ಮೈಸೂರಿನ ಗಣ್ಯ ಸಮಾಜ ಸೇವಕಿಯಾಗಿ ಪ್ರೇಮಾ ರವಿಯವರ ಸಮಾಜ ಸೇವೆಯ ಕಾರ್ಯಗಳು ಅನಂತ, ಅನನ್ಯ, ಅಮೋಘ! ಇವರ ಕುರಿತು ಹೆಚ್ಚಿನ ವಿವರ ತಿಳಿಯೋಣವೇ......?

ಬೆಂಗಳೂರಿನ ಚಿಕ್ಕಣ್ಣ ಮತ್ತು ನಂಜಮ್ಮ ದಂಪತಿಯರ ಸುಪುತ್ರಿಯಾಗಿ ಪ್ರೇಮಾ ಜನಿಸಿದರು. ಇವರು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಮಾಥ್ಯೂ ಎಂಬ ಗುರುಗಳು ಇವರಿಗೆ ಮಾರ್ಗದರ್ಶಕರಾಗಿದ್ದರು. ಪ್ರೇಮಾ 2023ರಲ್ಲಿ ಪತಿ ರವೀಂದ್ರನಾಥ್‌ ರ ಉದ್ಯೋಗದ ವರ್ಗಾವಣೆಯಿಂದಾಗಿ ಮೈಸೂರಿಗೆ ಬಂದು ನೆಲೆಸಿದರು. ಪ್ರೇಮಾ ರವಿ 2024ರಲ್ಲಿ ಇನ್ನರ್‌ ವೀಲ್ ‌ಕ್ಲಬ್‌ ಆಫ್‌ ಮೈಸೂರು ಗೋಲ್ಡ್ ನ ಅಧ್ಯಕ್ಷೆಯಾಗಿ ಆಯ್ಕೆಯಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಸಮಾಜಸೇವೆಯ ಆರಂಭ

2008ರಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಪ್ರೇಮಾ, 2023ರಲ್ಲಿ ಮೈಸೂರಿನ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ವಿಕಲಚೇತನ ಗಂಡು ಹೆಣ್ಣು ಮಕ್ಕಳಿಗೆ ಆಟೋಟ, ಪೇಂಟಿಂಗ್‌, ಪೇಪರ್‌ ಕಟಿಂಗ್‌ ಇತ್ಯಾದಿ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟು, ಊಟ, ಗಿಫ್ಟ್ ಕೊಟ್ಟು, ಅವರುಗಳು ಸಂತೋಷದಿಂದ ಮನೆಗೆ ತೆರಳುವಂತೆ ನೋಡಿಕೊಂಡರು.

2019ರಲ್ಲಿ ಕೊರೋನಾ ಸಂದರ್ಭದಲ್ಲಿ 15 ಜನ ಸ್ನೇಹಿತರನ್ನು ಉಜಿರೆಯ ಎಸ್‌.ಡಿ.ಎಂ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ 15 ದಿನಗಳ ಕಾಲ ತಂಗುವಂಥ ವ್ಯವಸ್ಥೆ ಮಾಡಿ, ಅವರುಗಳ ಬಿ.ಪಿ, ಶುಗರ್‌, ಥೈರಾಯ್ಡ್, ಅಸಿಡಿಟಿಗಳಿಂದ ಗುಣಮುಖರಾಗಲು ಧಾರಾಳವಾಗಿ ಹಣ ಖರ್ಚು ಮಾಡಿ, ಅವರಿಗೆ ಚಿಕಿತ್ಸೆ ದೊರಕಿಸಿಕೊಟ್ಟರು.

ವೃದ್ಧರ ಸೇವೆ

2020ರಲ್ಲಿ ಮೈಸೂರಿನ ನಜರ್‌ ಬಾದ್‌ ಮೊಹಲ್ಲಾದಲ್ಲಿರುವ ವೃದ್ಧಾಶ್ರಮದ 15 ಮಂದಿಗೆ ವಾಕಿಂಗ್‌ ಸ್ಟಿಕ್‌ ನೀಡಿ ಅವರ ಯೋಗಕ್ಷೇಮ ವಿಚಾರಿಸಿಕೊಂಡರು. ಜೊತೆಗೆ ಕೊರೋನಾ ಸಂದರ್ಭದಲ್ಲಿ ಪ್ರೇಮಾ, ಮಾಸ್ಕ್ ಧರಿಸಿ ಮೈಸೂರಿನ ವಿವಿಧ ಕಡೆ ನೆಲೆಸಿದ್ದ ವೃದ್ಧರಿಗೆ ಊಟ ಮತ್ತು ಮಾತ್ರೆಗಳನ್ನು ನೀಡಿದರು. ವಿದೇಶದಲ್ಲಿ ನೆಲೆಸಿದ್ದರ ಜೊತೆ ಸಂಪರ್ಕ ಸಾಧಿಸಿ, ಕುಟುಂಬದವರೊಡನೆ ಅವರು ಮಾತನಾಡಿ, ಸಂತೋಷಪಡುವೆತೆ ನೋಡಿಕೊಂಡರು.

2021ರಲ್ಲಿ 50 ಮಂದಿ ಮಂಗಳಮುಖಿಯರಿಗೆ 1 ತಿಂಗಳಿಗೆ ಆಗುವಷ್ಟು ಫುಡ್‌ ಕಿಟ್‌ ನೀಡಿದ್ದಾರೆ. ಇದೇ ಸಂದರ್ಭ 50 ಜನ ಮಂಗಳಮುಖಿಯರಿಗೆ ಕೌನ್ಸೆಲಿಂಗ್‌ ನೀಡಿ, ಊಟ ಕೊಟ್ಟಿದ್ದಾರೆ.

ವಿಕಲಚೇತನರ ಸೇವೆ

2022ರಲ್ಲಿ 60 ಮಂದಿ ವಿಕಲಚೇತನ ಮಕ್ಕಳಿಗೆ, ಮಣ್ಣಿನಿಂದ ಆಟಿಕೆ ತಯಾರಿಸಲು, ಸಂಗೀತ, ಆಟೋಟಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಲ್ಲದೆ, ಅವರಿಗೆಲ್ಲ ವೆಲ್ ‌ಕಂ ಡ್ರಿಂಕ್ಸ್, ಮತ್ತು ಸ್ವಾದಿಷ್ಟಭರಿತ ಊಟ ನೀಡಿ, ಗಿಫ್ಟ್ ಕೊಟ್ಟು ಅವರನ್ನು ಸಂತೋಷಪಡಿಸಿದ್ದಾರೆ. ಈ 60 ಮಂದಿ ವಿಕಲಚೇತನ ಮಕ್ಕಳ ತಾಯಂದಿರಿಗೂ ಪುಸ್ತಕಗಳನ್ನು ವಿತರಿಸಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ 2024ರಲ್ಲಿ `ತಾಯಿಯ ಮಡಿಲು' ಎಂಬ ಕೊಠಡಿಯನ್ನು ನಿರ್ಮಿಸಿರುವ ಪ್ರೇಮಾ ರವಿ, ತಾಯಂದಿರು ಮಕ್ಕಳಿಗೆ ಹಾಲುಣಿಸಲು ಮತ್ತು ತಾಯಂದಿರು ವಸ್ತ್ರ ಬದಲಾಯಿಸಲು ಈ ಕೊಠಡಿ ಸಹಾಯಕವಾಗಿದೆ.

ಡಾಗ್ಶೋ

2024ರಲ್ಲಿ ಮೈಸೂರಿನ ಸಿದ್ಧಾರ್ಥ ಲೇಔಟ್‌ ನಲ್ಲಿ ಶ್ವಾನಗಳ ಪ್ರದರ್ಶನವನ್ನು ಪ್ರೇಮಾ ರವಿ ಏರ್ಪಡಿಸಿದ್ದರು. ಬೀದಿ ನಾಯಿಗಳನ್ನು ನೋಡಿಕೊಳ್ಳುವವರಿಗೆ ಬೀದಿ ನಾಯಿಗಳ ಲಾಲನೆ ಪಾಲನೆ ಮಾಡುತ್ತಿರುವವರನ್ನು ಹುಡುಕಿ, ಗುರುತಿಸಿ ಅಂತಹ 4 ಮಂದಿಗೆ ಸನ್ಮಾನ ನೀಡಿ, ಧನ ಸಹಾಯ ಮಾಡಿದ್ದಾರೆ. ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಿದ್ದ 75 ಮಂದಿಯ ಊಟೋಪಚಾರ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ