ಬಿಸಿಲಿನ ಪ್ರಕೋಪದಿಂದ ತಪ್ಪಿಸಿಕೊಳ್ಳಲು ನಾವು ಮಹಿಳೆಯರು ಹೆಚ್ಚು ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಚರ್ಮಕ್ಕೆ ಹೆಚ್ಚಿನ ಹಾನಿ ತಪ್ಪಿದ್ದಲ್ಲ. ಹೀಗಾಗಿ ಈ ಸಲಹೆಗಳನ್ನು ಅನುಸರಿಸಿ, ಬಿಸಿಲಿನ ಪ್ರಕೋಪದಿಂದ ತಪ್ಪಿಸಿಕೊಳ್ಳಿ :
ಬಹಳ ಹೊತ್ತು ಬಿಸಿಲಿನಲ್ಲೇ ಓಡಾಡುವುದು ಅಪಾಯಕಾರಿ ಆಗಬಹುದು. ಬಿರು ಬಿಸಿಲಿನ ಈ ದಿನಗಳಲ್ಲಿ ಮಧ್ಯಾಹ್ನ 12-4ರವರೆಗೂ ಹೊರಗೆ ಹೋಗಲೇಬೇಡಿ. ಅನಿವಾರ್ಯವಾಗಿ ಹೋಗಬೇಕಾದಲ್ಲಿ ಛತ್ರಿ, ಸ್ಕಾರ್ಫ್, ಟೋಪಿ, ಸನ್‌ಬ್ಲಾಕ್ ಇತ್ಯಾದಿ ಬಳಸಿರಿ.
ಬೆಳಗ್ಗೆ ಬಿಸಿಲೇರುತ್ತಿದ್ದಂತೆ ನಿಮ್ಮ ತೆರೆದ ಭಾಗದ ಚರ್ಮಕ್ಕೆ ಉತ್ತಮ SPFನ ಸನ್‌ಸ್ಕ್ರೀನ್ ಲೋಶನ್ ಹಚ್ಚಿಕೊಳ್ಳಿ. ಅಲ್ಟ್ರಾವೈಲೆಟ್ ರೇಡಿಯೇಶನ್‌ನಿಂದ ತಪ್ಪಿಸಿಕೊಳ್ಳಲು SPF 30 +, SPF + + ಮುಂತಾದವನ್ನು ಹಚ್ಚಬೇಕು.
ಬಿಸಿಲಿಗೆ ಹೋಗುವ ಅರ್ಧ ಗಂಟೆ ಮುಂಚೆ ಸನ್‌ಸ್ಕ್ರೀನ್ ಲೋಶನ್‌ನ್ನು ತ್ವಚೆಯ ತೆರೆದ ಅಂಗಗಳ ಮೇಲೆ ಹಚ್ಚಬೇಕು. ಪ್ರತಿದಿನ ಇದನ್ನು 3-4 ತಾಸಿಗೊಮ್ಮೆ ಹಚ್ಚಬೇಕು. ಅಲ್ಟ್ರಾವೈಲೆಟ್ ರೇಡಿಯೇಶನ್ನಿನ UV ಚರ್ಮವನ್ನು ಬೇಗ ಕಪ್ಪಾಗಿಸುತ್ತದೆ. ಒಮ್ಮೊಮ್ಮೆ ಬೂದು ಬಣ್ಣದ ದಟ್ಟ ಕಲೆಗಳು ಕಾಣಿಸಬಹುದು. ಚರ್ಮ ಶುಷ್ಕತೆಯಿಂದ ಒಣಗಬಹುದು.
UV ಕಿರಣಗಳು ಸನ್‌ಬರ್ನ್ ಹಾಗೂ ಟ್ಯಾನಿಂಗ್ ಸಮಸ್ಯೆ ಉಂಟು ಮಾಡುತ್ತದೆ.
SPF ಪ್ರೊಟೆಕ್ಷನ್‌ನ್ನು SPF (ಸನ್ ಪ್ರೊಟೆಕ್ಷನ್ ಫ್ಯಾಕ್ಟರ್) ಹಾಗೂ SPF ಪ್ರೊಟೆಕ್ಷನ್‌ನ್ನು PPD (ಪರ್ಸಿಸ್ಟೆಂಟ್ ಪಿಗ್ಮೆಂಟ್ ಡಾರ್ಕ್‌ನಿಂಗ್) ಯಿಂದ ಅಳೆಯುತ್ತಾರೆ. ಸನ್‌ಸ್ಕ್ರೀನ್‌ನಿಂದ UV ಈ UA ಎರಡೂ ಬಗೆಯ ಹಾನಿಕಾರಕ ಕಿರಣಗಳಿಂದ ತಪ್ಪಿಸಿಕೊಳ್ಳಬಹುದು. ಇಂಥದ್ದನ್ನು ಬ್ರಾಡ್‌ಸ್ಪೆಕ್ಟ್ರಂ ಸನ್‌ಸ್ಕ್ರೀನ್ ಎನ್ನುತ್ತಾರೆ.
ಆಯ್ಲಿ ಸ್ಕಿನ್‌ನವರು ಜೆಲ್ ಅಥವಾ ದ್ರವ ಆಧಾರಿತ ಸನ್‌ಸ್ಕ್ರೀನ್ ಬಳಸಬೇಕು. ಡ್ರೈ ಸ್ಕಿನ್‌ನವರು ಕ್ರೀಂ ಅಥವಾ ಮಾಯಿಶ್ಚರ್‌ಯುಕ್ತ ಸನ್‌ಸ್ಕ್ರೀನ್ ಬಳಸಬೇಕು. ಈಜು ಅಥವಾ ಇತರ ವಾಟರ್ ಸ್ಪೋರ್ಟ್ಸ್ ಅಭ್ಯರ್ಥಿಗಳು, ಅದಕ್ಕೆ ಮೊದಲು ಹಾಗೂ ನಡುನಡುವೆ ವಾಟರ್ ರೆಸಿಸ್ಟೆಂಟ್ ಸನ್‌ಬ್ಲಾಕ್ ಹಚ್ಚಿಕೊಳ್ಳುತ್ತಿರಬೇಕು. ಇದು ನಮ್ಮನ್ನು ಸೂರ್ಯನ ತೀಕ್ಷ್ಣ ಕಿರಣಗಳಿಂದ ರಕ್ಷಿಸಿ, ಎಷ್ಟೋ ಬಗೆಯ ಚರ್ಮದ ಸಮಸ್ಯೆ ನಮ್ಮನ್ನು ಕಾಡದಂತೆ ಮಾಡಬಲ್ಲದು.
ಸನ್ಬರ್ನ್: ಬೆಳಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ಸನ್‌ಬರ್ನ್‌ನ ಅಪಾಯ ಅಧಿಕವಾಗಿರುತ್ತದೆ. ಅದರಲ್ಲೂ ಬಿಸಿಲಿನ ಪ್ರಕೋಪ ಹೆಚ್ಚಾಗಿರುವ ದಿನಗಳಲ್ಲಿ ಇದರ ಕಾಟ ಹೆಚ್ಚು. ಏಕೆಂದರೆ ಬಿಸಿಲಿನಿಂದ UV ಕಿರಣಗಳ ಪರಿಣಾಮ ಮತ್ತಷ್ಟು ತೀವ್ರವಾಗುತ್ತದೆ. ಚಳಿಗಾಲದಲ್ಲೂ ಸಹ ಸೂರ್ಯನ ತೀಕ್ಷ್ಣ ಕಿರಣಗಳಿಂದ ತಪ್ಪಿಸಿಕೊಳ್ಳುವ ಅಗತ್ಯವಿದೆ. ಹಿಮಬೀಳುವ ಪ್ರದೇಶಗಳಲ್ಲೂ ಸಹ, ಹಿಮ ಸೂರ್ಯನ 80% ಕಿರಣಗಳನ್ನು ಪ್ರತಿಫಲಿಸಿ, ತೆರೆದ ಅಂಗಗಳಿಗೆ ಹಾನಿ ಉಂಟುಮಾಡುತ್ತದೆ. ನಿಮ್ಮ ತ್ವಚೆ ಮೇಲೆ ಬಹಳ ಹೊತ್ತು ಬಿಸಿಲಿನ ತೀಕ್ಷ್ಣ ಕಿರಣಗಳು ತಗುಲುತ್ತಿದ್ದರೆ, ಸನ್‌ಬರ್ನ್‌ನ ಅಪಾಯ ತಪ್ಪಿದ್ದಲ್ಲ.
ಟ್ಯಾನಿಂಗ್ : UV ಕಿರಣಗಳು ಚರ್ಮಕ್ಕೆ ನೇರ ತಗುಲುವುದರಿಂದ ಟ್ಯಾನಿಂಗ್ ಆಗುತ್ತದೆ ಹಾಗೂ ಚರ್ಮ ತನ್ನ ಬಣ್ಣ ಕಳೆದುಕೊಂಡು, ಮೆಲನಿನ್ ಸಹಾಯದಿಂದ ಚರ್ಮಕ್ಕೆ ಹಾನಿಯಾಗದಂತೆ ರಕ್ಷಿಸುತ್ತದೆ.
ಏಜಿಂಗ್ : ಯಾವುದೇ ಸುರಕ್ಷಾ ಸಾಧನ ಬಳಸದೆ ಬಿಸಿಲಿಗೆ ಹೋಗುವ ಜನ, ಅದನ್ನು ಬಳಸುವ ಜನರಿಗಿಂತ ಬಹಳ ಬೇಗ ವಯಸ್ಸಾದರಂತೆ ಕಾಣಿಸುತ್ತಾರೆ. ಇಂಥವರು ಸ್ವಲ್ಪ ಹೊತ್ತು ಬಿಸಿಲಲ್ಲಿ ತಿರುಗಾಡಿದರೂ ಸುಕ್ಕು, ಕಲೆಗಳು ಕಾಣಿಸುವುದರಲ್ಲಿ ಆಶ್ಚರ್ಯವಿಲ್ಲ. ಈ ಪರಿವರ್ತನೆಗಳು ಒಂದೇ ಸಲ ಕಾಣಿಸದಿದ್ದರೂ, ವರ್ಷಗಳ ಬಿಸಿಲಿನ ಅಲೆದಾಟದಿಂದ ಹೀಗೆಲ್ಲ ಆಗುವುದುಂಟು. ಬಿಸಿಲಿನಲ್ಲಿ ಸನ್‌ಬ್ಲಾಕ್ಸ್ ಬಲು ಲಾಭಕಾರಿ. ಇವು ಸೂರ್ಯನ UV ಕಿರಣಗಳಿಂದ ನಮ್ಮನ್ನು ರಕ್ಷಿಸುತ್ತವೆ. ಆದರೆ ಈ ಸನ್‌ಪ್ರೊಟೆಕ್ಟರ್ ಬಳಸಿದ ಮಾತ್ರಕ್ಕೆ ನೀವು ಬಿಸಿಲಿನಿಂದ ರಕ್ಷಿಸುವ ಇತರ ವಿಧಾನಗಳನ್ನು ನಿರ್ಲಕ್ಷಿಸಿ ಎಂದು ಅರ್ಥವಲ್ಲ. ಅವು ಯಾವುವೆಂದರೆ :
ಹೆಚ್ಚು ಕಾಲ ಬಿಸಿಲಿನಲ್ಲಿ ಕಳೆಯುವುದು ಅಪಾಯಕಾರಿ. ಇದಕ್ಕಾಗಿ ಶೇಡ್ಸ್ ಬಳಸಬೇಕು. ಹಗಲಿನ ತಾಪಮಾನ ತೀವ್ರ ಹೆಚ್ಚಾಗಿದ್ದಾಗ, ಹೊರಗೆ ಹೋಗಲೇಬೇಡಿ.
ನಿಮ್ಮ ಚರ್ಮಕ್ಕೆ ತಕ್ಕಂತೆ ಸನ್‌ಸ್ಕ್ರೀನ್ ಆರಿಸಿ. ಹೊರಗೆ ಹೊರಡುವ ಮೊದಲು ಅದನ್ನು ನೀಟಾಗಿ ಸವರಿಕೊಳ್ಳಿ. ಪ್ರತಿದಿನ ಇದನ್ನು 3-4 ಸಲ ಬಳಸಬೇಕು.
ಒಂದು ಉತ್ತಮ ಸನ್‌ಸ್ಕ್ರೀನ್ ಲೋಶನ್ನಿನಲ್ಲಿ ಈ ಕೆಳಕಂಡ ಗುಣಗಳಿರಬೇಕು :
ಇದರಲ್ಲಿ UV ಕಿರಣಗಳಿಂದ ರಕ್ಷಿಸುವಂಥ ಸನ್‌ಪ್ರೊಟೆಕ್ಷನ್ ಫ್ಯಾಕ್ಟರ್ ಇರಲೇಬೇಕು.
ಇದಕ್ಕೆ UV ಕಿರಣಗಳಿಂದಲೂ ರಕ್ಷಿಸಬಲ್ಲ ಸಾಮರ್ಥ್ಯ ಇರಬೇಕು.
ಇದರ ಮೇಲೆ ನೀರು, ಬೆವರಿನ ಪರಿಣಾಮ ಆಗಬಾರದು.
ಇದರಿಂದ ಯಾವ ಅಲರ್ಜಿಯೂ ಆಗಬಾರದು.
ಟ್ಯಾನಿಂಗ್‌ಗಾಗಿ ಮನೆಮದ್ದು ಯಾವ ರೀತಿ ಲಾಭಕಾರಿ ಎಂದು ತಿಳಿಯೋಣ.
ನಿಂಬೆ ಬೆರೆತ ಜೇನುತುಪ್ಪ : ನಿಮ್ಮ ಮೈಕೈನಲ್ಲಿ ಎಲ್ಲೆಲ್ಲಿ ಟ್ಯಾನಿಂಗ್ ಆಗಿದೆಯೋ ಅಲ್ಲವೋ ಈ ಮಿಶ್ರಣವನ್ನು ಸವರಿ ಮಸಾಜ್‌ಮಾಡಬೇಕು. ಇದನ್ನು ಹಚ್ಚಿ 10-15 ನಿಮಿಷ ಹಾಗೇ ಬಿಡಬೇಕು, ನಂತರ ತೊಳೆಯಿರಿ. ನಿಂಬೆಯಲ್ಲಿ ನೈಸರ್ಗಿಕ ಬ್ಲೀಚಿಂಗ್ ಗುಣಗಳಿರುವುದರಿಂದ, ಟ್ಯಾನಿಂಗ್‌ನ ದುಷ್ಪ್ರಭಾವ ತಗ್ಗುತ್ತದೆ.
ಯೋಗರ್ಟ್ : ಇದನ್ನು ಬಿಸಿಲಿನಿಂದ ಬಾಧಿತ ಅಂಗಗಳಿಗೆ ಲೇಪಿಸುವುದರಿಂದ, ನಿಮಗೆ ಬೇಗ ಉತ್ತಮ ಪರಿಣಾಮ ಕಾಣಸಿಗುತ್ತದೆ. ಟೊಮೇಟೊ ಮತ್ತು ಸೌತೆ ಜೊತೆ ಇದನ್ನು ಅರೆದು ಲೇಪಿಸಿಕೊಳ್ಳುವುದರಿಂದ ಹೆಚ್ಚಿನ ಲಾಭವಿದೆ.
ಆ್ಯಲೋವೆರಾ : ರಾತ್ರಿ ಮಲಗುವ ಮುನ್ನ ಇದರ ಜೆಲ್ ಹಚ್ಚಿ, ಬೆಳಗ್ಗೆ ಎದ್ದು ತಣ್ಣೀರಲ್ಲಿ ತೊಳೆಯಿರಿ.
ಆಲೂ : ಹಸಿ ಆಲೂವಿನಲ್ಲಿ ವಿಟಮಿನ್ `ಸಿ’ ಹೇರಳವಾಗಿ ದೊರಕುತ್ತದೆ, ಹೀಗಾಗಿ ಅದು ಟ್ಯಾನಿಂಗ್‌ಗೆ ಪರಿಣಾಮಕಾರಿ ಚಿಕಿತ್ಸೆ ಒದಗಿಸಬಲ್ಲದು. ಹಸಿ ಆಲೂ ಪೇಸ್ಟ್ ಮಾಡಿ, ಟ್ಯಾನ್ ಆದ ಭಾಗಕ್ಕೆ ಸವರಿ, ಅರ್ಧ ಗಂಟೆ ನಂತರ ತೊಳೆದರೆ ಲಾಭವಿದೆ.
ಕಡಲೆಕಾಳಿನ ಹಿಟ್ಟು : ಇದರ ಪೇಸ್ಟ್ ಬಿಸಿಲಿನಿಂದ ಸೊರಗಿದ ಚರ್ಮಕ್ಕೆ ಉತ್ತಮ ಚಿಕಿತ್ಸೆ ಒದಗಿಸಿ, ಡೆಡ್‌ಸೆಲ್ಸ್ ತೊಲಗಿಸುವಲ್ಲಿ ಬಲು ಸಹಕಾರಿ. ನಿಮ್ಮ ಮೈಕೈಗೆ ಇದರ ಪೇಸ್ಟ್ ಸವರಿ, ಅರ್ಧ ಗಂಟೆ ನಂತರ ತಣ್ಣೀರಲ್ಲಿ ತೊಳೆಯುವುದರಿಂದ ಲಾಭವಿದೆ.
ಆಹಾರದಿಂದಲೂ ಪರಿಣಾಮ
ನಿಯಮಿತವಾಗಿ ಪೌಷ್ಟಿಕ ಆಹಾರ ಸೇವಿಸಿ.
ಗ್ರೀನ್ ಟೀ, ಹಸಿ ಕಡಲೆಕಾಯಿ ಮುಂತಾದ ಆ್ಯಂಟಿ ಆಕ್ಸಿಡೆಂಟ್ಸ್ ವುಳ್ಳ ಪದಾರ್ಥ ಸೇವಿಸಿ.
ಪ್ರತಿದಿನ 10-12 ಗ್ಲಾಸ್ ನೀರು ಕುಡಿಯಿರಿ.
– ಡಾ. ಎನ್. ನಮ್ರತಾ