ಅಸ್ಸಾಂ ಆಲೂ ಫ್ರೈ

ಸಾಮಗ್ರಿ : 500 ಗ್ರಾಂ ಸಣ್ಣ ಆಲೂ (ಉದ್ದಕ್ಕೆ 4 ಭಾಗ ಮಾಡಿ), ಒಂದಿಷ್ಟು ತುಂಡರಿಸಿದ ಒಣಮೆಣಸು, ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸು, 4-5 ಚಮಚ ತುಪ್ಪ, ಒಗ್ಗರಣೆಗೆ ತುಸು ಜೀರಿಗೆ, ಕರಿ ಎಳ್ಳು, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸ.

ವಿಧಾನ : ಸಿಪ್ಪೆ ತೆಗೆಯದೆ 4 ಭಾಗ ಮಾಡಿದ ಆಲೂವನ್ನು ಪಾತ್ರೆಯಲ್ಲಿ ಸುಮಾರಾಗಿ ಬೇಯಿಸಿ, ನೀರು ಬೇರ್ಪಡಿಸಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ತುಂಡರಿಸಿದ ಒಣ ಮೆಣಸಿನಕಾಯಿ, ಹಸಿ ಮೆಣಸು, ಬೆಳ್ಳುಳ್ಳಿ, ಆಮೇಲೆ ಈರುಳ್ಳಿ ಹಾಕಿ ಬಾಡಿಸಿ. ಕೊನೆಯಲ್ಲಿ ಅರೆ ಬೆಂದ ಆಲೂ ಹಾಕಿ ಮಂದ ಉರಿಯಲ್ಲಿ ಚೆನ್ನಾಗಿ ಬಾಡಿಸಿ. ಇದು ಓವರ್‌ ಕುಕ್‌ ಆಗದೆ ತುಸು ಕ್ರಂಚಿ ಆಗಿರಲಿ. ಉಪ್ಪು ಹಾಕಿ ಕೆದಕಿ ಕೆಳಗಿಳಿಸಿ, ನಿಂಬೆಹಣ್ಣು ಹಿಂಡಿಕೊಳ್ಳಿ. ಇದು ರೊಟ್ಟಿ, ಚಪಾತಿಗಳಿಗೆ ಚೆನ್ನಾಗಿ ಹೊಂದುತ್ತದೆ.

ಪಂಪ್ಕಿನ್ಲಕ್ಸಾ

ಮೂಲ ಸಾಮಗ್ರಿ : 2-3 ಕಪ್‌ ಸಣ್ಣಗೆ ಹೆಚ್ಚಿದ ಸಿಹಿಗುಂಬಳ, 2 ಕಪ್‌ ವೆಜಿಟೆಬಲ್ ಸ್ಟಾಕ್‌, ತುಂಡರಿಸಿದ 4-5 ಅಣಬೆ, 5-6 ಚಮಚ ಆಲಿವ್ ಆಯಿಲ್‌, ಒಂದಿಷ್ಟು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ಉದ್ದಕ್ಕೆ ಹೆಚ್ಚಿದ ಈರುಳ್ಳಿ ತೆನೆ, ಅರ್ಧ ಕಪ್ ಬ್ರೋಕ್ಲಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ವೈಟ್‌ ಪೆಪ್ಪರ್‌, ತೆಂಗಿನ ಹಾಲು, ಹಾಟ್‌ ಸಾಸ್‌,  ಸಕ್ಕರೆ, ನಿಂಬೆರಸ.

ಅಲಂಕರಿಸಲು ಸಾಮಗ್ರಿ : 1 ಕಪ್‌ ಬೆಂದ ನೂಡಲ್ಸ್, ತುಂಡರಿಸಿದ 1-2 ಒಣ ಮೆಣಸು, ತುಪ್ಪದಲ್ಲಿ ಹುರಿದ ಕಡಲೆಬೀಜ, 2-3 ಚಮಚ ಸೀಡ್‌ಲೆಸ್‌ ದಾಳಿಂಬೆ ಬೀಜ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು.

ವಿಧಾನ : ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಇದಕ್ಕೆ ಜೀರಿಗೆ ಒಗ್ಗರಣೆ ಕೊಟ್ಟು ಹೆಚ್ಚಿದ ಪದಾರ್ಥಗಳನ್ನೆಲ್ಲ ಹಾಕಿ ಬಾಡಿಸಿ. ಆಮೇಲೆ ಸ್ಟಾಕ್‌ ಚಿಮುಕಿಸಿ ಬೇಯಲು ಬಿಡಿ. ಆಮೇಲೆ ಉಪ್ಪು, ಖಾರ ಹಾಕಿ ಬಾಡಿಸಿ. ವೆಜ್‌ ಸ್ಟಾಕ್‌ ಬೆರೆಸಿ ಕುದಿಯಲು ಬಿಡಿ. ಕೆಳಗಿಳಿಸಿ ಆರಿದ ನಂತರ ಮಿಕ್ಸಿಗೆ ಹಾಕಿ ನುಣ್ಣಗೆ ತಿರುವಿಕೊಳ್ಳಿ. ಅದೇ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಹೆಚ್ಚಿದ ಅಣಬೆ, ಬ್ರೋಕ್ಲಿ ಹಾಕಿ ಬಾಡಿಸಿ. ಆಮೇಲೆ ಇದಕ್ಕೆ ತೆಂಗಿನ ಹಾಲು, ವೈಟ್‌ ಪೆಪ್ಪರ್‌ ಬೆರೆಸಿ ಮಂದ ಉರಿಯಲ್ಲಿ ಚೆನ್ನಾಗಿ ಕುದಿಸಿರಿ. ಆಮೇಲೆ ಇದಕ್ಕೆ ಕುಂಬಳದ ಪೇಸ್ಟ್ ಬೆರೆಸಿ. ಅಗತ್ಯವೆನಿಸಿದರೆ ಅರ್ಧ ಕಪ್‌ ಸ್ಟಾಕ್‌ ಬೆರೆಸಿ ಎಲ್ಲ ಚೆನ್ನಾಗಿ ಕುದಿಯುವಂತೆ ಗೊಟಾಯಿಸಿ. ಸರ್ವ್ ಮಾಡುವ ಮೊದಲು ಬಟ್ಟಲಿಗೆ ನೂಡಲ್ಸ್ ಹರಡಿಕೊಂಡು ಅದರ ಮೇಲೆ ಈ ಗ್ರೇವಿ ಸುರಿಯಿರಿ. ಇದರ ಮೇಲೆ ಚಿತ್ರದಲ್ಲಿರುವಂತೆ ಕಡಲೆಬೀಜ, ಉದ್ದಕ್ಕೆ ಹೆಚ್ಚಿದ ಹಸಿಮೆಣಸು, ಹಾಟ್‌ ಸಾಸ್‌, ಸೀಡ್‌ಲೆಸ್‌ ದಾಳಿಂಬೆ, ಹೆಚ್ಚಿದ ಈರುಳ್ಳಿ ತೆನೆ, ಕೊ.ಸೊಪ್ಪು ಉದುರಿಸಿ ನಿಂಬೆಹಣ್ಣು ಹಿಂಡಿಕೊಳ್ಳಿ. ಬಿಸಿ ಬಿಸಿಯಾಗಿ ಇದನ್ನು ಸವಿಯಲು ಕೊಡಿ. ನೂಡಲ್ಸ್ ವಿತ್‌ ಪಂಪ್‌ಕಿನ್‌ ಸೂಪ್‌ ಇರುವುದರಿಂದ ಇದು ಒಂದು ಪರ್ಫೆಕ್ಟ್ ಮೀಲ್ ‌ಆಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ