`ದಿ ಯೆಲ್ಲೋ ಕಾಯಿನ್ ಕಮ್ಯುನಿಕೇಶನ್ಸ್'ನ ಸಂಸ್ಥಾಪಕಿ ಹಾಗೂ ನಿರ್ದೇಶಕಿ ಗೀತಾ ಸಿಂಗ್ ರ ಜನನ, ಉತ್ತರಾಖಂಡ ರಾಜ್ಯದ ಸಣ್ಣ ಹಳ್ಳಿಯ ಮಧ್ಯಮ ವರ್ಗದಲ್ಲಾಯಿತು. ಅವರ ಊರಿನಲ್ಲಿ ಹೆಣ್ಣುಮಕ್ಕಳಿಗೆ 15ಕ್ಕೆ ಮೊದಲೆ ಮದುವೆ ಆಗಿಹೋಗುತ್ತಿತ್ತು. ಆ ರೀತಿ ಅವರು ಉಚ್ಚ ಶಿಕ್ಷಣ ಪಡೆಯಲು ಆಗುತ್ತಿರಲಿಲ್ಲ. ಇವರ ತಂದೆ ಮಾತ್ರ, ಮಗಳು ಡಾಕ್ಟರ್ ಯಾ ಎಂಜಿನಿಯರ್ ಆಗಬೇಕೆಂದು ಬಯಸಿದರು. ಹೀಗೆ ಗೀತಾ ದೆಹಲಿಗೆ ಬಂದು ಉನ್ನತ ಶಿಕ್ಷಣ ಪಡೆದರು. ನಂತರ ಆರಂಭದಲ್ಲಿ ವಿಭಿನ್ನ ಮೀಡಿಯಾ ಸಂಸ್ಥೆಗಳಲ್ಲಿ ದುಡಿದರು. ಈ ರೀತಿ ಆಕೆ ಕಾರ್ಪೊರೇಟ್ ಕ್ಷೇತ್ರದಲ್ಲಿ ಒಂದು ಮುಖ್ಯ ಗುರಿ ತಲುಪಲು ಬಯಸಿದರು. ಆಕೆ ಮುಂದೆ ಬೆಳೆಯುತ್ತಾ, ದೆಹಲಿಯಲ್ಲಿ ಒಂದು ಸುವ್ಯವಸ್ಥಿತ ಪಿ ಬ್ರಾಂಡಿಂಗ್ ಏಜೆನ್ಸಿ ಸ್ಥಾಪಿಸಿದರು. ಈ ಕಂಪನಿಯಲ್ಲಿ ಈಗ 50ಕ್ಕಿಂತಲೂ ಅಧಿಕ ಮಂದಿ ದುಡಿಯುತ್ತಿದ್ದಾರೆ. ಅದರಲ್ಲಿ ಹೆಚ್ಚಿನ ಪಾಲು ಹೆಂಗಸರಿದ್ದಾರೆ.
2012ರಲ್ಲಿ ಈಕೆ ತಮ್ಮ ಕಂಪನಿ ಆರಂಭಿಸಿದರು. ನಂತರ 2014ರಲ್ಲಿ ಇದನ್ನು ಪ್ರೈ.ಲಿ. ಕಂಪನಿಯಾಗಿ ಮಾರ್ಪಡಿಸಲು ಸಾಧ್ಯವಾಯಿತು. ಇಲ್ಲಿ ಲಕ್ಷಾಂತರದಷ್ಟು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಬ್ರಾಂಡ್ಸ್ ಗೆ ಕೆಲಸ ಆಗುತ್ತಿದೆ. ಇಂದು ಈ ಕಂಪನಿಗೆ ದೇಶ ಒಂದು ವಿಶಿಷ್ಟ ಐಡೆಂಟಿಟ ನೀಡಿದೆ. ಈಕೆಗೆ 2018ರಲ್ಲಿ ಪಬ್ಲಿಕ್ ರಿಲೇಶನ್ ಇಂಡಸ್ಟ್ರಿಯಲ್ಲಿ `ವುಮೆನ್ ಎಂಟರ್‌ಪ್ರಿನರ್ ಆಫ್ ದಿ ಇಯರ್' ಪ್ರಶಸ್ತಿ ಲಭಿಸಿತು.
ನೀವು ಈ ಫೀಲ್ಡ್ ಗೆ ಬಂದಿದ್ದು ಹೇಗೆ? ಎಲ್ಲಿಂದ ಪ್ರೇರಣೆ ಸಿಕ್ಕಿತು?
ನಾನು ನನ್ನ ಕೆರಿಯರ್ ಆರಂಭಿಸಿದ್ದು ಒಬ್ಬ ಪತ್ರಕರ್ತೆಯಾಗಿ. ಹಲವು ಹೆಸರಾಂತ ಮೀಡಿಯಾ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು ಅದ್ಭುತ ಅನುಭವ! ಆದರೆ ಅಲ್ಲಿದ್ದರೂ ನಾನು ಕಾರ್ಪೊರೇಟ್ ಜಗತ್ತಿನಿಂದ ಬಹಳ ಆಕರ್ಷಿಸಲ್ಪಟ್ಟಿದ್ದೆ. ಅದರಲ್ಲೂ ವಿಶೇಷವಾಗಿ ಕಿರಣ್ ಮಜುಮ್ ದಾರ್ ಶಾ, ಇಂದ್ರಾ ನೂಯಿಯರಂಥ ಭಾರತೀಯ ಮಹಿಳಾ ಬಿಸ್ ನೆಸ್ ಲೀಡರ್ಸ್ ಗಳ ಪ್ರೇರಣಾದಾಯಕ ಜೀವನ ನನಗೆ ಬಲು ಹುಮ್ಮಸ್ಸು ತುಂಬಿತು. ಇಚ್ಛಾಶಕ್ತಿ, ನಿರಂತರ ಪ್ರಯಾಸಗಳಿಂದ ನಮ್ಮ ಕನಸನ್ನು ಸಾಕಾರಗೊಳಿಸಬಹುದು ಎಂಬುದು ಸ್ಪಷ್ಟವಾಯಿತು. ಜೊತೆಗೆ ನಾನು ಗಂಡುಹೆಣ್ಣು ಇಬ್ಬರಿಗೂ ಸಮಾನ ವಿಕಾಸಕ್ಕೆ ಅಕಾಶವಿರುವಂಥ ಒಂದು ಉತ್ತಮ ಉದ್ಯಮ ಸ್ಥಾಪಿಸಲು ಬಯಸಿದೆ. ನನ್ನ ಈ ಕನಸು ಕಮ್ಯುನಿಕೇಶನ್ಸ್ ನಿಂದಾಗಿ ಪರಿಪೂರ್ಣ ಆಯ್ತು. ಇಲ್ಲಿ ಹೆಂಗಸರಿಗೆ ಸರ್ವೋಚ್ಚ ಸುರಕ್ಷತೆ ನೀಡಲಾಗುತ್ತದೆ. ಅಲ್ಲಿ ಅವರು ತಮ್ಮ ಸಂಪೂರ್ಣ ಪ್ರತಿಭೆ ತೋರಿಸಲು ಅವಕಾಶವಿದೆ.
ಈ ಫೀಲ್ಡ್ ನಲ್ಲಿ ವಿಶೇಷವಾಗಿ ಹೆಂಗಸರು ಹೇಗೆ ಪ್ರಗತಿ ಕಾಣಲು ಸಾಧ್ಯ? ಅವರಿಗೆ ಎಂತೆಂಥ ಸವಾಲು ಎದುರಿಸಬೇಕಾಗುತ್ತದೆ?
ನನ್ನ ಅಭಿಪ್ರಾಯದಲ್ಲಿ ಸುಶಿಕ್ಷಿತ ಮಹಿಳೆಯರಿಗೆ ಇದಕ್ಕಿಂತ ಬೇರೊಂದು ಉತ್ತಮ ಫೀಲ್ಡ್ ಇಲ್ಲ ಎಂದೇ ಭಾವಿಸುತ್ತೇನೆ, ಏಕೆಂದರೆ ಇದು ಮಲ್ಟಿಟಾಸ್ಕಿಂಗ್ ಫೀಲ್ಡ್. ವಿಭಿನ್ನ ಕೆಲಸಗಳನ್ನು ಒಟ್ಟೊಟ್ಟಿಗೆ ಮ್ಯಾನೇಜ್ ಮಾಡುವುದನ್ನು ಹೆಂಗಸರು ಚೆನ್ನಾಗಿಯೇ ಅರಿತಿರುತ್ತಾರೆ. ಮಹಿಳೆ ವಾಸ್ತವಿಕವಾಗಿ ಅತಿ ಶಿಸ್ತು, ಸಂಘಟಿತ ಮನೋಭಾವ, ಕಷ್ಟಸಹಿಷ್ಣು ಆಗಿರುತ್ತಾಳೆ. ಅವಳ ಈ ಪ್ಲಸ್ ಪಾಯಿಂಟ್ಸ್ ಅವಳ ಡಿಗ್ನಿಫೈಡ್ ವ್ಯವಹಾರ, ಪರಮ ಸಹನೆಯಿಂದಾಗಿ ದೊರಕುತ್ತದೆ. ಇದು ಒಬ್ಬ ಯಶಸ್ವಿ ಬಿಸ್ ನೆಸ್ ವುಮನ್ ಳ ಪರಿಪೂರ್ಣ ವ್ಯಕ್ತಿತ್ವಕ್ಕೆ ಬೇಕೇ ಬೇಕು. ಕಮ್ಯುನಿಕೇಶನ್ ಇಂಡಸ್ಟ್ರಿಯಲ್ಲಿ ಈ ಎಲ್ಲಾ ಗುಣಗಳು ಯಾರಲ್ಲಿ ಅಡಗಿದೆಯೋ ಅವರು ಮಾತ್ರವೇ ಯಶಸ್ವಿ ಆಗಬಲ್ಲರು. ಪಿ, ಬ್ರಾಂಡಿಂಗ್, ಸೋಶಿಯಲ್ ಮೀಡಿಯಾಗಳಲ್ಲಿ ಹೆಂಗಸರು ಸಾಕಷ್ಟು ಮುಂದಾಳತ್ವ ವಹಿಸಿ ಮುನ್ನುಗಬಲ್ಲರು. ಪ್ರೊಫೆಶನ್ ಕ್ವಾಲಿಫಿಕೇಶನ್ಸ್ ಅಂದ್ರೆ ಮಾಸ್ ಕಮ್ಯುನಿಕೇಶನ್, ಮೀಡಿಯಾ, ಪತ್ರಿಕೋದ್ಯಮಗಳಲ್ಲಿ ಡಿಗ್ರಿ ಯಾ ಪ್ರೊಫೆಶನಲ್ ಡಿಗ್ರಿ ಯಾ ಅಡ್ವರ್ಟೈಸಿಂಗ್‌ಮಾರ್ಕೆಟಿಂಗ್ ನಲ್ಲಿ ಸರ್ಟಿಫಿಕೇಟ್ ಹೊಂದಿರಬೇಕಾದ್ದು ಅನಿವಾರ್ಯ. ಆಗ ಮಾತ್ರ ಇಲ್ಲಿ ಯಶಸ್ಸು ಕಾಣಲು ಸಾಧ್ಯ, ಇಂಡಸ್ಟ್ರಿಯನ್ನು ಸರಿಯಾಗಿ ಗುರುತಿಸಿ ಅರ್ಥೈಸಿಕೊಳ್ಳಲು ಸುಲಭ. ಪ್ರೊಫೆಶನ್ ಸಕ್ಸಸ್ ಗೆ ಇದು ಬೇಕೇ ಬೇಕು. ಏನೇ ಇರಲಿ, ಅವರು ಕೆಲವು ಸವಾಲುಗಳನ್ನಂತೂ ಎದುರಿಸಲೇಬೇಕು. ಏಕೆಂದರೆ ಈ ಫೀಲ್ಡ್ ನಲ್ಲಿ ಹಗಲೂ ರಾತ್ರಿ ಕೆಲಸ ಮಾಡುತ್ತಿರಬೇಕು. ಇದು ಪುರುಷ ಪ್ರಧಾನ ಸಮಾಜವಾದ್ದರಿಂದ, ಹೆಣ್ಣು ತನ್ನ ಜಾಬ್ ಜೊತೆ ಮನೆಯನ್ನೂ ಸಂಭಾಳಿಸಬೇಕಾಗುತ್ತದೆ.





