ನನ್ನ ಪತಿಗೆ ಕಳೆದ ಅನೇಕ ವರ್ಷಗಳಿಂದ ಗೌಟ್‌ನ ಸಮಸ್ಯೆ ಇದೆ. ಇದಕ್ಕೆ ಕಾರಣವೇನು? ದಯವಿಟ್ಟು ಇದಕ್ಕೆ ಸೂಕ್ತ ಪರಿಹಾರ ತಿಳಿಸಿ.
ಇದು ದೇಹದಲ್ಲಿ ಯೂರಿಕ್ ಆ್ಯಸಿಡ್‌ನ ಹೆಚ್ಚಳದಿಂದ ಉಂಟಾಗುತ್ತದೆ. ಇದರ ಹೆಚ್ಚಳ ಹಲವು ಕಾರಣಗಳಿಂದ ಉಂಟಾಗುತ್ತದೆ. ದೇಹದಲ್ಲಿ ಕಂಡುಬರುವ ಸುಮಾರು ಮೂರನೇ ಎರಡು ಭಾಗ ಯೂರಿಕ್ ಆ್ಯಸಿಡ್ ನಮ್ಮ ದೇಹದೊಳಗೇ ನೈಸರ್ಗಿಕ ರೂಪದಲ್ಲಿ ತಯಾರಾಗುತ್ತದೆ. ನಮ್ಮ ದೇಹದೊಳಗೆ ಯಾವಾಗಲೂ ಛಿದ್ರಗೊಳ್ಳುವ ಹಾಗೂ ಹೊಸದಾಗಿ ರೂಪುಗೊಳ್ಳುವ ಪ್ರಕ್ರಿಯೆ ಸದಾ ನಡೆಯುತ್ತಿರುತ್ತದೆ. ಹಳೆಯ ಜೀವಕೋಶಗಳು ನಶಿಸುತ್ತಿರುತ್ತವೆ ಹಾಗೂ ಹೊಸ ಜೀವಕೋಶಗಳು ಜನ್ಮತಳೆಯುತ್ತವೆ. ಈ ಕ್ರಿಯೆಗಳಲ್ಲಿ ಹಲವು ಜೈವಿಕ ರಸಾಯನಗಳು ಕೂಡ ತಯಾರಾಗುತ್ತಿರುತ್ತವೆ. ಯೂರಿಕ್ ಆ್ಯಸಿಡ್ ಅವುಗಳಲ್ಲೊಂದು. ಅದೇ ರೀತಿ ದೇಹದ ಅಮೋನಿಯಾದ ರಾಸಾಯನಿಕ ಚಕ್ರದಲ್ಲೂ ಕೂಡ ಯೂರಿಕ್ ಆ್ಯಸಿಡ್ ತಯಾರಾಗುತ್ತದೆ. ಕೆಲವು ಪದಾರ್ಥಗಳ ವಿಘಟನೆಯಿಂದ ಯೂರಿಕ್ ಆ್ಯಸಿಡ್ ತಯಾರಾಗುತ್ತದೆ. ಇದು ರಕ್ತದಲ್ಲಿ ಪ್ರವಹಿಸಲ್ಪಡುವ ಯೂರಿಕ್ ಆ್ಯಸಿಡ್‌ನ ಒಟ್ಟು ಶೇ.10ರಷ್ಟು ಆಗಿರುತ್ತದೆ.
ಸಾಮಾನ್ಯಾಗಿ ಯೂರಿಕ್ ಆ್ಯಸಿಡ್‌ನ ಮಟ್ಟದ ಮೇಲೆ ನಮ್ಮ ದೈಹಿಕ ವ್ಯವಸ್ಥೆ ಕಟ್ಟುನಿಟ್ಟಿನ ನಿಗಾ ಇಟ್ಟಿರುತ್ತದೆ. ಕಿಡ್ನಿಗಳು ಯೂರಿಕ್ ಆ್ಯಸಿಡ್‌ನ್ನು ಶೋಧಿಸಿ ಮೂತ್ರದ ಮುಖಾಂತರ ಹೊರಹಾಕುತ್ತವೆ. ಆದರೆ ಕೆಲವು ಜನರಲ್ಲಿ ಈ ಸಮತೋಲನ ಏರುಪೇರಾದಾಗ ಕಿಡ್ನಿಗಳು ಯೂರಿಕ್ ಆ್ಯಸಿಡ್‌ನ್ನು ಸ್ವಚ್ಛಗೊಳಿಸುವುದಿಲ್ಲ ಇಲ್ಲವೇ ದೇಹದಲ್ಲಿ ಯೂರಿಕ್ ಆ್ಯಸಿಡ್‌ನ ಉತ್ಪಾದನೆ ಹೆಚ್ಚಳವಾಗುತ್ತದೆ. ಇದರಿಂದಸೇ `ಗೌಟ್' ಸಮಸ್ಯೆ ಜನ್ಮತಳೆಯುತ್ತದೆ.
ಅಲೋಪತಿಯಲ್ಲಷ್ಟೇ ಅಲ್ಲ, ಬೇರಾವ ಚಿಕಿತ್ಸಾ ಪದ್ಧತಿಯಲ್ಲೂ ಗೌಟ್ ಸಮಸ್ಯೆಯನ್ನು ಬೇರು ಸಮೇತ ನಿರ್ಮೂಲ ಮಾಡಲು ಸಾಧ್ಯವಿಲ್ಲ. ಅಂದಹಾಗೆ ಔಷಧಿಗಳಿಂದ ರೋಗದ ಮೇಲೆ ನಿಯಂತ್ರಣ ಹೊಂದಲು ಸಾಧ್ಯವಿದೆ. ಕೆಲವು ಔಷಧಿಗಳು ಯೂರಿಕ್ ಆ್ಯಸಿಡ್ ರೂಪುಗೊಳ್ಳುವ ಜೈವಿಕ ಕ್ರಿಯೆಯನ್ನು ನಡುವೆಯೇ ತಡೆಯುತ್ತದೆ ಅಥವಾ ಕಿಡ್ನಿಗಳಿಂದ ಯೂರಿಕ್ ಆ್ಯಸಿಡ್ ಹೊರ ಹೋಗು ಪ್ರಕ್ರಿಯೆಗೆ ವೇಗ ನೀಡುತ್ತದೆ. ಈ ಔಷಧಿಗಳನ್ನು ಜೀವನವಿಡೀ ಸೇವಿಸೀಬೇಕಾಗುತ್ತದೆ. ಜೀವನಶೈಲಿಯನ್ನು ಅಷ್ಟಿಷ್ಟು ಬದಲಿಸಿಕೊಳ್ಳುವುದರ ಮೂಲಕ ಲಾಭ ಪಡೆದುಕೊಳ್ಳಬಹುದು. ಕೆಲವು ಅಹಾರ ಪದಾರ್ಥಗಳು, ಪೇಯಗಳು ಯೂರಿಕ್ ಆ್ಯಸಿಡ್‌ಹೆಚ್ಚಿಸಲು ಕಾರಣವಾಗುತ್ತವೆ. ಅವುಗಳೆಂದರೆ ಮದ್ಯ, ಮಾಂಸ, ಹೂಕೋಸು, ಪಾಲಕ್, ಅಣಬೆ, ಬಟಾಣಿ, ಕಡಲೆ, ರಾಜ್ಮಾ ಮುಂತಾದವುಗಳನ್ನು ತಿನ್ನದೇ ಇರುವುದು ಒಳ್ಳೆಯದು.
ನೀರು ಹಾಗೂ ಇತರೆ ಪೇಯಗಳನ್ನು ಹೆಚ್ಚಾಗಿ ಕುಡಿಯಬೇಕು. ಕಿಡ್ನಿಗಳಿಗೆ ನೀರಿನ ಸಹಾಯದಿಂದ ಯೂರಿಕ್ ಆ್ಯಸಿಡ್ ಹೊರಹಾಕಲು ಅನುಕೂಲವಾಗುತ್ತದೆ. ವ್ರತ ಉಪವಾಸವಾಗಲಿ, ಅಧಿಕ ದೈಹಿಕ ಶ್ರಮವನ್ನಾಗಲಿ ಮಾಡಬಾರದು. ಅದೇ ರೀತಿ ಯೂರಿಕ್ ಆ್ಯಸಿಡ್ ಹೆಚ್ಚಿಸುವಂತಹ ಔಷಧಿಗಳಿಂದಲೂ ದೂರ ಇರಬೇಕು. ಕಾಲುಗಳಿಗೆ ಸರಿಹೊಂದುವ ಚಪ್ಪಲಿಗಳನ್ನೇ ಧರಿಸಬೇಕು. ಕಾಲಿಗೆ ಯಾವುದೇ ಗಾಯಗಳಾಗದಂತೆ ನೋಡಿಕೊಳ್ಳಿ. ಬಿಗಿಯಾದ ಚಪ್ಪಲಿ ಧರಿಸುವುದರಿಂದಲೂ ಗೌಟ್‌ನ ಊತ ಹೆಚ್ಚುತ್ತದೆ.