ಷಡ್ಯಂತ್ರ ಬಲು ಗಂಭೀರ : ರೈಡರ್‌ ಶೂಸ್‌ ಜೊತೆ ಜಾಯ್‌ ಫುಲ್ ಸ್ಟ್ರೈಡ್ಸ್ ನ ಕ್ಯಾಂಪೇನ್‌ ಇದೀಗ ಇಂಗ್ಲೆಂಡ್‌ ನಲ್ಲಿ ಚಾಲ್ತಿಯಲ್ಲಿದೆ. ಹುಡುಗಿಯರು ಕೇವಲ ಫ್ಯಾಷನ್‌ ಹೆಸರಿನಲ್ಲಿ ಟೈಟ್‌, ಪಾಯಿಂಟೆಡ್‌ಹೈ ಲೆದರ್‌ ಶೂಸ್‌ ಧರಿಸುವಂತಿಲ್ಲ ಹಾಗೂ ಕಂಫರ್ಟೆಬಲ್, ಈಝಿ, ಹೆಲ್ದಿ ಶೂಸ್‌ ಧರಿಸತಕ್ಕದ್ದು ಅಂತಾಗಿದೆ. ಸಾಮಾನ್ಯವಾಗಿ ಪಾಯಿಂಟೆಡ್‌ಹೈ ಹೀಲ್ಸ್ ಪಾಯಿಂಟೆಡ್‌ ಟೋಸ್‌ ನ ಶೂಸ್‌ಮಾತ್ರವೇ ಫ್ಯಾಷನೆಬಲ್ ಎನಿಸುತ್ತವೆ, ಹುಡುಗಿಯರೂ ಅದಕ್ಕಾಗಿ ಚಡಪಡಿಸುತ್ತಿರುತ್ತಾರೆ. ಹಾಗೆ ನೋಡಿದರೆ ಇದೊಂದು ಷಡ್ಯಂತ್ರವೇ ಸರಿ, ಇಂಥವನ್ನು ಧರಿಸಿ ಹುಡುಗಿಯರು ಓಡಬಾರದು, ಬಿದ್ದು ನೋವಿನಿಂದ ಅಳುತ್ತಾ ಇರಲಿ ಅಂತ. ನೀವು ಈ ಟ್ರೆಂಡಿಗೆ ಸೇರಿ ಹೈ ಹೀಲ್ಸ್ ಗೆ ಬೈ ಬೈ ಹೇಳಿ!

op360-pride-month

ನಮ್ಮನ್ನೂ ಪ್ರೇಮಿಸಿ : ಸಲಿಂಗ ಕಾಮಿಗಳು ಯಾ ಟ್ರಾನ್ಸ್ ಸೆಕ್ಶುಯೆಲ್ ‌ವಿಶ್ವವಿಡೀ ಹುಯಿಲೆಬ್ಬಿಸುತ್ತಿದ್ದಾರೆ. ಆದರೆ ಸರ್ಕಾರಗಳಿಗೆ ವಿಶೇಷವಾಗಿ ಧರ್ಮಗುರುಗಳಿಗೆ ಶಿರಬಾಗುವ ಸರ್ಕಾರಗಳಿಗೆ ಇವರನ್ನು ಕಂಡರೆ ಆಗದು! ಅವರುಗಳಂತೂ ಸರ್ಕಾರ ಉರುಳಿಸುವ ಮಾತನಾಡುವುದಿಲ್ಲ, ಟ್ಯಾಕ್ಸ್ ಕೊಡುವುದಿಲ್ಲ ಅನ್ನೋಲ್ಲ, ಸೋಶಿಯಲ್ ಸೆಕ್ಯೂರಿಟಿ ಸಹ ಕೇಳೋದಿಲ್ಲ. ಈ ಜನ ಮದುವೆಗಾಗಿ ಮಂದಿರ, ಚರ್ಚು, ಮಸೀದಿಗಳಿಗೆ ಬರುವುದಿಲ್ಲ ಎಂಬುದೇ ಬಹುಶಃ ಧರ್ಮಗುರುಗಳ ಕೆಂಗಣ್ಣಿಗೆ ಮೂಲ ಕಾರಣವೇನೋ....! ಪ್ರೈಡ್‌ ಡೇನಂದು ಕಂದಾಚಾರಿ ಕ್ಯಾಥೊಲಿಕ್‌ ಫಿಲೀಪೀನ್ಸ್ ನಲ್ಲೂ ಈ ಜನ ಬಲು ಗ್ರಾಂಡಾಗಿ ಮೆರವಣಿಗೆ ಹೊರಟರು, ಬೀದಿ ಬದಿಗಳಲ್ಲಿ ಹಾಡುಕುಣಿತ ಪ್ರದರ್ಶಿಸುತ್ತಾ, ಎಲ್ಲರಿಗೂ ಹೂ ಹಂಚಿದರು.

highway

ತಮಾಶಾ ಸಹ ಅಗತ್ಯ : ದೇಶ ಎಷ್ಟೇ ಆಧುನಿಕ, ರಿಚ್‌ ಆಗಿರಲಿ, ಕೆಲವು ವಿಷಯಗಳಲ್ಲಿ ಅವು ತಮ್ಮ ಬೇರನ್ನು ಬಿಡಲು ಮನಸ್ಸು ಮಾಡುವುದಿಲ್ಲ. 1947ಕ್ಕೂ ಮೊದಲಿನಿಂದ ಚೀನಾದ ಒಂದು ಭಾಗವಾಗಿದ್ದು, ಈಗ ಸ್ವತಂತ್ರ ದೇಶ ಆಗಿರುವ ತೈವಾನ್‌, ಬಲು ಶ್ರೀಮಂತ ರಾಷ್ಟ್ರ ಎನಿಸಿದೆ. ಆದರೂ ಪ್ರವಾಸಿಗರನ್ನು ಗಮನ ಸೆಳೆಯಲು, ತಮ್ಮ ಹಳೆಯ ಸೋಲಾರ್‌ ಫೆಸ್ಟಿವಲ್ ‌ನೋಡಲು ಬನ್ನಿ ಎಂದು ವಿಶ್ವವಿಡೀ ಕ್ಯಾಂಪೇನ್‌ ನಡೆಸುತ್ತಿದೆ. ಬಹಳಷ್ಟು ಪ್ರವಾಸಿ ಕಂಪನಿಗಳು, ಈ ತರಹದ ತಮಾಶಾದ ದಿನಗಳಲ್ಲಿ ಅಂತಾರಾಷ್ಟ್ರೀಯ ಪ್ರವಾಸ ಏರ್ಪಡಿಸುತ್ತವೆ.

community-based-tourism-market

ನಕಲಿ ಆದರೆ ಏನಂತೆ? : ಈವೆರಡರಲ್ಲೂ ಕಂಡುಬರುತ್ತಿರುವ ದೃಶ್ಯಗಳು ಖಂಡಿತಾ ಅಸಲಿ ಅಲ್ಲ, ಮಿನಿಯೇಚರ್‌ ಮಾಡೆಲ್ಸ್ ಆಗಿವೆ. ಇದು ದುಬೈನ ಒಂದು ಎಗ್ಸಿಬಿಷನ್‌ ನಲ್ಲಿ ಮಕ್ಕಳ ಜೊತೆ ಹಿರಿಯರನ್ನೂ ಆಕರ್ಷಿಸುತ್ತಿದೆ. ಹಾಗೆ ನೋಡಿದರೆ ಇಂಥ ಇಂಡಸ್ಟ್ರಿಯಲ್ ಮಾಡೆಲ್ಸ್ ಬೇಕಾದಷ್ಟು ತಯಾರಾಗುತ್ತಿರುತ್ತವೆ, ಆದರೆ ಇನ್‌ ಫ್ರಾಸ್ಟ್ರಕ್ಚರ್‌ ಪ್ರಾಜೆಕ್ಟ್ ಟೆಂಡರ್‌ ನೀಡಬೇಕಾಗುತ್ತದೆ. ಅವನ್ನು ಪಬ್ಲಿಕ್‌ ಡಿಸ್‌ ಪ್ಲೇಗಾಗಿ ಕಡಿಮೆ ಇರಿಸಿಕೊಳ್ಳುತ್ತಾರೆ. ದುಬೈನಲ್ಲಿ ಸಾಮಾನ್ಯ ಪಬ್ಲಿಕ್‌ ಅಸಲಿಯನ್ನೇ  3D ಮಾಡೆಲ್ಸ್ ನಲ್ಲಿ ನೋಡಿ ನೋಡಿ ಆನಂದಿಸುತ್ತಾರೆ.

kids-in-small

ನನ್ನ ಮಾತನ್ನು ಕೇಳು.... ನಿನ್ನದನ್ನೂ ಹೇಳು! : ಪ್ರವಾಸಕ್ಕೆ ಹೊರಟು ಕೇವಲ ಸ್ಮಾರಕ ನೋಡಿ ಬಂದರೆ ಆಗಲಿಲ್ಲ, ಅಲ್ಲಿನ ಲೋಕಲ್ ಜನರೊಂದಿಗೆ ಬೆರೆತು ಅವರ ಕಲ್ಚರ್‌ ಅರಿತಾಗ ಮಾತ್ರ ಅದು ಕಳೆಗಟ್ಟುತ್ತದೆ. ಅವರ ಬದುಕಿನೊಂದಿಗೆ ಬೆರೆತು, ಊಟ ತಿಂಡಿ ಮಾಡಿ, ನಗು ಖುಷಿಯಲ್ಲಿ ಪಾಲ್ಗೊಂಡು ಆನಂದಿಸಬೇಕು. ಹೀಗಾಗಿ ಇಂದಿನ ಟೂರ್‌ ಏಜೆನ್ಸಿಗಳು ಇಂಥ ಟೂರ್‌ಗಳನ್ನೇ ಪ್ಲಾನ್‌ ಮಾಡುತ್ತಿವೆ. ಇದರಲ್ಲಿ ಟೂರಿಸ್ಟ್ ಬಂದ್ರು ಹೋದ್ರು ಅಂತಲ್ಲ..... ಅವರು ಅಲ್ಲಿನ ಸ್ಥಳೀಯರ ಸಂಸ್ಕೃತಿಯೊಂದಿಗೆ ಬೆರೆತು ಸಮಶೃತಿ ಮೂಡಿಸುವಂತಾಗುತ್ತಿದೆ. ಒಮ್ಮೊಮ್ಮೆ ದುಭಾಷಿಗಳ ಅಗತ್ಯ ಬೇಕಾಗಬಹುದು. ಆದರೂ ಇಂಟರ್ಯಾಕ್ಷನ್‌ ಅಂತೂ ಹೇಗೋ ನಡೆಯುತ್ತಿರುತ್ತದೆ. ಇಂಥ ಟೂರಿಸಮ್ ಇದೀಗ ಹೆಚ್ಚುತ್ತಿದೆ. FB ‌ಸಹ ಇದಕ್ಕೆ ಉತ್ತೇಜನ ನೀಡುತ್ತಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ