ಹಬ್ಬಗಳು ಬಂದಾಗ ಸಹಜವಾಗಿಯೇ ಗೃಹಿಣಿಯರು ಹೆಚ್ಚು ಬಿಝಿ ಆಗುತ್ತಾರೆ. ಈ ಬಿಝಿ ಶೆಡ್ಯೂಲ್ ‌ಮಧ್ಯೆ ನೀವು ನಿಮ್ಮ ಚರ್ಮದ ಆರೈಕೆ ಮಾಡಿಕೊಳ್ಳಲು ಹೆಚ್ಚು ಸಮಯ ಸಿಗದು. ಆದರೆ ಈ ಸಂದರ್ಭದಲ್ಲೇ ನಿಮ್ಮ ಚರ್ಮಕ್ಕೆ ಮತ್ತಷ್ಟು ಹೆಚ್ಚಿನ ಆರೈಕೆಯ ಅಗತ್ಯವಿರುತ್ತದೆ. ಸಮಯದ ಅಭಾವದ ಕಾರಣ ನಾವು ಚರ್ಮದ ಕಡೆ ಹೆಚ್ಚಿನ ಗಮನ ನೀಡಲಾಗದು. ಹೀಗಾಗಿ ಚರ್ಮದ ಕುಂದು ಕೊರತೆಗಳನ್ನು ಮುಚ್ಚಿ ಹಾಕಲು ಇನ್‌ಸ್ಟೆಂಟ್‌ ಪರಿಣಾಮ ಬೀರುವಂಥ ಕಾಸ್ಮೆಟಿಕ್ಸ್ ಗೆ ಮೊರೆ ಹೋಗುತ್ತೇವೆ. ಆದರೆ ಇವು ಅಷ್ಟು ಒಳ್ಳೆಯದಲ್ಲ. ಏಕೆಂದರೆ ಇಂಥ ತೀವ್ರ ಪರಿಣಾಮಕಾರಿ ಕಾಸ್ಮೆಟಿಕ್ಸ್, ಚರ್ಮಕ್ಕೆ ಲಾಭ ತರುವ ಬದಲು ಹಾನಿ ತರುವುದೇ ಹೆಚ್ಚು. ಕೆಲವು ಸ್ಕಿನ್‌ ಕೇರ್‌ ರೊಟೀನ್‌ ಬಗ್ಗೆ ತಿಳಿಯೋಣ, ಈ ಮೂಲಕ ಕೆಲವೇ ನಿಮಿಷಗಳ ಮೇಕಪ್‌ನಿಂದ ನೀವು ದಿನವಿಡೀ ಹೊಳೆಯುವಿರಿ :

ಸ್ನಾನಕ್ಕೆ ಸದಾ ಮಿಂಟ್‌ ಸಾಬೂನನ್ನೇ ಬಳಸಿರಿ. ಇದು ಹೆಚ್ಚಿನ ತಾಜಾತನ ಮೂಡಿಸುತ್ತದೆ.

ನಿಮ್ಮ ಮುಖ ಮತ್ತು ಕೆನ್ನೆಗಳಿಗೆ ಗ್ರೇಪ್‌ ಸೀಡ್‌ ಆಯಿಲ್‌ನಿಂದ ಮಾಯಿಶ್ಚರೈಸ್‌ ಮಾಡಿ. ನಿಮ್ಮ ಕಂಗಳ ಕೆಳಗೆ ಮತ್ತು ಮೇಲೆ ಸೌತೆ + ಗುಲಾಬಿ ಪೇಸ್ಟ್ ಹಚ್ಚಬೇಕು. ಲಘುವಾಗಿ ಮಸಾಜ್‌ ಮಾಡಿ. ಇದರಿಂದ ನೀವು ಹೆಚ್ಚಿನ ತಾಜಾತನ ಗಳಿಸವುದು ಮಾತ್ರವಲ್ಲದೆ, ನಿಮ್ಮ ಶುಷ್ಕ ತ್ವಚೆಗೆ ಉತ್ತಮ ಆರ್ದ್ರತೆಯೂ ಸಿಗುತ್ತದೆ, ಚರ್ಮ ಕಾಂತಿ ಹೊಂದುತ್ತದೆ.

ಸೋಪಿನ ಬದಲಾಗಿ ಲಿಕ್ವಿಡ್‌ ಕ್ಲೆನ್ಸರ್‌ ಬಳಸಿರಿ, ಅದು ಹೆಚ್ಚು ನೊರೆ ಸೂಸುವಂತಿರಬಾರದು. ನಿಮ್ಮ ಚರ್ಮವನ್ನು ಫೋಮ್ ಯುಕ್ತ ಕ್ಲೆನ್ಸರ್‌ನಿಂದ ಹಾನಿ ಮಾಡುವ ಬದಲು ಹೆಲ್ದಿ ಶೈನಿಂಗ್‌ಗಾಗಿ ತ್ವಚೆಗೆ ಪೋಷಣೆ ಒದಗಿಸಿ. ನೀವು ಆಲಿವ್ ‌ಆಯಿಲ್‌ ಬಳಸಿಯೂ ಸಹ ಚರ್ಮಕ್ಕೆ ನೈಸರ್ಗಿಕ ಆರ್ದ್ರತೆ ಒದಗಿಸಬಹುದು.

ನಿಮ್ಮ ಆಹಾರದಲ್ಲಿ ತುಸು ಹುಳಿ ಹಣ್ಣುಗಳನ್ನು ಬೆರೆಸಿಕೊಳ್ಳಿ. ಅದರಲ್ಲಿ ವಿಟಮಿನ್‌`ಸಿ' ಇರುವುದರಿಂದ ನಿಮ್ಮ ಸುಸ್ತು ದೂರಗೊಳಿಸಿ ಸ್ಛೂರ್ತಿ ತುಂಬುತ್ತದೆ. ಕಿತ್ತಳೆ, ಕ್ಯಾರೆಟ್‌ ಗುಣಗಳುಳ್ಳ ಸೋಪಿನಿಂದ ಸ್ನಾನ ಮಾಡಿ ಹೆಚ್ಚಿನ ತಾಜಾತನ, ಲವಲವಿಕೆ ಪಡೆಯಿರಿ.

ಹಲವು ಎಕ್ಸ್ ಫಾಲಿಯೇಟ್‌ಗಳು ನಿಮ್ಮ ಚರ್ಮವನ್ನೇ ನಿಸ್ತೇಜಗೊಳಿಸುವಂಥ ಗುಣ ಹೊಂದಿರುತ್ತವೆ. ಇಂಥವುಗಳಿಂದಾಗಿ ನಿಮಗೆ ಬೇಗ ವಯಸ್ಸಾಗಿರುವಂತೆ ಕಾಣಿಸಬಹುದು. ಆದ್ದರಿಂದ ನೀವು ಎನ್‌ಝೈಮ್ಯಾಟಿಕ್‌ ಎಕ್ಸ್ ಫಾಲಿಯೆಂಟ್‌ನ ಬಳಕೆ ಮಾಡಿ. ಪರಂಗಿ ಹಣ್ಣಿನಲ್ಲಿ ನೈಸರ್ಗಿಕ ಎನ್‌ಝೈಮ್ ಪೆಪೈನ್‌ ಇರುತ್ತದೆ. ಇದು ನಿಮ್ಮ ಚರ್ಮಕ್ಕೆ ನೀವು ಬಯಸಿದಂಥ ಹೆಚ್ಚಿನ ಹೊಳಪನ್ನು ಒದಗಿಸುತ್ತದೆ.

ಸಿಂಥೆಟಿಕ್‌ ಸುಗಂಧದ ಬಳಕೆ ಮಾಡಲೇಬೇಡಿ. ಇದರಲ್ಲಿ ಹಾನಿಕಾರಕ ಕೆಮಿಕಲ್ಸ್ ಅಡಗಿರುತ್ತವೆ. ಇದರ ಬದಲಾಗಿ ನೀವು ಲಾಂಗ್‌ಲಾಂಗ್‌ ಆಯಿಲ್, ಉದಾ : ಪ್ಯೂರ್‌ ಎಸೆನ್ಶಿಯಲ್ ಆಯಿಲ್ ‌ಬಳಸಬಹುದು. ಇದರಲ್ಲಿ ನೈಸರ್ಗಿಕ ಅಂಶಗಳು ಅಡಗಿವೆ. ಇದರಲ್ಲಿ  ಮಧುರ ಸುಗಂಧ ಮಾತ್ರವಲ್ಲದೆ ಇದು ಆಯ್ಲಿ ಡ್ರೈ ಸ್ಕಿನ್‌ಗಳ ಸೀಬಮ್ ಮಟ್ಟವನ್ನು ಬ್ಯಾಲೆನ್ಸ್ ಮಾಡುತ್ತದೆ. ಆದ್ದರಿಂದ ಇದು ಚರ್ಮವನ್ನು ಆದಷ್ಟೂ ಮೃದುಗೊಳಿಸಿ ನಿಮಗೆ ಹಿತ ನೀಡುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ