ಆಹಾರವನ್ನು ರುಚಿಕಗೊಳಿಸಲು ಈ ಚಿಕ್ಕಪುಟ್ಟ ಸಂಗತಿಗಳನ್ನು ಅನುಸರಿಸಿ ನೀವು `ಅಡುಗೆಮನೆಯ ರಾಣಿ’ ಎನಿಸಿಕೊಳ್ಳಿ.
ಹಾಗಲಕಾಯಿಯ ಕಹಿಯನ್ನು ದೂರಗೊಳಿಸಲು ಅದರ ಮೇಲ್ಭಾಗದ ಸಿಪ್ಪೆಯನ್ನು ಹೆರೆದು ವಿನಿಗರ್‌ನಲ್ಲಿ ಅರಿಶಿನ ಹಾಗೂ ಉಪ್ಪು ಮಿಶ್ರಿತ ದ್ರಾವಣದಲ್ಲಿ ಅದ್ದಿ ಇಡಿ. ಒಂದು ಗಂಟೆಯ ಬಳಿಕ ಚೆನ್ನಾಗಿ ತೊಳೆಯಿರಿ. ಇದರಿಂದ ಕಹಿ ದೂರವಾಗುತ್ತದೆ.
ಕೊ.ಸೊಪ್ಪು, ಪುದೀನಾ ಚಟ್ನಿ ಮಾಡುವಾಗ ಅದರಲ್ಲಿ ನೀರು ಬೆರೆಸದೆ ಐಸ್ ಕ್ಯೂಬ್ಸ್ ಹಾಕಿಕೊಂಡು ರುಬ್ಬಿಕೊಳ್ಳಿ. ಚಟ್ನಿ ಹಲವು ದಿನಗಳ ಕಾಲ ಹಸಿರಾಗಿಯೇ ಇರುತ್ತದೆ.
ಢೋಕ್ಲಾ ತಯಾರಿಸುವಾಗ ಅದರಲ್ಲಿ ಉಗುರು ಬೆಚ್ಚಗಿನ ನೀರನ್ನೇ ಬಳಸಿ. ಅದರಿಂದ ಢೋಕ್ಲಾ ಸ್ಪಾಂಜಿಯಾಗಿರುತ್ತದೆ.
ಚೆನ್ನಾಗಿ ಅರಳುವ ರುಚಿಕಟ್ಟಾದ ಪಾಪ್ ಕಾರ್ನ್ ತಯಾರಿಸಿಕೊಳ್ಳಲು ಕಾಳುಗಳನ್ನು ಡೀಪ್ ಫ್ರೀಝರ್‌ನಲ್ಲಿ ಇಡಿ. ಬಳಿಕ ಹೊರಗೆ ತೆಗೆದು ತಯಾರಿಸಿ. ಚೆನ್ನಾಗಿ ಅರಳುತ್ತವೆ.
ಆಲೂ, ಗೋಧಿ ಮುಂತಾದವುಗಳ ಪರೋಟಾ ತಯಾರಿಸಿಕೊಳ್ಳಲು ಮಾವಿನಕಾಯಿ ಅಥವಾ ಮೆಣಸಿನಕಾಯಿ ಉಪ್ಪಿನಕಾಯಿಯ ಮಿಶ್ರಣವನ್ನು ಚೆನ್ನಾಗಿ ರುಬ್ಬಿಕೊಂಡು ಅದರ ಪೇಸ್ಟ್ ನ್ನು ಸಿದ್ಧಪಡಿಸಿ ಪರೋಟಾ ತಯಾರಿಸಿಕೊಳ್ಳಿ. ಬಳಿಕ ಅದರ ಮೇಲೆ ಉಪ್ಪಿನಕಾಯಿ ಪೇಸ್ಟ್, ನಂತರ ಅದಕ್ಕೆ ಹಾಕಬೇಕಾದ ಸಾಮಗ್ರಿಗಳನ್ನು ಹಾಕಿಕೊಳ್ಳಿ. ಇದರಿಂದ ಪರೋಟಾ ತುಂಬಾ ರುಚಿಕರವಾಗಿರುತ್ತದೆ.
ಚಹಾ ತಯಾರಿಸುವಾಗ ಒಂದು ವೇಳೆ ಹಸಿಶುಂಠಿ ಕಡಿಮೆಯಾದರೆ ಹೀಗೆ ಮಾಡಿ. ಚಹಾ ತಯಾರಿಸಿಕೊಂಡ ಬಳಿಕ ಹಸಿ ಶುಂಠಿ ತುರಿದುಕೊಂಡು ಅದರಲ್ಲಿ ಹಾಕಿ ಮತ್ತೊಮ್ಮೆ ಕುದಿಸಿಕೊಳ್ಳಿ. ಆಗ ಚಹಾ ಪರಿಪೂರ್ಣ ಹಸಿಶುಂಠಿಯ ವಾಸನೆ ಪಡೆದುಕೊಳ್ಳುತ್ತದೆ.
ಮಲಾಯಿ ಕೋಫ್ತಾ ಅಥವಾ ಯಾವುದೇ ಪ್ರಕಾರದ ಕೋಫ್ತಾ ಬಹಳಷ್ಟು ಸಾಫ್ಟ್ ಆಗಿಬಿಟ್ಟರೆ, ತಯಾರಿಸಿದ ಬಳಿಕ 1 ಗಂಟೆ ಫ್ರಿಜ್‌ನಲ್ಲಿ ಇಡಿ. ನಂತರ ಸರ್ವ್ ಮಾಡುವಾಗ ಸಿದ್ಧಪಡಿಸಿದ ಗ್ರೇವಿಯಲ್ಲಿ ಹಾಕಿ. ಆಗ ಕೋಫ್ತಾ ಹೆಚ್ಚು ಒಡೆದುಕೊಳ್ಳುವುದಿಲ್ಲ.
ಉಳಿದ ಸಲಾಡ್‌ನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಪ್ಯೂರಿ ತಯಾರಿಸಿಕೊಳ್ಳಿ. ಬಳಿಕ ಅದನ್ನು ಹಿಟ್ಟಿನಲ್ಲಿ ಕಲಸಿಕೊಂಡು ರೊಟ್ಟಿ ಅಥವಾ ಪರೋಟಾ ತಯಾರಿಸಿಕೊಳ್ಳಿ. ಅದರ ರುಚಿ ವಿಭಿನ್ನವಾಗಿರುತ್ತದೆ.
ಕೆಂಪು ಮೂಲಂಗಿಯ ವ್ಯಂಜನ ತಯಾರಿಸುವಾಗ ಅದರ ತುಂಡುಗಳನ್ನು ಎಣ್ಣೆಯಲ್ಲಿ ಹಾಕಿ ಬಾಡಿಸಿಕೊಳ್ಳಿ. ಅದರ ಜೊತೆ ಜೊತೆಗೆ ಪಾಲಕ್‌ನ 2-3 ಎಲೆಗಳನ್ನು ಸೇರಿಸಿಕೊಳ್ಳಿ. ಈ ಪಲ್ಯ ಬಹಳ ರುಚಿಯಾಗಿರುತ್ತದೆ.
ಏಲಕ್ಕಿಯ ಪುಡಿಯನ್ನು ಚಹಾ ಅಥವಾ ಸಿಹಿ ಪದಾರ್ಥಗಳಲ್ಲಿ ಬಳಸುತ್ತೀರಿ. ಆ ಪುಡಿಯನ್ನು ಮೊದಲೇ ತಯಾರಿಸಿಕೊಳ್ಳಲು ಏಲಕ್ಕಿಯನ್ನು ಫ್ರಿಜ್‌ನಲ್ಲಿ ಇಟ್ಟಿರಿ. ತಂಪಾದ ಏಲಕ್ಕಿ ಮಿಕ್ಸಿಯಲ್ಲಿ ಬಹುಬೇಗ ನುಣ್ಣಗಾಗುತ್ತದೆ.
ಶಾಹಿ ಪನೀರ್, ದಮ್ ಆಲೂ ತಯಾರಿಸಿಕೊಳ್ಳಲು ಗಸಗಸೆಯನ್ನು ಅವಶ್ಯವಾಗಿ ಬಳಸಲಾಗುತ್ತದೆ. ಆದರೆ ಅದನ್ನು ಪ್ರತಿಸಲ ಪುಡಿ ಮಾಡಿಕೊಳ್ಳುವುದು ಸುಲಭದ ಸಂಗತಿಯಲ್ಲ. ಮೊದಲು ಗಸಗಸೆಯನ್ನು ಸ್ವಲ್ಪ ಹುರಿದಿಟ್ಟುಕೊಳ್ಳಿ. ಬಳಿಕ ಅದಕ್ಕೆ ಕಲ್ಲಂಗಡಿ ಬೀಜದ ತಿರುಳು, ಗೋಡಂಬಿ ಹಾಕಿಕೊಂಡು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಪಲ್ಯ ತಯಾರಿಸಿಕೊಳ್ಳುವಾಗ ಅರ್ಧ ಗಂಟೆ ಮುಂಚೆ ಒಂದಿಷ್ಟು ಮೊಸರು ಅಥವಾ ಉಗುರು ಬೆಚ್ಚಗಿನ ನೀರಿನಲ್ಲಿ ಈ ಪುಡಿಯನ್ನು ಹಾಕಿಕೊಂಡು ಉಪಯೋಗಿಸಿಕೊಳ್ಳಿ.
ಬೆಂಡೆಕಾಯಿಯ ಲೋಳೆ ನಿವಾರಿಸಲು ಸ್ಟೀಲ್ ಚಾಕುವಿಗೆ ನಿಂಬೆರಸ ಲೇಪಿಸಿ. ಬಳಿಕ ಅದರಿಂದ ಕತ್ತರಿಸಿಕೊಳ್ಳಿ. ಅದರಿಂದ ಬೆಂಡೆಕಾಯಿಯ ಲೋಳೆ ನಿಮ್ಮ ಕೈಗೆ ಅಂಟುವುದಿಲ್ಲ.
ಸಜ್ಜಿಗೆಗೆ ಬಳಸುವ ಸಣ್ಣ ರವೆಯನ್ನು ಹುರಿಯುವಾಗ 1 ದೊಡ್ಡ ಚಮಚ ಕಡಲೆಹಿಟ್ಟು ಮಿಶ್ರಣ ಮಾಡಿಕೊಂಡು ಹುರಿದುಕೊಳ್ಳಿ. ಅದಕ್ಕೆ ನೀರಿನ ಬದಲು ಹಾಲು ಹಾಕಿಕೊಳ್ಳಿ. ಸಜ್ಜಿಗೆ ತುಂಬಾ ರುಚಿಕರವಾಗುತ್ತದೆ.
ಉಪ್ಪಿಟ್ಟು ತಯಾರಿಸುವಾಗ 1 ಕಪ್ ರವೆಗೆ ನಾಲ್ಕನೇ ಒಂದು ಭಾಗ ಗಟ್ಟಿಯಾದ ಮೊಸರನ್ನು ಕಡೆದುಕೊಂಡು, ನೀರು ಹಾಕುವಾಗ ಬೆರೆಸಿ. ಇದರಿಂದ ಉಪ್ಪಿಟ್ಟು ರುಚಿಕರ ಹಾಗೂ ಹಿಗ್ಗಿದಂತೆ ತಯಾರಾಗುತ್ತದೆ.
ಮೃದುವಾದ ಪರೋಟಾ ತಯಾರಿಸಲು 2 ಕಪ್ ಆಟಾಗೆ ಅರ್ಧ ಕಪ್ ತಾಜಾ ಮೊಸರನ್ನು ಹಾಕಿ. ಪರೋಟಾ ಮೃದುವಾಗಿ ತಿನ್ನಲು ಖುಷಿಯಾಗುತ್ತದೆ.
ಮೂಲಂಗಿ ಹಾಗೂ ಅದರ ಎಲೆಯ ಪಲ್ಯ ತಯಾರಿಸುವ ಸಂದರ್ಭದಲ್ಲಿ ಅದಕ್ಕೆ ಸ್ವಲ್ಪ ಹುರಿದ ಕಡಲೆಹಿಟ್ಟನ್ನು ಬೆರೆಸಿಕೊಳ್ಳಿ. ಅದರಿಂದ ಪಲ್ಯವಂತೂ ರುಚಿಕಟ್ಟಾಗಿರುತ್ತದೆ. ಜೊತೆಗೆ ಮೂಲಂಗಿಯ ವಾಸನೆ ಕೂಡ ಬರದು.
ಗೋಧಿ ರೊಟ್ಟಿ ಅಥವಾ ಚಪಾತಿ ಮೃದುವಾಗಲು ಹಾಗೂ ರುಚಿರುಚಿಯಾಗಿರಲು ಅದರಲ್ಲಿ ಅರ್ಧ ನೀರು, ಅರ್ಧ ಹಾಲು ಮಿಶ್ರಣ ಮಾಡಿ.
– ಮಾಲಾ
TAGS : ರುಚಿಕರ ಆಹಾರ, ಹಾಗಲಕಾಯಿ, ಪುದೀನಾ ಚಟ್ನಿ, ಡೋಕ್ಲಾ, ಪಾಪ್ ಕಾರ್ನ್, ಪರೋಟಾ, ಶುಂಠಿ ಚಹಾ, ಮಲಾಯಿ ಕೋಫ್ತಾ, ಪಾಲಕ್-ಮೂಲಂಗಿ, ಬೆಂಡೆಕಾಯಿ, ಏಲಕ್ಕಿ ಪುಡಿ