲ್ಲಿ ಮುಳುಗಿಸಲಾಗುತ್ತದೆ. ಇದರಲ್ಲಿ ಸಮಯ, ತಾಪಮಾನ ಮತ್ತು ವೆಂಟಿಲೇಜ್ ನ್ನು ನಿಯಂತ್ರಿಸಲಾಗುತ್ತದೆ. ಈ ಪ್ರಕ್ರಿಯೆಯ ನಂತರ, ಆಭರಣವನ್ನು ಒಣಗಲು ಬಿಡಲಾಗುತ್ತದೆ. ಚಿನ್ನದ ಲೇಪನಕ್ಕೆ ಬಳಸುವ ಚಿನ್ನದ ಶುದ್ಧತೆ 10 ಕ್ಯಾರೆಟ್ ನಿಂದ 24 ಕ್ಯಾರೆಟ್ ಗಳವರೆಗೆ ಇರಬಹುದು.





