ಈ ಅಡಿಕ್ಷನ್‌ಗೆ ನಮ್ಮ ಕಣ್ಣುಗಳು ಬೆಲೆ ತೆರುತ್ತವೆ. ಈ ಗ್ಯಾಜೆಟ್ಸ್ ಮತ್ತು ಡಿವೈಸ್‌ಗಳಿಂದ ನಮ್ಮ ಕಣ್ಣುಗಳು ಕೇವಲ ದಣಿಯುವುದಷ್ಟೇ ಅಲ್ಲ, ಅವುಗಳಲ್ಲಿ ಉರಿ ಮತ್ತು ಕೆಂಪಗಾಗುವ ತೊಂದರೆಗಳೂ ಕಾಣಿಸಿಕೊಳ್ಳುತ್ತವೆ. ಅಂತಹ ತೊಂದರೆಗಳಿಂದ ರಕ್ಷಿಸಿಕೊಳ್ಳಲು ಇಲ್ಲಿವೆ ಕೆಲವು ಉಪಾಯಗಳು.

ತಪಾಸಣೆ : ನೀವು ಕಂಪ್ಯೂಟರ್‌ ಮುಂದೆ ನಿರಂತರವಾಗಿ ಕೆಲಸ ಮಾಡುವವರಾಗಿದ್ದರೆ, ವರ್ಷದಲ್ಲಿ 1 ಸಲ ನೇತ್ರತಜ್ಞರ ಬಳಿ ಹೋಗಿ ತಪಾಸಣೆ ಮಾಡಿಸಿಕೊಳ್ಳಿ. ನಿಮ್ಮ ಕಣ್ಣುಗಳು ಉರಿಯುತ್ತಿದ್ದರೆ ಹಾಗೂ ಅವು ಕೆಂಪಗಾಗಿದ್ದರೆ, ಅವುಗಳ ಪರೀಕ್ಷೆ ಅತ್ಯಗತ್ಯ ಎಂಬುದನ್ನು ಗಮನಿಸಿ.

ರೆಡ್ಯೂಸ್ಗ್ಲೇರ್‌ : ಸಿಸ್ಟಮ್ ನ ಮಾನಿಟರ್‌ ಮೇಲೆ ಆ್ಯಂಟಿಗ್ಲೇರ್‌ ಸ್ಕ್ರೀನ್‌ ಅವಶ್ಯ ಅಳವಡಿಸಿಕೊಳ್ಳಿ. ಸಾಧ್ಯವಾದರೆ ನಿಮ್ಮ ಆಸುಪಾಸಿನ ಗೋಡೆಗಳಿಗೆ ತಿಳಿ ಬಣ್ಣ ಲೇಪಿಸಿ. ಇದರಿಂದ ರಿಫ್ಲೆಕ್ಶನ್‌ನ ಪ್ರಕ್ರಿಯೆಗೆ ತಡೆ ಬೀಳುತ್ತದೆ. ಅದರಿಂದ ಕಣ್ಣುಗಳಿಗೆ ಹಿತ ಉಂಟಾಗುತ್ತದೆ.

ಆಗಾಗ ವಿಶ್ರಾಂತಿ ಪಡೆಯಿರಿ : ಸತತ ಕಂಪ್ಯೂಟರ್‌ ಮುಂದೆ ಕುಳಿತುಕೊಂಡು ಕೆಲಸ ಮಾಡುವುದರಿಂದ ಕಣ್ಣುಗಳಿಗೆ ಹಾನಿಯುಂಟಾಗುತ್ತದೆ. ಕಂಪ್ಯೂಟರ್‌ ಸ್ಕ್ರೀನ್‌ನ್ನು ಒಂದೇ ಸಮನೆ ನೋಡುವುದು ಸರಿಯಲ್ಲ. ಪ್ರತಿ ಗಂಟೆಗೆ 5-10 ನಿಮಿಷವಾದರೂ ಕಣ್ಣುಗಳಿಗೆ ವಿಶ್ರಾಂತಿ ಕೊಡಿ.

ಸುರಕ್ಷಾತ್ಮಕ ಲೆನ್ಸ್ ಬಳಕೆ : ಸರಿಯಾದ ಲೆನ್ಸ್ ಬಳಕೆಯಿಂದ ಕಣ್ಣುಗಳನ್ನು ಸುರಕ್ಷಿತವಾಗಿ ಇಡಬಹುದಾಗಿದೆ. ಕಾಂಟ್ಯಾಕ್ಟ್ ಲೆನ್ಸ್ ಕಣ್ಣುಗಳ ತೇವಾಂಶವನ್ನು ಕಾಪಾಡಿಕೊಂಡು ಹೋಗಲು ನೆರವಾಗುತ್ತದೆ. ಕಂಪ್ಯೂಟರ್‌ನಲ್ಲಿ ನಿರಂತರ ಕೆಲಸ ಮಾಡುತ್ತಿರುವುದರಿಂದ ಕಣ್ಣುಗಳ ತೇವಾಂಶಕ್ಕೆ ಹಾನಿಯುಂಟಾಗುತ್ತದೆ. ಹೀಗಾಗಿ ಲೆನ್ಸ್ ಆಯ್ಕೆ ಮಾಡುವಾಗ ಸಾಕಷ್ಟು ಜಾಗ್ರತೆ ವಹಿಸಿ.

ಇಸಿಲಾರ್‌ನ ಕ್ರಿಜಾವ್ ‌ಪ್ರಿವೆನ್ಶನ್‌ ಕಣ್ಣುಗಳಿಗೆ ಉಪಯುಕ್ತ. ಆ ಲೆನ್ಸ್ ಗಳು ಕಂಪ್ಯೂಟರ್‌ ಮತ್ತು ಸ್ಮಾರ್ಟ್‌ ಫೋನ್‌ನ ಸ್ಕ್ರೀನ್‌ನಿಂದ ಹೊರಹೊಮ್ಮುವ ಬ್ಲೂಲೈಟ್‌ನಿಂದ ಕಣ್ಣುಗಳ ರಕ್ಷಣೆ ಮಾಡುತ್ತವೆ.

ಕಣ್ಣುಗಳಿಗೆ ವ್ಯಾಯಾಮ : ನಿಮ್ಮ ಕೈಗಳನ್ನು ಬೆಚ್ಚಗಾಗುವ ತನಕ ಉಜ್ಜಿ. ಬಳಿಕ ಅಂಗೈಯನ್ನು ಕಣ್ಣುಗಳ ಮೇಲೆ ಇರಿಸಿಕೊಳ್ಳಿ. ಇದರಿಂದ ಕಣ್ಣುಗಳಿಗೆ ನಿರಾಳತೆ ಎನಿಸುತ್ತದೆ. ನಿರಂತರವಾಗಿ ಕಂಪ್ಯೂಟರ್‌ ಮುಂದೆ ಕೆಲಸ ಮಾಡುವುದು ಮತ್ತು ಅದರ ಪ್ರಭಾವದಿಂದ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ನೀವು 20-20-20 ನಿಯಮಗಳನ್ನು ಅನುಸರಿಸಬಹುದು. ನೀವು ಕಂಪ್ಯೂಟರ್‌ನಿಂದ ಪ್ರತಿ 20 ನಿಮಿಷಗಳಿಗೊಮ್ಮೆ 20 ಸೆಕೆಂಡುಗಳ ಕಾಲ ಕಣ್ಣುಗಳನ್ನು ಬೇರೆಡೆ ಹರಿಸಿ. ಅದೇ ರೀತಿ ಕಂಪ್ಯೂಟರ್‌ ಮತ್ತು ನಿಮ್ಮ ಕಣ್ಣುಗಳ ನಡುವಿನ ಅಂತರ 20 ಇಂಚು ಆದರೂ ಇರಲಿ.

ಸೂಕ್ತ ಬೆಳಕು : ಅತಿಯಾದ ಬೆಳಕು ಕೂಡ ಕಣ್ಣಿನ ಮೇಲೆ ಒತ್ತಡ ಹೇರುತ್ತದೆ. ಹೀಗಾಗಿ ಅತಿಯಾದ ಬೆಳಕು ಇರುವ ಕಡೆ ಕಂಪ್ಯೂಟರ್‌ ಮುಂದೆ ಕೆಲಸ ಮಾಡಬೇಡಿ. ಫ್ಲೋರ್‌ ಲ್ಯಾಂಪಿನ ಬೆಳಕಿನಲ್ಲಿ ಕಂಪ್ಯೂಟರ್‌ ಮುಂದೆ ಕುಳಿತು ಕೆಲಸ ಮಾಡುವುದು ಹೆಚ್ಚು ಸೂಕ್ತವಾಗಿರುತ್ತದೆ.

ನೀರಿನ ಚಮತ್ಕಾರ : ನೀರಿನ ಪಾತ್ರೆ ನಿಜಕ್ಕೂ ಚಮತ್ಕಾರಿ ಎಂದೇ ಹೇಳಬಹುದು. ಕಣ್ಣುಗಳನ್ನು ದಿನವೊಂದರಲ್ಲಿ ಹಲವು ಸಲ ತೊಳೆದುಕೊಳ್ಳುವುದರ ಮೂಲಕ ಅವನ್ನು ತಾಜಾತನದಿಂದ ಇಡಬಹುದು. ಅದೇ ರೀತಿ ಆಗಾಗ ನೀರು ಕುಡಿಯುವುದು ಕಣ್ಣುಗಳಿಗೆ ಲಾಭಕರವೇ ಹೌದು. ನಿರಂತರವಾಗಿ ಕಂಪ್ಯೂಟರ್‌ ಮುಂದೆ ಕೆಲಸ ಮಾಡುತ್ತಿರುವುದರಿಂದ ಕಣ್ಣುಗಳ ಅಂಚಿನಲ್ಲಿ ಊತ ಬರುತ್ತದೆ. ಆಗಾಗ ನೀರು ಕುಡಿಯುತ್ತಿದ್ದರೆ, ನೀವು ಈ ಸಮಸ್ಯೆಯಿಂದ ದೂರ ಇರಬಹುದು.

ಕುಳಿತುಕೊಳ್ಳುವ ಭಂಗಿಕಂಪ್ಯೂಟರ್‌ ಮುಂದೆ ಕುಳಿತುಕೊಳ್ಳುವ ಭಂಗಿ ಕೂಡ ಕಣ್ಣಿನ ದೃಷ್ಟಿಯ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ನಿಮ್ಮ ಕೆಲಸ ಮಾಡುವ ಸ್ಥಳದ ವಿನ್ಯಾಸ ಹಾಗೂ ಚೇರ್‌ ಕಣ್ಣಿನ ಮೇಲೆ ಪರಿಣಾಮ ಬೀರುತ್ತದೆ. ಕೆಲಸ ಮಾಡುವ ಸಂದರ್ಭದಲ್ಲಿ ಕಂಪ್ಯೂಟರ್‌ನಿಂದ ಕಣ್ಣಿನ ಅಂತರ 20 ರಿಂದ 24 ಇಂಚು ದೂರ ಇರಬೇಕು. ಅದೇ ರೀತಿ ಕಂಪ್ಯೂಟರ್‌ನ ಸ್ಕ್ರೀನ್‌ಕಣ್ಣಿನಿಂದ 10 ರಿಂದ 15 ಇಂಚು ಕೆಳಭಾಗದಲ್ಲಿ ಇರಬೇಕು. ನೀವು ಡೆಸ್ಕ್ ಲ್ಯಾಂಪ್‌ನ್ನು ಕೂಡ ಬಳಸಬಹುದು. ಆದರೆ ಅದರ ಬೆಳಕು ಸ್ಪಷ್ಟವಾಗಿರಬೇಕು.

ಹೆಲ್ದಿ ಡಯೆಟ್‌ : ಸಮತೋಲನ ಆಹಾರದ ಮೂಲಕ ನೀವು ವಿಟಮಿನ್‌ `ಎ,’ `ಸಿ’ ಮತ್ತು `ಇ’ ಕೊರತೆಯನ್ನು ನೀಗಿಸಿಕೊಳ್ಳಬಹುದು. ಈ ಎಲ್ಲಾ ವಿಟಮಿನ್‌ಗಳು ಕಣ್ಣುಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯ. ಹಣ್ಣು, ತರಕಾರಿಗಳನ್ನು ಸೇವಿಸಿ. ಅವುಗಳಲ್ಲಿ ಟೊಮೇಟೊ, ಪಾಲಕ್‌ ಮತ್ತು ಇತರೆ ಹಸಿರು ಸೊಪ್ಪುಗಳು ಕೂಡ ಇರಲಿ. ಕಣ್ಣುಗಳ ಆರೋಗ್ಯಕ್ಕೆ ವೈದ್ಯರು ಮೀನು ತಿನ್ನಲು ಸಲಹೆ ನೀಡುತ್ತಾರೆ. ಅದರಿಂದ ಒಮೇಗಾ-3 ದೊರೆಯುತ್ತದೆ. ಅದು ಕಣ್ಣುಗಳ ಆರೋಗ್ಯಕ್ಕೆ ಅತ್ಯಂತ ಉಪಯುಕ್ತ.

ಪ್ರಭಾ ಶಿವಕುಮಾರ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ