ಭಾರತದಲ್ಲಿ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ, 11 ರಾಜ್ಯಗಳ 46 ಆಸ್ಪತ್ರೆಗಳಲ್ಲಿ ದಾಖಲಾದ ಶೇ.67ರಷ್ಟು ರೋಗಿಗಳಲ್ಲಿ ಡೀಪ್‌ ಲೇನ್‌ ಥ್ರಾಂಬೋಸಿಸ್‌ (ಡಿವಿಟಿ)ನ ಲಕ್ಷಣಗಳು ಕಂಡುಬಂದಿವೆ.

ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಇಂತಹ ರೋಗಿಗಳ ಸಂಖ್ಯೆ ಹೆಚ್ಚು ಎನ್ನುವುದೂ ಕಂಡುಬಂದಿದೆ. ಸಮೀಕ್ಷೆಯಿಂದ ತಿಳಿದುಬಂದ ಸಂಗತಿಯೆಂದರೆ, ಡಿವಿಟಿಯಿಂದ ಸೋಂಕಿಗೀಡಾದ ರೋಗಿಗಳ ವಯಸ್ಸು 40-70 ವಯಸ್ಸಿನೊಳಗಿತ್ತು.

ಸಮೀಕ್ಷೆಯಲ್ಲಿ ಕಂಡುಬಂದ ಮತ್ತೊಂದು ವಿಷಯವೆಂದರೆ, ಈ ರೋಗದಿಂದ ಉಂಟಾಗುವ ಗಂಭೀರ ಪರಿಣಾಮಗಳನ್ನು ಭಾರತದಲ್ಲಿ ಕಡಿಮೆ ಎಂಬಂತೆ ಪರಿಗಣಿಸಲಾಗಿದೆ. ಏಕೆಂದರೆ ಶೇ.80ರ ತನಕ ಇದರ ಲಕ್ಷಣಗಳು ಅರಿವಿಗೇ ಬರುವುದಿಲ್ಲ. ಇದು ಗಂಭೀರ ರೂಪ ಪಡೆದುಕೊಳ್ಳಬಹುದು. ಆದರೆ ಅದು ಗುಣಪಡಿಸಲಾಗದ ರೋಗ ಏನಲ್ಲ. ಆದರೆ ಅದಕ್ಕಾಗಿ ಎಚ್ಚರದಿಂದಿರಬೇಕು ಮತ್ತು ಈ ರೋಗದ ಕುರಿತಂತೆ ಮಾಹಿತಿ ಪಡೆದುಕೊಳ್ಳಬೇಕು.

ಡೀಪ್ಲೇನ್ಥ್ರಾಂಬೋಸಿಸ್

ದೇಹದ ಕೆಳ ಭಾಗಗಳಾದ ಕಿಬ್ಬೊಟ್ಟೆಯ ಪಕ್ಕದ ಮೂಳೆ, ತೊಡೆ ಹಾಗೂ ಪಾದದ ಪ್ರಮುಖ ರಕ್ತನಾಳಗಳಲ್ಲಿ ಯಾವುದೋ ಕಾರಣದಿಂದ ರಕ್ತ ಗರಣೆಗಟ್ಟುವುದರಿಂದಾಗಿ ಡಿ.ವಿ.ಟಿಯ ಸಮಸ್ಯೆ ಉತ್ಪನ್ನವಾಗುತ್ತದೆ. ರಕ್ತ ಗರಣೆಗಟ್ಟುವಿಕೆಯಿಂದಾಗಿ ರಕ್ತನಾಳಗಳು ದೇಹದ ಕೆಳಭಾಗದಿಂದ ರಕ್ತವನ್ನು ಹೃದಯದ ತನಕ ತಲುಪಿಸುವುದಿಲ್ಲ. ಈ ಕಾರಣದಿಂದ ಸಾಧಾರಣ ನೋವು, ಊತ ಹಾಗೂ ಪಾದಗಳಲ್ಲಿ ಬಿಸಿಯ ಅನುಭೂತಿ ಉಂಟಾಗುತ್ತದೆ. ಒಂದುವೇಳೆ ರಕ್ತದ ಗರಣೆಗಳು ಯಾವುದೊ ಕಾರಣದಿಂದ ಒಡೆದು ಬೇರೆ ರಕ್ತನಾಳಗಳ ಮುಖಾಂತರ ಶ್ವಾಸಕೋಶದ ನಾಳದಲ್ಲಿ ಹೊರಟುಹೋಗುತ್ತವೆ. ಇದರಿಂದಾಗಿ ಸಾಕಷ್ಟು ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ. ಪ್ರಾಣಕ್ಕೆ ಕುತ್ತು ಉಂಟಾಗುವ ಸಾಧ್ಯತೆಯೂ ಇರುತ್ತದೆ.

ಡಿವಿಟಿಗೆ ಏನೇನು ಕಾರಣ?

ಈ ರೋಗದಿಂದ ಸೋಂಕಿಗೀಡಾಗಲು ಕೆಲವು ಮುಖ್ಯ ಕಾರಣಗಳೆಂದರೆ ದೇಹದ ಕೆಳಭಾಗದಲ್ಲಿ ಗಂಭೀರ ಏಟು ತಗುಲಿರುವುದು ಅಥವಾ ಫ್ರ್ಯಾಕ್ಚರ್‌ ಆಗಿದ್ದರೆ ರಕ್ತನಾಳಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಅದರಲ್ಲಿ ರಕ್ತದಲ್ಲಿ ಗರಣೆಗಟ್ಟುವ ಸಾಧ್ಯತೆ ಹೆಚ್ಚುತ್ತ ಹೋಗುತ್ತದೆ.

ಒಂದು ವೇಳೆ ದೇಹದಲ್ಲಿ ಕೆಂಪು ರಕ್ತಕಣಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿದ್ದರೆ, ಆಗಲೂ ಗರಣೆಗಟ್ಟು ಅಪಾಯ ಹೆಚ್ಚುತ್ತದೆ.

ಅಕಾಲಿಕ ಹೆರಿಗೆ ಅಥವಾ ಶಸ್ತ್ರಚಿಕಿತ್ಸೆಯ ಮುಖಾಂತರ ಮಗುವಿಗೆ ಜನನ, ಸಂತಾನ ನಿಯಂತ್ರಣ ಮಾತ್ರೆ ಸೇವನೆಯಿಂದಲೂ ರಕ್ತ ಗರಣೆಗಟ್ಟಬಹುದು.

ಡಿ.ವಿ.ಟಿ. ಲಕ್ಷಣಗಳು

60 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರಲ್ಲಿ ಈ ರೋಗ ಸಾಮಾನ್ಯ ಎಂದು ಹೇಳಲಾಗುತ್ತದೆ. ಈ ಸೋಂಕಿಗೆ ತುತ್ತಾಗುವ ಜನರಲ್ಲಿ ಕೆಳಕಂಡ ಲಕ್ಷಣಗಳು ಕಂಡುಬರಬಹುದು.

ಯಾವುದೇ ಒಂದು ಕಾಲಿನ ತ್ವಚೆಯ ಬಣ್ಣ ಮೇಲಿಂದ ಮೇಲೆ ಬದಲಾಗುತ್ತಾ ಇರುತ್ತದೆ. ಅದು ಒಮ್ಮೆ ಕೆಂಪು, ನೀಲಿ ಅಥವಾ ಬಿಳಿ ಬಣ್ಣ ತಾಳಬಹುದು.

ಕಾಲಿನಲ್ಲಿ ನೋವು ಶುರುವಾದಾಗ ಅದು ಅಸಹನೀಯ ಎನಿಸತೊಡಗುತ್ತದೆ. ಕಾಲುಗಳನ್ನು ಮಡಚಿದಾಗ ಆ ನೋವಿನ ಅನುಭೂತಿ ಹೆಚ್ಚು ಅರಿವಿಗೆ ಬರುತ್ತದೆ.

ಕಾಲಿನ ಸ್ನಾಯುಗಳಲ್ಲಿ ಎಳೆತ ಹಾಗೂ ಬಿಗಿದಂತಾಗುವುದು ಮತ್ತು ರಾತ್ರಿ ಹೊತ್ತು ಈ ನೋವು ಅತಿಯಾಗಿರುವುದು.

ಯಾವ ರೀತಿಯ ಪರೀಕ್ಷೆ ಅತ್ಯಶ್ಯಕ?

ಮೇಲ್ಕಂಡ ಲಕ್ಷಣಗಳಲ್ಲಿ ನಿಮಗೆ ಯಾವುದಾದರೂ ಲಕ್ಷಣಗಳು ಗೋಚರವಾದರೆ ವೈದ್ಯರ ಸಲಹೆ ಪಡೆಯಿರಿ ಹಾಗೂ ಅಗತ್ಯ ಕಂಡಲ್ಲಿ ಕೆಳಕಂಡ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ.

ಈ ಟೆಸ್ಟ್ ಮಾಡಿಸಿದಾಗ ಯಾವುದೇ ಬಗೆಯ ನೋವುಂಟಾಗುವುದಿಲ್ಲ. ಒಂದು ವೇಳೆ ರಕ್ತನಾಳದಲ್ಲಿ ಗರಣೆ ಇದ್ದರೆ ಅದು ರಿಪೋರ್ಟ್‌ನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

ಈ ಟೆಸ್ಟ್ ಮಾಡಿಸಿದಾಗ ಸ್ವಲ್ಪ ಅಸಹಜತೆ ಉಂಟಾಗುವುದು ಸಹಜ. ಆದರೆ ಇದು ಡಿವಿಟಿ ಪತ್ತೆ ಹಚ್ಚುವ ಎಲ್ಲಕ್ಕೂ ಉತ್ತಮ ಉಪಾಯ. ಒಂದು ವಿಶೇಷ ಬಣ್ಣದ ದ್ರವವನ್ನು ರಕ್ತನಾಳದಲ್ಲಿ ಇಂಜೆಕ್ಷನ್‌ ಮುಖಾಂತರ ತೂರಿಸಲಾಗುತ್ತದೆ. ಬಳಿಕ ಚಿತ್ರ ತೆಗೆದು ಗರಣೆ ಇರುವಿಕೆಯನ್ನು ಗುರುತಿಸಲಾಗುತ್ತದೆ. ಈ ಪರೀಕ್ಷೆಯಲ್ಲಿ ವಿದ್ಯುತ್‌ ಮುಖಾಂತರ ಸಂಚಾಲಿತವಾಗುವ ಎಲೆಕ್ಟ್ರೋಡ್‌ನಿಂದ ರಕ್ತನಾಳಗಳಲ್ಲಿನ ಹರಿವಿನ ಏರಿಳಿತ ಕಂಡುಕೊಳ್ಳಲಾಗುತ್ತದೆ.

ಇದು ಒಂದು ಬಗೆಯ ಕ್ಷಕಿರಣ ಪರೀಕ್ಷೆಯಾಗಿದ್ದು, ಅದರಿಂದ ರಕ್ತನಾಳದಲ್ಲಿನ ರಕ್ತದ ಗರಣೆಗಳು ಸುಲಭವಾಗಿ ಪತ್ತೆಯಾಗುತ್ತವೆ. ಒಂದು ವೇಳೆ ಇವೇ ಗರಣೆಗಳು ಸಣ್ಣ ತುಂಡು ತುಂಡುಗಳಾಗಿ ವಿಂಗಡಣೆಗೊಂಡು ಶ್ವಾಸಕೋಶದ ನಾಳದ ತನಕ ಬಂದು ತಲುಪಿದ್ದರೆ, ಪರೀಕ್ಷೆಯಿಂದ ಅದು ದೃಢಪಡುತ್ತದೆ.

ಡಿವಿಟಿ ತೊಂದರೆ ಯಾರಿಗೆ ಆಗುವ ಸಾಧ್ಯತೆ?

ಡಿ.ವಿ.ಟಿ. ತೊಂದರೆ ಯಾವ ವಯಸ್ಸಿನ ವ್ಯಕ್ತಿಗೆ ಬೇಕಾದರೂ ಉಂಟಾಗಬಹುದು. ಆದರೆ ಕೆಲವೊಮ್ಮೆ ವಿಶೇಷ ಪರಿಸ್ಥಿತಿಗಳಲ್ಲಿ ಅದು ಉಂಟಾಗುವ ಸಾಧ್ಯತೆ ಶೇ.90ರಷ್ಟು ಹೆಚ್ಚುತ್ತದೆ.

ಹಿಪ್‌ ಫ್ರ್ಯಾಕ್ಚರ್‌ ಅಥವಾ ಮಂಡಿಗಳ ಆರ್ಥೊಪ್ಲಾಸ್ಟಿ (ಪ್ಲಾಸಿಕ್‌ ಸರ್ಜರಿ ಮುಖಾಂತರ ಸರಿ ಮಾಡಿದ್ದು) ಸಂದರ್ಭದಲ್ಲಿ ಅಥವಾ ಈ ಅಂಗಗಳ ಶಸ್ತ್ರಚಿಕಿತ್ಸೆ ಯಾವುದರಿಂದ 14 ದಿನಗಳೊಳಗೆ ಗರಣೆಗಟ್ಟು ಅಪಾಯ ಅಧಿಕವಾಗಿರುತ್ತದೆ.

ಯಾವುದೇ ಬಗೆಯ ಕ್ಯಾನ್ಸರಿನ ಚಿಕಿತ್ಸೆಗಾಗಿ ಮಾಡಿದ ಶಸ್ತ್ರಚಿಕಿತ್ಸೆಯಿಂದ ರಕ್ತ ಗರಣೆಗಟ್ಟುವ ಸಾಧ್ಯತೆ ಹೆಚ್ಚುತ್ತದೆ.

ಕಾಲಿನ ಕೆಳಭಾಗದಲ್ಲಿ ಏಟು ತಗುಲಿದ್ದರೆ ಆ ಭಾಗದಲ್ಲಿ ಪ್ಲ್ಯಾಸ್ಟರ್‌ ಹಾಕುವ ಸಂದರ್ಭದಲ್ಲಿ ಗರಣೆಗಟ್ಟು ಅಪಾಯವಿರುತ್ತದೆ.

ಡಿವಿಟಿಗೆ ಚಿಕಿತ್ಸೆ

ರಕ್ತ ಗರಣೆಗಟ್ಟುವುದು ಆರಂಭದಲ್ಲೇ ಗೊತ್ತಾದರೆ ಡಾಕ್ಟರ್‌ ರಕ್ತ ತೆಳ್ಳಗಾಗಿಸುವ ಕೆಲವು ಔಷಧಿಗಳನ್ನು ಕೊಡುತ್ತಾರೆ. ಸ್ಥಿತಿ ಗಂಭೀರವಾದರೆ ಆಸ್ಪತ್ರೆಗೆ ಸೇರಬೇಕಾಗಿ ಬರುತ್ತದೆ.

ರಕ್ತನಾಳಗಳಲ್ಲಿ ಔಷಧಿಯನ್ನು ಇಂಜೆಕ್ಷನ್‌ ಮುಖಾಂತರ ದಿನ ಕೊಡಬೇಕಾದ ಸ್ಥಿತಿ ಬಂದಿದ್ದರೆ, ಕೆಲವು ದಿನ ಆಸ್ಪತ್ರೆಯಲ್ಲಿ ಇರಬೇಕಾದ ಪರಿಸ್ಥಿತಿ ಬರುತ್ತದೆ.

ತಡೆಯುವ ಉಪಾಯ

ನಿಮ್ಮ ದಿನಚರಿಯಲ್ಲಿ ಅಥವಾ ದೀರ್ಘ ಪ್ರವಾಸದ ಸಂದರ್ಭದಲ್ಲಿ ಕೆಲವು ಸಾಧಾರಣ ಸಂಗತಿಗಳ ಬಗ್ಗೆ ಗಮನಕೊಟ್ಟರೆ ಡಿವಿಟಿಯ ಅಪಾಯವನ್ನು ಸಾಕಷ್ಟು ಮಟ್ಟಿಗೆ ಕಡಿಮೆ ಮಾಡಬಹುದು.

ದೀರ್ಘ ಪ್ರಯಾಣ ಮತ್ತು 14,000 ಅಡಿ ಎತ್ತರದ ಪ್ರಯಾಣದ ಸಂದರ್ಭದಲ್ಲಿ ನಿಮ್ಮ ಕಾಲುಗಳನ್ನು ಒಂದೇ ಸ್ಥಿತಿಯಲ್ಲಿ ಇಡಬೇಡಿ. ಸ್ವಲ್ಪ ಸ್ವಲ್ಪ ಹೊತ್ತಿಗೆ ಅಷ್ಟಿಷ್ಟು ಸುತ್ತಾಡಿ.

ಯಾವುದೇ ದೊಡ್ಡ ಶಸ್ತ್ರಚಿಕಿತ್ಸೆ ಅಥವಾ ದೀರ್ಘ ಅನಾರೋಗ್ಯದ ಬಳಿಕ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ನಡೆಯಲು ಪ್ರಯತ್ನಿಸಿ.

ಕೆಲಸ ಮಾಡುವಾಗ ಅಥವಾ ಮನೆಯಲ್ಲಿ ಟಿ.ವಿ. ನೋಡುವ ಸಂದರ್ಭದಲ್ಲಿ ಬಹಳ ಹೊತ್ತಿನ ತನಕ ಒಂದೇ ಸ್ಥಿತಿಯಲ್ಲಿ  ಕೂತಿರಬೇಡಿ.

ಎಷ್ಟೋ ಸಲ ಕಾಲಿಗೆ ಜೋರಾಗಿ ಏಟು ತಗುಲಿದ್ದರೂ ಹೊರಗಿನಿಂದ ನೋಡಿದಾಗ ಯಾವುದೇ ಏಟಿನ ಗುರುತು ಕಂಡುಬರದು. ಆದರೆ ನೋವಿನ ಅನುಭೂತಿ ಆಗತೊಡಗುತ್ತದೆ. ಇದನ್ನು ನಿರ್ಲಕ್ಷಿಸಬೇಡಿ. ಏಕೆಂದರೆ ಈ ಬಗೆಯ ಏಟಿನಲ್ಲಿ ರಕ್ತನಾಳಗಳಿಗೆ ಹೆಚ್ಚು ಹಾನಿಯಾಗಿರುತ್ತದೆ ಮತ್ತು ಅದೇ ಗರಣೆಗಟ್ಟುತ್ತದೆ.

ಡಿವಿಟಿಯ ಬಗ್ಗೆ ಡಾ. ಅವಿನಾಶ್‌ ಅವರು ಹೇಳುವುದು ಹೀಗೆ, “ಯಾವುದೊ ಒಂದು ರೋಗಕ್ಕಾಗಿ ದೀರ್ಘಾವಧಿಯವರೆಗೆ ಹಾಸಿಗೆಯ ಮೇಲೆ ಇರುವಂತಹ ರೋಗಿಗಳಿಗೆ ಡಿವಿಟಿ ಆಗುವ ಸಾಧ್ಯತೆ ಹೆಚ್ಚು. ಈ ರೋಗವಿದ್ದಾಗ ರೋಗಿಗೆ ಸಾಮಾನ್ಯವಾಗಿ ಕಾಲಿನ ಕೆಳಭಾಗದಲ್ಲಿ ಊತ ಅಥವಾ ನೋವಿನ ಅನುಭೂತಿ ಆಗುವುದೇ ಇಲ್ಲ. ಆದರೆ ಕ್ರಮೇಣ ಇದರ ಅಪಾಯ ಹೆಚ್ಚುತ್ತ ಹೋಗಿ ಪಿ.ಇ. (ಪಲ್ಮನರಿ ಇಂಬಾಲಿಸಂ) ಸ್ಥಿತಿ ಉತ್ಪನ್ನವಾಗುತ್ತದೆ. ರಕ್ತದ ಗರಣೆಗಳು ಚಿಕ್ಕ ಚಿಕ್ಕ ಭಾಗಗಳಾಗಿ ಶ್ವಾಸನಾಳದಲ್ಲಿ ಪ್ರವೇಶಿಸಿದಾಗ ಈ ಸ್ಥಿತಿ ಉತ್ಪನ್ನವಾಗುತ್ತದೆ. ಅಧಿಕ ಪ್ರಮಾಣದಲ್ಲಿ ಹೆಚ್ಚಿನ ತುಂಡುಗಳು ಜಮೆಯಾದಾಗ ಪ್ರಾಣಕ್ಕೂ ಸಂಚಕಾರ ಉಂಟಾಗಬಹುದು.”

ಇಂಡಿಯನ್‌ ಅಬ್ಸರ್ವೇಶನ್‌ ಸರ್ವೆ ಆಫ್‌ ವೀನಸ್‌ ಥ್ರಾಂಬೊಲಿಸಂ ರಿಸ್ಕ್ ಅಂಡ್‌ ಪ್ರೊಫ್ಟಿವೆಕ್ಸಿಸ್‌ ಮುಖಾಂತರ ನಡೆಸಿದ ಒಂದು ಸಮೀಕ್ಷೆಯಲ್ಲಿ, ದಕ್ಷಿಣ ಭಾರತದಲ್ಲಿ ಈ ಸಮಸ್ಯೆ  ಕ್ರಮೇಣ ಹೆಚ್ಚುತ್ತ ಹೊರಟಿದೆ. ಡಿವಿಟಿಯಿಂದ ಉಂಟಾಗುವ ಗಂಭೀರ ಪರಿಣಾಮಗಳು ಈ ಸರ್ವೆಯಲ್ಲಿ ಬೆಳಕಿಗೆ ಬಂದಿವೆ. ಈ ರೋಗದಿಂದ ಯಾರು ಮೃತಪಟ್ಟಿದ್ದರೊ ಅವರು ಅದರ ಲಕ್ಷಣಗಳನ್ನು ನಿರ್ಲಕ್ಷಿಸಿರುವುದು ತಿಳಿದುಬಂದಿದೆ.

ಆಶ್ಚರ್ಯದ ಸಂಗತಿಯೆಂದರೆ, ಸಮೀಕ್ಷೆ ಕೈಗೊಂಡ ಶೇ.67ರಷ್ಟು ಜನರಲ್ಲಿ ಡಿವಿಟಿಯ ಅಪಾಯದ ಬಗ್ಗೆ ಹೇಳಲಾಗಿತ್ತು. ಅದರಲ್ಲಿ ಶೇ.19ರಷ್ಟು ಜನರು ಮಾತ್ರ ಡಿವಿಟಿ ತಡೆ ಉಪಾಯಗಳನ್ನು ಅನುಸರಿಸುತ್ತಿದ್ದಾರೆ. ಅಮೆರಿಕನ್‌ ಕಾಲೇಜ್‌ ಆಫ್‌ ಟೆಸ್ಟ್ ಫಿಸಿಶಿಯನ್‌ಮುಖಾಂತರ ಪ್ರಮಾಣಿಸಲ್ಪಟ್ಟ ಇದನ್ನು ಹೇಗೆ ತಡೆಯಬೇಕೆಂಬ ಉಪಾಯಗಳ ಪಟ್ಟಿಯನ್ನು ಭಾರತದಲ್ಲಿ ನಿರ್ಲಕ್ಷ್ಯ ಮಾಡುತ್ತಿರುವ ಕಾರಣದಿಂದಾಗಿ ಈ ರೋಗದ ಗಂಭೀರ ಪರಿಣಾಮಗಳು ಕಂಡುಬಂದಿವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ