ಕೇರಳದ ಜೀವಂತ ಹಬ್ಬ ಎನಿಸುವ ತಿರು ಓಣಂ ಯಾ ಓಣಂ, ಕೇವಲ ಬೆಳೆ ಕಟಾವಿನ ಯಾ ರಾಜ ಬಲೀಂದ್ರನ ಭೂಮಿಗೆ ವಾಪಸ್ಸು ಮರಳುವಿಕೆಯ ಸಂಕೇತ ಮಾತ್ರವಲ್ಲ, ಬದಲಿಗೆ ಇದು ಮಹಿಳೆಯರ ಸಶಕ್ತೀಕರಣದ ಒಂದು ಆಳವಾದ ಜೀವಂತ ಹಬ್ಬ ಎನಿಸಿದೆ. ಈ ಹಬ್ಬ ಮಹಿಳೆಯರ ನೇತೃತ್ವ, ಸಾಂಸ್ಕೃತಿಕ ಅಭಿವ್ಯಕ್ತಿ ಹಾಗೂ ಸಮುದಾಯ ನಿರ್ಮಾಣದ ಒಂದು ಸಶಕ್ತ ವೇದಿಕೆಯಾಗಿದೆ!
ಕೇರಳದ ಪಂಚಾಂಗದ ಪ್ರಕಾರ ಚಿಂಗಂ ಭಾದ್ರಪದ ಮಾಸದ ಅಷ್ಟಮಿಯಿಂದ ಆರಂಭಿಸಿ ತಿರು ಓಣಂನ 10 ದಿನಗಳನ್ನು ಓಣಂನ ಹಬ್ಬದಾಚರಣೆ ಪ್ರತೀಕವಾಗಿ, ಉಲ್ಲಾಸ ಉತ್ಸಾಹಗಳಿಂದ ಆಚರಿಸಲಾಗುತ್ತದೆ. ಹೆಣ್ಣುಮಕ್ಕಳು ಮನೆ ಮುಂದೆ ಸಣ್ಣ ಕುಂಭದ ರಂಗೋಲಿ ಇಟ್ಟು, 10 ದಿನಗಳೂ ಅದನ್ನು ವೃತ್ತಾಕಾರವಾಗಿ ಹಿಗ್ಗಿಸುತ್ತಾ, ಹೂಗಳ ಅಲಂಕಾರದಿಂದ ರಂಗುಗೊಳಿಸುತ್ತಾರೆ. ತಲೆಗೆ ಮಲ್ಲಿಗೆಯ ಮಾಲೆ ಮುಡಿದು, ಸಾಂಪ್ರದಾಯಿಕ ಕೇರಳ ಶೈಲಿಯ ಸೀರೆಯುಟ್ಟು, ಅತಿ ಉತ್ಸಾಹದಿಂದ 10ನೇ ದಿನದವರೆಗೆ ಈ ಹಬ್ಬದ ತಯಾರಿ ನಡೆಸುತ್ತಾರೆ.
ಈ ಹಬ್ಬ ಜಾತಿ, ಧರ್ಮಗಳ ಗಡಿ ದಾಟಿ ಕೇರಳದಲ್ಲಿ ಎಲ್ಲೆಡೆ ವಿಜೃಂಭಣೆಯಿಂದ ಆಚರಿಸಲ್ಪಡುತ್ತದೆ. ಓಣಂ ಕೇವಲ ಸಮೃದ್ಧಿ, ಪರಂಪರಗೆಳ ಸೀಸನ್ ಹಬ್ಬವಲ್ಲ, ಬದಲಿಗೆ ಇದು ಮಹಿಳೆಯರ ಸಾಂಸ್ಕೃತಿಕ ಅಭಿವ್ಯಕ್ತಿ, ನೇತೃತ್ವ ಹಾಗೂ ಸಾಮುದಾಯಿಕ ನಿರ್ಮಾಣದ ಒಂದು ಸಶಕ್ತ ವೇದಿಕೆಯೂ ಹೌದು. ಈ ಹಬ್ಬ ಇಂದು ನಿನ್ನೆಯದಲ್ಲ, ಐತಿಹಾಸಿಕ ರೂಪದಲ್ಲಿಯೂ, ಮಹಿಳೆಯರ ಕೇಂದ್ರೀಯ ಪಾತ್ರವನ್ನು ಎತ್ತಿಹಿಡಿಯುವ ಸಮಾರಂಭವೇ ಸರಿ. ಇದು ರಚನಾತ್ಮಕತೆ ಹಾಗೂ ಐಕ್ಯತೆಯ ಕುರಿತಾದ ಬಣ್ಣ ಬಣ್ಣಗಳ ಹಬ್ಬ. ಕೇರಳದಲ್ಲಿ ಮಾತ್ರವಲ್ಲದೆ, ಭಾರತದ ಇತರ ಅನೇಕ ಕಡೆಗಳಲ್ಲಿಯೂ ಮಹಿಳೆಯರ ಪ್ರಮುಖ ಪಾಲ್ಗೊಳ್ಳುವಿಕೆಯೇ ಈ ಹಬ್ಬದ ವೈಶಿಷ್ಟ್ಯ.
ಓಣಂ ಹಾಗೂ ಭಾರತೀಯ ಸ್ತ್ರೀ
ಕೇರಳದ ಪ್ರಮುಖ ಫಸಲು ಕಟಾವಿನ ಹಬ್ಬಾದ ಓಣಂ, ಕೇವಲ ಬಲಿ ಚಕ್ರವರ್ತಿ ಪ್ರತಿ ವರ್ಷ ತನ್ನ ಪ್ರಜೆಗಳನ್ನು ಕಾಣಲು ಬರುತ್ತಾನೆ ಎನ್ನುವ ಸಾಂಕೇತಿಕ ಹಬ್ಬವಾಗಿರದೆ, ಬದಲಿಗೆ ಇದು ಮಹಿಳೆಯರ ಸಶಕ್ತೀಕರಣದ ಒಂದು ಆಳವಾದ ಹಾಗೂ ಸಂಭ್ರಮಾಚರಣೆಯ ಹಬ್ಬ ಎನಿಸಿದೆ. ಮನೆಯ ಮುಂದಿನ, ಅತ್ಯಂತ ಆಕರ್ಷಕ ಬಣ್ಣಗಳ ಹೂಗಳ ರಂಗೋಲಿಯಾದ `ಪೂಕ್ಕೋಲಂ' ಈ ಹಬ್ಬದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಜೊತೆಗೆ ಅಂದು ಹಬ್ಬದ ಅಡುಗೆ ಭಾರೀ ಔತಣವೇ ಆಗಿರುತ್ತದೆ, ಅದುವೇ 'ಸಧ್ಯಾ.' ಈ ಭಾರಿ ಬೊಂಬಾಟ್ ಭೋಜನಕ್ಕಾಗಿ 4 ಬಗೆಯ ಪಾಯಸದಿಂದ ಹಿಡಿದು, ಅಪ್ಪಟ ಸಸ್ಯಮೂಲದ ಹಲವು ತರಕಾರಿಗಳ ಮೇಲೋಗರದ ಪೌಷ್ಟಿಕ ಭೋಜನ ಇರುತ್ತದೆ. ಈ ಎಲ್ಲವನ್ನೂ ಸಿದ್ಧಪಡಿಸುವಲ್ಲಿ ಮಹಿಳೆಯರ ಪಾತ್ರ ಹಿರಿದು. ಅಷ್ಟು ಮಾತ್ರವಲ್ಲದೆ, ಸ್ವಯಂ ಸಹಾಯತಾ ಸಮೂಹ ಮಾಧ್ಯಮಗಳ ಉದ್ದಿಮೆಯಿಂದ ಹಿಡಿದು, ಟೆಕ್ನಿಕ್ಸ್ ಬಳಸಿಕೊಳ್ಳುತ್ತಾ ವಿಶ್ವದೆಲ್ಲೆಡೆ ತಮ್ಮ ಛಾಪು ಒತ್ತುವಲ್ಲಿ ಈ ಮಹಿಳೆಯರು `ಓಣಂ' ಹಬ್ಬದ ಪ್ರತಿನಿಧಿಗಳಾಗಿದ್ದಾರೆ! ಇವರುಗಳ ಸಕ್ರಿಯ ಪಾಲ್ಗೊಳ್ಳುವಿಕೆ, ಅತ್ತ ಕೇವಲ ಸಂಪ್ರದಾಯಗಳನ್ನು ಮಾತ್ರ ಜೀವಂತವಾಗಿ ಇರಿಸುವುದಲ್ಲದೆ, ಮುಂದಿನ ಪೀಳಿಗೆಗಳು, ಮಹಾದ್ವೀಪಗಳಲ್ಲಿ ಐಕ್ಯತೆ, ಸಮೃದ್ಧಿ ಹಾಗೂ ಸಾಮಾಜಿಕ ಪ್ರಗತಿಗೂ ಹೆಚ್ಚಿನ ಒತ್ತು ನೀಡುತ್ತದೆ.





