ನಾನು 30 ವರ್ಷದ ಯುವತಿ. ನಾನು ಕಪ್ಪು ಬಣ್ಣದವಳು. ನಾನು ಯಾವ ರೀತಿ ಮೇಕಪ್ಮಾಡಿಕೊಂಡರೆ ಸುಂದರವಾಗಿ ಕಾಣಿಸಲು ಸಾಧ್ಯ? ಆದರೆ ನೋಡುವವರಿಗೆ ನಾನು ಬಹಳ ಮೇಕಪ್ಮಾಡಿಕೊಂಡಿದ್ದೇನೆ ಎಂದೆನಿಸಬಾರದು. ಕಾಂಪ್ಯಾಕ್ಟ್ ನಲ್ಲಿ ನಾನು ಯಾವ ಬಣ್ಣ ಆರಿಸಿಕೊಳ್ಳಬೇಕು?

ನೀವು ನಿಮ್ಮ ಬಣ್ಣ ಕಪ್ಪು ಎಂದು ಹೇಳಿರುವುದರಿಂದ, ನಿಮ್ಮ ಸ್ಕಿನ್‌ಟೋನ್‌ಗೆ ಹೊಂದುವಂಥ ಕಾಂಪ್ಯಾಕ್ಟ್ ನ್ನೇ ಆರಿಸಿಕೊಳ್ಳಿ. ಇದು ನಿಮ್ಮ ಚರ್ಮಕ್ಕೆ ಸಹಜವಾಗಿ ಹೊಂದಿಕೊಂಡರೆ, ಆಗ ಅಧಿಕ ಮೇಕಪ್‌ ಮಾಡಿರುವಂತೆ ಅನಿಸುವುದಿಲ್ಲ ಕೆಟ್ಟದಾಗಿಯೂ ಕಾಣುವುದಿಲ್ಲ. ನೀವು ಪ್ರತಿ ಸಲ ಮೇಕಪ್‌ ಮಾಡಿಕೊಳ್ಳುವಾಗಲೂ ಫೌಂಡೇಶನ್‌ ಕ್ರೀಮಿನಿಂದ, ರೋಸ್‌ವರೆಗೂ ಸ್ಕಿನ್‌ ಟೋನ್‌ಇರುವಂಥದ್ದನ್ನೇ ಆರಿಸಿಕೊಂಡರೆ, ಎಲ್ಲ ನ್ಯಾಚುರಲ್ ಕಲರ್ಸ್‌ ಎನಿಸುತ್ತದೆ, ಭಾರಿ ಮೇಕಪ್‌ ಎಂದು ಗೊತ್ತಾಗುವುದೇ ಇಲ್ಲ.

ಸನ್‌ ಬರ್ನ್‌ ಕಾರಣ ನನ್ನ ಕುತ್ತಿಗೆಯ ಹಿಂಭಾಗ ಕಪ್ಪಾಗಿ ಕಾಣುತ್ತದೆ. ಉತ್ತಮ ಬ್ಲೀಚಿಂಗ್‌ ಹಾಗೂ ವ್ಯಾಕ್ಸಿಂಗ್‌ ಮಾಡಿದ್ದಾಯ್ತು, ಆದರೆ ಏನೂ ಲಾಭವಾಗಲಿಲ್ಲ. ನನ್ನ ಈ ಸಮಸ್ಯೆಗೆ ಬೇರೆ ಏನಾದರೂ ಪರಿಹಾರವಿದ್ದರೆ ತಿಳಿಸುವಿರಾ?

ಸನ್‌ಬರ್ನ್‌ ಕಾರಣದಿಂದ ನಿಮ್ಮ ಕುತ್ತಿಗೆಯ ಹಿಂಭಾಗ ಕಪ್ಪಾಗಿ ಕಾಣುತ್ತಿದ್ದರೆ, ನೀವು ಮನೆಯಲ್ಲೇ ಟೊಮೇಟೊ, ಆಲೂ, ಸೌತೇಕಾಯಿಗಳನ್ನು ಬೇರೆ ಬೇರೆಯಾಗಿ ತಿರುವಿಕೊಂಡು ಮುಖಕ್ಕೆ ಪ್ಯಾಕಿಂಗ್‌ ನೀಡಿ. 20 ನಿಮಿಷಗಳ ನಂತರ ನಿಧಾನವಾಗಿ ತಣ್ಣೀರು ಹಾಕಿ ಮೃದುವಾಗಿ ಒತ್ತಿ ತೊಳೆಯರಿ. ಆಮೇಲೆ ಮಾಯಿಶ್ಚರೈಸರ್‌ ಹಚ್ಚಿ ತೊಳೆಯಬೇಕು. ಹೀಗೆ 1 ದಿನಕ್ಕೆ 3-4 ಸಲ ಮಾಡಿ, ಕ್ರಮೇಣ ಆ ಭಾಗದ ಕಪ್ಪು ಬಣ್ಣ ತಂತಾನೇ ತಿಳಿಯಾಗುತ್ತದೆ.

ನಾನು 6 ತಿಂಗಳ ಹಿಂದೆ ಕೂದಲಿನ ರೀಬೌಂಡಿಂಗ್ಮಾಡಿಸಿದ್ದೆ. ಈಗ ನನ್ನ ಕೂದಲು ಬುಡದಿಂದ ಉದುರುತ್ತಿದೆ. ನಾನು ಏನು ಮಾಡಿದರೆ ಅಲ್ಲಿ ಮತ್ತೆ ಕೂದಲು ಹುಟ್ಟುತ್ತದೆ? ನಾನು ಯಾನ ಶ್ಯಾಂಪೂ ಅಥನೈ ಹೇರ್ಆಯಿಲೇ ಬಳಸಿದರೆ, ಕೂದಲು ಮತ್ತೆ ಒದಲಿನಂತೆ ಬೆಳೆಯುತ್ತದೆ?

ರೀಬೌಂಡಿಂಗ್‌ ಮಾಡುವಾಗ ಕೆಮಿಕಲ್ ಯುಕ್ತ  ಪ್ರಾಡಕ್ಟ್ಸ್ ಬಳಸುತ್ತಾರೆ. ಹೀಗಾಗಿ ರೀಬೌಂಡಿಂಗ್‌ ನಂತರ ಕೂದಲನ್ನು ವಿಶೇಷವಾಗಿ ಗಮನಿಸಿಕೊಳ್ಳಬೇಕಾದ ಅಗತ್ಯವಿದೆ. ನೀವು ಸ್ಮೂದನಿಂಗ್‌ ಶ್ಯಾಂಪೂ ಬಳಸಬೇಕು ಹಾಗೂ ವಾರದಲ್ಲಿ 1 ಸಲ ಅಗತ್ಯವಾಗಿ ಹೇರ್‌ ಮಾಸ್ಕ್ ಹಾಕಿಸಿಕೊಳ್ಳಬೇಕು. ಕೂದಲಿಗೆ ಸ್ಟೀಮಿಂಗ್‌ ಸಹ ಒದಗಿಸಬೇಕು. ಆಗ ಮಾತ್ರ ಲಾಭವಾಗಲು ಸಾಧ್ಯ.

ನಾನು 18 ಹರೆಯದ ತರುಣಿ. ಕಳೆದ 4-5 ವರ್ಷಗಳಿಂದ ನನ್ನ ಮುಖದಲ್ಲಿ ತುಂಬಾ ಮೊಡವೆಗಳಾಗಿವೆ. ಆಗಾಗ ನಾನು ಅವನ್ನು ಜಿಗುಟಿ ಬಿಡುತ್ತೇನೆ, ಹೀಗಾಗಿ ಅದರ ಕಲೆ ಮುಖದಲ್ಲಿ ಉಳಿದುಬಿಡುತ್ತದೆ. ದಯವಿಟ್ಟು ಕಲೆಗಳು ದೂರಾಗಲು ಪರಿಹಾರ ಸೂಚಿಸಿ.

ನಿಮ್ಮ ಚರ್ಮದ ಓಪನ್‌ ಪೋರ್ಸ್‌ಕ್ಲೋಸ್‌ ಆಗಿದ್ದು, ಅಲ್ಲಿ ಧೂಳು ತುಂಬಿರುವುದರಿಂದ ನಿಮಗೆ ಈ ಸಮಸ್ಯೆ ಎದುರಾಗಿದೆ. ನೀವು ಪ್ರತಿದಿನ ಮುಖವನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಇದಕ್ಕಾಗಿ ಕ್ಲೆನ್ಸಿಂಗ್‌, ಟೋನಿಂಗ್‌, ಮಾಯಿಶ್ಚರೈಸಿಂಗ್‌ ಮಾಡಿ. ಮೊಡವೆಗಳನ್ನು ಎಂದೂ ಜಿಗುಟಲು ಹೋಗಬೇಡಿ. ಉಗುರು ತಗುಲಿ ಸೋಂಕಾಗಿ, ಅವು ಹೆಚ್ಚುತ್ತವೆ. ಆವ ಕಲೆಗಳ ನಿವಾರಣೆಗೆ ಬೇವಿನೆಲೆಯ ಪ್ಯಾಕ್‌ ಬಳಸಿರಿ. ಸಾಧ್ಯವಾದಷ್ಟೂ ಜಿಡ್ಡು ಪದಾರ್ಥಗಳನ್ನು ಸೇವಿಸಬೇಡಿ. ಪ್ರತಿದಿನ ಧಾರಾಳವಾಗಿ 10-12 ಗ್ಲಾಸ್‌ನೀರು ಕುಡಿಯಿರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ