ನಾನು 25 ವರ್ಷದ ವಿವಾಹಿತ, ಮದುವೆಯಾಗಿ 4 ತಿಂಗಳಾಗಿದೆ ಅಷ್ಟೆ. ಪ್ರತಿ ಸಲ ಹೆಂಡತಿ ಜೊತೆ ಸಮಾಗಮ ಹೊಂದಲು ಯತ್ನಿಸಿದಾಗಲೂ ಬೇಗ ಸ್ಖಲನವಾಗುತ್ತದೆ, ಹೀಗಾಗಿ ಸುಖ ಹೊಂದಲು ಆಗುತ್ತಿಲ್ಲ. ಇದರಿಂದ ಇಬ್ಬರೂ ತೀವ್ರ ನಿರಾಸೆಗೆ ಗುರಿಯಾಗಿದ್ದೇವೆ. ದಯವಿಟ್ಟು ನನ್ನ ಸಮಸ್ಯೆಗೆ ಪರಿಹಾರ ತಿಳಿಸಿ.

ಶ್ರೀಘ್ರ ಸ್ಖಲನದ ಸಮಸ್ಯೆ ಬಹುತೇಕ ನವಿವಾಹಿತರಲ್ಲಿ ಸಾಮಾನ್ಯ ಎನ್ನಬಹುದು. ಇಷ್ಟು ವರ್ಷಗಳ ಕಾಲ ಈ ಸುಖ ಪಡೆದಿರಲಿಲ್ಲ, ಇದರಲ್ಲಿ ಪೂರ್ಣ ಯಶಸ್ವಿ ಆಗುತ್ತೇವೆಯೋ ಇಲ್ಲವೋ ಎಂಬ ಅತಿಯಾದ ಉದ್ವಿಗ್ನತೆಯೇ ಇದಕ್ಕೆ ಕಾರಣ. ಹೀಗಾಗಿ ಅತಿ ಉದ್ವೇಗಕ್ಕೆ ಒಳಗಾಗದೆ. ಸಹಜವಾಗಿ ಮಿಲನದ ಕ್ರಿಯೆಯಲ್ಲಿ ಪಾಲ್ಗೊಳ್ಳಿ. ಸಮಾಗಮಕ್ಕೆ ಮುಂಚಿನ ಮುನ್ನಲಿವು (ಫೋರ್‌ ಪ್ಲೇ) ನಿಮ್ಮ  ಸಮಸ್ಯೆಗೆ ಉತ್ತಮ ಪರಿಹಾರ. ಹಿರಿಯ ವೈದ್ಯರಾದ ಡಾ. ಅನುಪಮಾ ನಿರಂಜನ, ಡಾ. ಸಿ. ಅನ್ನಪೂರ್ಣಾ, ಡಾ. ಲೀಲಾವತಿ ದೇವದಾಸ್‌ ಮುಂತಾದವರು ಈ ನಿಟ್ಟಿನಲ್ಲಿ ಬರೆದಿರುವ ಲೈಂಗಿಕ ಬೋಧಕ ಪುಸ್ತಕಗಳನ್ನು ಹೆಚ್ಚು ಓದಿ ತಿಳಿದುಕೊಳ್ಳಿ. ಕ್ರಮೇಣ ನಿಮ್ಮ ಸಮಸ್ಯೆ ತಂತಾನೇ ತಗ್ಗುತ್ತದೆ.

 

ನಾನು ಬಿ.ಎಸ್ಸಿ ಮೊದಲ ವರ್ಷದ ವಿದ್ಯಾರ್ಥಿನಿ. ಬಾರಿಯ ಅಂತಿಮ ಪರೀಕ್ಷೆಯಲ್ಲೂ ನಾನು ಮತ್ತೆ 2 ವಿಷಯಗಳಲ್ಲಿ ಫೇಲ್ ಆಗಿ, 2ನೇ ವರ್ಷಕ್ಕೆ ಕ್ಯಾರಿ ಓವರ್ಆಗಿದ್ದೇನೆ. ನಾನು ಎಷ್ಟೇ ಶ್ರದ್ಧೆ ವಹಿಸಿ ಪರೀಕ್ಷೆಯಲ್ಲಿ ಬರೆದಿದ್ದರೂ ಪಾಸಾಗುತ್ತಿಲ್ಲ. ಕಳೆದ ವರ್ಷ ಫುಲ್ ವಾಷ್ಔಟ್ಆಗಿದ್ದರಿಂದ ಅದೇ ಪ್ರಥಮ ವರ್ಷದಲ್ಲೇ ಮುಂದುವರಿದಿದ್ದೇನೆ. ಮುಂದೆ ಏನು ಮಾಡಲಿ ಅಂತ ತಿಳಿಯುತ್ತಿಲ್ಲ. ಬಿ../ಬಿ.ಕಾಂ ಕೋರ್ಸಿಗೆ ಬದಲಾಗಲು ಮನಸ್ಸಿಲ್ಲ. 20 ವರ್ಷ ದಾಟಿದ್ದರೂ ಡಿಗ್ರಿ ಮೊದಲನೇ ವರ್ಷದಲ್ಲಿದ್ದೇನೆ ಎಂದು ಹೇಳಿಕೊಳ್ಳಲು ಸಂಕೋಚವಾಗುತ್ತಿದೆ. ದಯವಿಟ್ಟು ಸಲಹೆ ನೀಡಿ.

ನೀವು ವಿಜ್ಞಾನದ ವಿಷಯದಲ್ಲಿ ವಾಷ್‌ ಔಟ್‌ ಆಗಿದ್ದೀರಿ. ಹಾಗಿರುವಾಗ ಬಿ.ಎ./ಬಿ.ಕಾಂ ಕೋರ್ಸಿಗೆ ಅಗತ್ಯವಾಗಿ ಸೇರಿ. ಆಗ ಖಂಡಿತಾ ಉತ್ತಮ ಫಲಿತಾಂಶ ಸಿಗುತ್ತದೆ. ನಿಮ್ಮ ಮನದಲ್ಲಿರುವ `ವಿಜ್ಞಾನದ ಪದವಿಯೇ ಶ್ರೇಷ್ಠ, ಬೇರೆ ಅಲ್ಲ….’ ಎಂಬ ಪೂರ್ವಾಗ್ರಹ ವಿಚಾರವನ್ನು ಮೊದಲು ತೆಗೆದುಹಾಕಿ. ಸೈನ್ಸ್ ತರಹವೇ ಕಾಮರ್ಸ್‌, ಆರ್ಟ್ಸ್ ನಲ್ಲೂ ಉತ್ತಮ ಕೆರಿಯರ್ ರೂಪಿಸಿಕೊಳ್ಳಲು ಬೇಕಾದಷ್ಟು ಅವಕಾಶಗಳಿವೆ.

 

ನಾನು 15 ವರ್ಷದ 10ನೇ ತರಗತಿ ವಿದ್ಯಾರ್ಥಿನಿ. ನನ್ನ ನಿತಂಬಗಳು ದೇಹದ ಇತರ ಭಾಗಕ್ಕಿಂತ ಭಾರಿ ಎನಿಸಿವೆ. ಅದರಿಂದಾಗಿ ನನಗೆ ಬಹಳ ನಾಚಿಕೆ ಕಾಡುತ್ತಿರುತ್ತದೆ. ಇದನ್ನು ಕಡಿಮೆ ಮಾಡಲು ದಯವಿಟ್ಟು ಏನಾದರೂ ಪರಿಹಾರ ತಿಳಿಸಿ.

ನೀವು ಹೈ ಒಬಿಸಿಟಿ (ಸ್ಥೂಲಕಾಯ)ಗೆ ತುತ್ತಾಗಿರುವಿರಿ. ಇದು ಆನುವಂಶಿಕ (ಹೆರಿಡಿಟಿ) ಆಗಿರಬಹುದು. ಆದಷ್ಟೂ ರಾತ್ರಿ ಹೊತ್ತು ಹೆವಿ ಡಿನ್ನರ್‌ ಬೇಡ, ಅನ್ನದ ಪದಾರ್ಥ ಕಡಿಮೆ ಮಾಡಿ. ಕೊಬ್ಬಿನಾಂಶದ ವ್ಯಂಜನಗಳಿಂದ ದೂರವಿರಿ. ನಿಯಮಿತ ವ್ಯಾಯಾಮ, ಜಾಗಿಂಗ್‌, ಸ್ಕಿಪ್ಪಿಂಗ್‌ನಿಂದ ಹೆಚ್ಚಿನ ಲಾಭವಿದೆ. ಶೀತದ ಕಾಟವಿಲ್ಲದಿದ್ದರೆ ಈಜು ಸಹ ಬಹಳ ಒಳ್ಳೆಯದು. ಮೈಪೂರ್ತಿ ಧಾರಾಳ ಮುಚ್ಚುವ ಡೀಸೆಂಟ್‌ ಉಡುಗೆ ಇರಲಿ, ಟೈಟ್‌ ಎನಿಸುವ ವಸ್ತ್ರಗಳು ಖಂಡಿತಾ ಬೇಡ. ಆಗ ನೀವು ಸಂಕೋಚ ಪಡಬೇಕಾದ ಅಗತ್ಯವಿಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ