ದೀಪಾವಳಿಗೆ ನೀವು ಯಾವ ರೀತಿ ಸ್ಟೈಲಿಶ್ಹಾಗೂ ಬ್ಯೂಟಿಫುಲ್ ಆಗಿ ಕಾಣಬಹುದು ಎಂಬುದರ ಬಗ್ಗೆ ಇಲ್ಲಿ ತಿಳಿದುಕೊಳ್ಳಬಹುದು....

ಇಂದಿನ ಯುವ ಪೀಳಿಗೆಯ ಜೀವನಶೈಲಿ ಮತ್ತು ಅವರ ಹೆಚ್ಚುತ್ತಿರುವ ಗಾತ್ರದ ಕಾರಣದಿಂದಾಗಿ ಅವರು ಫ್ಯಾಷನ್‌ ಪ್ರಪಂಚದಿಂದ ಪ್ರತ್ಯೇಕವಾಗಿರಲು ಪ್ರಾರಂಭಿಸಿದ್ದಾರೆ. ಆದರೆ ಇದೊಂದು ಸಮಸ್ಯೆಯಲ್ಲ. ಇಂದು ಮಾರುಕಟ್ಟೆಯಲ್ಲಿ ನಾನಾ ಬಗೆಯ, ನಾನಾ ಗಾತ್ರದ ಬಟ್ಟೆ ಮತ್ತು ಆಭರಣಗಳು ಲಭ್ಯವಿವೆ. ಈ ದೀಪಾವಳಿಯಲ್ಲಿ ನಿಮ್ಮ ಸ್ಟೈಲ್ ‌ವಿಶೇಷವಾಗಿರಲಿ, ನೀವು ಅವುಗಳನ್ನು ಸರಿಯಾಗಿ ಆರಿಸಿಕೊಳ್ಳಬೇಕು. ಅದು ನಿಮ್ಮನ್ನು ಎಲ್ಲರ ಪ್ರಶಂಸೆಗೆ ಅರ್ಹರನ್ನಾಗಿ ಮಾಡುತ್ತದೆ.

ವಾಸ್ತವವಾಗಿ, ಪ್ಲಸ್‌ ಸೈಜ್‌ ಮಹಿಳೆಯರಿಗೆ ಸ್ಟೈಲಿಂಗ್‌ ಒಂದು ದೊಡ್ಡ ಸಮಸ್ಯೆಯಾಗಿ ಕಾಣುತ್ತದೆ. ಏಕೆಂದರೆ ಅವರು ಅನೇಕ ಬಾರಿ ತಾವು ಯಾವುದೇ ಹಬ್ಬ ಅಥವಾ ಸಂದರ್ಭದಲ್ಲಿ ಏನನ್ನು ಧರಿಸಬೇಕು ಎಂಬುದನ್ನೇ ಅರ್ಥ ಮಾಡಿಕೊಂಡಿರುವುದಿಲ್ಲ. ತಾವು ಸ್ಟೈಲಿಶ್‌ ಆಗಿ ಕಾಣಲು ಏನು ಮಾಡಬೇಕು ಎಂಬ ಬಗ್ಗೆ ಅರಿವು ಅವರಿಗಿರುವುದಿಲ್ಲ.

ಯಾವುದು ಇರುತ್ತದೋ ಅದಕ್ಕೆ ಹೊಂದಿಕೊಳ್ಳಲು ಬಯಸುತ್ತಾರೆ. ಅದು ಪಾದರಕ್ಷೆಗಳಿಂದ ಹಿಡಿದು ಬೇರೆ ಬೇರೆ ಪರಿಕರಗಳವರೆಗೆ ಎಲ್ಲದರ ಆಯ್ಕೆಯಲ್ಲಿ ಸಮಸ್ಯೆ ಉದ್ಭವಿಸುತ್ತದೆ.

ದೀಪಾವಳಿಯಲ್ಲಿ ಪ್ಲಸ್‌ ಸೈಜ್‌ ಮಹಿಳೆಯರು ಹೇಗೆ ಸ್ಟೈಲಿಶ್‌ ಮತ್ತು ಅತ್ಯಂತ ಸುಂದರವಾಗಿ ಕಾಣಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ :

ಬುದ್ಧಿವಂತಿಕೆಯಿಂದ ಆರಿಸಿ

ಪ್ಲಸ್‌ ಸೈಜ್‌ ಮಹಿಳೆಯರು ಎತ್ತರವಾಗಿ ಕಾಣುವಂತೆ ಸಹಾಯ ಮಾಡುವ ಉಡುಪುಗಳನ್ನು ಧರಿಸಬೇಕು. ಇದಕ್ಕಾಗಿ, ಅಗಲವಾದ ಲೆಗ್‌ ಪ್ಯಾಂಟ್‌, ಮಿಡಿ, ಮ್ಯಾಕ್ಸಿ, ಸ್ಕರ್ಟ್‌ ಇತ್ಯಾದಿಗಳನ್ನು ನಿಮ್ಮ ವಾರ್ಡ್‌ ರೋಬ್‌ ನಲ್ಲಿ ಸೇರಿಸಿಕೊಳ್ಳಬಹುದು.

ಈ ಮಹಿಳೆಯರು ಲೇಯರ್‌ ಸಹಾಯವನ್ನು ತೆಗೆದುಕೊಳ್ಳುವುದು ತುಂಬಾ ಒಳ್ಳೆಯದು. ಅದು ಮ್ಯಾಕ್ಸಿ ಡ್ರೆಸ್‌ ಆಗಿರಲಿ ಅಥವಾ ಹೈವೆಯ್ಸ್ಟ್ ಪ್ಯಾಂಟ್‌ ಆಗಿರಲಿ. ಅವುಗಳಲ್ಲಿ ಯಾವುದನ್ನಾದರೂ ಲೇಯರ್‌ ಗಳ ಮೇಲೆ ಹಾಕಬಹುದು. ಬಿಕಿನಿ ಟಾಪ್‌ ನ್ನು ಹೈವೆಯ್ಸ್ಟ್ ನೊಂದಿಗೆ ಸಹ ಧರಿಸಬಹುದು.

ನಿಮ್ಮ ಎದೆಯ ಭಾಗ ದಪ್ಪವಾಗಿದ್ದರೆ, ಡೀಪ್‌ ನೆಕ್‌ ಟಾಪ್‌ ಆಯ್ಕೆ ಮಾಡಿಕೊಳ್ಳಿ. ಇದರಿಂದ ನೆಕ್‌ ಲೆವೆಲ್ ‌ಭಾರವಾಗಿ ಕಾಣಿಸುವುದಿಲ್ಲ. ತೋಳಿಲ್ಲದ ಶ್ರಗ್‌ ನೊಂದಿಗೆ ಬಿಕಿನಿ ಟಾಪ್‌ ನ್ನು ಲೇಯರ್‌ ಮಾಡುವುದು ಒಳ್ಳೆಯದು. ಆದರೆ ನೀವು ಅದರೊಂದಿಗೆ ಫ್ಲಾಟ್‌ ಇರುವ ಪಾದರಕ್ಷೆಗಳನ್ನು ಧರಿಸಬಹುದು. ಮ್ಯಾಕ್ಸ್ ಡ್ರೆಸ್‌ ನೊಂದಿಗೆ ಓಪನ್‌ ಟೋ ಹೀಲ್ ‌ನ್ನು ಹಾಕಿಕೊಳ್ಳಬಹುದು.

ಪ್ಲಸ್‌ ಸೈಜ್‌ ಮಹಿಳೆಯರಿಗೆ ಸೀರೆ ಮತ್ತು ಸಮ್ಮಿಶ್ರಿತ ಉಡುಪುಗಳು ಚೆನ್ನಾಗಿ ಕಾಣುತ್ತವೆ. ಅಂತಹ ಉಡುಪಿನೊಂದಿಗೆ ಬೆಲ್ಟ್ ಧರಿಸಿ. ಅದು ನಿಮ್ಮ ಲುಕ್‌ ನ್ನು ಪರಿಪೂರ್ಣವಾಗಿಸುತ್ತದೆ. ಸಡಿಲವಾದ ಬಟ್ಟೆಗಳು ಪ್ಲಸ್‌ ಸೈಜ್‌ ಮಹಿಳೆಯರಿಗೆ ಸೂಕ್ತವಲ್ಲ. ಏಕೆಂದರೆ ಅದರಲ್ಲಿ ಅವರು ಹೆಚ್ಚು ವಯಸ್ಸಾದವರಂತೆ ಕಾಣುತ್ತಾರೆ. ಆದ್ದರಿಂದ ತಮ್ಮ ದೇಹಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳಿ.

ನೀವು ಶಾರ್ಟ್‌ ಡ್ರೆಸ್‌ ನೊಂದಿಗೆ ಉದ್ಧವಾದ ಪ್ರಿಂಟೆಡ್‌ ಸಾಲಿಡ್‌ ಬಣ್ಣದ ಶ್ರಗ್‌ ನ್ನು ಸಹ ಜೋಡಿಸಿಕೊಳ್ಳಬಹುದು. ಇದರೊಂದಿಗೆ ಹೀಲ್ಸ್ ಅಥವಾ ಸ್ನೀಕರ್ಸ್‌ ನ್ನು ಪಾದರಕ್ಷೆಗಳಾಗಿ ಧರಿಸಬಹುದು. ಇದರ ಹೊರತಾಗಿ, ತೋಳಿಲ್ಲದ ಉಡುಪಿನೊಂದಿಗಿ ಪೂರ್ಣ ತೋಳಿನ ಶ್ರಗ್‌ ನ್ನು ಜೋಡಿಸಿಕೊಳ್ಳಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ