ನಮ್ಮ ಸನಾತನ ಧರ್ಮದ ಸಂಸ್ಕೃತ ಭಾಷೆ ಪ್ರಪಂಚದ ಎಲ್ಲಾ ಭಾಷೆಗಳಿಗೆ ಮೂಲ ಎನ್ನುವ ವಿಷಯ ನಿರ್ವಿವಾದವೇ ಆಗಿದ್ದರೂ, ಇತ್ತೀಚಿನ ದಿನಗಳಲ್ಲಿ ಅಂತಹ ಶ್ರೀಮಂತ ಭಾಷೆಯನ್ನು ಮೃತಭಾಷೆ ಎಂಬ ಹಣೆಬರಹ ಕಟ್ಟಿ ಮೂಲೆ ಗುಂಪು ಮಾಡಿರುವುದು ಬೇಸರದ ಸಂಗತಿಯೇ ಸರಿ. ಶಿರಸಿಯ ಬಳಿಯ ಒಬ್ಬ ಸಂಪ್ರದಾಯಸ್ಥ ಸಾಧಾರಣ ಕುಟುಂಬದ ಹುಡುಗನೊಬ್ಬ ಅದೇ ಸಂಸ್ಕೃತ ಭಾಷೆಯನ್ನೇ ಅಭ್ಯಾಸ ಮಾಡಿಕೊಂಡು 80ರ ದಶಕದಲ್ಲಿ ತನ್ನ ಬದುಕನ್ನು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದು, ವೃತ್ತಿ ಜೀವನದಲ್ಲಿ ಬಂದ ಎಲ್ಲಾ ರೀತಿಯ ಅಡೆ ತಡೆಗಳನ್ನೆಲ್ಲವನ್ನೂ ಮೆಟ್ಟಿನಿಂತು 4 ದಶಕಗಳಿಂದಲೂ ಜನಾನುರಾಗಿಯಾಗಿ ಹತ್ತಾರು ಸಂಘ ಸಂಸ್ಥೆಗಳಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆಯುವ ಮಟ್ಟಿಗೆ ಬೆಳೆದು ನಿಂತಿರುವುದು ನಿಜಕ್ಕೂ ಸಾಹಸವೇ ಸರಿ. ಈ ಶಿಕ್ಷಕರ ದಿನಾಚರಣೆಯಂದು ಬೆಂಗಳೂರಿನ ಪ್ರಸಿದ್ಧ ವಿದ್ಯಾಸಂಸ್ಶೆಗಳಾದ ಎಂ.ಇ.ಎಸ್, ಗಾಂಧೀನಗರ, ಶೇಷಾದ್ರಿಪುರ ಮತ್ತು ಅಂತಿಮವಾಗಿ ಬಿಇಎಲ್ ವಿದ್ಯಾಸಂಸ್ಥೆಯಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿದ್ದ ಶ್ರೀ ಶ್ರೀಪಾದ ಹೆಗಡೆ ಎಲ್ಲರ ಪ್ರೀತಿಯ SMH ಆವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಮಾಡಿಕೊಳ್ಳೋಣ ಬನ್ನಿ.

smh9

ಉತ್ತರ ಕನ್ನಡ ಶಿರಸಿ ತಾಲ್ಲೂಕಿನ ನೇಗಾರ್ ಎಂಬ ಕುಗ್ರಾಮದ ಸಂಪ್ರದಾಯಸ್ಥ ಕುಟುಂಬದವರಾದ ಶ್ರೀ ಮಹಾಬಲೇಶ್ವರ ಹೆಗಡೆ ಮತ್ತು ಶ್ರೀಮತಿ ಹೇಮಾವತಿ ಹೆಗಡೆ ದಂಪತಿಗಳಿಗೆ 04-02-1957ರಲ್ಲಿ ಗಂಡು ಮಗು ಜನನವಾದಾಗ, ಅದು ತಮ್ಮ ಕುಲದೇವರ ವರಪ್ರಸಾದವೇ ಸರಿ ಎಂದು ಭಾವಿಸಿ ಶ್ರೀಪಾದ ಹೆಗಡೆ ಎಂದು ಹೆಸರಿಸುತ್ತಾರೆ. ಮನೆಯೇ ಮೊದಲ ಪಾಠಶಾಲೆ ತಂದೆ ತಾಯಿಯರೇ ಮೊದಲ ಗುರು ಎನ್ನುವಂತೆ, ಹೇಳೀ ಕೇಳೀ ಸಂಪ್ರದಾಯಸ್ಥ ಕುಟುಂಬವಾದ್ದರಿಂದ, ನೀರಿನಲ್ಲಿರುವ ಮೀನು ಸಹಜವಾಗಿಯೇ ಈಜನ್ನು ಕಲಿಯುವಂತೆ, ಸಂಸ್ಕಾರ ಮತ್ತು ಸಂಪ್ರದಾಯಗಳು ಮನೆಯಿಂದಲೇ ರೂಢಿಯಾಗಿದ್ದಲ್ಲದೇ, ಸಂಸ್ಕೃತದ ಬಾಲಪಾಠ, ಸಣ್ಣ ಪುಟ್ಟ ಸಂಸ್ಕೃತ ಶ್ಲೋಕಗಳ ಜೊತೆಯಲ್ಲಿಯೇ ವೇದಾಧ್ಯಯನವೆಲ್ಲವೂ ಮನೆಯಲ್ಲೇ ಸಹಜವಾಗಿಯೇ ಆವರಿಗೆ ಆಗುತ್ತದೆ.

smh2

ಬಾಲಕ ಶ್ರೀಪಾದ, ಸಣ್ಣ ವಯಸ್ಸಿನಲ್ಲಿಯೇ ಹುಣ್ಣಿಮೆಯ ಚಂದ್ರನಂತೆ ನೋಡಲು ಸುಂದರವಾಗಿದ್ದಲ್ಲದೇ, ನಕ್ಕರೆ ಕೆನ್ನೆಗಳ ಮೇಲೆ ಬೀಳುತ್ತಿದ್ದ ಗುಳಿಗೆ ಮಾರು ಹೋಗದವರೇ ಇಲ್ಲಾ ಎಂದರೂ ಸುಳ್ಳಲ್ಲ. ಆಟ ಪಾಟಗಳ ಜೊತೆ ತುಂಟತನದಲ್ಲೂ ಮುಂದಾಗಿದ್ದ ಶ್ರೀಪಾದನಿಗೆ ಬಾಲ್ಯದಿಂದಲೂ ನಾಟಕ ಮತ್ತು ಯಕ್ಷಗಾನದಲ್ಲಿ ಸೆಳೆತ. ಸಮಯ ಸಿಕ್ಕಾಗಲೆಲ್ಲಾ ಯಕ್ಷಗಾನಗಳನ್ನು ನೋಡುತ್ತಾ, ಆ ಪ್ರಸಂಗಗಳಲ್ಲಿ ಬರುವ ಪಾತ್ರಗಳನ್ನು ಅನುಕರಿಸುತ್ತಾ, ಅವನಿಗೇ ಅರಿವಿಲ್ಲದಂತೆಯೇ ಅವನೊಳಗಿದ್ದ ಕಲಾವಿದ ಎಲ್ಲರನ್ನೂ ಮನರಂಜಿಸುತ್ತಿದ್ದ. ಸ್ವಲ್ಪ ದೊಡ್ಡವನಾಗುತ್ತಿದ್ದಂತೆಯೇ, ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಬರೂರಿನ ಶಾಲೆಯಲ್ಲಿ ಮುಗಿಸಿದ ನಂತರ ಪ್ರೌಢ ಶಿಕ್ಷಣಕ್ಕೆ ನಾಡು ಕಂಡ ಶ್ರೇಷ್ಠ ಚುಟುಕು ಕವಿ ಮತ್ತು ಅಂದಿನ ಸಾಂಸದರೂ ಆಗಿದ್ದ ಶ್ರೀ ದಿನಕರ ದೇಸಾಯಿಗಳ ಕುಳವೆ ಬರೂರಿನ ಜನತಾ ವಿದ್ಯಾಲಯದಲ್ಲಿ ಎಸ್.ಎಸ್.ಎಲ್.ಸಿ. ಯನ್ನು ಉನ್ನತ ದರ್ಜೆಯಲ್ಲಿ ಮುಗಿಸಿದಾಗ, ಈಗಿನಂತೆ ಮುಂದೇನು ಓದಬೇಕು? ಎಂಬುದನ್ನು ತಿಳಿಸಿಕೊಡಲು ಯಾರೂ ಇಲ್ಲದೇ ಇದ್ದ ಕಾರಣ ಮತ್ತು ಡಾಕ್ಟರ್ ಮತ್ತು ಇಂಜಿನೀಯರ್ ಆಗಬೇಕೆಂಬ ಆಸೆ ಇದ್ದರೂ, ಅದಕ್ಕೆ ತಕ್ಕಷ್ಟು ಆರ್ಥಿಕವಾಗಿ ಸಧೃಢರಾಗಿಲ್ಲದ ಕಾರಣ, ಶಿರಸಿಯ ಪ್ರತಿಷ್ಟಿತ ಎಂ.ಇ.ಎಸ್ ಕಾಲೇಜಿಯಲ್ಲಿಯೇ ಪಿಯೂಸಿ ಮುಗಿಸಿದ ನಂತರ ಅಲ್ಲಿಯೇ 1978ರಲ್ಲಿ ಪದವಿಯನ್ನು ಪಡೆದು ಮುಂದೇನೂ? ಎಂಬ ಪ್ರಶ್ನೆ ಎದುರಾದಾಗ, ಹಿರಿಯರ ಸಲಹೆಯಂತೆ ದೂರದ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ಎಂ.ಎ. ಪದವಿಯನ್ನು 1980ರಲ್ಲೇ ಮುಗಿಸಿ, ಹೈಸ್ಕೂಲ್ ಶಿಕ್ಷಕರಾಗಲು ಬಿಎಡ್ ಅತ್ಯಾವಶ್ಯಕ ಎನಿಸಿದ್ದ ಕಾರಣ ಬಿಎಡ್ ಪದವಿಯನ್ನೂ ಪಡೆದು ಉದ್ಯೋಗವನ್ನು ಅರಸಿ ರಾಜಧಾನಿ ಬೆಂಗಳೂರಿನತ್ತ ಪ್ರಯಾಣ ಬೆಳೆಸುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ