ಓಪನ್‌ ಚಿಕನ್‌ ಬರ್ಗರ್‌

ಸಾಮಗ್ರಿ : 4 ಚಮಚ ಬೆಣ್ಣೆ, ಅರ್ಧ ಕಪ್‌ ಫಾರ್ಚೂನ್‌ ಎಣ್ಣೆ, 2 ಕಪ್‌ ಗೋಧಿಹಿಟ್ಟು, ತುಸು ಹಾಲು, ಒಂದಿಷ್ಟು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಸೆಲೆರಿ, ಕ್ಯಾಪ್ಸಿಕಂ, 2 ಜೆಲ್‌ಪಿನೋ, 350 ಗ್ರಾಂ ಚಿಕನ್‌ ಪೀಸ್‌, 4-5 ಬರ್ಗರ್‌ ಬನ್ಸ್, ತುರಿದ ಚೀಸ್‌, ತುಸು ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಮೆಣಸು.

ವಿಧಾನ : ಬಾಣಲೆಗೆ ತುಸು ಫಾರ್ಚೂನ್‌ ಎಣ್ಣೆ, ಬೆಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಹಿಟ್ಟು ಬೆರೆಸಿ ಮಂದ ಉರಿಯಲ್ಲಿ ಕೆದಕಬೇಕು. ಗಂಟಾಗದಂತೆ ನಡುನಡುವೆ ಫಾರ್ಚೂನ್‌ ಎಣ್ಣೆ ಬೆರೆಸುತ್ತಾ ಕೆದಕಬೇಕು. ಸ್ವಲ್ಪ ಹೊತ್ತಿನ ನಂತರ ಹಾಲು ಬೆರೆಸಿ ಕೈಯಾಡಿಸಿ. ಇದು ಥಿಕ್‌ ಸಾಸ್‌ ಆಗುವಂತೆ ಮಾಡಿ, ಕೆಳಗಿಳಿಸಿ.ಅದೇ ಬಾಣಲೆಯಲ್ಲಿ ಉಳಿದ ಫಾರ್ಚೂನ್‌ ಎಣ್ಣೆ ಬಿಸಿ ಮಾಡಿ ಹೆಚ್ಚಿದ ಬೆಳ್ಳುಳ್ಳಿ. ಈರುಳ್ಳಿ, ಸೆಲೆರಿ ಹಾಕಿ ಬಾಡಿಸಿ. ನಂತರ ಕ್ಯಾಪ್ಸಿಕಂ, ಚಿಕನ್‌ ತುಂಡುಗಳನ್ನು ಸೇರಿಸಿ, ತುಸು ನೀರು ಚಿಮುಕಿಸಿ ಬಾಡಿಸಿ. ಆಮೇಲೆ ಇದಕ್ಕೆ ಜೆಲ್‌ಪೀನೋ, ಉಪ್ಪು, ಮೆಣಸು ಹಾಕಿ ಕೆದಕಬೇಕು. ಇದನ್ನು ಸಾಸ್‌ಗೆ ಬೆರೆಸಿ, ಗುಂಡಗೆ ಕತ್ತರಿಸಿದ, ಬೆಣ್ಣೆ ಸವರಿದ ಬರ್ಗರ್‌ ಬನ್‌ ಮೇಲೆ ಹರಡಿ, ತುರಿದ ಚೀಸ್‌, ಕೊ.ಸೊಪ್ಪು ಉದುರಿಸಿ ಸವಿಯಲು ಕೊಡಿ.

ಚಿಪ್ಸ್ ಡಿಪ್

ಸಾಮಗ್ರಿ : ಒಂದಿಷ್ಟು ಹೆಚ್ಚಿದ ಅವಕ್ಯಾಡೋ, ಈರುಳ್ಳಿ, ಹಸಿಮೆಣಸು, ಟೊಮೇಟೊ, ಪಾರ್ಸ್ಲೆ, 2 ಆಲೂ, ಕರಿಯಲು ಫಾರ್ಚೂನ್‌ ಎಣ್ಣೆ, ಜೊತೆಗೆ ಒಂದಿಷ್ಟು ಪೊಟೇಟೊ, ಬನಾನಾ, ಟಾರ್ಟಿಲಾ ಚಿಪ್ಸ್, ರುಚಿಗೆ ತಕ್ಕಷ್ಟು ಉಪ್ಪು ಮೆಣಸು, ತುಸು ಕ್ರೀಂ.

ವಿಧಾನ : ಒಂದು ಬಟ್ಟಲಿಗೆ ಈರುಳ್ಳಿ, ಅವಕ್ಯಾಡೋ, ಹಸಿಮೆಣಸು, ಉಪ್ಪು, ಮೆಣಸು ಹಾಕಿ ಬೆರೆಸಿ ಡಿಪ್‌ ರೆಡಿ ಮಾಡಿ ಫ್ರಿಜ್‌ನಲ್ಲಿಡಿ. ಇನ್ನೊಂದು ಬಟ್ಟಲಿಗೆ ಟೊಮೇಟೊ, ಬೆಳ್ಳುಳ್ಳಿ, ಪಾರ್ಸ್ಲೆ, ಉಪ್ಪು, ಮೆಣಸು ಹಾಕಿ ಮಿಶ್ರಣ ತಯಾರಿಸಿ ಇದನ್ನೂ ಫ್ರಿಜ್‌ನಲ್ಲಿಡಿ. 3ನೇ ಡಿಪ್‌ಗಾಗಿ ಒಂದು ಬಟ್ಟಲಿಗೆ ಕ್ರೀಂ, ಉಪ್ಪು, ಮೆಣಸು ಹಾಕಿ ಬೆರೆಸಿಡಿ. ಉಪ್ಪು ನೀರಲ್ಲಿ ನೆನೆಹಾಕಿದ ಉದ್ದಕ್ಕೆ ಹೆಚ್ಚಿದ ಆಲೂ ತುಂಡುಗಳನ್ನು ಒರೆಸಿ, ಒಣಗಿಸಿ. ಬಾಣಲೆಯಲ್ಲಿ ಫಾರ್ಚೂನ್‌ ಎಣ್ಣೆ ಬಿಸಿ ಮಾಡಿ. ಇವನ್ನು ಹೊಂಬಣ್ಣಕ್ಕೆ ಕರಿಯಿರಿ. ಚಿತ್ರದಲ್ಲಿರುವಂತೆ ಒಂದು ದೊಡ್ಡ ಪ್ಲೇಟಿನಲ್ಲಿ ಆಲೂ ಫ್ರೈ, ಉಳಿದ ಚಿಪ್ಸ್, 3 ಬಗೆ ಡಿಪ್‌ ಇರಿಸಿ ಸವಿಯಲು ಕೊಡಿ.

ಜೆಲ್‌ಪೀನೋ ಪೌಪರ್ಸ್‌

ಸಾಮಗ್ರಿ : ಅರ್ಧರ್ಧ ಕಪ್‌ ತುರಿದ ಪನೀರ್‌, ಚ್ಯಾಡರ್‌ ಚೀಸ್‌, ಮೋಜೆರೆಲಾ ಚೀಸ್‌, 10 ಜೆಲ್‌ಪೀನೋ ಮೆಣಸಿನಕಾಯಿ (ಬೀಜ ತೆಗೆದು ಸಣ್ಣಗೆ ಹೆಚ್ಚಿಡಿ), 1 ಮೊಟ್ಟೆ, 1 ಕಪ್‌ ಬ್ರೆಡ್‌ ಕ್ರಂಬ್ಸ್, ಕರಿಯಲು ಸಾಕಷ್ಟು ಫಾರ್ಚೂನ್‌ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ತುಸು ಕೊ.ಸೊಪ್ಪು.

ವಿಧಾನ : ಒಂದು ಬೇಸನ್ನಿಗೆ ಪನೀರ್‌, ತುರಿದ ಚೀಸ್‌ಗಳು, ಹೆಚ್ಚಿದ ಜೆಲ್‌ಪೀನೊ, ಉಪ್ಪು, ಖಾರ ಸೇರಿಸಿ ಮಿಶ್ರ ಮಾಡಿ. ಈ ಮಿಶ್ರಣದಿಂದ ಸಣ್ಣ ಉಂಡೆ ಮಾಡಿ, ಚಿತ್ರದಲ್ಲಿರುವಂತೆ ಸುರುಳಿ ಮಾಡಿ. ಬೀಟ್‌ ಮಾಡಿದ ಮೊಟ್ಟೆಯಲ್ಲಿ ಅದ್ದಿಕೊಂಡು ಬ್ರೆಡ್‌ ಕ್ರಂಬ್ಸ್ ನಲ್ಲಿ ಚೆನ್ನಾಗಿ ಹೊರಳಿಸಿ, ಕಾದ ಫಾರ್ಚೂನ್‌ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಇದರ ಮೇಲೆ ಕೊ.ಸೊಪ್ಪು ಉದುರಿಸಿ, ಡಿಪ್‌ ಜೊತೆ ಸವಿಯಲು ಕೊಡಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ