ಹಬ್ಬಗಳು ಬಂದಾಗ ಸಹಜವಾಗಿಯೇ ಗೃಹಿಣಿಯರು ಹೆಚ್ಚು ಬಿಝಿ ಆಗುತ್ತಾರೆ. ಈ ಬಿಝಿ ಶೆಡ್ಯೂಲ್ ‌ಮಧ್ಯೆ ನೀವು ನಿಮ್ಮ ಚರ್ಮದ ಆರೈಕೆ ಮಾಡಿಕೊಳ್ಳಲು ಹೆಚ್ಚು ಸಮಯ ಸಿಗದು. ಆದರೆ ಈ ಸಂದರ್ಭದಲ್ಲೇ ನಿಮ್ಮ ಚರ್ಮಕ್ಕೆ ಮತ್ತಷ್ಟು ಹೆಚ್ಚಿನ ಆರೈಕೆಯ ಅಗತ್ಯವಿರುತ್ತದೆ. ಸಮಯದ ಅಭಾವದ ಕಾರಣ ನಾವು ಚರ್ಮದ ಕಡೆ ಹೆಚ್ಚಿನ ಗಮನ ನೀಡಲಾಗದು. ಹೀಗಾಗಿ ಚರ್ಮದ ಕುಂದು ಕೊರತೆಗಳನ್ನು ಮುಚ್ಚಿ ಹಾಕಲು ಇನ್‌ಸ್ಟೆಂಟ್‌ ಪರಿಣಾಮ ಬೀರುವಂಥ ಕಾಸ್ಮೆಟಿಕ್ಸ್ ಗೆ ಮೊರೆ ಹೋಗುತ್ತೇವೆ. ಆದರೆ ಇವು ಅಷ್ಟು ಒಳ್ಳೆಯದಲ್ಲ. ಏಕೆಂದರೆ ಇಂಥ ತೀವ್ರ ಪರಿಣಾಮಕಾರಿ ಕಾಸ್ಮೆಟಿಕ್ಸ್, ಚರ್ಮಕ್ಕೆ ಲಾಭ ತರುವ ಬದಲು ಹಾನಿ ತರುವುದೇ ಹೆಚ್ಚು. ಕೆಲವು ಸ್ಕಿನ್‌ ಕೇರ್‌ ರೊಟೀನ್‌ ಬಗ್ಗೆ ತಿಳಿಯೋಣ, ಈ ಮೂಲಕ ಕೆಲವೇ ನಿಮಿಷಗಳ ಮೇಕಪ್‌ನಿಂದ ನೀವು ದಿನವಿಡೀ ಹೊಳೆಯುವಿರಿ :

ಸ್ನಾನಕ್ಕೆ ಸದಾ ಮಿಂಟ್‌ ಸಾಬೂನನ್ನೇ ಬಳಸಿರಿ. ಇದು ಹೆಚ್ಚಿನ ತಾಜಾತನ ಮೂಡಿಸುತ್ತದೆ.

ನಿಮ್ಮ ಮುಖ ಮತ್ತು ಕೆನ್ನೆಗಳಿಗೆ ಗ್ರೇಪ್‌ ಸೀಡ್‌ ಆಯಿಲ್‌ನಿಂದ ಮಾಯಿಶ್ಚರೈಸ್‌ ಮಾಡಿ. ನಿಮ್ಮ ಕಂಗಳ ಕೆಳಗೆ ಮತ್ತು ಮೇಲೆ ಸೌತೆ + ಗುಲಾಬಿ ಪೇಸ್ಟ್ ಹಚ್ಚಬೇಕು. ಲಘುವಾಗಿ ಮಸಾಜ್‌ ಮಾಡಿ. ಇದರಿಂದ ನೀವು ಹೆಚ್ಚಿನ ತಾಜಾತನ ಗಳಿಸವುದು ಮಾತ್ರವಲ್ಲದೆ, ನಿಮ್ಮ ಶುಷ್ಕ ತ್ವಚೆಗೆ ಉತ್ತಮ ಆರ್ದ್ರತೆಯೂ ಸಿಗುತ್ತದೆ, ಚರ್ಮ ಕಾಂತಿ ಹೊಂದುತ್ತದೆ.

ಸೋಪಿನ ಬದಲಾಗಿ ಲಿಕ್ವಿಡ್‌ ಕ್ಲೆನ್ಸರ್‌ ಬಳಸಿರಿ, ಅದು ಹೆಚ್ಚು ನೊರೆ ಸೂಸುವಂತಿರಬಾರದು. ನಿಮ್ಮ ಚರ್ಮವನ್ನು ಫೋಮ್ ಯುಕ್ತ ಕ್ಲೆನ್ಸರ್‌ನಿಂದ ಹಾನಿ ಮಾಡುವ ಬದಲು ಹೆಲ್ದಿ ಶೈನಿಂಗ್‌ಗಾಗಿ ತ್ವಚೆಗೆ ಪೋಷಣೆ ಒದಗಿಸಿ. ನೀವು ಆಲಿವ್ ‌ಆಯಿಲ್‌ ಬಳಸಿಯೂ ಸಹ ಚರ್ಮಕ್ಕೆ ನೈಸರ್ಗಿಕ ಆರ್ದ್ರತೆ ಒದಗಿಸಬಹುದು.

ನಿಮ್ಮ ಆಹಾರದಲ್ಲಿ ತುಸು ಹುಳಿ ಹಣ್ಣುಗಳನ್ನು ಬೆರೆಸಿಕೊಳ್ಳಿ. ಅದರಲ್ಲಿ ವಿಟಮಿನ್‌`ಸಿ’ ಇರುವುದರಿಂದ ನಿಮ್ಮ ಸುಸ್ತು ದೂರಗೊಳಿಸಿ ಸ್ಛೂರ್ತಿ ತುಂಬುತ್ತದೆ. ಕಿತ್ತಳೆ, ಕ್ಯಾರೆಟ್‌ ಗುಣಗಳುಳ್ಳ ಸೋಪಿನಿಂದ ಸ್ನಾನ ಮಾಡಿ ಹೆಚ್ಚಿನ ತಾಜಾತನ, ಲವಲವಿಕೆ ಪಡೆಯಿರಿ.

ಹಲವು ಎಕ್ಸ್ ಫಾಲಿಯೇಟ್‌ಗಳು ನಿಮ್ಮ ಚರ್ಮವನ್ನೇ ನಿಸ್ತೇಜಗೊಳಿಸುವಂಥ ಗುಣ ಹೊಂದಿರುತ್ತವೆ. ಇಂಥವುಗಳಿಂದಾಗಿ ನಿಮಗೆ ಬೇಗ ವಯಸ್ಸಾಗಿರುವಂತೆ ಕಾಣಿಸಬಹುದು. ಆದ್ದರಿಂದ ನೀವು ಎನ್‌ಝೈಮ್ಯಾಟಿಕ್‌ ಎಕ್ಸ್ ಫಾಲಿಯೆಂಟ್‌ನ ಬಳಕೆ ಮಾಡಿ. ಪರಂಗಿ ಹಣ್ಣಿನಲ್ಲಿ ನೈಸರ್ಗಿಕ ಎನ್‌ಝೈಮ್ ಪೆಪೈನ್‌ ಇರುತ್ತದೆ. ಇದು ನಿಮ್ಮ ಚರ್ಮಕ್ಕೆ ನೀವು ಬಯಸಿದಂಥ ಹೆಚ್ಚಿನ ಹೊಳಪನ್ನು ಒದಗಿಸುತ್ತದೆ.

ಸಿಂಥೆಟಿಕ್‌ ಸುಗಂಧದ ಬಳಕೆ ಮಾಡಲೇಬೇಡಿ. ಇದರಲ್ಲಿ ಹಾನಿಕಾರಕ ಕೆಮಿಕಲ್ಸ್ ಅಡಗಿರುತ್ತವೆ. ಇದರ ಬದಲಾಗಿ ನೀವು ಲಾಂಗ್‌ಲಾಂಗ್‌ ಆಯಿಲ್, ಉದಾ : ಪ್ಯೂರ್‌ ಎಸೆನ್ಶಿಯಲ್ ಆಯಿಲ್ ‌ಬಳಸಬಹುದು. ಇದರಲ್ಲಿ ನೈಸರ್ಗಿಕ ಅಂಶಗಳು ಅಡಗಿವೆ. ಇದರಲ್ಲಿ  ಮಧುರ ಸುಗಂಧ ಮಾತ್ರವಲ್ಲದೆ ಇದು ಆಯ್ಲಿ ಡ್ರೈ ಸ್ಕಿನ್‌ಗಳ ಸೀಬಮ್ ಮಟ್ಟವನ್ನು ಬ್ಯಾಲೆನ್ಸ್ ಮಾಡುತ್ತದೆ. ಆದ್ದರಿಂದ ಇದು ಚರ್ಮವನ್ನು ಆದಷ್ಟೂ ಮೃದುಗೊಳಿಸಿ ನಿಮಗೆ ಹಿತ ನೀಡುತ್ತದೆ.

ಟೀ ಟ್ರೀ ಆಯಿಲ್‌ನಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಆ್ಯಂಟಿ ಇನ್‌ಫ್ಲಮೇಟರಿ ಗುಣಗಳಿವೆ. ಇದು ಆ್ಯಕ್ನೆ, ಮೊಡವೆಗಳನ್ನು ನಿರ್ಮೂಲನ ಮಾಡಿ ಮತ್ತೆ ಮೂಡದಂತೆ ತಡೆಯುತ್ತವೆ. ನೀವು ರೆಗ್ಯುಲರ್‌ ಆ್ಯಲೋವೆರಾ ಜೆಲ್‌ಗೆ ಇದರ 1-2 ಹನಿ ಬೆರೆಸಿ ಬಳಸಿಕೊಳ್ಳಿ.

ಕೂದಲಿಗೆ ಆ್ಯಂಟಿ ಫ್ರೀರ್‌ ಸೀರಮ್ ಅಗತ್ಯ. ಉದಾ : ಅವಕ್ಯಾಡೋ ಕೆರಿಯರ್‌ ಆಯಿಲ್‌ನ್ನು ಕೂದಲಿಗೆ ಹಚ್ಚಿ ಸ್ವಲ್ಪ ಹೊತ್ತು ಗಂಟು ಹಾಕಿಕೊಳ್ಳಿ. ಆಮೇಲೆ ಎಂದಿನಂತೆ ನಿಮ್ಮ ಕೆಲಸ ಮಾಡಿಕೊಳ್ಳಿ. ಗಾಳಿಯಲ್ಲಿ ನಿಮ್ಮ ಕೂದಲು ಪೂರ್ತಿ ಒಣಗಿದ ನಂತರ ತಂತಾನೇ ರೇಷ್ಮೆಯಂತೆ ಮೃದುವಾಗುತ್ತದೆ. ಸ್ವಲ್ಪ ಹೊತ್ತು ಗಂಟನ್ನು ಬಿಚ್ಚಿ ಗಾಳಿಗೆ ಬಿಡಿ. ನಂತರ ನಿಮ್ಮಿಷ್ಟದಂತೆ ಹೇರ್‌ ಸ್ಟೈಲ್‌ ಮಾಡಿ.

ನಿಮ್ಮ ಮುಖದ ಮೇಕಪ್

ಶುರು ಮಾಡುವ ಮೊದಲು, ಅದರ ಮೇಲೆ ಒಂದು ಕೋಟ್‌ ಪ್ರೈಮರ್‌ ಹಚ್ಚಿರಿ. ಇದರಿಂದ ನಿಮ್ಮ ಚರ್ಮ ಮೃದುವಾಗುತ್ತದೆ ಹಾಗೂ ನೀವು ಮೇಕಪ್‌ ಮುಂದುವರಿಸಲು ಅನುಕೂಲವಾಗುತ್ತದೆ. ಈ ಪ್ರೈಮರ್‌ ಬಹಳ ಹೊತ್ತು ಹಾಗೇ ಇರಲಿ. ಜೋಜೋಬಾ ಕೆರಿಯರ್‌ ಆಯಿಲ್ ‌ಒಂದು ಬೆಟರ್‌ ನ್ಯಾಚುರಲ್ ಫೇಸ್‌ ಪ್ರೈಮರ್‌ ಆಗಿರುವುದರಿಂದ ಮೇಕಪ್‌ ರಿಮೂವ್‌ ಮಾಡಲು ಸಹ ಬಲು ಉಪಯುಕ್ತ.

ಕೂದಲಿಗೆ ಆಲಿವ್ ಆಯಿಲ್ ಹಚ್ಚಿ 1 ತಾಸು ಹಾಗೇ ಬಿಡಿ. ಆಮೇಲೆ ಕುದಿಯುವ ಬಿಸಿ ನೀರಿಗೆ ಟರ್ಕಿ ಟವೆಲ್ ‌ಅದ್ದಿ, ಅದನ್ನು ಹಿಂಡಿಕೊಂಡು, ನಿಮ್ಮ ತಲೆಗೆ ಸುತ್ತಿಕೊಳ್ಳಿ. 5-6 ನಿಮಿಷ ಹಾಗೇ ಇರಿ. ಹೀಗೆ 3-4 ಸಲ ರಿಪೀಟ್‌ ಮಾಡಿ. ಇದರಿಂದ ನಿಮ್ಮ ತಲೆ ಹಾಗೂ ಕೂದಲು ಹೆಚ್ಚಿನಂಶ ಎಣ್ಣೆ ಹೀರಿಕೊಳ್ಳಲು ಅವಕಾಶವಾಗುತ್ತದೆ.

ಈ ಉಪಾಯಗಳನ್ನು ಅನುಸರಿಸಿ, ಹಬ್ಬದ ದಿನ ನೀವು ಜ್ಯೋತಿಯಂತೆ ಬೆಳಗುತ್ತಾ ಕಾಂತಿ ಚೆಲ್ಲಿರಿ.

– ಅಮೃತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ